ಪ್ರೀತಿ ಎಂದರೆ ಹಾಗೆಯೇ ಅದಕ್ಕೆ ಎಂಥಾ ಸಮಸ್ಯೆಯನ್ನೂ ಎದುರಿಸುವ ಶಕ್ತಿಯಿದೆ. ಪ್ರೀತಿಸಿದವರು ಒಟ್ಟಾಗಿ ಬಾಳಲು ಎಂಥಾ ರಿಸ್ಕ್ ತೆಗೆದುಕೊಳ್ಳಲು ಸಹ ಸಿದ್ಧರಾಗುತ್ತಾರೆ. ಹಾಗೆಯೇ ಇಲ್ಲೊಬ್ಬ ವ್ಯಕ್ತಿ ತಾನು ಪ್ರೀತಿಸಿದವಳನ್ನೇ ಮದ್ವೆಯಾಗಬೇಕೆಂದು ಮಾಡಿರೋ ಕೆಲ್ಸಕ್ಕೆ ಊರವರೆಲ್ಲಾ ದಂಗಾಗಿದ್ದಾರೆ.
ಪ್ರೀತಿ ಕೆಲವೊಬ್ಬರ ಪಾಲಿಗೆ ಜಸ್ಟ್ ಟೈಂ ಪಾಸ್ ಆದರೆ, ಇನ್ನು ಕೆಲವರ ಪಾಲಿಗೆ ಜೀವನೇ ಆಗಿರುತ್ತದೆ. ಪ್ರೀತಿಗಾಗಿ ಅಂಥವರು ಎಂಥಾ ತ್ಯಾಗಕ್ಕೂ ಸಿದ್ಧರಾಗಿರುತ್ತಾರೆ. ಎಂಥಾ ಅಪಾಯವನ್ನು ಬೇಕಾದ್ರೂ ಎದುರು ಹಾಕಿಕೊಳ್ತಾರೆ. ಪ್ರೀತಿ ಎಂದರೆ ಹಾಗೆಯೇ ಅದಕ್ಕೆ ಎಂಥಾ ಸಮಸ್ಯೆಯನ್ನೂ ಎದುರಿಸುವ ಶಕ್ತಿಯಿದೆ. ಪ್ರೀತಿಸಿದವರು ಒಟ್ಟಾಗಿ ಬಾಳಲು ಎಂಥಾ ರಿಸ್ಕ್ ತೆಗೆದುಕೊಳ್ಳಲು ಸಹ ಸಿದ್ಧರಾಗುತ್ತಾರೆ. ಹಾಗೆಯೇ ಇಲ್ಲೊಬ್ಬ ವ್ಯಕ್ತಿ ತಾನು ಪ್ರೀತಿಸಿದವಳನ್ನೇ ಮದ್ವೆಯಾಗಬೇಕೆಂದು ಮಾಡಿರೋ ಕೆಲ್ಸಕ್ಕೆ ಊರವರೆಲ್ಲಾ ದಂಗಾಗಿದ್ದಾರೆ. ಉತ್ತರಪ್ರದೇಶದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.
ಉತ್ತರಪದೇಶದ ವ್ಯಕ್ತಿಯೊಬ್ಬ ಮನೆ ಮಂದಿ ತಾನು ಪ್ರೀತಿಸಿದ ಹುಡುಗಿಯನ್ನೇ ಮದುವೆಯಾಗಲು ಅವಕಾಶ ಕೊಡಬೇಕೆಂದು ಹೇಳಿ 100 ಅಡಿ ಎತ್ತರದ ಮೊಬೈಲ್ ಟವರ್ ಹತ್ತಿದ್ದಾನೆ. ವಿಷಯ ತಿಳಿಉ ತಕ್ಷಣ ಗ್ರಾಮಸ್ಥರು ಸ್ಥಳದಲ್ಲಿ ಸೇರಿದರು. ಯುವಕನನ್ನು (Men) ಕೆಳಗಿಳಿಯುವಂತೆ ಒತ್ತಾಯಿಸಿದರು. ಆದರೆ ಯುವಕ ಪಟ್ಟು ಬಿಡಲ್ಲಿಲ್ಲ. ಕೆಳಗೆ ಬರಲು ಒಪ್ಪಲ್ಲಿಲ್ಲ. ಕೆಲವರು ಅವನ ಕೃತ್ಯವನ್ನು ಅಪಾಯಕಾರಿ ಎಂದು ಟೀಕಿಸಿದರೆ, ಇತರರು ಆತನ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದರು. ಮತ್ತೆ ಕೆಲವರು ಪ್ರೀತಿ (Love)ಗಾಗಿ ಹೋರಾಡುವ ಆತನ ಸ್ಥೈರ್ಯವನ್ನು ಗೌರವಿಸಿದರು.
ಧಾರವಾಡ: ಮೊಬೈಲ್ ಟವರ್ ಏರಿ ಕುಳಿತ ಜಲ ಮಂಡಳಿ ಗುತ್ತಿಗೆ ಕಾರ್ಮಿಕ
ಯುವಕನನ್ನು ಟವರ್‌ನಿಂದ ಕೆಳಗಿಳಿಸಿದ ಪೊಲೀಸರು
ವರದಿಗಳ ಪ್ರಕಾರ, ಕುಶಿನಗರ ನಿವಾಸಿ ದಿಲೀಪ್ ಟವರ್ ಮೇಲೆ ಹತ್ತಿದ್ದಾನೆ. ಟವರ್ ಮೇಲೆ ಏರುತ್ತಿದ್ದಂತೆ ತನ್ನ ಫೋನ್ ಅನ್ನು ಅದರ ಮೇಲಿಂದ ಎಸೆದಿದ್ದಾನೆ. ನಂತರ ಅಲ್ಲಿದ್ದ ಇತರರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರು ದಿಲೀಪ್ ಅವರನ್ನು ಕೆಳಗಿಳಿಸುವಂತೆ ಮನವೊಲಿಸಲು ಪ್ರಯತ್ನಿಸಿದರು. ಆದರೆ ದಿಲೀಪ್ ಯಾರ ಮಾತನ್ನು ಕೇಳಲಿಲ್ಲ. ಒಂದು ಗಂಟೆಯ ನಂತರ ಪೊಲೀಸರು ಆತನನ್ನು ಹಿಡಿಯಲು ಸಾಧ್ಯವಾಯಿತು. ನಂತರ ದಿಲೀಪ್ ಅವರನ್ನು ಚಿಕಿತ್ಸೆಗಾಗಿ (Treatment) ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು.
ದಿಲೀಪ್ ತಾನು ಪ್ರೀತಿಸಿದ ಹುಡುಗಿ (Girl)ಯನ್ನು ಮದುವೆಯಾಗಲು ಇಚ್ಛಿಸುತ್ತೇನೆ ಎಂದು ಹೇಳಿ ಹೀಗೆ ಮಾಡಿದ್ದಾನೆ. ಆದರೆ ದಿಲೀಪ್ ಹಿರಿಯ ಸಹೋದರ ಅಮರಜೀತ್ ಈ ಬಗ್ಗೆ ಮಾತನಾಡಿ, ದಿಲೀಪ್ ಮಾನಸಿಕ ಸ್ಥಿತಿ (Mental health) ಸರಿಯಿಲ್ಲ ಎಂದಿದ್ದಾರೆ. ಇತ್ತೀಚೆಗಷ್ಟೇ ದಿಲೀಪ್ ಗುಂಪಿನ ಜಗಳದಲ್ಲಿ ತಲೆಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಅದೇ ಚಿಕಿತ್ಸೆಗೆ ವೈದ್ಯರ ಬಳಿ ಕರೆದುಕೊಂಡು ಹೋಗುತ್ತಿದ್ದಾಗ ದಿಲೀಪ್ ಪರಾರಿಯಾಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. .
Dharwad: ಬಿರಿಯಾನಿ, ಸಿಗರೇಟ್‌ಗಾಗಿ ಟವರ್ ಏರಿದ ಭೂಪ: ಮೂರೂವರೆ ತಾಸು ಪೊಲೀಸರು ಹೈರಾಣು
ವಿಜಯಪುರಲ್ಲಿ ಮೊಬೈಲ್ ಟವರ್ ಮೇಲೆ ಹತ್ತಿ ಯುವಕನ ಹುಚ್ಚಾಟ
ಪಾನಮತ್ತನಾದ ಯುವಕನೊಬ್ಬನು ವಿವಸ್ತ್ರನಾಗಿ ಮೊಬೈಲ್ ಟವರ್ ಏರಿ ಕುಳಿತ ಘಟನೆಯೊಂದು ಸಿಂದಗಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ನಡೆದಿತ್ತು. ನಂತರ ಆತನ ಮನವೊಲಿಸಿ ಕೆಳಗೆ ಇಳಿಸಿದ್ದು, ಕೆಲಕಾಲ ನೆರೆದ ಜನರಲ್ಲಿ ಆತಂಕ ಕೂಡ ಮೂಡಿಸಿತ್ತು. ತೆಗ್ಗಿಹಳ್ಳಿ ಗ್ರಾಮದ ಸತೀಶ ಕಡಣಿ (25) ಟವರ್ ಏರಿ, ನಂತರ ಕೆಳಗಿಳಿದ ಯುವಕ. ಕುಡಿದ ಮತ್ತಿನಲ್ಲಿ ಮೈಮೇಲಿನ ಬಟ್ಟೆ ಬಿಚ್ಚಿ ಬಳಗಾನೂರ ಗ್ರಾಮದ ಮೊಬೈಲ್ ಟವರ್ ಏರಿ ಕುಳಿತು ಹುಚ್ಚಾಟ ನಡೆಸಿದ್ದ. ಆಯತಪ್ಪಿ ಬಿದ್ದರೆ ಬದುಕುಳಿಯುವುದು ಕಷ್ಟವಾಗುತ್ತಿತ್ತು. ಅದೃಷ್ಟವಶಾತ್ ಅಂತಹ ದುರ್ಘಟನೆ ನಡೆಯಲಿಲ್ಲ.
ಗ್ರಾಮಸ್ಥರು ಕೆಳಗಿಳಿದು ಬರುವಂತೆ ಯುವಕನಲ್ಲಿ ಎಷ್ಟೇ ಮನವಿ ಮಾಡಿಕೊಂಡರೂ ಕುಡಿದ ನಶೆಯಲ್ಲಿದ್ದ ಯುವಕ ಸತೀಶ ಕೆಳಗಿಳಿದು ಬರದೇ ಹುಚ್ಚಾಟ ಮುಂದುವರಿಸಿದ್ದ. ಸುದ್ದಿ ತಿಳಿದ ತಕ್ಷಣ ಆಲಮೇಲ ಪೊಲೀಸರು ಸ್ಥಳಕ್ಕೆ ಧಾವಿಸಿ ಮದ್ಯದ ಅಮಲಿನಲ್ಲಿರುವ ಯುವಕನನ್ನು ಕೆಳಗಿಳಿಸಲು ಹರಸಾಹಸಪಟ್ಟರು. ಆದಾಗ್ಯೂ ಯುವಕ ಕೆಳಗಿಳಿಯಲು ಸುತಾರಾಂ ಒಪ್ಪಲಿಲ್ಲ. ಅನಾಹುತ ಆಗದಂತೆ ತಡೆಯಲು ಪೊಲೀಸರು ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕರೆಸಿದರು. ಅವರು ಕೂಡ ಯುವಕನನ್ನು ಕೆಳಗಿಳಿಸಲು ಪಟ್ಟಶ್ರಮ ಅಷ್ಟಿಷ್ಟಲ್ಲ. ಅಗ್ನಿಶಾಮಕ ಸಿಬ್ಬಂದಿಗೂ ಪಾನಮತ್ತ ಯುವಕ ಕ್ಯಾರೆ ಎನ್ನಲಿಲ್ಲ. ಟವರ್ ತುತ್ತತುದಿಯಲ್ಲಿ ಪಾನಮತ್ತ ಯುವಕ ನೇತಾಡುತ್ತಿದ್ದ. ಇದನ್ನು ಕಂಡು ಗ್ರಾಮಸ್ಥರು ಬೆಚ್ಚಿಬಿದ್ದರು. ಗ್ರಾಮಸ್ಥರು ಪರಿಪರಿಯಾಗಿ ಕೆಳಗಿಳಿಯುವಂತೆ ಯುವಕನಿಗೆ ತಿಳಿಸಿದರೂ ಆತ ಕೆಳಗಿಳಿಯಲಿಲ್ಲ.