
ಮುಲ್ತಾನ್ (ಮಾ.14): ಬಹುಶಃ ಇಂಥ ಪ್ರೇಮ ಪ್ರಕರಣಗಳು ಪಾಕಿಸ್ತಾನದಲ್ಲಿಯೇ ಮಾತ್ರವೇ ವರದಿಯಾಗುತ್ತದೆ. ಪಾಕಿಸ್ತಾನದ ಮುಲ್ತಾನ್‌ನಲ್ಲಿ ಶಾಲೆಯೊಂದರ ಪ್ರಿನ್ಸಿಪಾಲ್, ಅದೇ ಶಾಲೆ ಸಿಬ್ಬಂದಿಗೆ ಟೀ ನೀಡುವ ಕೆಲಸ ಮಾಡುತ್ತಿದ್ದ ಅಟೆಂಡರ್‌ಅನ್ನು ಮದುವೆಯಾಗಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಪ್ರಮಾಣದಲ್ಲಿ ವೈರಲ್ ಆಗಿದ್ದು, ಪಾಕಿಸ್ತಾನದ ಸ್ಥಳೀಯ ಮಾಧ್ಯಮವೊಂದು ಈ ಬಗ್ಗೆ ವರದ ಮಾಡಿದೆ. "ಅವರು ಕೆಲಸ ಮಾಡುವ ರೀತಿ ಮತ್ತು ಅವರು ನನಗೆ ಚಹಾ ನೀಡುವ ಶೈಲಿಯನ್ನು ನೋಡಿಯೇ ನಾನು ಅವರ ಪ್ರೀತಿಯಲ್ಲಿ ಬಿದ್ದೆ" ಎಂದು ಶಾಲೆಯ ಪ್ರಿನ್ಸಿಪಾಲ್, ಅದೇ ಶಾಲೆಯ ಅಟೆಂಡರ್‌ಅನ್ನು ವಿವಾಹವಾಗಿರುವ ಬಗ್ಗೆ ಆಡಿರುವ ಮಾತೂ ಕೂಡ ವೈರಲ್ ಆಗಿದೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಲ್ತಾನ್ ನಗರದಲ್ಲಿ ಇಂತಹದೊಂದು ಅಪರೂಪದ ಘಟನೆ ನಡೆದಿದ್ದು, ಇದರ ವಿಡಿಯೋ ಮತ್ತು ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಸ್ಥಳೀಯ ಪ್ರೌಢಶಾಲೆಯೊಂದರ ಮುಖ್ಯೋಪಾಧ್ಯಾಯಿನಿ ಫರ್ಜಾನಾ ಅವರು ಅದೇ ಶಾಲೆಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಫಯಾಜ್ ಎಂಬುವವರನ್ನು ವಿವಾಹವಾಗಿದ್ದಾರೆ. ವೃತ್ತಿ ಮತ್ತು ಅಧಿಕಾರದ ಹಂಗು ತೊರೆದು ಇವರು ಮಾಡಿಕೊಂಡ ಮದುವೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.
ತಮ್ಮ ವಿಶಿಷ್ಟ ಪ್ರೇಮಕಥೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿನ್ಸಿಪಾಲ್ ಫರ್ಜಾನಾ, "ಫಯಾಜ್ ಕೆಲಸ ಮಾಡುವ ರೀತಿ ಮತ್ತು ಅವರು ನನಗೆ ಚಹಾ ನೀಡುತ್ತಿದ್ದ ಆ ಸಭ್ಯತೆಯ ಶೈಲಿಯನ್ನು ಕಂಡು ನಾನು ಪ್ರೀತಿಯಲ್ಲಿ ಬಿದ್ದೆ. ನಂತರ ನಾನೇ ಧೈರ್ಯ ಮಾಡಿ ಅವರಿಗೆ ಮದುವೆಯ ಪ್ರಸ್ತಾವನೆಯನ್ನು (Propose) ಮುಂದಿಟ್ಟೆ. ಅವರು ಅದನ್ನು ತಕ್ಷಣವೇ ಒಪ್ಪಿಕೊಂಡರು" ಎಂದು ಸಂಭ್ರಮದಿಂದ ಹಂಚಿಕೊಂಡಿದ್ದಾರೆ.
ಅಧಿಕಾರ ಮತ್ತು ಅಂತಸ್ತಿನ ಅಂತರವನ್ನು ಮೀರಿ ಪ್ರೇಮಕ್ಕೆ ಪ್ರಾಮುಖ್ಯತೆ ನೀಡಿದ ಈ ದಂಪತಿಯ ನಿರ್ಧಾರವು ಆ ಭಾಗದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅನೇಕರು ಇದನ್ನು ಅಸಾಂಪ್ರದಾಯಿಕ ನಿರ್ಧಾರ ಎಂದು ಕರೆದರೆ, ಇನ್ನು ಕೆಲವರು ಇದು "ಪರಿಶುದ್ಧ ಪ್ರೀತಿ" ಎಂದು ಶ್ಲಾಘಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.