ಕಾಂಡೋಮ್ ಮಾತ್ರವಲ್ಲ, ಒಲ್ಲದ ಪ್ರೆಗ್ನೆನ್ಸಿಗೆ ಬೈ ಹೇಳಲಿವೆ ನಾನಾ ಮಾರ್ಗಗಳು

By Suvarna NewsFirst Published Apr 20, 2022, 1:57 PM IST
Highlights

ಮಗು (Baby) ಹೆಣ್ಣು ಗಂಡಿನ ಆಯ್ಕೆಯಾಗಬೇಕು. ಆದರೆ, ಹಲವು ಸಂದರ್ಭಗಳಲ್ಲಿ ಇಬ್ಬರಿಗೂ ಬೇಡವಾದರೂ ಕನ್ಸೀವ್ (Concieve) ಆದಾಗ ಪ್ರೆಗ್ನೆನ್ಸಿಯನ್ನು ಮುಂದುವರಿಸೋದು ಅನಿವಾರ್ಯವಾಗುತ್ತೆ. ಆದರೆ, ಸಾಮಾವ್ಯವಾಗಿ ಜನಪ್ರಿಯವಾಗಿರುವ ಕಾಂಡೋಮ್ (Condom) ಹೊರತು ಪಡಿಸಿ, ಬೇರೆ ಬೇರೆ ಮಾರ್ಗಗಳಿಂದಲೂ ಗರ್ಭಧಾರಣೆಯನ್ನು ಕಂಟ್ರೋಲ್ ಮಾಡಬಹುದು. ಹೇಗೆ? 

ಬಹುತೇಕ ಜೋಡಿಗಳು (Couple) ಪ್ರೆಗ್ನೆನ್ಸಿ ಅವಾಯ್ಡ್ ಮಾಡಬೇಕೆಂದರೆ ಕಾಂಡೋಮ್ ಮೊರೆ ಹೋಗುತ್ತಾರೆ. ಇಲ್ಲವೇ,  ಮಹಿಳೆ ಬೆಳಗ್ಗೆದ್ದು ಮಾತ್ರೆ ತಿಂದು ನಿರಾಳವಾಗುತ್ತಾಳೆ. ಆದರೆ, ಸೆಕ್ಷುಯಲಿ  ಆ್ಯಕ್ಚಿವ್ ಆಗಿದ್ದಾಗ ಹೀಗೆ ಮಾತ್ರೆ ತೆಗೆದುಕೊಳ್ಳುವುದೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಇನ್ನೂ ಸುರಕ್ಷಿತ ಅನೇಕ ಮಾರ್ಗಗಳೂ ಮಹಿಳೆಯರ ಪಾಲಿಗಿವೆ. ಇಂಟ್ರಾ ಯುಟೆರಿನ್ ಡಿವೈಸಸ್, ವೆಜೈನಲ್ ರಿಂಗ್, ಇಂಜೆಕ್ಷನ್, ಮಾತ್ರೆ ಸೇರಿ ಹಲವು ಕಾಂಟ್ರಾಸೆಪ್ಟಿವ್ ಆಯ್ಕೆಗಳಿವೆ. ಅವುಗಳಲ್ಲಿ ನಿಮ್ಮ ದೇಹಕ್ಕೆ ಯಾವುದು ಹೆಚ್ಚು ಸೂಟ್ ಆಗುತ್ತದೆ ನೋಡಿ ಬಳಸಬೇಕಷ್ಟೆ. ಅದಕ್ಕೆ ವೈದ್ಯರ ಸಲಹೆ ಪಡಯೋದೂ ಅನಿವಾರ್ಯ.

ಓರಲ್ ಕಾಂಟ್ರಾಸೆಪ್ಟಿವ್ ಪಿಲ್ಸ್ (Oral Contraceptive Pills)
ಗರ್ಭ ನಿರೋಧಕವಾಗಿ ಬಳಸುವ ಎಲ್ಲ ಮಾತ್ರೆಗಳನ್ನೂ ಹಾರ್ಮೋನ್ ಬಳಸಿಯೇ ತಯಾರಿಸಲಾಗುತ್ತದೆ. ಹಾಗಾಗಿ, ಮಾತ್ರೆಗಳನ್ನೂ ಬಳಸಿದರೂ ಕಡಿಮೆ ಡೋಸ್ ಇರುವಂತೆ ನೋಡಿಕೊಳ್ಳಬೇಕು. ಇದರ ಅಡ್ಡ ಪರಿಣಾಮ ಕಡಿಮೆ ಇರುತ್ತೆ. ಪೀರಿಯಡ್ಸ್‌ಗೆ (Periods) ತೊಂದರೆಯಾಗೋಲ್ಲ. ಇದರಲ್ಲಿ ಎರಡು ಋತುಚಕ್ರಗಳ ನಡುವೆ ಬ್ಲೀಡಿಂಗ್ ಅಥವಾ ಸ್ಪಾಟಿಂಗ್ (Spotting) ಕಾಣಿಸೋದು ಕಡಿಮೆ. ಸ್ತ್ರೀ ರೋಗ ತಜ್ಞರ ಸಲಹೆ ಪಡೆದೇ ಈ ಮಾತ್ರೆಗಳನ್ನು ಬಳಸಬೇಕು. ಸಿಗರೇಟ್ ಸ್ಮೋಕಿಂಗ್ (Smoking) ಚಟ ಹಾಗೂ ಕಾಂಟ್ರಾಸೆಪ್ಟಿವ್ ಪಿಲ್ (Contraceptive Pill) ತೆಗೆದುಕೊಳ್ಳುವ ಅಭ್ಯಾಸವೆರಡೂ ಒಟ್ಟಿಗೆ ಇರೋದು ಒಳ್ಳೆಯದಲ್ಲ. ಕಾಂಟ್ರಾಸೆಪ್ಟಿವ್ ಪಿಲ್‌ಗಳನ್ನು ಪ್ರತಿದಿನವೂ ತೆಗೆದುಕೊಳ್ಳಬೇಕು. 

Sex Life : ಸಂಭೋಗದ ವೇಳೆ ಕಾಂಡೋಮ್ ಹರಿಯುತ್ತಾ? ಮಾಡ್ಬೇಡಿ ಈ ತಪ್ಪು

ಇಂಟ್ರಾ ಯುಟೆರಿನ್ ಡಿವೈಸಸ್ (Intra Uterine Devices)
ಪ್ರಗ್ನೆನ್ಸಿ ತಡೆಯುವಲ್ಲಿ ಹೆಚ್ಚು ಸುರಕ್ಷಿತ, ವಿಫಲವಾಗದ ಆಯ್ಕೆ ಇಂಟ್ರಾ ಯುಟೆರಿನ್ ಡಿವೈಸ್‌ಗಳು. ಕಾಪರ್ ಹಾಗೂ ಹಾರ್ಮೋನಲ್ ಎಂಬ ಎರಡು ವಿಧಗಳಿ ಇದು ಲಭ್ಯ. ತಜ್ಞ ವೈದ್ಯರು ಇವನ್ನು ಗರ್ಭಾಶಯದೊಳಗೆ ಸೇರಿಸುತ್ತಾರೆ. ಹಾರ್ಮೋನಲ್ ಹೆಚ್ಚು ಉತ್ತಮ ಆಯ್ಕೆಯಾಗಿದ್ದು, ಇದನ್ನು ಒಮ್ಮೆ ಹಾಕಿದರೆ ಐದು ವರ್ಷಗಳ ಕಾಲ ಗರ್ಭ ಕಟ್ಟುವ ಭಯವಿರೋಲ್ಲ. ಮತ್ತೆ ಬೇಕೆಂದಲ್ಲಿ ಹಾಕಿಸಿಕೊಳ್ಳಬೇಕು. ಎರಡು ವಿಧಗಳಲ್ಲಿರುವ ಕಾಪರ್‌ ಡಿವೈಸ್‌ಗಳನ್ನಾದರೂ ಮೂರರಿಂದ ಐದು ವರ್ಷದ ಬಳಿಕ ಬದಲಾಯಿಸಬೇಕು. 

ವೆಜೈನಲ್ ರಿಂಗ್ (Vaginal Ring)
ಹಾರ್ಮೋನ್‌ಗಳಿಂದ ತುಂಬಿದ ಈ ರಿಂಗ್ ಅನ್ನು ಮಹಿಳೆಯು ತಾನೇ ಯೋನಿಗೆ ಹಾಕಿಕೊಳ್ಳಬೇಕು. ಇದೂ ಕೂಡಾ ಬಹಳ ಸುರಕ್ಷಿತ ಗರ್ಭ ನಿರೋಧಕ ವಿಧಾನ. ಪ್ರತಿ ತಿಂಗಳೂ ಹೊಸ ರಿಂಗ್ ಹಾಕಿಕೊಳ್ಳಬೇಕಾಗುತ್ತದೆ. 

ಇಂಜೆಕ್ಷನ್ಸ್ (Injenction)
ಇಂಜೆಕ್ಷನ್ ಮೂಲಕ ಪರಿಣಾಮಕಾರಿಯಾಗಿ ಗರ್ಭ ತಡೆಯಬಹುದು. 3 ತಿಂಗಳ ಕಾಲ ಮತ್ತೆ ಟೆನ್ಷನ್ ಬೇಡ. ಇದು ಬಹಳ ಪರಿಣಾಮಕಾರಿಯಾದರೂ ಕೆಲವರಲ್ಲಿ ಅಡ್ಡ ಪರಿಣಾಮ ಬೀರಿ ಮಧ್ಯೆ ಬ್ಲೀಡಿಂಗ್ ಕಾಣಿಸಿಕೊಳ್ಳಬಹುದು.

ಲೈಂಗಿಕ ಕ್ರಿಯೆ ಜಾಗದಲ್ಲಿ ಕಾಂಡೋಮ್ ಸಿಕ್ಕಿದ ಮಾತ್ರಕ್ಕೆ ಅದು ಸಮ್ಮತಿ ಸೆಕ್ಸ್ ಅಲ್ಲ!

ಮಹಿಳೆಯರ ಕಾಂಡೋಮ್ (Condom for Women)
ಪಾಲಿಯುರೆಥೇನ್‌ನಿಂದ ಮಾಡಲಾಗುವ ಮಹಿಳೆಯರ ಕಾಂಡೋಮ್ ಸರಿಯಾಗಿ ಬಳಸಿದರೆ ಶೇ.99ರಷ್ಟು ಪರಿಣಾಮಕಾರಿ. ಲೈಂಗಿಕವಾಗಿ ಹರಡುವ ಕಾಯಿಲೆಯಿಂದಾನೂ ರಕ್ಷಿಸಬಹುದು. ಆದರೆ ಹರಿದು ಹೋಗುವ ಭಯ ಇರುತ್ತದೆ. ಇವನ್ನು ಸೆಕ್ಸ್‌ಗಿಂತ 8 ಗಂಟೆ ಮೊದಲೇ ಇಟ್ಟುಕೊಳ್ಳಬಹುದು. 

ಕಾಂಟ್ರಾಸೆಪ್ಟಿವ್ ಪ್ಯಾಚ್ (Contraceptive Patch)
ಈ ಪ್ಯಾಚ್‌ಗಳು ಈಸ್ಟ್ರೋಜನ್ (Estrogen) ಹಾಗೂ ಪ್ರೊಜೆಸ್ಟ್ರೋಜನ್ ಹೊಂದಿದ್ದು, ತೋಳಿಗೆ ಅಂಟಿಸಿಕೊಳ್ಳಲಾಗುತ್ತದೆ. ಇದು ಹಾರ್ಮೋನನ್ನು ದೇಹಕ್ಕೆ ಬಿಡುಗಡೆ ಮಾಡಿ ಗರ್ಭಾಶಯದ ಲೈನಿಂಗ್ (Uterus Lining) ತೆಳುವಾಗುವಂತೆ ಹಾಗೂ ಸರ್ವಿಕಲ್ ಮ್ಯಾಕಸ್ ದಪ್ಪಗಾಗುವಂತೆ ಮಾಡುತ್ತದೆ. ಇದು ಶೇ.100ರಷ್ಟು ಪರಿಣಾಮಕಾರಿ.ಪ್ರತಿ ವಾರವೂ ಪ್ಯಾಚ್ ಬದಲಿಸಬೇಕು. ಇದೇ ಮಾದರಿಯಲ್ಲಿ ಕೆಲಸ ಮಾಡುವುದು ಕಾಂಟ್ರಾಸೆಪ್ಟಿವ್ ಟ್ಯೂಬ್. ಇದನ್ನು ಭುಜದ ಬಳಿ ತೋಳಿನಲ್ಲಿ ಒಳ ಹಾಕಲಾಗುತ್ತದೆ. ಇದು ಸುಮಾರು 3 ವರ್ಷಗಳ ಕಾಲ ಗರ್ಭ ಕಟ್ಟದಂತೆ ನೋಡಿಕೊಳ್ಳುತ್ತದೆ.

click me!