ಕೈಗೆ ಬಂತು ರಾಡ್, ಪತಿಗೆ ಬಿತ್ತು ಏಟಿನ ಮೇಲೆ ಏಟು – ವೈರಲ್ ವಿಡಿಯೋ ನೋಡಿ ಅಭಿಷೇಕ್ ನೆನಪಿಸಿಕೊಂಡ ಟ್ರೋಲರ್ಸ್

By Roopa Hegde  |  First Published Oct 22, 2024, 5:20 PM IST

ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗ್ತಿರುತ್ತದೆ. ಈಗ ಪತ್ನಿಯೊಬ್ಬಳ ಏಟಿನ ಬಿಸಿ ತಿಂದ ಪತಿಯ ವಿಡಿಯೋ ಚರ್ಚೆಗೆ ಬಂದಿದೆ. ಕಬ್ಬಿಣದ ರಾಡ್ ಹಿಡಿದು ಗಂಡನಿಗೆ ಒದೆ ನೀಡಿದ್ದಾಳೆ ಪತ್ನಿ. 
 


ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ದೌರ್ಜನ್ಯ (Domestic violence)ಕ್ಕೆ ಮಹಿಳೆಯರು ಮಾತ್ರವಲ್ಲ ಪುರುಷರೂ ಒಳಗಾಗ್ತಿದ್ದಾರೆ. ಈಗಾಗಲೇ ಇದಕ್ಕೆ ಅನೇಕ ಘಟನೆಗಳು ಸಾಕ್ಷ್ಯವಾಗಿವೆ. ಈಗ ಸೋಶಿಯಲ್ ಮೀಡಿಯಾ (Social Media) ದಲ್ಲಿ ಇನ್ನೊಂದು ವಿಡಿಯೋ ವೈರಲ್ (video viral) ಆಗಿದೆ. ಇದ್ರಲ್ಲಿ ಪತ್ನಿ ಹಾಗೂ ಆಕೆ ಮಗಳು, ಪತಿಯನ್ನು ಮನಸ್ಸಿಗೆ ಬಂದಂತೆ ಥಳಿಸುತ್ತಿರೋದನ್ನು ನೀವು ನೋಡ್ಬಹುದು. 

ಮಹಿಳೆಯರು ಮೊನ್ನೆಯಷ್ಟೆ ಕರ್ವಾಚೌತ್ (Karwachauth) ಆಚರಿಸಿದ್ದಾರೆ. ತಮ್ಮ ಪತಿಯ ಉತ್ತಮ ಆಯಸ್ಸು ಹಾಗೂ ಭವಿಷ್ಯಕ್ಕಾಗಿ ಇಡೀ ದಿನ ಉಪವಾಸವಿದ್ದು, ವೃತ ಮಾಡಿ ನಂತ್ರ ಪತಿಯ ಮುಖ ನೋಡಿ, ಉಪವಾಸ ಬಿಟ್ಟಿರುವ ಅನೇಕ ಮಹಿಳೆಯರ ಮಧ್ಯೆ ಕರ್ವಾಚೌತ್ ಸಮಯದಲ್ಲಿ ಪತಿಗೆ ಹಿಗ್ಗಾಮುಗ್ಗ ಥಳಿಸಿದ ಈ ಮಹಿಳೆ ವಿಡಿಯೋ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. 

Tap to resize

Latest Videos

undefined

ಪೋರ್ನ್ ಚಟ, ದಿನಕ್ಕೆ 2-3 ಸಲ ದೈಹಿಕ ಸಂಬಂಧಕ್ಕೆ ಪತ್ನಿ ಒತ್ತಾಯ, ಸುಸ್ತಾಗಿ ಕೋರ್ಟ್ ಮೊರೆ ಹೋದ ಪತಿ

ಬಿಕಾನೇರ್‌ (Bikaner)ನಲ್ಲಿ ಈ ಘಟನೆ ನಡೆದಿದೆ. ಪತಿಗೆ ಕಬ್ಬಿಣದ ರಾಡ್ ಹಾಗೂ ಕೋಲಿನಿಂದ ಪತ್ನಿ ಹೊಡೆಯುತ್ತಿದ್ದಾಳೆ. ಮಹಿಳೆ ಜೊತೆ ಆಕೆ ಮಗಳು ಕೂಡ ತಂದೆ ಮೇಲೆ ಹಲ್ಲೆ ನಡೆಸುತ್ತಿದ್ದಾಳೆ. ನೆಲದ ಮೇಲೆ ಬಿದ್ದಿರುವ ವ್ಯಕ್ತಿ, ತನ್ನನ್ನು ಬಿಡುವಂತೆ ಬೇಡಿಕೊಳ್ತಿದ್ದಾನೆ. ಆದ್ರೆ ಅವರ ಮನಸ್ಸು ಕರಗಿಲ್ಲ. ಅವರು ಇಷ್ಟೊಂದು ಏಟು ನೀಡಲು ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ.  ಬೀಚ್ವಾಲ್ ಪೊಲೀಸ್ ಠಾಣಾ ವ್ಯಾಪ್ತಿಯ ಇಂದಿರಾ ಕಾಲೋನಿಯಲ್ಲಿ ಜಿತೇಂದ್ರ ಎಂಬ ವ್ಯಕ್ತಿ ಒದೆತಿಂದವನು.  ಅವನ ಮಗಳು ಮತ್ತು ಪತ್ನಿ ಅಮಾನುಷವಾಗಿ ಥಳಿಸಿದ್ದಾರೆ. ಜಿತೇಂದ್ರ, ನಗರದ ಎಸ್‌ಪಿ ಕವೇಂದ್ರ ಸಾಗರ್ ಅವರಿಗೆ ದೂರು ನೀಡಿದ್ದು, ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾನೆ.  

ಜಿತೇಂದ್ರ ಪ್ರಕಾರ, ಆತ ಕೆಲಸ ಮುಗಿಸಿ ಮನೆಗೆ ಬಂದಾಗ, ಮನೆಯಲ್ಲಿ ಅಡುಗೆ ಮಾಡಿರಲಿಲ್ಲ. ಇದನ್ನು ಕೇಳ್ತಿದ್ದಂತೆ ಪತ್ನಿ ಹಾಗೂ ಮಗಳ ಕೈಗೆ ರಾಡ್ ಬಂದಿದೆ. ನೆಲದ ಮೇಲೆ ಬೀಳಿಸಿಕೊಂಡು ಹೊಡೆದಿದ್ದಾರೆ. ಜಿತೇಂದ್ರನ ಒಂದು ಕಾಲು ಮೊದಲೇ ಮುರಿದಿದ್ದು, ಅದಕ್ಕೆ ಹೆಚ್ಚು ಏಟು ಬಿದ್ದಿದೆ. ಕೌಟುಂಬಿಕ ಕಲಹದಿಂದ ಪತ್ನಿ ಹಾಗೂ ಮಗಳು ಈ ರೀತಿ ಮಾಡಿದ್ದಾರೆಂದು ಜಿತೇಂದ್ರ ಹೇಳಿದ್ದಾನೆ.

ಘರ್ ಕೆ ಕಾಲೇಶ್ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಲಕ್ಷಾಂತರ ಮಂದಿ ಈ ವಿಡಿಯೋ ವೀಕ್ಷಣೆ ಮಾಡಿದ್ದು, ಸಿಕ್ಕಾಪಟ್ಟೆ ಕಮೆಂಟ್ ಕೂಡ ಬಂದಿದೆ. ವೈರಲ್ ಆಗಿರೋ ವಿಡಿಯೋದಲ್ಲಿ ನಾನ್ಯಾಕೆ ಹೊಡೆಯಬಾರದು ಎಂದು ಮಹಿಳೆ ಹೇಳೋದನ್ನು ಕೇಳ್ಬಹುದು. ಅಲ್ಲದೆ ಮಹಿಳೆ ಯಾವುದೋ ವಿಷ್ಯಕ್ಕೆ ಅಳುತ್ತಿರುವಂತೆ ಕಾಣ್ತಿದೆ.

ಸತ್ತ ಅಪ್ಪನ ಬಗ್ಗೆ ಈತ ಬರೆದ ಪತ್ರ ಓದಿದ್ರೆ ಬಿದ್ದು ಬಿದ್ದು ನಗ್ತೀರಾ!

ಅನೇಕರು ಮಹಿಳೆ ಹಾಗೂ ಆಕೆ ಮಗಳ ಪರ ನಿಂತಿದ್ದಾರೆ. ಮಹಿಳೆ ಇಷ್ಟೊಂದು ಕೋಪಗೊಂಡಿದ್ದಾಳೆ ಅಂದ್ರೆ ಆತ ಏನೋ ದೊಡ್ಡ ತಪ್ಪು ಮಾಡಿರಬೇಕು ಅಂತ ಒಬ್ಬರು ಹೇಳಿದ್ರೆ, ಮತ್ತೊಬ್ಬರು ಇಷ್ಟು ಸಣ್ಣ ವಿಡಿಯೋ ನೋಡಿ ಯಾರದ್ದು ತಪ್ಪು ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ವ್ಯಕ್ತಿ ಮದ್ಯಪಾನ ಮಾಡಿದ್ದಾನೆ, ಹಾಗಾಗಿಯೇ ಒದೆ ಬೀಳ್ತಿದೆ ಎಂದು ಮತ್ತೆ ಕೆಲವರು ಊಹಿಸಿದ್ದಾರೆ. ಇನ್ನು ಕೆಲವರು ಏಟು ತಿಂದಿರುವ ಪತಿ ಪರ ಕಮೆಂಟ್ ಮಾಡಿದ್ದಾರೆ. ಅವನಿಗೆ ಯಾಕೆ ಹೊಡೆಯಲಾಗ್ತಿದೆ, ಇಲ್ಲಿ ಪುರುಷರಿಗೆ ರಕ್ಷಣೆ ಇಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಕುಡಿದು ಬರುವ ಪತಿಯನ್ನು ಹೀಗೆ ಟ್ರೀಟ್ ಮಾಡೋದು ಸರಿಯಲ್ಲ ಎನ್ನುವ ಸಲಹೆಯನ್ನು ನೆಟ್ಟಿಗರು ನೀಡಿದ್ದಾರೆ. 

ಈ ವಿಡಿಯೋ ನೋಡಿದ ಅನೇಕ ನೆಟ್ಟಿಗರು ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ (Aishwarya Rai Bachchan), ಆರಾಧ್ಯ ಹಾಗೂ ಅಭಿಷೇಕ್ ಬಚ್ಚನ್ (Abhishek Bachchan) ನೆನಪು ಮಾಡಿಕೊಂಡಿದ್ದಾರೆ. ಐಶ್ ಹಾಗೂ ಆರಾಧ್ಯ, ಅಭಿಷೇಕ್ ಬಚ್ಚನ್ ಗೆ ಹೀಗೆ ಹೊಡೆಯುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ. 

Man got beaten up with sticks by his wife and daughter
https://t.co/2AklR6fpbJ

— Ghar Ke Kalesh (@gharkekalesh)
click me!