ಏನ್‌ ಹುಚ್ಚಾಟನಪ್ಪಾ..ಚಲಿಸುವ ಸ್ಕೂಟಿಯಲ್ಲೇ ಹುಡುಗರ ಲಿಪ್ ಕಿಸ್!

Published : Jun 02, 2023, 12:35 PM ISTUpdated : Jun 02, 2023, 12:40 PM IST
ಏನ್‌ ಹುಚ್ಚಾಟನಪ್ಪಾ..ಚಲಿಸುವ ಸ್ಕೂಟಿಯಲ್ಲೇ ಹುಡುಗರ ಲಿಪ್ ಕಿಸ್!

ಸಾರಾಂಶ

ಅಲ್ಲಾ..ಇವತ್ತಿನ ಹುಡುಗರಿಗೆ ಅದೇನ್‌ ಹುಚ್ಚಾಟನಪ್ಪಾ..ರೋಡ್‌ಲ್ಲಿ ಸುಮ್ನೆ ಗಾಡಿ ಓಡಿಸೋಕೆ ಆಗಲ್ಲ..ವೀಲಿಂಗ್, ಸ್ಟಂಟ್ ಎಲ್ಲಾನೂ ಮಾಡ್ಬೇಕು. ಅಷ್ಟೂ ಸಾಲ್ದು ಅಂತ ಇತ್ತೀಚಿಗೆ ಸ್ಕೂಟಿಯಲ್ಲೇ ಕಪಲ್ಸ್ ಪರಸ್ಪರ ಕಿಸ್ ಮಾಡೋ ವಿಡಿಯೋ ವೈರಲ್ ಆಗ್ತಿದೆ. ಹಾಗೆಯೇ ಲಕ್ನೋದಲ್ಲಿ ಇಬ್ಬರು ಹುಡುಗರು ಸ್ಕೂಟಿಯಲ್ಲಿ ಪರಸ್ಪರ ಚುಂಬಿಸೋ ವಿಡಿಯೋ ವೈರಲ್‌ ಆಗಿದೆ.

ಸಲಿಂಗಿ ಜೋಡಿಗಳ ವಿವಾಹದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ನಿರಂತರ ಚರ್ಚೆ ನಡೆಯುತ್ತಲೇ ಇದೆ. ಹಾಗಿದ್ದರೂ ಸಮಾಜದಲ್ಲಿ ಸಾಕಷ್ಟು ಇಂಥಾ ಜೋಡಿಯಿದ್ದಾರೆ. ಸಂಬಂಧದಲ್ಲಿರೋ ಹಲವು ಹುಡುಗ-ಹುಡುಗ, ಹುಡುಗಿ-ಹುಡುಗಿ ಜೋಡಿಯಿದ್ದಾರೆ. ಸಾರ್ವಜನಿಕವಾಗಿಯೂ ಕೈ ಕೈ ಹಿಡಿದುಕೊಂಡು ಜೊತೆಯಾಗಿ ಓಡಾಡುತ್ತಾರೆ. ಈ ಮಧ್ಯೆ ಚಲಿಸುವ ಬೈಕ್‌ ಮೇಲೆ ಕುಳಿತು ಬಾಲಕರಿಬ್ಬರು ಲಿಪ್ ಕಿಸ್ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಚಲನ ಸೃಷ್ಟಿಸಿದೆ. 

ಇವತ್ತಿನ ಯೂತ್ಸ್‌ಗೆ ಅದೇನ್‌ ಹುಚ್ಚಾಟನಪ್ಪಾ..ರೋಡ್‌ಲ್ಲಿ ಸುಮ್ನೆ ಗಾಡಿ ಓಡಿಸೋಕೆ ಆಗಲ್ಲ..ವೀಲಿಂಗ್, ಸ್ಟಂಟ್ ಎಲ್ಲಾನೂ ಮಾಡ್ಬೇಕು. ಅಷ್ಟೂ ಸಾಲ್ದು ಅಂತ ಇತ್ತೀಚಿಗೆ ಸ್ಕೂಟಿಯಲ್ಲೇ ಕಪಲ್ಸ್ ಪರಸ್ಪರ ಕಿಸ್ ಮಾಡೋ ವಿಡಿಯೋ ವೈರಲ್ ಆಗ್ತಿದೆ. ಹಾಗೆಯೇ ಲಕ್ನೋದಲ್ಲಿ ಇಬ್ಬರು ಹುಡುಗರು (Boys) ಸ್ಕೂಟಿಯಲ್ಲಿ ಪರಸ್ಪರ ಚುಂಬಿಸೋ ವಿಡಿಯೋ ವೈರಲ್‌ ಆಗಿದೆ. ಉತ್ತರ ಪ್ರದೇಶದ ರಾಂಪುರದಲ್ಲಿ ಚಲಿಸುವ ಸ್ಕೂಟಿಯಲ್ಲಿ ಇಬ್ಬರು ವ್ಯಕ್ತಿಗಳು ಪರಸ್ಪರ ಚುಂಬಿಸುತ್ತಿರುವುದು (Kiss) ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ದ್ವಿಚಕ್ರ ವಾಹನದಲ್ಲಿ ಮೂವರು ಸಂಚರಿಸುತ್ತಾರೆ. ಇದರಲ್ಲಿ ಇಬ್ಬರು ಹುಡುಗರು ಪರಸ್ಪರ ಚುಂಬಿಸುತ್ತಿರುವ ದೃಶ್ಯವಿದೆ.

ಒಡಹುಟ್ಟಿದವರೂ ಲೈಂಗಿಕ ಸಂಪರ್ಕಕ್ಕೆ ಅನುಮತಿ ಕೇಳಬಹುದು: ಸುಪ್ರೀಂನಲ್ಲಿ ಕೇಂದ್ರದ ವಾದ

ಪೊಲೀಸರು ವಿಷಯ ತಿಳಿದು ತನಿಖೆ (Enquiry) ನಡೆಸುತ್ತಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಸಾರ್ ಸಿಂಗ್ ಈ ಬಗ್ಗೆ ಮಾತನಾಡಿ, 'ಘಟನೆ ನಡೆದ ದಿನ ನನಗೆ ತಿಳಿದಿಲ್ಲ, ಆದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ವಾಹನ ರಸ್ತೆಯಲ್ಲಿ ಹೋಗುತ್ತಿರುವಾಗಲೇ ಅವರು ಹೀಗೆ ಮಾಡಿರುವುದರಿಂದ ಅವರು ಸಂಚಾರ ನಿಯಮಗಳನ್ನು (Traffic rules) ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ' ಎಂದು ತಿಳಿಸಿದ್ದರೆ. ಮೂವರು ರಸ್ತೆಯಲ್ಲಿ ಸ್ಕೂಟಿ ಸವಾರಿ ಮಾಡುವುದನ್ನು ಮತ್ತು 'ರಾಂಪುರ್ ವಿಕಾಸ್ ಪ್ರಾಧಿಕಾರ್' ಎಂಬ ಬೋರ್ಡ್ ಮೂಲಕ ಹಾದುಹೋಗುವುದನ್ನು ವೀಡಿಯೋದಲ್ಲಿ ನೋಡಬಹುದು. ರಾಂಪುರದ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ವೀಡಿಯೋದಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದ್ದು, ಮೂವರನ್ನು ಬಂಧಿಸಲು ತನಿಖೆ ನಡೆಯುತ್ತಿದೆ.

ಈ ವರ್ಷದ ಜನವರಿಯಲ್ಲಿ, ಲಕ್ನೋದ ಹಜರತ್‌ಗಂಜ್‌ನಲ್ಲಿ ಚಲಿಸುವ ಸ್ಕೂಟಿಯಲ್ಲಿ ದಂಪತಿಗಳು ತಬ್ಬಿಕೊಂಡಿರುವ ವಿಡಿಯೋ ವೈರಲ್ ಆಗಿತ್ತು. ಆಗ, ದಂಪತಿ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಮತ್ತು ಅಶ್ಲೀಲತೆಯನ್ನು ಹರಡಿದ್ದಕ್ಕಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಚಲಿಸುವ ಬೈಕ್ ಮೇಲೆ ಬಾಲಕಿಯರ ರೋಮ್ಯಾನ್ಸ್: ಲಿಪ್ ಕಿಸ್ ವಿಡಿಯೋ ವೈರಲ್

ಕಳೆದ ತಿಂಗಳು ಚಲಿಸುತ್ತಿರುವ ಬೈಕಿನಲ್ಲಿ ಎದುರು ಬದುರು ಕುಳಿತ ಇಬ್ಬರು ಬಾಲಕಿಯರು ಪರಸ್ಪರ ತಬ್ಬಿಕೊಂಡು, ಮುತ್ತು ಕೊಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಚೆನ್ನೈನಲ್ಲಿ ಈ ಘಟನೆ ನಡೆದಿತ್ತು ಬೈಕಿನ ಸೀಟಿನ ಮೇಲೆ ಒಬ್ಬರು ಹಾಗೂ ಟ್ಯಾಂಕಿನ ಮೇಲೆ ಒಬ್ಬರು ಕುಳಿತಿದ್ದು, ಬೈಕು ಚಲಿಸುತ್ತಿರುವಂತೆಯೇ ಇಬ್ಬರು ಒಬ್ಬರನ್ನೊಬ್ಬರು ತಬ್ಬಿಕೊಂಡು ಮುತ್ತಿಟ್ಟಿದ್ದಾರೆ. ಈ ವಿಡಿಯೋಗೆ ಸಂಬಂಧಿಸಿದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದರು. ಈ ಮೊದಲು ಇಂತಹ ಪ್ರಕರಣಗಳು ದಾಖಲಾಗಿದ್ದರೂ ಸಹ, ಇಬ್ಬರು ಬಾಲಕಿಯರೇ ಈ ರೀತಿ ನಡೆದುಕೊಂಡಿರುವುದು ಇದೇ ಮೊದಲಾಗಿತ್ತು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Viral ಆಗ್ತಿದೆ ಕೈ ಮೇಲೆ ಬಿಸಿ ಚಹಾ ಸುರಿಯೋ ಪ್ರೇಮಿಗಳ Loyalty Test Trend… ಕೈ ಬಿಟ್ರೆ ನೀವು ಕೆಟ್ರಿ
15 ಲಕ್ಷ ವೆಚ್ಚದಲ್ಲಿ 10 ಸ್ನೇಹಿತರಿಗೆ iPhone 17 Pro Max ಫೋನ್ ಗಿಫ್ಟ್ ನೀಡಿದ ವ್ಯಕ್ತಿ: ಭಾವುಕರಾದ ಗೆಳೆಯರು