Viral Video : ರೆಸ್ಟೋರೆಂಟ್‌ನಲ್ಲಿ ಬಿಯರ್ ಶೇರ್ ಮಾಡ್ಕೊಂಡ ವೃದ್ಧ ದಂಪತಿ

Published : Mar 09, 2023, 04:27 PM IST
Viral Video : ರೆಸ್ಟೋರೆಂಟ್‌ನಲ್ಲಿ ಬಿಯರ್ ಶೇರ್ ಮಾಡ್ಕೊಂಡ ವೃದ್ಧ ದಂಪತಿ

ಸಾರಾಂಶ

ಭಾರತದಲ್ಲಿ ವೃದ್ಧ ದಂಪತಿ ಜೊತೆಯಾಗಿ ಕಾಣಿಸೋದೆ ಅಪರೂಪ. ಅದ್ರಲ್ಲೂ ರೆಸ್ಟೋರೆಂಟ್ ಗೆ ಬಂದು, ಬಿಯರ್ ಕುಡಿಯುತ್ತಿರುವ ದಂಪತಿ ಅಪರೂಪದಲ್ಲಿ ಅಪರೂಪ. ಈಗ ಒಂದು ಜೋಡಿ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ. ಅವರ ವಿಡಿಯೋ ವೈರಲ್ ಆಗಿದೆ.  

ಈಗಿನ ಕಾಲದಲ್ಲಿ ಶುದ್ಧ ಪ್ರೀತಿ ಸಿಗೋದು ಬಹಳ ಅಪರೂಪ. ಹಣ, ಐಷಾರಾಮಿ ಜೀವನದ ಹಂಬಲ, ಒತ್ತಡದಲ್ಲಿರುವ ಜನರು ಬಹುಬೇಗ ತಾಳ್ಮೆ ಕಳೆದುಕೊಳ್ಳುತ್ತಾರೆ. ಪರಸ್ಪರ ಸಮರ್ಪಣಾ ಭಾವ ಇಲ್ಲದಂತಾಗಿದೆ. ಇದೇ ಕಾರಣಕ್ಕೆ ಮದುವೆಯಾದ ಆರು ತಿಂಗಳಲ್ಲಿಯೇ ದಂಪತಿ ದೂರವಾಗ್ತಾರೆ. ಪ್ರೀತಿಸುವ ಜೋಡಿ ಕೂಡ ತುಂಬಾ ದಿನ ಜೊತೆಗಿರಲು ಸಾಧ್ಯವಾಗ್ತಿಲ್ಲ. ಪ್ರೀತಿಗಿಂತ ಇಲ್ಲಿ ಬೇರೆ ವಿಷ್ಯಗಳು ಮುಖ್ಯವಾಗ್ತಿವೆ. ದಿನ ದಿನಕ್ಕೂ ಕೋರ್ಟ್ ಗೆ ಬರ್ತಿರುವ ವಿಚ್ಛೇದನ ಸಂಖ್ಯೆ ಹೆಚ್ಚಾಗ್ತಿದೆ. ಇಬ್ಬರ ಮಧ್ಯೆ ಸಣ್ಣ ವಿಷ್ಯಕ್ಕೆ ಗಲಾಟೆಯಾಗ್ತಿದ್ದು, ಹೊಂದಾಣಿಕೆ ಕಡಿಮೆಯಾಗ್ತಿದೆ. ಇದನ್ನು ನಾವು ಹೇಳ್ತಿಲ್ಲ. ಅನೇಕ ಅಂಕಿ- ಅಂಶಗಳಿಂದ ಇದು ಸಾಭೀತಾಗಿದೆ. ಹಾಗಂತ ಈಗಿನ ಜನರೇಷನ್  ಗೆ ಪ್ರೀತಿಯ ಮಹತ್ವ ತಿಳಿದಿಲ್ಲ ಎಂದಲ್ಲ. ಈಗ್ಲೂ ಶುದ್ಧ ಮನಸ್ಸಿನಿಂದ ಪ್ರೀತಿಸುವ ಜೋಡಿಗಳಿವೆ. ಆದ್ರೆ ಹಿಂದಿನ ಕಾಲದಲ್ಲಿ ಈಗಿನದಕ್ಕಿಂತ ಹೆಚ್ಚು ಮಹತ್ವವನ್ನು ಜನರು ಪ್ರೀತಿಗೆ ನೀಡ್ತಿದ್ದರು ಅಂದ್ರೆ ತಪ್ಪಾಗಲಾರದು.

ನಾನಾ ಆಯ್ಕೆಗಳು, ನಾನಾ ತಂತ್ರಜ್ಞಾನ (Technology), ಸಾಮಾಜಿಕ ಜಾಲತಾಣ, ಜೀವನಶೈಲಿ (Lifestyle)  ಎಲ್ಲವೂ ಈಗಿನ ಜನರನ್ನು ಬದಲಿಸಿದೆ. ಆಗಿನ ಕಾಲದಲ್ಲಿ ಒಬ್ಬರಿಗೆ ತಮ್ಮ ಮನಸ್ಸನ್ನು ಒಪ್ಪಿಸಿದ್ರೆ ಮುಗಿದಿತ್ತು. ಜೀವನ ಪರ್ಯಂತ ಅವರ ಜೊತೆ ಸುಖಕರ ಜೀವನ ನಡೆಸುತ್ತಿದ್ದರು. ಪ್ರೀತಿ (Love) ಯನ್ನು ಪರಸ್ಪರ ಹೇಳಿಕೊಳ್ಳಲು ಜನರು ನಾನಾ ವಿಧಾನಗಳನ್ನು ಅನುಸರಿಸುತ್ತಿದ್ದರು.

90ರ ವೃದ್ಧನಿಗೆ ಬಂತು ಸಾಲು ಸಾಲು ಮದುವೆ ಪ್ರಪೋಸಲ್, ಕಾರಣ ಇದು!

ಕದ್ದು ಮುಚ್ಚಿ ಲೆಟರ್ (Letter) ಬರೆಯೋದು, ಉಡುಗೊರೆ ನೀಡೋದ್ರಲ್ಲಿ ಅವರು ಪ್ರೀತಿಯ ಸುಖವನ್ನು ಅನುಭವಿಸುತ್ತಿದ್ದರು. ಚೆಂದದ ಪ್ರೇಮ ಪತ್ರಗಳನ್ನು ಈಗಲೂ ಜೋಪಾನವಾಗಿಟ್ಟುಕೊಂಡ ಅನೇಕ ವೃದ್ಧ ದಂಪತಿಯಿದ್ದಾರೆ. 

ವೃದ್ಧ ದಂಪತಿ (Couple) ಪ್ರೀತಿಯಿಂದ ಕೈ ಕೈ ಹಿಡಿದು ನಡೆಯುತ್ತಿದ್ದರೆ ಅದನ್ನು ನೋಡೋದೇ ಚೆಂದ. ಅವರ ಪ್ರೀತಿ ಎಷ್ಟು ಪರಿಶುದ್ಧ ಎಂಬುದನ್ನು ಅವರ ಮುಖಭಾವದಿಂದಲೇ ಹೇಳಬಹುದು. ಸಂಗಾತಿಗೆ ಸಣ್ಣ ನೋವಾದ್ರೂ ಸ್ಪಂದಿಸುವ ಅವರ ಮನಸ್ಸು ಯಾವುದೇ ಸ್ವಾರ್ಥ ಬಯಸಿರೋರಿಲ್ಲ. ಪಾರ್ಕ್ ಗಳಲ್ಲಿ, ಆಸ್ಪತ್ರೆಗಳಲ್ಲಿ ಆಗಾಗ ನೀವು ಇಂಥ ಶುದ್ಧ ಮನಸ್ಸಿನ ವೃದ್ಧ (old) ಜೋಡಿಯನ್ನು ನೋಡಿರ್ತೀರಿ. ಈಗ ಸಾಮಾಜಿಕ ಜಾಲತಾಣ ಇನ್ಟ್ರಾಗ್ರಾಮ್ (Intragram) ನಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ಹೊಟೇಲ್ (Hotel) ಒಂದರಲ್ಲಿ ದಂಪತಿ ಬಿಯರ್ (Beer) ಕುಡಿತಾ ಕುಳಿತಿರುವ ವಿಡಿಯೋಕ್ಕೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ.

ದಿ ಪ್ರೈವಿ ಪಿಕ್ಚರ್ಸ್ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ತೆಗೆದ ವಿಡಿಯೋ ಇದಾಗಿದೆ. ಇದ್ರಲ್ಲಿ ವೃದ್ಧ ದಂಪತಿಯಿದ್ದಾರೆ. ಇಬ್ಬರು ಕೈನಲ್ಲಿ ಬಿಯರ್ ಹಿಡಿದಿದ್ದು, ಚಿಯರ್ಸ್ ಮಾಡಿ, ಸಿಪ್ ಹೀರುತ್ತಾರೆ. ವಿಡಿಯೋ ಕೆಳಗೆ ಟ್ರ್ಯೂ ಲವ್ ಎಂದು ಬರೆಯಲಾಗಿದೆ. 

ಭಾರತದಲ್ಲಿ ವಯಸ್ಸಾದ ದಂಪತಿ ಒಂದು ಲೋಟ ಬಿಯರ್ ಹಂಚಿಕೊಳ್ಳುವುದನ್ನು ನೋಡುವುದು ಸಾಮಾನ್ಯ ಸಂಗತಿಯಲ್ಲ. ನಾನು ಮತ್ತು ನನ್ನ ಸ್ನೇಹಿತರು ಮುಂಬೈನ ರೆಸ್ಟೋರೆಂಟ್‌ನಲ್ಲಿ ಅಂತಹ ದಂಪತಿಯನ್ನು ಭೇಟಿಯಾದೆವು. ನಾವು ಅವರನ್ನು ನೋಡಿ ಬೆರಗಾದೆವು. ವಿಡಿಯೋ ಮಾಡಲು ಅನುಮತಿ ಕೇಳಿದೆವು. ಅಲ್ಲದೆ  ಅವರ ಜೀವನದ ಅನುಭವಗಳನ್ನು ಕೇಳಿ ನಮಗೆ ತುಂಬಾ ಸಂತೋಷವಾಯಿತು ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. 

ಅಬ್ಬಬ್ಬಾ ನಾಯಿಗಳಿಗೂ ಅದ್ದೂರಿ ಮದ್ವೆ : ಊರಿಗೆಲ್ಲಾ ಊಟ ಹಾಕಿದ ಮನೆ ಮಂದಿ

ಜೀವನದಲ್ಲಿ ಎಲ್ಲವನ್ನೂ ಒಟ್ಟಿಗೆ ಎದುರಿಸಿದ ಅನೇಕಾನೇಕ ವರ್ಷಗಳ ನಂತರ ಒಟ್ಟಿಗೆ ಕುಳಿತು ಬಿಯರ್‌ ಹಂಚಿಕೊಳ್ಳುವ ಮೂಲಕ ಶಾಂತಿ ಪಡೆಯುತ್ತಿರುವ ದಂಪತಿ ವಿಡಿಯೋ ಸಾಕಷ್ಟು ವೈರಲ್ ಆಗಿದೆ. 6 ಮಿಲಿನಯ್ ಗಿಂತಲೂ ಹೆಚ್ಚು ಜನರು ಇದನ್ನು ವೀಕ್ಷಣೆ ಮಾಡಿದ್ದಾರೆ. ದಂಪತಿ ಪ್ರೀತಿಯನ್ನು ಜನರು ಮೆಚ್ಚಿಕೊಂಡಿದ್ದಾರೆ. ರೆಸ್ಟೋರೆಂಟ್ ನಲ್ಲಿ ಕುಳಿತು ಬಿಯರ್ ಹೀರುತ್ತಿರುವ ದಂಪತಿಗೆ ಶುಭ ಹಾರೈಸಿದ್ದಾರೆ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ತಾಳಿ ಕಟ್ಟುವ ಶುಭ ವೇಳೆ 'ಇವನು ನನ್ನ ಗಂಡ' ಎಂದ ಯುವತಿ; ಮಾಜಿ ಪ್ರೇಯಸಿ ರಾಕ್, ಮದುವೆ ಮನೇಲಿದ್ದವರು ಶಾಕ್!
Abhishek Bachchan: ಮಗಳು ಆರಾಧ್ಯಾ ಗೂಗಲ್‌ನಲ್ಲಿ ಈ ಡಿವೋರ್ಸ್ ಸುದ್ದಿ ಓದಿದರೇ ಏನಾಗುವುದೋ ಏನೋ..!?