Love Story: ಪ್ರೀತಿಗಾಗಿ ದೇಶದ ಗಡಿ ದಾಟಿ 10000 ಕಿ.ಮೀ ಪಯಣಿಸಿದ ಯುವಕ

By Suvarna News  |  First Published Jul 22, 2023, 3:01 PM IST

ಪ್ರೀತಿ ಎಲ್ಲಿ, ಯಾವಾಗ ಬೇಕಾದ್ರೂ ಹುಟ್ಟಬಹುದು. ಇದಕ್ಕೆ ದೇಶ, ಊರು, ಭಾಷೆಯ ಮಿತಿಯಿಲ್ಲ. ಇದಕ್ಕೆ ಅರ್ಜೆಂಟಿನಾ ಹಾಗೂ ಯುಕೆ ಹುಡುಗ, ಹುಡುಗಿ ಮಧ್ಯೆ ಚಿಗುರಿದ ಪ್ರೇಮವೇ ಸಾಕ್ಷಿ.
 


ಪ್ರೀತಿ ಕುರುಡು ಅಂತ ಹೇಳ್ತಾರೆ. ಪ್ರೀತಿ ಹುಟ್ಟಿದಾಗ ಅಲ್ಲಿ ಜಾತಿ ಮತಗಳ ಬೇಧಗಳು ಇರೋದಿಲ್ಲ. ದೂರ, ಸನಿಹದ ಪರಿವೆಯೂ ಇರೋದಿಲ್ಲ. ಪ್ರೀತಿ ವ್ಯಕ್ತಿಗೆ ಹೊಸ ಚೈತನ್ಯವನ್ನು ಕೊಡುತ್ತದೆ. ಹಾಗೆಯೇ ಅದಕ್ಕೆ ಎಲ್ಲರನ್ನೂ ಗೆಲ್ಲುವ ಶಕ್ತಿಯೂ ಇದೆ. ಪ್ರೀತಿಯೊಂದು ಜೊತೆಗಿದ್ದರೆ ನಾನು ಏನನ್ನಾದರೂ ಸಾಧಿಸಬಲ್ಲೆ ಎನ್ನುವ ಧೈರ್ಯ ಮೂಡುತ್ತದೆ.

ಪ್ರೀತಿ (Love) ಗೆ ದೂರ ಕೂಡ ಮುಖ್ಯವಾಗೋದಿಲ್ಲ. ನಮ್ಮ ಊರಿನಿಂದ ಎಲ್ಲೋ ದೂರದಲ್ಲಿ ಇರುವವರ ಮೇಲೆ ಕೂಡ ಲವ್ ಆಗಬಹುದು. ಈ ಮಾತು ಇಂದು ನಾವು ಹೇಳಲಿರುವ ಪ್ರೇಮಿಗಳಿಗೆ ಸೂಟ್ ಆಗುತ್ತದೆ. ಏಕೆಂದರೆ ಇವರು ಕೂಡ ಪ್ರೀತಿಗಾಗಿ 10000 ಕಿ.ಮೀ ದೂರ ಬಂದಿದ್ದಾರೆ. ಒಬ್ಬರಿಗೊಬ್ಬರು ಅಷ್ಟು ದೂರ ಇದ್ದರೂ ಕೂಡ ಮೊದಲ ಭೇಟಿಯಲ್ಲೇ ಇವರಲ್ಲಿ ಪ್ರೇಮಾಂಕುರವಾಗಿದೆ. ಇವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಲವ್ ಸ್ಟೋರಿ (Love Story) ಹಂಚಿಕೊಂಡಿದ್ದಾರೆ.

Tap to resize

Latest Videos

ಪಿಂಕ್ ಕಲರ್ ಇಷ್ಟ ಪಡೋ ಹುಡುಗೀರ ಗುಣ ಹೇಗಿರುತ್ತೆ ನೋಡಿ…

ದೂರದಲ್ಲಿದ್ದರೂ ಮೊದಲ ಭೇಟಿಯಲ್ಲೇ ಹುಟ್ಟಿತು ಪ್ರೀತಿ: ಈ ಲವ್ ಸ್ಟೋರಿ 29 ವರ್ಷದ ಕ್ರಿಸ್ಟಿಯನ್ ಪೆರೇಡ್ಸ್ ಮತ್ತು 27 ವರ್ಷದ ರಿಬ್ಕಾ ಕ್ಲೆಟನ್ ಅವರದ್ದಾಗಿದೆ. ಕ್ರಿಸ್ಟಿಯನ್ ಅವರು ಅರ್ಜೆಂಟಿನಾದ ನಿವಾಸಿಯಾಗಿದ್ದಾರೆ. ರಿಬ್ಕಾ ಅವರು ಡರ್ಬಿಶಾಯರ್ (ಯುಕೆ) ದವರಾಗಿದ್ದಾರೆ. ಈ ಜೋಡಿ ಪರಸ್ಪರ ಅಷ್ಟು ದೂರವಿದ್ದರೂ ಕೂಡ ಪ್ರೀತಿ ಅವರನ್ನು ಒಂದುಗೂಡಿಸಿದೆ.

ಕ್ರಿಸ್ಟಿಯನ್ ಮತ್ತು ರೆಬ್ಕಾ ಅವರ ಪ್ರೀತಿ 2022 ಅಕ್ಟೋಬರ್ ರಲ್ಲೇ ಆರಂಭವಾಗಿದೆ. ಆ ಸಮಯದಲ್ಲಿ ಕ್ರಿಸ್ಟಿಯನ್ ಅವರು ನಾರ್ವೆಜಿಯನ್ ಕ್ರೂಸ್ ನಲ್ಲಿ ಒಂದು ಗಿಫ್ಟ್ ಶಾಪ್ ಅನ್ನು ನಡೆಸುತ್ತಿದ್ದರು. ಕಾಕತಾಳೀಯ ಎಂಬಂತೆ ರೆಬ್ಕಾ ಅವರು ರಜಾದಿನಗಳನ್ನು ಕಳೆಯಲು ಅಲ್ಲಿಗೇ ಬಂದಿದ್ದರು. ಆ ಸಮಯದಲ್ಲಿ ಅವರಿಬ್ಬರ ಮೊದಲ ಭೇಟಿಯಾಗಿತ್ತು. ಕೆಲವು ದಿನಗಳ ನಂತರ ರಿಬ್ಕಾ ಅವರು ತಮ್ಮ ರಜಾದಿನಗಳು ಮುಗಿದ ಮೇಲೆ ಊರಿಗೆ ವಾಪಸ್ಸಾದರು. ಈ ಜೋಡಿ ಬೇರೆಯಾದ ಕೆಲವೇ ತಿಂಗಳಲ್ಲಿ ನಾರ್ವೇಜಿಯನ್ ಕ್ರೂಸ್ ಯುಕೆ ಯಲ್ಲಿ ನೆಲೆಯೂರಿದಾಗ ಕ್ರಿಸ್ಟಿಯನ್ ಮತ್ತು ರಿಬ್ಕಾ ಮತ್ತೆ ಭೇಟಿಯಾದರು. ಆ ಸಮಯದಲ್ಲಿ ಅವರಿಬ್ಬರೂ ಜೊತೆಯಲ್ಲಿ 11 ದಿನಗಳನ್ನು ಕಳೆದರು. ಇಬ್ಬರೂ ಪರಸ್ಪರ ಅಷ್ಟು ದಿನಗಳನ್ನು ಕಳೆದ ನಂತರ ಅವರಿಗೆ ಮತ್ತೆ ಬೇರೆಯಾಗುವ ಮನಸ್ಸಾಗಲೇ ಇಲ್ಲ. ಇಬ್ಬರೂ ಪರಸ್ಪರ ಒಬ್ಬರಿಗಾಗಿ ಒಬ್ಬರು ಹುಟ್ಟಿದ್ದಾರೆ ಎನ್ನುವಷ್ಟು ಪ್ರೀತಿ ಅವರಲ್ಲಿ ಮೂಡಿತ್ತು.  

Personality Tips: ಒತ್ತಡದಲ್ಲೂ ಕೂಲ್‌ ಆಗಿರ್ಬೇಕಾ? ಈ ಗುಣಗಳನ್ನ ಬೆಳೆಸ್ಕೊಳಿ

ಮನೆಯವರ ವಿರೋಧದ ನಡುವೆ ಮದುವೆ :  ರಿಬ್ಕಾ ಅವರು,  ಪ್ರೀತಿಯ ವಿಷಯದಲ್ಲಿ ನಾವು ಬಹಳ ದುರದೃಷ್ಟವಂತೆ. ಏಕೆಂದರೆ ನನ್ನ ಜೀವನದಲ್ಲಿ ಎಷ್ಟೋ ಮಂದಿ ಬಂದರೂ ಯಾರಿಂದಲೂ ನನಗೆ ಪ್ರೀತಿ ಸಿಗಲಿಲ್ಲ. ಆದರೆ ಕ್ರಿಸ್ಟಿಯನ್ ಹಾಗಲ್ಲ. ಅವನಿಂದ ನನಗೆ ಸಂಪೂರ್ಣ ಪ್ರೀತಿ ಸಿಕ್ಕಿದೆ. ನಮ್ಮ ಪ್ರೀತಿಗೆ ಅನೇಕ ರೀತಿಯ ತೊಂದರೆಗಳಾದವು. ನನ್ನ ಮನೆಯವರು ಕೂಡ ಈ ಸಂಬಂಧದ ಬಗ್ಗೆ ಖುಷಿಯಿಲ್ಲ. ಬಹಳ ಕಷ್ಟಪಟ್ಟು ಮನೆಯವರನ್ನು ಒಪ್ಪಿಸಿದ್ದೇನೆ ಎನ್ನುತ್ತಾರೆ. ಮೊದಲು ರಿಬ್ಕಾ ಅವರ ನೀಲಿ ಕಣ್ಣುಗಳು ನನಗೆ ಇಷ್ಟವಾದವು. ಅವರು ಕೂಡ ಅಷ್ಟೇ ಸುಂದರವಾಗಿದ್ದರು. ಜನವರಿ 2023 ರಲ್ಲಿ ನಾನು ರಿಬ್ಕಾ ಅವರಿಗೆ ಪ್ರಪೋಸ್ ಮಾಡಿದೆ ಎನ್ನುತ್ತಾರೆ ಕ್ರಿಸ್ಟಿಯನ್. 

ಕ್ರಿಸ್ಟಿಯನ್ ಅವರು ರಿಬ್ಕಾ ಅವರ ಜೊತೆ ಇರಲೆಂದು ಯುಕೆ ಗೆ ಶಿಫ್ಟ್ ಆಗಲು ನಿರ್ಧರಿಸಿದರು. ಬರೋಬ್ಬರಿ 11000 ಕಿ.ಮೀ ದೂರದಿಂದ ರಿಬ್ಕಾ ಅವರು ಊರನ್ನು ತಲುಪಿದ ಕ್ರಿಸ್ಟಿಯನ್ ಶೀಘ್ರದಲ್ಲೇ ರಿಬ್ಕಾ ಅವರನ್ನು ಮದುವೆಯಾಗಲಿದ್ದಾರೆ. ಕ್ರಿಸ್ಟಿಯನ್ ಮತ್ತು ರಿಬ್ಕಾ ಅವರ ಲವ್ ಸ್ಟೋರಿಯನ್ನು ಸಾಕಷ್ಟು ಜನರು ಮೆಚ್ಚಿಕೊಂಡಿದ್ದಾರೆ.

click me!