ಸಿರಿಯಾ ಪ್ರಬಲ ಭೂಕಂಪನದಿಂದ ನಲುಗಿ ಹೋಗಿದೆ. ಸಾವಿರಾರು ಮಂದಿ ಕುಟುಂಬವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳ ತಂಡ ಬದುಕುಳಿದವರನ್ನು ಹೊರತೆಗೆಯುವ ಕೆಲಸ ಮುಂದುವರಿಸಿದೆ. ಈ ಮಧ್ಯೆ ಅವಶೇಷಗಳಡಿಯಲ್ಲಿ ಏಳು ವರ್ಷದ ಸಿರಿಯಾದ ಬಾಲಕಿ ತನ್ನ ಚಿಕ್ಕ ಸಹೋದರನ ರಕ್ಷಿಸಲು ಪಟ್ಟ ಶ್ರಮದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಕಾಲ ಅದೆಷ್ಟು ಬದಲಾದರೂ, ಪರಿಸ್ಥಿತಿಗಳು ಅದೆಷ್ಟು ಕೆಟ್ಟದಾದರೂ ಸಂಬಂಧಗಳಿಗೆ ಸಾವಿಲ್ಲ. ತಂದೆ-ತಾಯಿ, ಅಕ್ಕ-ಅಣ್ಣ-ತಮ್ಮ, ಗೆಳೆಯ, ಹೆಂಡತಿ, ಮಗು ಎಂಬ ಮಮಕಾರ ಯಾವತ್ತಿಗೂ ತುಡಿಯುತ್ತಿರುತ್ತದೆ ಮನುಷ್ಯನೊಳಗಿನ ಮಾನವೀಯತೆ, ಅಂತಃಕರಣ ಯಾವಾಗಲೂ ಜೀವಂತವಾಗಿರುತ್ತದೆ ಅನ್ನೋದು ಮತ್ತೆ ಸಾಬೀತಾಗಿದೆ. ಮನುಷ್ಯ ಸಂಬಂಧಗಳು ನಿಜವಾಗಿಯೂ ಎಷ್ಟು ಅರ್ಥಪೂರ್ಣ ಎಂಬುದಕ್ಕೆ ಸಿರಿಯಾದಲ್ಲಿ ನಡೆದ ಘಟನೆಯೊಂದು ಸಾಕ್ಷಿಯೆಂಬಂತಿದೆ. ಸಿರಿಯಾದಲ್ಲಿ ಪ್ರಬಲ ಭೂಕಂಪದ ನಂತರ ಕುಸಿದು ಬಿದ್ದ ಮನೆಯ ಅವಶೇಷಗಳಡಿಯಲ್ಲಿ ಏಳು ವರ್ಷದ ಸಿರಿಯಾದ ಬಾಲಕಿ ತನ್ನ ಚಿಕ್ಕ ಸಹೋದರನ ರಕ್ಷಿಸಲು ಪಟ್ಟ ಶ್ರಮದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ಪುಟ್ಟ ಮಗುವಿಗೆ ತಮ್ಮನ ಮೇಲಿರುವ ಪ್ರೀತಿ, ಕರುಣೆ, ರಕ್ಷಿಸಲು ಆಕೆ ಪಟ್ಟಿರೋ ಶ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಟರ್ಕಿ ಹಾಗೂ ಸಿರಿಯಾ ದೇಶದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಈವರೆಗೂ 11500 ಮಂದಿ ಸಾವು ಕಂಡಿದ್ದು, ಈ ಸಂಖ್ಯೆ ಇನ್ನಷ್ಟು ಏರುವ ಸಾಧ್ಯತೆ ಇದೆ. ಆದರೆ, ಶೀತಗಾಳಿಯ ಕಾರಣದಿಂದಾಗಿ ಸಮಸ್ಯೆ ಇನ್ನಷ್ಟು ಉಲ್ಬಣವಾಗಿದೆ. ರಕ್ಷಣಾ ಕಾರ್ಯಾಚರಣೆಗಳ ತಂಡ ಬದುಕುಳಿದವರನ್ನು ಹೊರತೆಗೆಯುವ ಕೆಲಸ ಮುಂದುವರಿಸಿದೆ. ಈ ಮಧ್ಯೆ ಅವಶೇಷಗಳಡಿಯಲ್ಲಿ ಏಳು ವರ್ಷದ ಸಿರಿಯಾದ ಬಾಲಕಿ ತನ್ನ ತಮ್ಮನನ್ನು ರಕ್ಷಿಸಿಕೊಂಡಿದ್ದ ವೀಡಿಯೋ ವೈರಲ್ ಆಗಿದೆ.
ತಾಯಿ ಜೊತೆ ಕರುಳಬಳ್ಳಿ ಜೋಡಿಕೊಂಡೇ ಇತ್ತು, ಪಕ್ಕದಲ್ಲಿ ಮಗು ನಗುತಲಿತ್ತು!
ಕುಸಿತಗೊಂಡ ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದ ಅಕ್ಕ-ತಮ್ಮ
ಭೂಕಂಪನದಿಂದಾಗಿ ಸಿರಿಯಾದಲ್ಲಿ ಕುಸಿತಗೊಂಡ ಕಟ್ಟಡದ ಅವಶೇಷಗಳಡಿಯಲ್ಲಿ ಅಕ್ಕ ಮತ್ತು ತಮ್ಮ (Younger brother) ಇಬ್ಬರೂ ಸಿಲುಕಿಕೊಂಡಿದ್ದಾರೆ. ಈ ವೇಳೆ ತನ್ನ ಪುಟ್ಟ ತಮ್ಮನಿಗೆ ಏನೂ ಆಗದಿರಲೆಂದು 7 ವರ್ಷದ ಈ ಪುಟ್ಟ ಅಕ್ಕ (Sister) ತನ್ನ ಕೈಯನ್ನು ರಕ್ಷಣಾತ್ಮಕವಾಗಿ ಚಾಚಿಕೊಂಡು ಅದರ ಮೇಲೆ ತಮ್ಮನ ತಲೆ ಇಟ್ಟುಕೊಂಡಿರುವ ವೀಡಿಯೊ ಮನಕಲಕುವಂತಿದೆ. ಅತ್ಯಂತ ಕಷ್ಟದ ಸಮಯದಲ್ಲಿಯೂ 7 ವರ್ಷದ ಈ ಪುಟ್ಟ ಬಾಲಕಿ ತನ್ನ ತಮ್ಮನ ರಕ್ಷಣೆಯ (Protection) ಜವಾಬ್ದಾರಿ ಹೊತ್ತಿರುವುದು ಭಾವನಾತ್ಮಕವಾಗಿದೆ.
ಫೋಟೋವನ್ನು ವ್ಲೋಗಿಂಗ್ ನಾರ್ಥ್‌ವೆಸ್ಟರ್ನ್ ಸಿರಿಯಾ (Vlogging Northwestern Syria) ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಟ್ಟಡಗಳಿಯಲ್ಲಿ ಚಿಕ್ಕ ಸಂದಿಯಲ್ಲಿ ಸಿಲುಕೊಂಡಿದ್ದ ಅಕ್ಕ ಮತ್ತು ತಮ್ಮ 17 ಗಂಟೆ ಕಾಲ ಈ ಸ್ಥಿತಿಯಲ್ಲಿ ಕಳೆದಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ ರಕ್ಷಣಾ ಕಾರ್ಯಾಚರಣೆ (Rescue operation) ನಡೆಸುತ್ತಿರುವವರು ಅವರಿಬ್ಬರನ್ನೂ ರಕ್ಷಿಸಿ ಚಿಕಿತ್ಸೆ ಕೊಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮತ್ತೊಂದು ಟ್ವೀಟ್‌ನಲ್ಲಿ, ವಿಶ್ವಸಂಸ್ಥೆಯ (ಯುಎನ್) ಪ್ರತಿನಿಧಿ ಮೊಹಮ್ಮದ್ ಸಫಾ ಅವರು, 'ಬಾಲಕಿ ಮತ್ತು ಅವಳ ತಮ್ಮ 17 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿದ್ದರು. 17 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿದ್ದಾಗ ತನ್ನ ತಮ್ಮನ ತಲೆಯ ಸುತ್ತಮ ಕೈಯಿಟ್ಟು ರಕ್ಷಿಸಿದ 7 ವರ್ಷದ ಬಾಲಕಿ ಆತನನ್ನು ಸುರಕ್ಷಿತವಾಗಿ (Safe) ಇಟ್ಟಿದ್ದಾಳೆ' ಎಂದು ಬರೆದಿದ್ದಾರೆ. ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಿಜಕ್ಕೂ ಇದೊಂದು ಪವಾಡ ಎಂದು ನೆಟ್ಟಿಗರು ಬರೆದಿದ್ದಾರೆ. ಆ ಬಾಲಕಿ ಪುಟ್ಟ ಹೀರೋ ಎಂಬುದಾಗಿಯೂ ಹಲವರು ಕಮೆಂಟ್ ಮಾಡಿದ್ದಾರೆ.
ಟರ್ಕಿ, ಸಿರಿಯಾ ಭೂಕಂಪಕ್ಕೆ ಮೃತರ ಸಂಖ್ಯೆ 11500ಕ್ಕೇರಿಕೆ; 2 ಡಜನ್ ದೇಶಗಳಿಂದ ರಕ್ಷಣಾ ಕಾರ್ಯಾಚರಣೆ
ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಪರಿಸ್ಥಿತಿ ಸಾಕಷ್ಟು ಹದಗೆಟ್ಟಿದೆ. ಆಸ್ಪತ್ರೆಗಳು, ಶಾಲೆಗಳು ಮತ್ತು ಅಪಾರ್ಟ್ಮೆಂಟ್ ಬ್ಲಾಕ್‌ಗಳು ಸೇರಿದಂತೆ ಸಾವಿರಾರು ಕಟ್ಟಡಗಳನ್ನು ಉರುಳಿಸಿವೆ. ಟರ್ಕಿ ಮತ್ತು ಉತ್ತರ ಸಿರಿಯಾದಲ್ಲಿ ಸಾವಿರಾರು ಜನರು ಗಾಯಗೊಂಡಿದ್ದಾರೆ. ಲೆಕ್ಕವಿಲ್ಲದಷ್ಟು ಜನರು ನಿರಾಶ್ರಿತರಾಗಿದ್ದಾರೆ. ಟರ್ಕಿ ಅಧ್ಯಕ್ಷ ತಯ್ಯಿಪ್ ಎರ್ಡೊಗನ್ ದೇಶದ 10 ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಎರಡೂ ದೇಶಗಳಿಗೆ ಸಹಾಯ ಮಾಡಲು 70ಕ್ಕೂ ಹೆಚ್ಚು ದೇಶಗಳು ಮುಂದೆ ಬಂದಿವೆ. ‘ಆಪರೇಷನ್ ದೋಸ್ತ್’ ಅಡಿಯಲ್ಲಿ ಭಾರತವೂ ಸಹಾಯ ಕಳುಹಿಸುತ್ತಿದೆ.
While under the rubble of her collapsed home this beautiful 7yr old Syrian girl has her hand over her little brothers head to protect him.
Brave soul
They both made it out ok. pic.twitter.com/GrffWBGd1C