
ನ್ಯೂಯಾರ್ಕ್ (ಮಾ.10): ಕೊರೋನಾ ಬಳಿಕ ಅಮೆರಿಕದಲ್ಲಿ ಐಷಾರಾಮಿ ಜೀವನ ಅಕ್ಷರಶಃ ನರಕವಾಗಿದೆ. ಕೊರೋನಾಗೂ ಮುನ್ನ ಹಣವನ್ನು ನೀರಿನಂತೆ ಚೆಲ್ಲುತ್ತಿದ್ದ ಅಮೆರಿಕ ಪ್ರಜೆಗಳು, ಈಗ ದಿನನಿತ್ಯದ ಖರ್ಚಿಗಾಗಿ ಪರದಾಟ ಮಾಡುವಂತಾಗಿದೆ. ನಿರುದ್ಯೋಗ ಸಮಸ್ಯೆ ಮಧ್ಯಮ ವರ್ಗವನ್ನು ಕಾಡಿದೆ. ಹಾಗಾಗಿ ಜೀವನದ ಅಗತ್ಯಗಳನ್ನು ಪೂರೈಸಲು ಭಿನ್ನ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಅಮೆರಿಕದಲ್ಲಿ ಒಬ್ಬ ಮಹಿಳೆ ತಾನು ಟಾಪ್‌ಲೆಸ್ ಮನೆಕೆಲಸದ ಸೇವಕಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದು, ಆ ಬಳಿಕ ಅವಳ ಸುದ್ದಿ ವೈರಲ್ ಆಗಿದೆ. ಟಿಕ್‌ಟಾಕ್ ಬಳಕೆದಾರರಾಗಿರುವ ಫ್ಲೋರಿಡಾದ ಟಂಪಾ ನಗರದ ಸ್ಯಾಮ್ಮಿ ಎನ್ನುವ ಮಹಿಳೆ ಪ್ರತಿ ದಿನ ಟಾಪ್‌ಲೆಸ್ ಆಗಿ ಮನೆಕೆಲಸ ಮಾಡೋದಕ್ಕೆ ಗಂಟೆಗೆ 300 ಡಾಲರ್ ಚಾರ್ಜ್ ಮಾಡೋದಾಗಿ ತಿಳಿಸಿದ್ದಾರೆ. ಇದರಿಂದಾಗಿ ಒಂದು ದಿನ ತಾನು 2230 ಡಾಲರ್ ಅಂದರೆ 1.8 ಲಕ್ಷ ರೂಪಾಯಿ ಸಂಬಳ ಪಡೆಯುತ್ತೇನೆ ಎಂದು ಹೇಳಿದ್ದಾಳೆ. 'ಟಾಪ್‌ಲೆಸ್ ಆಗಿ ಮನೆಕೆಲಸ ಮಾಡೋದಕ್ಕೆ ನಾನು ಎಷ್ಟು ಸಂಬಳ ಪಡೆಯುತ್ತಿದ್ದೇನೆ ಎನ್ನುವುದು ಬಹುತೇಕ ಎಲ್ಲರ ಪ್ರಶ್ನೆಯಾಗಿದೆ' ಎಂದು ಕಂಟೆಂಟ್ ಕ್ರಿಯೇಟರ್ ಕೂಡ ಆಗಿರುವ ಸ್ಯಾಮ್ಮಿ ವಿಡಿಯೋದಲ್ಲಿ ಹೇಳಿದ್ದಾರೆ. ಇಂದು ನಾನು ಐದು ಮನೆಗಳನ್ನು ಕ್ಲೀನ್ ಮಾಡಿದೆ. ಪ್ರತಿ ಮನೆಯಲ್ಲಿ ಒಂದು ಗಂಟೆಯ ಕೆಲಸಕ್ಕೆ 300 ಡಾಲರ್ ಚಾರ್ಜ್ ಮಾಡಿದ್ದೇವೆ. ಹಾಗೇನಾದರೂ ಮನೆಕೆಲಸ ನಡೆಯುವ ಸ್ಥಳದಲ್ಲಿ ಅನಾಹುತಗಳಾದಲ್ಲಿ ಅದನ್ನು ಎದುರಿಸುವ ಸಲುವಾಗಿ ನನಗೆ ಒಬ್ಬ ಸೆಕ್ಯುರಿಟಿಯನ್ನೂ ಇರಿಸಿಕೊಂಡಿದ್ದೇನೆ. ಆತ ಮನೆಯ ಹೊರಗಡೆ ಕಾಯುತ್ತಿರುತ್ತಾನೆ ಎಂದು ಹೇಳಿದ್ದಾರೆ.
ಇನ್ನು 2ನೇ ಮನೆಯನ್ನು ಕ್ಲೀನ್ ಮಾಡಿದಾಗಲೂ ನನಗೆ ಗಂಟೆಗೆ 300 ಡಾಲರ್ ಆಗಿ ಹಣ ನೀಡಿದ್ದಾರೆ. ಅದರಲ್ಲಿ 120 ಡಾಲರ್‌ಅನ್ನು ಟಿಪ್ಸ್ ರೂಪದಲ್ಲಿ ನೀಡಿದ್ದಾರೆ ಎಂದು ಸ್ಯಾಮ್ಮಿ ತಿಳಿಸಿದ್ದಾರೆ. ಆದರೆ, ನನಗೆ ಒಬ್ಬ ಸೆಕ್ಯುರಿಟಿಯನ್ನು ಇರಿಸಿದ್ದೇನೆ. ನನ್ನ ಗಳಿಕೆಯ ಶೇ.30ರಷ್ಟನ್ನು ಸೆಕ್ಯುರಿಟಿ ಗಾರ್ಡ್‌ಗೆ ನೀಡುತ್ತೇನೆ ಎಂದು ಸ್ಯಾಮ್ಮಿ ವಿವರಿಸಿದ್ದಾರೆ. ಇದು ಉತ್ತಮ ವೇತನ ನೀಡುವ ಕೆಲಸ ಎಂದು ಹೇಳುವ ಸ್ಯಾಮ್ಮಿ ಇದಕ್ಕಾಗಿ ಜಾಸ್ತಿ ತಲೆಕೆಡಿಸಿಕೊಳ್ಳಬೇಕಿಲ್ಲ. ನಾನು ಟಾಪ್‌ಲೆಸ್ ಆಗಿ ಇರುತ್ತೇನೆ ಅಷ್ಟೇ. ಕೆಲಸ ಮುಗಿದ ನಂತರ ಮನೆಯಿಂದ ಹೊರಟು ಇನ್ನೊಂದು ಮನೆಗೆ ಹೋಗುತ್ತೇನೆ ಎಂದಿದ್ದಾರೆ.
ಇದಕ್ಕೆ ಕಾಮೆಂಟ್ ಕೂಡ ಬಹಳ ಮಜವಾಗಿದೆ. ಅದರ್ಥ ನೀವು 1400 ಡಾಲರ್ ಸಂಪಾದನೆ ಮಾಡಿದರೆ, ನಿಮ್ಮ ಸೆಕ್ಯುರಿಟಿ ಹೆಚ್ಚೂ ಕಡಿಮೆ 500 ಡಾಲರ್ ಸಂಪಾದನೆ ಮಾಡಿದ್ದಾನೆ. ನಿಮಗಿಂತ ಆತನ ಕೆಲಸವೇ ಬಹಳ ಆರಾಮದಾಯಕ. ಸುಮ್ಮನೆ ಹೊರಗೆ ಕುಳಿತುಕೊಳ್ಳೋದು. ಆ ಕೆಲಸ ನನಗೆ ಸಿಗಬಾರದಿತ್ತೇ' ಎಂದು ಒಬ್ಬ ವ್ಯಕ್ತಿ ಬರೆದಿದ್ದಾರೆ.
ಟಾಪ್‌ಲೆಸ್ ಫೋಸ್ ನೀಡಿದ ಉರ್ಫಿ, ಎದೆ ಮುಚ್ಚಿಕೊಂಡಿದ್ದು ಕೂದಲಿನಿಂದ!
ಫೆಬ್ರವರಿ 19 ರಂದು ಹಿಂದಿನ ವೀಡಿಯೊದಲ್ಲಿ, ಫ್ಲೋರಿಡಾ ಮೂಲದ ಸ್ಯಾಮ್ಮಿ, ಇದೇ ರೀತಿಯ ಸೇವೆಗಳನ್ನು ಒದಗಿಸುವ ಸ್ನೇಹಿತೆಯಿಂದ ಈ ವೃತ್ತಿಯ ಬಗ್ಗೆ ಕಲಿತಿದ್ದೇನೆ ಎಂದು ಹೇಳಿದ್ದಾರೆ. ತಮ್ಮ ಪ್ರದೇಶದಲ್ಲಿ ಇಂತಹ ಸೇವೆಗಳನ್ನು ನೀಡುವ ಯಾರೂ ನನಗೆ ಗೊತ್ತಿರಲಿಲ್ಲ. ಯಾಕೆ ನಾನೇ ಇದನ್ನು ಪ್ರಯತ್ನಿಸಬಾರದು ಎಂದು ನನಗೆ ಅನಿಸಿತ್ತು ಎಂದು ಹೇಳಿದ್ದಾರೆ.
"ನನಗೆ ಕ್ಲೀನ್ ಮಾಡೋದು ಇಷ್ಟ, ಮತ್ತು ನಾನು ಟಾಪ್‌ಲೆಸ್ ಆಗಿರಲು ಇಷ್ಟಪಡುತ್ತೇನೆ. ಹಾಗಾಗಿ, ನಾನು ಸೋಶಿಯಲ್ ಮೀಡಿಯಾದಲ್ಲಿದ್ದ ಎಲ್ಲರನ್ನೂ ತಲುಪಿದೆ, ಮತ್ತು ನಾನು 'ಹೇ ನೀವು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಮತ್ತು ನಿಮ್ಮ ಮನೆಯನ್ನು ಸ್ವಚ್ಛಗೊಳಿಸಲು ಬಯಸಿದರೆ, ನನಗೆ ಡಿಎಂ ಮಾಡಿ' ಎಂದು ನಾನು ಪ್ರತಿ ಬಾರಿಯೂ ಕೇಳಿಕೊಳ್ಳುತ್ತೇನೆ ಎಂದು ಸ್ಯಾಮ್ಮಿ ಹೇಳಿದ್ದಾರೆ.
ಟಾಪ್ ಲೆಸ್ ಫೋಟೋಶೂಟ್‌ಗೆ ಪೋಸ್ ನೀಡಿದ ಕಿರುತೆರೆ ನಟಿಯರು
ಆರಂಭದಲ್ಲಿ, ನನ್ನ ಈ ಆಫರ್‌ಗೆ ಹೆಚ್ಚಿನ ಪ್ರತಿಕ್ರಿಯೆ ಇರಲಿಲ್ಲ, ಕೆಲವೇ ಜನರು ಅವಳು ಏನು ಮಾಡುತ್ತಿದ್ದಾಳೆ ಎಂಬುದರ ಬಗ್ಗೆ ಆಸಕ್ತಿ ತೋರಿಸಿದರು. ಆದರೆ, 'ಟಾಪ್‌ಲೆಸ್ ಮೇಯ್ಡ್' ಎನ್ನುವ ಪದವನ್ನು ಬಳಕೆ ಮಾಡಿ ನನ್ನ ಆಫರ್ ಹೇಳಿದ ಬಳಿಕ, ನನ್ನ ಮೆಸೇಜ್ ಸೆಕ್ಷನ್ ಆಫರ್‌ಗಳಿಂದ ತುಂಬಿಹೋಗಿತ್ತು ಎಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.