ಸಾಲ ಮಾಡಿಕೊಂಡು ಮದುವೆ ಮಾಡುವ ಕಷ್ಟವನ್ನು ತಪ್ಪಿಸಲೆಂದೇ ಕರ್ನಾಟಕ ಸರ್ಕಾರ (Karnataka Government) ಯೋಜನೆಯೊಂದನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಮದುವೆಯಾಗುವುದು ಹೇಗೆ ? ಅರ್ಜಿ ಸಲ್ಲಿಸುವುದು ಹೇಗೆ ? ಇಲ್ಲಿದೆ ವಿವರ
ಇವತ್ತಿನ ಕಾಲದಲ್ಲಿ ಮದುವೆ (Marriage) ಮಾಡುವುದೆಂದರೆ ಅಷ್ಟು ಸುಲಭದ ಕೆಲಸವಲ್ಲ. ಹಿಂದಿನ ಕಾಲದಂತೆ ಮನೆಯಲ್ಲೇ ತೋರಣ ಕಟ್ಟಿ ಅಲಂಕರಿಸಿ, ನಾಲ್ಕು ಜನರನ್ನು ಕರೆದು ಊಟ ಹಾಕಿದರೆ ಆಗುವುದಿಲ್ಲ. ಎಲ್ಲರಿಗೂ ಮದುವೆಯೆಂರೆ ಧಾಂ ಧೂಂ ಎಂದು ಅದ್ಧೂರಿಯಾಗಿ ಊರಿಗೆ ಊರೇ ಮಾತನಾಡುವಂತಿರಬೇಕು. ಅಡುಗೆ, ಛತ್ರ, ಬಂಗಾರ (Gold) ಅದೂ ಇದು ಅಂತ ಹಲವು ರೀತಿಯಲ್ಲಿ ಖರ್ಚುಗಳಿರುತ್ತವೆ. ಮದುವೆಗಾಗಿ ಸಾಲ (Marriage Loan)ಮಾಡುವವರ ಸಂಖ್ಯೆಯೇ ಹೆಚ್ಚು. ಆದ್ರೆ ಈ ರೀತಿ ಖರ್ಚು ಮಾಡಲು ಆರ್ಥಿಕವಾಗಿ ಶಕ್ತರಲ್ಲದವರು ಸರಳವಾಗಿ ವಿವಾಹ ಮಾಡುತ್ತಾರೆ. ಆದರೆ ಸರಳವಾಗಿ ವಿವಾಹವಾಗಲು ಆರ್ಥಿಕ ಸಮಸ್ಯೆ ಎದುರಿಸುವವರು ಇದ್ದಾರೆ.
ಸಾಲ ಮಾಡಿಕೊಂಡು ಮದುವೆ ಮಾಡುವ ಕಷ್ಟವನ್ನು ತಪ್ಪಿಸಲೆಂದೇ ಕರ್ನಾಟಕ ಸರ್ಕಾರ (Karnataka Government) ಯೋಜನೆಯೊಂದನ್ನು ಜಾರಿಗೊಳಿಸಿದೆ. ಇದುವೇ ಕರ್ನಾಟಕ ಸಪ್ತಪದಿ ವಿವಾಹ ಯೋಜನೆ (Karnataka Saptapadi Vivah Yojana). ಏಪ್ರಿಲ್ 28, ಮೇ 11 ಮತ್ತು 25ರಂದು ಈ ಯೋಜನೆಯಡಿ ಮದುವೆ ಮಾಡಲಾಗುವುದು. ಈ ಯೋಜನೆಯಡಿ ಮದುವೆಯಾಗುವುದು ಹೇಗೆ ? ಅರ್ಜಿ ಸಲ್ಲಿಸುವುದು ಹೇಗೆ ? ಇಲ್ಲಿದೆ ವಿವರ.
ದಾಂಪತ್ಯ ಜೀವನ ರೋಮ್ಯಾಂಟಿಕ್ ಆಗಿರಲು ಫೆಂಗ್ ಶುಯಿ ಸೂತ್ರಗಳು
ಮದುವೆಗೆ ದುಂದು ವೆಚ್ಚ ಮಾಡಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗುವುದದನ್ನು ತಪ್ಪಿಸಲು ಕರ್ನಾಟಕ ಸರ್ಕಾರ ‘ಸಪ್ತಪದಿ’ ಸಾಮೂಹಿಕ ವಿವಾಹ ಯೋಜನೆ ಜಾರಿ ಮಾಡಿದೆ. ಯೋಜನೆ ವಿಶೇಷತೆ ಎಂದರೆ, ವಧು- ವರನಿಗೆ ಉಡುಗೆ, ಬಂಗಾರದ ಉಡುಗೊರೆ ನೀಡುವ ಜತೆಗೆ, ಎರಡೂ ಕಡೆಯ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆಯನ್ನೂ ದೇವಾಲಯ ಆಡಳಿತ ಮಂಡಳಿಗಳೇ ಮಾಡುತ್ತವೆ. ರಾಜ್ಯಾದ್ಯಂತ 90-100 ದೇವಸ್ಥಾನಗಳಲ್ಲಿ ಪ್ರತಿ ಬಾರಿಗೆ ಸುಮಾರು 1,000 ಮದುವೆಗಳನ್ನು ನಡೆಸುವ ಯೋಜನೆ ಇದಾಗಿದೆ.
ಕೋವಿಡ್ನಿಂದ ಎರಡು ವರ್ಷ ಸ್ಥಗಿತಗೊಂಡಿದ್ದ ಯೋಜನೆ ಮತ್ತೆ ಆರಂಭ
ಕೋವಿಡ್ನಿಂದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಯೋಜನೆಯನ್ನು ಸರ್ಕಾರ ಮತ್ತೆ ಆರಂಭಿಸಿದೆ ಇದೀಗ ಮತ್ತೆ ಜಾರಿಗೊಳಿಸಿ ಮುಜರಾಯಿ ಇಲಾಖೆ ಆದೇಶ ಹೊರಡಿಸಿದೆ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗಾಗಿ ಮಾಡಿದ್ದ ಯೋಜನೆ ಇದಾಗಿದೆ. ಆರ್ಥಿಕ ಸಂಕಷ್ಟಕ್ಕೆ ಒಳಗಾಗುವುದನ್ನು ತಪ್ಪಿಸಲು ಸರ್ಕಾರ ಉಚಿತ “ಸಪ್ತಪದಿ ಸಾಮೂಹಿಕ ವಿವಾಹ” ಯೋಜನೆಯನ್ನು ಪ್ರಾರಂಭಿಸಿತ್ತು.
ಸಪ್ತಪದಿ ವಿವಾಹ ಯೋಜನೆಯಲ್ಲಿ ಸಹಾಯದ ಮೊತ್ತ
ಕರ್ನಾಟಕ ಸಪ್ತಪದಿ ಸಾಮೂಹಿಕ ವಿವಾಹ ಯೋಜನೆಯಡಿ ವಧು ಮತ್ತು ವರ ಇಬ್ಬರೂ ಉಡುಗೊರೆ ಮತ್ತು ಧನಸಹಾಯ ಪಡೆಯಲಿದ್ದಾರೆ. ಮದುಮಗನಿಗೆ ಅಂಗಿ, ಧೋತಿ, 5,000 ರೂ. ನಗದು ಸಹಾಯ ನೀಡಲಾಗುವುದು. ವಧುವಿಗೆ ಸೀರೆ,1,000 ರೂ. ನಗದು ಮತ್ತು ಮಾಂಗಲ್ಯ (ಮಂಗಳಸೂತ್ರ)ಕ್ಕಾಗಿ 8 ಗ್ರಾಂ ಚಿನ್ನವನ್ನು ನೀಡಲಾಗುತ್ತದೆ.
ಮದುವೆಯಲ್ಲಿ ಸಂಗಾತಿಗಳ ವಯಸ್ಸಿನ ಅಂತರ ಹೆಚ್ಚಾದಾಗ ಏನಾಗುತ್ತೆ?
ವಧು ಮತ್ತು ವರರಿಬ್ಬರಿಗೂ ಒಟ್ಟು ಸಹಾಯದ ಮೊತ್ತವು ಸುಮಾರು 55,000 ರೂಪಾಯಿಯಷ್ಟಾಗುತ್ತದೆ. ಹೀಗಾಗಿ ಪ್ರತಿ ಜೋಡಿಗೆ ಮದುವೆ ಸಮಾರಂಭಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಲು ದೇವಸ್ಥಾನಗಳಿಗೆ 55,000 ರೂ. ನೀಡಲಾಗುತ್ತದೆ.
ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ
ಈ ಹಿನ್ನೆಲೆಯಲ್ಲಿ ಏಪ್ರಿಲ್ ಮತ್ತು ಮೇ, 2022 ರ ಆಯ್ದ ಏ ದರ್ಜೆಯ ದೇವಸ್ಥಾನಗಳಲ್ಲಿ, ಕೋವಿಡ್ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ – ಸಪ್ತಪದಿ ನಡೆಸಲು ಆದೇಶಿಸಲಾಗಿದೆ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ ಮೇರೆಗೆ ಇಲಾಖೆಯಿಂದ ಆದೇಶ ಪ್ರಕಟಿಸಲಾಗಿದೆ.
ಕರ್ನಾಟಕ ಸಪ್ತಪದಿ ವಿವಾಹ ಯೋಜನೆಗೆ ಅರ್ಹತೆಗಳು
ಕರ್ನಾಟಕ ಸಪ್ತಪದಿ ವಿವಾಹ ಯೋಜನೆ 2022 ರ ಅಡಿಯಲ್ಲಿ ಸಹಾಯದ ಮೊತ್ತವನ್ನು ಪಡೆಯಲು ಅರ್ಜಿದಾರರು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.
ನೋಂದಣಿ ಮಾಡಿಕೊಳ್ಳುವುದು ಹೇಗೆ?
ಎಲ್ಲಾ ಜೋಡಿಗಳು ದೇವಸ್ಥಾನದಲ್ಲಿ ಮದುವೆಯ ನಿಗದಿತ ದಿನಾಂಕಕ್ಕಿಂತ 30 ದಿನಗಳ ಮೊದಲು ತಮ್ಮನ್ನು ನೋಂದಾಯಿಸಿಕೊಳ್ಳಬೇಕು. ನಂತರ, ಎಲ್ಲಾ ಅರ್ಹ ದಂಪತಿಯ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ನಂತರ ಅರ್ಹ ಅರ್ಜಿದಾರರಿಗೆ ಆಯಾ ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ನೆರವೇರಿಸಲಾಗುತ್ತದೆ.