ಪತ್ನಿ ಮನೆಯಲ್ಲಿರುವಾಗಲೇ ಮತ್ತೊಬ್ಬಳ ಮದುವೆಯಾಗಬೇಕು. ಇದಕ್ಕೆ ಈತ ಮಾಡಿದ ಐಡಿಯಾಗೆ ಹಲವರು ದಂಗಾಗಿದ್ದಾರೆ. ಹೀಗೆ ಅಕ್ರಮ ಸಂಬಂಧ ಸಕ್ರಮ ಮಾಡಲು ತುದಿಗಾಲಲ್ಲಿ ನಿಂತಿರುವ ಹಲವರು ಈತನ ಐಡಿಯಾ ಸೂಪರ್ ಎಂದಿದ್ದಾರೆ. ಆದರೆ ಈತನ ಪತ್ನಿ ಟ್ವಿಸ್ಟ್ ನೀಡಿದ್ದಾಳೆ.
ಲಖನೌ(ಅ.25) ಪತ್ನಿ ಬದುಕಿದ್ದಾಳೆ ಮಾತ್ರವಲ್ಲ, ಗಂಡನ ಜೊತೆಗೆ ಆತನ ಮನೆಯಲ್ಲೇ ಇದ್ದಾಳೆ. ಪತ್ನಿ ಮನೆಯಲ್ಲಿರುವಾಗಲೇ ಗರ್ಲ್‌ಪ್ರೆಂಡ್ ಮದುವೆಯಾಗಲು ಯಾರಾದರು ಧೈರ್ಯ ತೋರುತ್ತಾರಾ? ಆದರೆ ಇಲ್ಲೊಬ್ಬ ಭರ್ಜರಿ ಐಡಿಯಾ ಮಾಡಿದ್ದಾನೆ. ಈತನ ಐಡಿಯಾಗೆ ಪತ್ನಿ ಕುಗ್ಗಿ ಹೋಗಿದ್ದಾಳೆ. ಗಂಡನ ನಡೆಗೆ ಒಂದು ಮಾತೂ ಆಡದಂತೆ ಆಗಿದ್ದಾಳೆ. ಅಷ್ಟಕ್ಕು ಈತ ಮಾಡಿದ್ದೇನು ಗೊತ್ತಾ? ಪತ್ನಿ ಬದುಕಿರುವಾಗಲೇ ಆಕೆಗೆ ಶ್ರಾದ್ಧ ಮಾಡಿ ಪಿಂಡ ಬಿಟ್ಟಿದ್ದಾನೆ. ಪತ್ನಿ ಸತ್ತಿದ್ದಾಳೆ ಎಂದು ಆಕೆಯ ಮುಂದೆಯ ವಿಧಿ ವಿಧಾನಗಳನ್ನು ಪೂರೈಸಿ, ತನ್ನ ದಾರಿ ಕ್ಲಿಯರ್ ಮಾಡಿಕೊಂಡಿದ್ದಾನೆ. ಆದರೆ ಇನ್ನೇನು ಗರ್ಲ್‌ಫ್ರೆಂಡ್ ಕೊರಳಿಗೆ ತಾಲಿ ಕಟ್ಟಬೇಕು ಅನ್ನುವಷ್ಟರಲ್ಲೇ ಪ್ರಕರಣಕ್ಕೆ ಪತ್ನಿ ಟ್ವಿಸ್ಟ್ ನೀಡಿದ್ದಾಳೆ.
ಉತ್ತರ ಪ್ರದೇಶದ ಕನೌಜ್‌ನ ಭವಾನಿ ಸರೈ ನಿವಾಸಿ ಪವನ್ ಪಟೇಲ್ ಈ ಕಿರಾತಕ. ಪತ್ನಿ ಇರುವಾಗಲೇ ಬೇರೊಂದು ಮಹಿಳೆ ಜೊತೆಗೆ ಪವನ್ ಪಟೇಲ್ ಸಂಬಂಧ ಬೆಳೆಸಿದ್ದಾನೆ. ಹಲವು ದಿನಗಳಿಂದ ಇವರ ಸಂಬಂಧ ಹೀಗೆ ಮುಂದುವರಿದಿದೆ. ಈ ವಿಚಾರ ಒಬ್ಬರದಿಂದ ಒಬ್ಬರಿಗೆ ಹರಡಿ ಕೊನೆಗೆ ಪತ್ನಿಯ ಕಿವಿಗೂ ಬಿದ್ದಿದೆ. ಕಳೆದ ಒಂದು ವರ್ಷದಿಂದ ಅಕ್ರಮ ಸಂಬಂಧ ಬೆಳೆಸಿದ್ದ ಪವನ್ ಪಟೇಲ್ ಹೇಗೋ ನಿರ್ವಹಣೆ ಮಾಡಿದ್ದ. ಆದರ ಕಳೆದ 6 ತಿಂಗಳಿಂದ ಈ ವಿಚಾರ ಪತ್ನಿಗೆ ತಿಳಿದೆ.
ಮನೆ ಭದ್ರತೆಗಾಗಿ ರಹಸ್ಯ ಕ್ಯಾಮೆರಾ ಅಳವಡಿಸಿದ ಪತಿ, ಸೆರೆಯಾದ ದೃಶ್ಯ ನೋಡಿ ಕಂಗಾಲು!
ಅಕ್ರಮ ಸಂಬಂಧ ಬಿಡುವಂತೆ ಪತ್ನಿ ಮನವಿ ಮಾಡಿಕೊಂಡಿದ್ದಾಳೆ. ಇಷ್ಟೇ ಅಲ್ಲ ಮಕ್ಕಳು ದೊಡ್ಡವರಾಗುತ್ತಿದ್ದಾರೆ. ನಾವು ಮಕ್ಕಳಿಗೆ ಮಾದರಿಯಾಗಬೇಕು. ಈ ರೀತಿ ಮಾಡಬೇಡಿ ಎಂದು ಬುದ್ದಿ ಹೇಳಿದ್ದಾಳೆ. ಎಲ್ಲೂ ಕೂಡ ಪತ್ನಿ ಪವನ್ ಪಟೇಲ್ ವಿರುದ್ಧ ಎಗರಾಡಿಲ್ಲ. ತಾಳ್ಮೆಯಿಂದ ಸಂಸಾರ ಮುಂದುವರಿಸಲು ಪ್ರಯತ್ನಿಸಿದ್ದಾಳೆ.
ಆದರೆ ಪವನ್ ಪಟೇಲ್ ಮನಸ್ಸಲಿ ಆಗಲೇ ಲಡ್ಡು ಒಡೆದಿತ್ತು. ಅಕ್ರಮ ಸಂಬಂಧ ಸಕ್ರಮ ಮಾಡಿಕೊಳ್ಳಲು ಪ್ಲಾನ್ ಕೂಡ ರೆಡಿಯಾಗಿತ್ತು. ಮನೆಗೆ ಬಂದ ಪವನ್ ಪಟೇಲ್ ಭಾರಿ ತಯಾರಿ ಮಾಡಿಕೊಂಡಿದ್ದಾನೆ. ಒಂದು ದಿನ ಬೆಳಗ್ಗೆ ಇದ್ದಕ್ಕಿದ್ದಂತೆ ಶ್ರಾದ್ಧ ವಿಧಿವಿಧಾನಗಳು ಆರಂಭಗೊಂಡಿದೆ. ಪತ್ನಿ ಬದುಕಿರುವಾಗಲೇ ಆಕೆಯ ಮುಂದೆ, ಪತ್ನಿ ಫೋಟೋ ಇಟ್ಟು ಶ್ರಾದ್ಧ ಕಾರ್ಯ ಆರಂಭಿಸಿದ್ದಾನೆ.
ತಾನು ಬದುಕಿರುವಾಗಲೇ ತನಗೆ ಪಿಂಡ ಬಿಡುತ್ತಿರುವ ಪತಿಯ ನಡೆ ನೋಡಿ ಪತ್ನಿ ಕುಗ್ಗಿದ್ದಾಳೆ. ಅಳುತ್ತಲೇ ಈ ರೀತಿ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಳೆ. ಶ್ರಾದ್ಧ ಮಾಡಿದ ಬಳಿಕ ಪವನ್ ಪಟೇಲ್ ಪತ್ನಿಯನ್ನು ಮನೆಯಿಂದ ಹೊರಹಾಕಿದ್ದಾನೆ. ನನ್ನ ಪತ್ನಿ ಮೃತಪಟ್ಟಿದ್ದಾಳೆ. ಆಕೆಗೆ ಶ್ರಾದ್ಧ ಮಾಡಿದ್ದೇನೆ ಎಂದು ಹೇಳಿದ್ದಾನೆ. ಇಬ್ಬರು ಮಕ್ಕಳನ್ನು ಪತ್ನಿಯಿಂದ ದೂರ ಮಾಡಿದ್ದಾನೆ.
ದಿಕ್ಕು ತೋಚದ ಪತ್ನಿ ನೇರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಪತಿ ವಿರುದ್ದ ದೂರು ನೀಡಿದ್ದಾಳೆ. ಅಕ್ರಮ ಸಂಬಂಧ ಇಟ್ಟುಕೊಂಡಿರುವ ಪತಿ ಎರಡನೇ ಮದುವೆ ಮಾಡಿಕೊಂಡಿದ್ದಾರೆ. ಮಕ್ಕಳನ್ನು ನನ್ನಿಂದ ದೂರ ಮಾಡಿದ್ದಾರೆ. ನನಗೆ ಯಾರ ಬೆಂಬಲವೂ ಇಲ್ಲ. ನೆರವು ನೀಡಬೇಕು ಎಂದು ಪೊಲೀಸರ ಬಿ ಮನವಿ ಮಾಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಪವನ್ ಪಟೇಲ್ ಬಂಧನಕ್ಕೆ ಸಜ್ಜಾಗಿದ್ದಾರೆ. ಇತ್ತ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆ ಪವನ್ ಪಟೇಲ್ ನಾಪತ್ತೆಯಾಗಿದ್ದಾನೆ. ಮಕ್ಕಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟಿರುವ ಪತಿ, ಎಲ್ಲಿದ್ದಾನೆ ಅನ್ನೋದು ತಿಳಿಯದಾಗಿದೆ. ಇದೀಗ ಪೊಲೀಸರು ಪವನ್ ಪಟೇಲ್ ಹುಡುಕಾಟ ನಡೆಸುತ್ತಿದ್ದಾರೆ. ಇತ್ತ ಪತ್ನಿ ಕಂಗಾಲಾಗಿದ್ದಾಳೆ. ಪತಿ ಬೇರೊಬ್ಬಳ ಮದುವೆಯಾಗಿದ್ದರೆ, ಇತ್ತ ಪತಿ ಮನೆಯವವರಿಂದಲೂ ನೆರವು ಸಿಗದೇ ಪರಿತಪಿಸುತ್ತಿದ್ದಾಳೆ.
ಅಕ್ರಮ ಸಂಬಂಧಕ್ಕೆ ಮಕ್ಕಳ ಮುಂದೆ ಮಹಿಳೆ ಮರಕ್ಕೆ ಕಟ್ಟಿ ಕೂದಲು ಕತ್ತರಿಸಿ ಕ್ರೌರ್ಯ, ಇದು ಪಂಚಾಯತ್ ಆಜ್ಞೆ!