ಲೈಂಗಿಕ ಕ್ರಿಯೆ ಜಾಗದಲ್ಲಿ ಕಾಂಡೋಮ್ ಸಿಕ್ಕಿದ ಮಾತ್ರಕ್ಕೆ ಅದು ಸಮ್ಮತಿ ಸೆಕ್ಸ್ ಅಲ್ಲ!

* ಸೆಕ್ಸ್ ನಡೆದ ಜಾಗದಲ್ಲಿ ಕಾಂಡೋಮ್ ಸಿಕ್ಕಿದ ಮಾತ್ರಕ್ಕೆ ಅದು ಸಮ್ಮತಿ ಸೆಕ್ಸ್ ಅಲ್ಲ
* ಅತ್ಯಾಚಾರ ಆರೋಪಿ ಜಾಮೀನು ವಿಚಾರಣೆ ಸಂದರ್ಭ ಅಭಿಪ್ರಾಯ
* ಅತ್ಯಾಚಾರದ ಆರೋಪಿಗೆ ಜಾಮೀನು ಮಂಜೂರು
* ತನ್ನ ಮೇಲೆ ಬಲಾತ್ಕಾರವಾಗಿದೆ ಎಂದು ದೂರು ದಾಖಲಿಸಿದ್ದ ಮಹಿಳೆ

Condom at crime spot does not indicate consensual sex says Mumbai court mah

ಮುಂಬೈ(ಸೆ. 01)  ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್ ಬಳಸಲಾಗಿದೆ... ಅಥವಾ ಸ್ಪಾಟ್ ನಲ್ಲಿ ಕಾಂಡೋಮ್ ಸಿಕ್ಕಿದೆ ಎಂದ ಮಾತ್ರಕ್ಕೆ ಅದನ್ನು ಸಮ್ಮತಿಯ ಸೆಕ್ಸ್ ಎಂದು ಹೇಳಲು ಸಾಧ್ಯವಿಲ್ಲ ಎಂದು ಮುಂಬೈನ ಸೆಷನ್ಸ್ ಕೋರ್ಟ್ ಹೇಳಿದೆ.

ಸಹೋದ್ಯೋಗಿ ಪತ್ನಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯ ಜಾಮೀನು ವಿಚಾರಣೆ ವೇಳೆ ಇಂಥ ಮಾತು ಹೇಳಿದೆ. ಆದರೆ ಆರೋಪಿಗೆ ಜಾಮೀನು ನೀಡಿದೆ.

ಘಟನಾ ಸ್ಥಳದಲ್ಲಿ ಕಾಂಡೋಮ್ ಸಿಕ್ಕಿತ್ತು.. ಆದರೆ ಇದನ್ನು ಅತ್ಯಾಚಾರ ಎಂದು ಆರೋಪಿಸಲಾಗಿತ್ತು. ಕಾಂಡೋಮ್ ಸಿಕ್ಕಿದ ಮಾತ್ರಕ್ಕೆ ಸಮ್ಮತಿ ಸೆಕ್ಸ್ ಎನ್ನಲು ಸಾಧ್ಯವಿಲ್ಲ.. ತನಗೆ ಮುಂದೆ ಯಾವುದೇ ಅಪಾಯ ಆಗದಿರಲಿ ಎಂದು ವ್ಯಕ್ತಿ ಕಾಂಡೋಮ್ ಇಟ್ಟುಕೊಂಡಿರಬಹುದು ಎಂದು ನ್ಯಾಯಾಲಯ ಹೇಳಿದೆ.

ಗೆಳತಿಯೊಂದಿಗೆ ಸೆಕ್ಸ್.. ಕಾಂಡೋಮ್ ಸಿಕ್ಕಿಲ್ಲವೆಂದು ಗಮ್ ಸವರಿಕೊಂಡು ಪ್ರಾಣ ಬಿಟ್ಟ

ಆರೋಪಿ ಮತ್ತು ದೂರುದಾರೆ ಮಹಿಳೆ ಒಂದೇ  ಕ್ವಾಟರ್ಸ್ ನಲ್ಲಿ ವಾಸವಿದ್ದರು. ಪತಿ ಕೇರಳಕ್ಕೆ ತರಬೇತಿಗೆ ಎಂದು ತೆರಳಿದ ಸಂದರ್ಭ ಮನೆಗೆ ಬಂದ ಆರೋಪಿ ನನಗೆ ತಿನ್ನಲು ಚಾಕೋಲೇಟ್ ನೀಡಿದ್ದ.  ಇದನ್ನು ತಿಂದ ಬಳಿಕ ತಲೆನೋವು ಆರಂಭವಾಯಿತು. ಪರಿಹಾರಕ್ಕೆಂದು ಕೆಲ ಮಾತ್ರೆ ನೀಡಿದ್ದ.

ಇದೇ ಅವಕಾಶ ಬಳಸಿಕೊಂಡು ನನ್ನ ಮೇಲೆ ಅತ್ಯಾಚಾರ ಎಸಗಿದ್ದ. ಅವನ ಕೃತ್ಯ ತಡೆಯಲು ಬ್ಲೇಡ್ ನಿಂದ ಗಾಯ ಮಾಡಿದ್ದೆ. ನಂತರ ನಾನು ಕೈ ಕೊಯ್ದುಕೊಂಡೆ ಎಂದು ಸಂತ್ರಸ್ತೆ ಹೇಳಿದ್ದರು.

ಆದರೆ ಆರೋಪಿ ಬೇರೆ ರೀತಿ ವಾದ ಮುಂದಿಟ್ಟಿದ್ದರು. ಪ್ರಕರಣ ನಡೆದಿದೆ ಎನ್ನುವ ಸಮಯದಲ್ಲಿ ಮನೆಯಲ್ಲಿ ಇನ್ನೊಬ್ಬರು ಇದ್ದರು. ಕಾಂಡೋಮ್ ಪತ್ತೆಯಾಗಿದ್ದು ಇದನ್ನು ಸಮ್ಮತದ ಲೈಂಗಿಕ ಕ್ರಿಯೆ ಎಂದು ಹೇಳಬೇಕು ಎಂಬ ವಾದ ಮುಂದಿಟ್ಟಿದ್ದರು. 

Latest Videos
Follow Us:
Download App:
  • android
  • ios