ಮದ್ವೆ ಮನೆ ಅಂದ್ರೆ ಸಂಭ್ರಮ-ಸಡಗರ ಇರೋ ಹಾಗೆಯೇ ತಮಾಷೆಯ ಘಟನೆಗಳು ಸಹ ನಡೆಯುತ್ತಿರುತ್ತವೆ. ಅದರಲ್ಲೂ ವಧುವಿನ ಕಡೆಯವರು ಸುಮ್ ಸುಮ್ನೆ ವರನಿಗೆ ಕೀಟಲೆ ಮಾಡಿ ಮಜಾ ತಗೊಳ್ತಾರೆ. ಹಾಗೆಯೇ ಈ ಮದ್ವೆ ಮನೆಯಲ್ಲಿ ವಧುವಿನ ಗ್ಯಾಂಗ್ ವರನಿಗೆ ಮದ್ವೆಯಾಗೋ ಮುಂಚೆ ಕೆಲ ಷರತ್ತುಗಳನ್ನು ವಿಧಿಸಿದೆ.
ಮದುವೆ ಮಂಟಪ ಸಜ್ಜಾಗಿತ್ತು..ವರ ಶೇರವಾನಿ ಧರಿಸಿ, ಪೇಟ ಹಾಕ್ಕೊಂಡು ಸಿದ್ಧವಾಗಿದ್ದ, ವಧು ಸಹ ಸೀರೆ, ಆಭರಣಗಳನ್ನು ತೊಟ್ಟು ಕಾಯ್ತಿದ್ಲು. ಮದುವೆ ಮನೆ ಸಂಭ್ರಮ, ಸಡಗರದಿಂದ ತುಂಬಿತ್ತು. ಹಾಡು, ಡ್ಯಾನ್ಸ್‌ನ ಮಧ್ಯೆ ಇನ್ನೇನು ಹುಡುಗ, ಹುಡುಗಿಗೆ ತಾಳಿ ಕಟ್ಬೇಕು ಅನ್ನುವಷ್ಟರಲ್ಲಿ ವಧುವಿನ ಗ್ಯಾಂಗ್ ಷರತ್ತನ್ನು ಮುಂದಿಟ್ಟಿತ್ತು. ಮಂಟಪದಲ್ಲಿದ್ದ ಅಷ್ಟೂ ಮಂದಿ, ಮದುವೆಗೆ ಆಗಮಿಸಿದ ಅತಿಥಿಗಳು ಒಂದು ಕ್ಷಣ ಅವಕ್ಕಾಗಿ ಹೋದ್ರು. ಅಷ್ಟಕ್ಕೂ ವಧುವಿನ ಕಡೆಯ ಹುಡುಗಿಯರು ವಿಧಿಸಿದ ಷರತ್ತೇನು? ಅದಕ್ಕೆ ಹುಡುಗ ಒಪ್ಕೊಂಡ್ನಾ..
ಇಂಡಿಯನ್ ವೆಡ್ಡಿಂಗ್ ಅಂದ್ರೆ ಅಲ್ಲಿ ಸಂಭ್ರಮ-ಸಡಗರದ ಜೊತೆಗೆ ಮೋಜು-ಮಸ್ತಿ ಸಹ ಇದ್ದೇ ಇರುತ್ತೆ. ಅದರಲ್ಲೂ ವಧುವಿನ (Bride) ಕಡೆಯವರು ಸುಮ್ ಸುಮ್ನೆ ವರನಿಗೆ ಕೀಟಲೆ ಮಾಡಿ ಮಜಾ ತಗೊಳ್ತಾರೆ. ಹಾಗೆಯೇ ಈ ಮದ್ವೆ ಮನೆಯಲ್ಲಿ ವಧುವಿನ ಗ್ಯಾಂಗ್ ವರನಿಗೆ ಮದ್ವೆಯಾಗೋ ಮುಂಚೆ ಕೆಲ ಷರತ್ತುಗಳನ್ನು ವಿಧಿಸಿದೆ. ಈ ವಿಡಿಯೋವನ್ನು ವಧು ಕಾಜಲ್ ಅವರೇ ಹಂಚಿಕೊಂಡಿದ್ದು, 'ನಿಮ್ಮನ್ನು ಮದುವೆಯಾಗಲು ವರ (Groom) ಯಾವುದೇ ಕಾಗದಕ್ಕೆ ಸಹಿ ಹಾಕಲು ಸಿದ್ಧರಾಗಿರುವಾಗ' ಎಂಬ ಶೀರ್ಷಿಕೆಯನ್ನು ಇದಕ್ಕೆ ನೀಡಲಾಗಿದೆ.
ಮಂಟಪದಲ್ಲಿ ವರಮಾಲೆ ಹಾಕಲು ವಧು-ವರರ ಡಿಶುಂ ಡಿಶುಂ; ವಿಡಿಯೋ ವೈರಲ್
ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ವಧು-ವರರು ಮದುವೆಯ ಮಂಟಪಕ್ಕೆ ಒಟ್ಟಿಗೆ ನಡೆಯುವುತ್ತಿದ್ದಾರೆ. ಆದರೆ, ಮಂಟಪದ ಪ್ರವೇಶ ದ್ವಾರದಲ್ಲಿ ಗುಲಾಬಿ ಬಣ್ಣದ ಉಡುಗೆ ತೊಟ್ಟ ಮದುವಣಗಿತ್ತಿಯರು ಇವರನ್ನು ತಡೆಯುತ್ತಾರೆ. ವಧುವಿನ ಗೆಳತಿಯು ವರನಿಗೆ ಕಾಂಟ್ರ್ಯಾಕ್ಟ್‌ಗೆ ಸಹಿ ಹಾಕುವಂತೆ ಕೇಳಿಕೊಳ್ಳುವುದನ್ನು ಕಾಣಬಹುದು. ಇಲ್ಲದಿದ್ದರೆ ಅವರು ಮದುವೆಗೆ ಮಂಟಪವನ್ನು ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು ಹೇಳುತ್ತಾರೆ.. ಈ ಮಧ್ಯೆ, ವರನು ಒಬ್ಬರಿಂದ ಪೆನ್ನು ತೆಗೆದುಕೊಂಡು ಒಂದು ಕೈಯಿಂದ ಕಣ್ಣು ಮುಚ್ಚಿ ಒಪ್ಪಂದಕ್ಕೆ ಸಹಿ ಹಾಕುವುದನ್ನು ಕಾಣಬಹುದು. ಸುತ್ತಲಿದ್ದವರು ಜೋರಾಗಿ ನಗುತ್ತಾರೆ.
ಕಾಂಟ್ರ್ಯಾಕ್ಟ್‌ನಲ್ಲಿ ಏನು ಷರತ್ತನ್ನು ವಿಧಿಸಲಾಗಿದೆ ಎಂಬುದನ್ನು ನಂತರ ವಿವರಿಸಲಾಗಿದೆ. ವಧುವಿನ ಕಡೆಯ ಹುಡುಗಿಯರ ಗ್ಯಾಂಗ್ ಮದುವೆಯ ನಂತರ ಹುಡುಗ, ಹುಡುಗಿ ಕಾಜಲ್ ಖುಷಿಯಾಗಿರಲು ಈ ಎಲ್ಲಾ ಕೆಲಸ ಮಾಡಬೇಕೆಂದು ಸೂಚಿಸಲಾಗಿದೆ. ಮದುವೆಯ (Marriage) ನಂತರ ವರನು ತನ್ನ ಪತ್ನಿಯನ್ನು ಸಂತೋಷವಾಗಿರಿಸಲು ಮಾಡಬೇಕಾದ ಆರು ವಿಷಯಗಳು ಇಲ್ಲಿವೆ:
ಬಲವಂತವಾಗಿ ಸ್ವೀಟ್ ತಿನ್ನಿಸಿದ ವರ, ಮುಖಕ್ಕೆ ಉಗುಳಿ, ಕಾಲಿನಿಂದ ತುಳಿದು ರಂಪಾಟ ಮಾಡಿದ ವಧು!
ಕಾಜಲ್ ಅನ್ನು ಯಾವಾಗಲೂ ಸುರಕ್ಷಿತವಾಗಿರಿಸಬೇಕು ಮತ್ತು ಅವಳನ್ನು ತುಂಬಾ ಪ್ರೀತಿಸಬೇಕು. ಕಾಜಲ್ ಯಾವಾಗಲೂ ಸರಿ ಎಂದು ಒಪ್ಪಿಕೊಳ್ಳಬೇಕು.ಅವಳನ್ನು ವರ್ಷಕ್ಕೆ ಕನಿಷ್ಠ 3 ಬಾರಿ ಹಾಲಿಡೇಗೆ ಕರೆದುಕೊಂಡು ಹೋಗಬೇಕು. ಯಾವಾಗಲೂ ಕಾಜಲ್ ಖುಷಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಆಕೆ ಕಾರು ಹತ್ತಿ ಕುಳಿತುಕೊಳ್ಳುವಾಗ ಸೀಟ್ ಕ್ಲೀನ್ ಮಾಡಿಕೊಡಬೇಕು. ನಾದಿನಿಯರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಬರೆಯಲಾಗಿದೆ.
ನೆಟ್ಟಿಗರು ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ. ಹಾರ್ಟ್ ಎಮೋಜಿ ಕಳುಹಿಸಿ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು 'ಅತ್ಯುತ್ತಮ ಷರತ್ತು' ಎಂದು ಬರೆದಿದ್ದಾರೆ. ಮತ್ತೊಬ್ಬ ವ್ಯಕ್ತಿ, 'ವಧುವನ್ನು ಅವರೆಲ್ಲಾ ಎಷ್ಟು ಪ್ರೀತಿಸುತ್ತಾರೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಬಳಕೆದಾರರು, 'ವರ ಕಣ್ಮುಚ್ಚಿ ಕಾಂಟ್ರ್ಯಾಕ್ಟ್ ಸಹಿ ಮಾಡಿರುವುದನ್ನು ನೋಡಿ ಖುಷಿಯಾಯಿತು' ಎಂದು ತಿಳಿಸಿದರು.
27 ಮಂದಿಗೂ ಇದ್ದಿದ್ದು ಒಬ್ಳೇ ಹೆಂಡ್ತಿ, ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಾಗ ಬಯಲಾಯ್ತು ಅಸಲೀಯತ್ತು!