
ಡೇಟಿಂಗ್ ಅಪ್ಲಿಕೇಷನ್‌ಗಳಲ್ಲಿ ಫ್ಲರ್ಟಿಂಗ್ ಸಾಮಾನ್ಯ. ಜನರು ಫ್ಲರ್ಟ್ ಮಾಡಲು ಹೊಸ ಹೊಸ ಪದಗಳ ಬಳಕೆ ಮಾಡ್ತಾರೆ. ಈಗ ಅಪ್ಡೇಟ್ ಆಗ್ತಿರುವ ವಿಷ್ಯವನ್ನಿಟ್ಟುಕೊಂಡು ಫ್ಲರ್ಟ್ ಮಾಡುವವರ ಸಂಖ್ಯೆಯೂ ಹೆಚ್ಚಿದೆ. ಸಾಮಾಜಿಕ ಜಾಲತಾಣ ಬಳಕೆದಾರರ ಸಂಖ್ಯೆ ಹೆಚ್ಚಾಗಿರುವ ಕಾರಣ, ಅನೇಕ ಆಸಕ್ತಿದಾಯಕ ವಿಷ್ಯವನ್ನು ಇಲ್ಲಿ ಹಂಚಿಕೊಳ್ಳಲಾಗುತ್ತದೆ. ಪ್ರತಿ ದಿನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೆಲ ಇಂಟರೆಸ್ಟಿಂಗ್ ವಿಷ್ಯಗಳು ಸುದ್ದಿಯಾಗೋದನ್ನು ನೀವು ನೋಡ್ತಿರುತ್ತೀರಿ. ಈಗ ಮತ್ತೊಂದು ಚಾಟ್ ವೈರಲ್ ಆಗಿದೆ.
ಡೇಟಿಂಗ್ (Dating) ಅಪ್ಲಿಕೇಶನ್‌ನಲ್ಲಿ (Dating Application) ತಮ್ಮ ಡೇಟಾಗೆ ಮ್ಯಾಚ್ ಆಗುವ ವ್ಯಕ್ತಿಯನ್ನು ಮೆಚ್ಚಿಸುವುದು ದೊಡ್ಡ ಕೆಲಸ. ಸಣ್ಣ ಯಡವಟ್ಟಾದ್ರೂ ಹುಡುಗಿ ಅಥವಾ ಹುಡುಗ ಬಿಟ್ಟು ಹೋಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಅವರನ್ನು ಹಿಡಿದಿಟ್ಟುಕೊಳ್ಳಲು ಜನರು ವಿವಿಧ ರೀತಿಯ ಪಿಕ್-ಅಪ್ (Pick Up) ಲೈನ್‌ಗಳನ್ನು ಬಳಸುತ್ತಾರೆ. ಕೆಲ ಲೈನ್ ಪ್ರೀತಿಯಿಂದ ತುಂಬಿದ್ರೆ ಮತ್ತೆ ಕೆಲ ಲೈನ್ಸ್ ತಮಾಷೆಯಾಗಿರುತ್ತದೆ. ಕೆಲ ಪೋಸ್ಟ್ ಕಣ್ಣಲ್ಲಿ ನೀರು ತರಿಸಿದ್ರೆ ಕೆಲವು ಬಿದ್ದು ಬಿದ್ದು ನಗುವಂತೆ ಮಾಡುತ್ತದೆ. ಈ ವ್ಯಕ್ತಿ ಕೂಡ ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಪರಿಚಯವಾದ ಹುಡುಗಿಗೆ ಸಭ್ಯವಾದ ರಿಪ್ಲೆ ನೀಡಿದ್ದಾನೆ. ಅದನ್ನು ನೋಡಿದ ಜನರು ಆಕರ್ಷಕ ಕಮೆಂಟ್ (Comment) ಕೂಡ ಮಾಡಿದ್ದಾರೆ.
Extra Marital Affair: ಭಾರತದಲ್ಲಿ ಹೆಚ್ಚಾದ ವಿವಾಹೇತರ ಸಂಬಂಧ: ಶಾಕಿಂಗ್ ಮಾಹಿತಿ ಬಹಿರಂಗ
ವೈರಲ್ (Viral) ಆದ ಚಾಟ್ ನಲ್ಲಿ ಏನಿದೆ? : ಟ್ವಿಟರ್ (Twitter ) ಬಳಕೆದಾರರೊಬ್ಬರು ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಹುಡುಗ ನೀಡಿದ ರಿಪ್ಲೆಯನ್ನು ಪೋಸ್ಟ್ ಮಾಡಿದ್ದಾರೆ. ವಂದನಾ ಜೈನ್ ಅವರು ತಮ್ಮ ಟ್ವಿಟರ್ ಖಾತೆ Poan Sapdi ಯಲ್ಲಿ ವ್ಯಕ್ತಿಯೊಂದಿಗೆ ನಡೆಸಿದ ಚಾಟ್‌ನ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ಮಾಡಿದ್ದಾರೆ. ನವರಾತ್ರಿ ವಿಶೇಷ ಫ್ಲರ್ಟಿಂಗ್ ಎಂದು ಶೀರ್ಷಿಕೆ ಬರೆದಿದ್ದಾರೆ. ಅದ್ರ ಜೊತೆಗೆ ಅಳುವ ಹಾಗೂ ನಗುವ ಎಮೋಜಿ ಹಾಕಿದ್ದಾರೆ.
ಚಾಟ್‌ನಲ್ಲಿ ಅವರಿಬ್ಬರ ರಿಪ್ಲೆಯನ್ನು ನಾವು ನೋಡಬಹುದು. ತಡವಾಗಿ ಉತ್ತರಿಸಿದ್ದಕ್ಕಾಗಿ ಹುಡುಗಿ ಹುಡುಗನ ಕ್ಷಮೆಯಾಚಿಸುತ್ತಾಳೆ. ಕ್ಷಮಿಸಿ ನಾನು ನಿಮ್ಮ ಸಂದೇಶವನ್ನು ತಡವಾಗಿ ನೋಡುತ್ತಿದ್ದೇನೆ ಎಂದು ಆಕೆ ಸಂದೇಶ ಕಳುಹಿಸುತ್ತಾಳೆ. ವ್ಯಕ್ತಿ ಇದಕ್ಕೆ ಉತ್ತರ ನೀಡುತ್ತಾನೆ. ತೊಂದರೆಯಿಲ್ಲ. ಇಂದಿನಿಂದ ನವರಾತ್ರಿ ಶುರುವಾಗಿದೆ. ನೀವು ಕೆಲವು ದಿನ ದೇವಿ. ನಿಮಗೆ ಇದೆಲ್ಲ ಮಾಡಲು ಅನುಮತಿಯಿದೆ ಎನ್ನುವ ಅರ್ಥದಲ್ಲಿ ಹಿಂದಿಯಲ್ಲಿ ರಿಪ್ಲೇ ಮಾಡಿದ್ದಾನೆ. ಈ ಟ್ವೀಟ್ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ವೈರಲ್ ಆಗಿದೆ. ಇದನ್ನು 1.77 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಇದಕ್ಕೆ ಸುಮಾರು 3,000 ಲೈಕ್ಸ್ ಸಿಕ್ಕಿದೆ.
Dating Apps: ವಿವಾಹೇತರ ಡೇಟಿಂಗ್ ಆ್ಯಪ್ ಗ್ಲೀಡೆನ್‌ಗೆ ಭಾರತದಲ್ಲಿ 2 ಮಿಲಿಯನ್ ಬಳಕೆದಾರರು!
ಟ್ವಿಟರ್ ಗೆ ಸಿಕ್ಕಿದೆ ಇಷ್ಟೆಲ್ಲ ಕಮೆಂಟ್ : ಟ್ವಿಟರ್ ನಲ್ಲಿ ಆಕೆ ಹಂಚಿಕೊಂಡ ಟ್ವಿಟ್ ಗೆ ಸಾಕಷ್ಟು ಪ್ರತಿಕ್ರಿಯೆ ಸಿಕ್ಕಿದೆ. ಒಬ್ಬ ಬಳಕೆದಾರ ಇದು ಧಾರ್ಮಿಕ ಫ್ಲರ್ಟಿಂಗ್ (Religious Flirting) ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ವ್ಯಕ್ತಿ ಇದನ್ನು ಕೌಟುಂಬಿಕ ಫ್ಲರ್ಟಿಂಗ್ ಎಂದು ಬರೆದಿದ್ದಾನೆ. ಇನ್ನೊಬ್ಬ ಇದನ್ನು ಸಾತ್ವಿಕ ಚಾಟ್ಸ್ ಎಂದು ಬರೆದಿದ್ದಾನೆ. ಈ ವ್ಯಕ್ತಿ ಎಚ್ಚೆತ್ತು ಮಾತಾ ರಾಣಿ ಎಕ್ಸ್ ಡಿ ಆರಿಸಿಕೊಂಡಿದ್ದಾನೆಂದು ಇನ್ನೊಬ್ಬ ಬರೆದಿದ್ದಾನೆ. ಕೆಲವ ದಿನ ಮಾತ್ರ ದೇವಿ ಎಂಬ ಪ್ರತಿಕ್ರಿಯೆ ಫ್ಲರ್ಟಿಂಗ್ ಅಲ್ಲ ಕೆಂಪು ಧ್ವಜ ಎನ್ನಬಹುದು ಎಂದು ಇನ್ನೊಬ್ಬ ಕಮೆಂಟ್ ಮಾಡಿದ್ದಾನೆ. ಇದು ಬಹಳ ಸ್ಮೂತ್ ಕಮೆಂಟ್ ಎಂದು ಇನ್ನೊಬ್ಬ ರಿಪ್ಲೇ ಮಾಡಿದ್ದಾನೆ. ಆಕೆ ದೇವಿ, ಆಕೆ ಏನು ಬೇಕಾದ್ರೂ ಮಾಡಬಹುದು ಎಂದು ಇನ್ನೊಬ್ಬ ಬರೆದಿದ್ದಾನೆ. ಸಂಗಾತಿ ಮುನಿಸಿಕೊಂಡಿದ್ರೆ ನೀವೂ ಇಂಥ ಪದ ಬಳಸಿ ಆಕೆಯನ್ನು ಮನವೊಲಿಸಬಹುದು ನೋಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.