ಈಗಿನ ಪ್ರೇಮಕ್ಕೂ ಆಗಿನ ಪ್ರೇಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹಿಂದಿನ ಕಾಲದಲ್ಲಿ ಜನರು ತಮ್ಮ ಭಾವನೆಗಳನ್ನು ಬರೆದು ಸಂಗಾತಿಗೆ ನೀಡ್ತಿದ್ದರು. ಆ ಪತ್ರಗಳು ಎಷ್ಟೋ ವರ್ಷಗಳ ನಂತ್ರ ಸಿಕ್ಕಿದ್ರೂ ಓದುವಾಗ ಸಿಗುವ ಖುಷಿ ಅಷ್ಟಿಷ್ಟಲ್ಲ.
ಓಲ್ಡ್ ಈಸ್ ಗೋಲ್ಡ್ ಎನ್ನುವ ಮಾತು ನೂರಕ್ಕೆ ನೂರು ಸತ್ಯ. ಹಳೆ ಮನೆ ಕೆಡವಿ ಹೊಸ ಮನೆ ನಿರ್ಮಾಣ ಮಾಡುವ ವೇಳೆ ಅಥವಾ ಹಳೆ ಗೋಡೌನ್ ಕ್ಲೀನ್ ಮಾಡುವ ಸಂದರ್ಭದಲ್ಲಿ, ಭೂಮಿಯನ್ನು ಅಗೆಯುವ ಸಮಯದಲ್ಲಿ ಕೆಲವೊಂದು ವಸ್ತುಗಳು ಸಿಗುತ್ತವೆ. ಆ ವಸ್ತುಗಳು ನಮ್ಮ ಬಾಲ್ಯದ ನೆನಪನ್ನು ಅಥವಾ ಅಜ್ಜ – ಅಜ್ಜಿಯ ಬಾಲ್ಯದ ವಿಷ್ಯವನ್ನು ನೆನಪಿಸುತ್ತವೆ. ಇನ್ನೂ ಕೆಲವು ಬಾರಿ ನಮಗೆ ಸಂಬಂಧ ಇಲ್ಲದ ವ್ಯಕ್ತಿಗಳ ಹಳೆ ವಸ್ತುಗಳು ನಮಗೆ ಸಿಕ್ಕಿರುತ್ತವೆ. ಕೆಲವರು ಅದನ್ನು ಅವರಿಗೆ ತಲುಪಿಸುವ ಕೆಲಸ ಮಾಡುತ್ತದೆ. ಹಳೆ ಪರ್ಸ್, ಬಾಟಲಿ, ಲೆಟರ್ ಸಿಕ್ಕಿರುವ ಅನೇಕ ಉದಾಹರಣೆಗಳಿವೆ.
ಈಗಿನ ಕಾಲದಲ್ಲಿ ಪತ್ರ (Letter) ವ್ಯವಹಾರ ಇಲ್ಲ. ಬರೀ ಟೆಕ್ಸ್ಟ್ ಮೆಸ್ಸೇಜ್ ಗಳು. ಅದನ್ನು ನೀವು ನೆನಪಿನ ರೀತಿಯಲ್ಲಿ ಸಂಗ್ರಹಿಸಲು ಸಾಧ್ಯವಿಲ್ಲ. ಒಂದ್ವೇಳೆ ಅದು ನಿಮ್ಮ ಫೋನ್ ನಲ್ಲಿ ಸೇವ್ ಆಗಿದ್ರೂ, ಪತ್ರದಂತಹ ಭಾವನೆಯನ್ನು ನೀಡಲು ಸಾಧ್ಯವಿಲ್ಲ. ನೀವು ಬಾಲ್ಯದಲ್ಲಿ ನಿಮ್ಮ ಆಪ್ತರಿಗೆ ಬರೆದ ಪತ್ರವೇ ನಿಮ್ಮ ಕೈಗೆ ಸಿಕ್ಕಿದ್ರೆ ಮುಖದಲ್ಲಿ ನಗುವೊಂದು ಮೂಡಿ ಹೋಗುತ್ತದೆ. ಅದೇ ರೀತಿ ಪ್ರೇಮ ಪತ್ರಗಳ ಮೌಲ್ಯ ಮತ್ತಷ್ಟು ಜಾಸ್ತಿ. ಸಾಮಾಜಿಕ ಜಾಲತಾಣ (Social Network) ದಲ್ಲೊಬ್ಬ ತನಗೆ ಸಿಕ್ಕ ಪ್ರೇಮ ಪತ್ರದ ಬಗ್ಗೆ ಬರೆದುಕೊಂಡಿದ್ದಾನೆ.
ಪುಟ್ಟ ಬ್ಯಾಗ್‌ಗೆ ಎರಡೂವರೆ ಲಕ್ಷ ಕೊಟ್ಟ ಮಗಳು: ಉಸಿರು ನಿಲ್ಲೋದೊಂದು ಬಾಕಿ ಎಂದ ನಟ
ಮಿಚಿಗನ್‌ನ ವ್ಯಕ್ತಿಯೊಬ್ಬರು ಹಳೆಯ ಟೂಲ್ ಬಾಕ್ಸ್ (Toolbox) ಅನ್ನು ಹರಾಜಿನಲ್ಲಿ ಖರೀದಿಸಿದ್ದರು. ಈ ಟೂಲ್ ಬಾಕ್ಸ್ ನಲ್ಲಿ ಅವರಿಗೆ ಪತ್ರವೊಂದು ಸಿಕ್ಕಿದೆ. ಅದನ್ನು ನೋಡಿ ಅವರು ಅಚ್ಚರಿಗೊಂಡಿದ್ದಾರೆ. ಗ್ರ್ಯಾಂಡ್ ರಾಪಿಡ್ಸ್‌ನ ರಿಕ್ ಟ್ರೋಜಾನೋವ್ಸ್ಕಿ, ಫಾರ್ಮ್ ಹರಾಜಿನಲ್ಲಿ ಟೂಲ್‌ಬಾಕ್ಸ್ ಅನ್ನು ಖರೀದಿಸಿದ್ದರು. 2017ರಲ್ಲೇ ಅದನ್ನು ಖರೀದಿ ಮಾಡಿದ್ದರೂ, ಅದರ ಒಳಗೆ ಏನಿದೆ ಎಂಬುದನ್ನು ಸರಿಯಾಗಿ ಪರೀಕ್ಷಿಸಿರಲಿಲ್ಲ. ಇತ್ತೀಚಿಗೆ ಡ್ರಾಯರ್ ನಲ್ಲಿರುವ ಪತ್ರವೊಂದು ಸಿಕ್ಕಿದೆ.
15 ವರ್ಷದ ಹುಡುಕಾಟ, 10 ತಿರಸ್ಕಾರದ ಬಳಿಕ ಕಡೆಗೂ ಮದುವೆಯಾದ 3.7 ಅಡಿ ವ್ಯಕ್ತಿ
ಟ್ರೋಜಾನೋವ್ಸ್ಕಿ ಪ್ರಕಾರ ಇದೊಂದು ಪ್ರೇಮ ಪತ್ರ. ಈ ಪತ್ರವನ್ನು 70 ವರ್ಷಗಳ ಹಿಂದೆ ಆರ್ಮಿ ಕಾರ್ಪೋರಲ್ ಇರ್ವಿನ್ ಜಿ ಫ್ಲೆಮಿಂಗ್ ಬರೆದಿದ್ದಾರೆ. ಫ್ಲೆಮಿಂಗ್ ಈ ಪತ್ರವನ್ನು ಸ್ಯಾನ್ ಫ್ರಾನ್ಸಿಸ್ಕೋದಿಂದ ಗ್ರ್ಯಾಂಡ್ ರಾಪಿಡ್ಸ್‌ನಲ್ಲಿರುವ ಮೇರಿ ಲೀ ಕ್ರಿಬ್ಸ್‌ಗೆ ಕಳುಹಿಸಿದ್ದರು. ಪತ್ರದಲ್ಲಿ ಫ್ಲೆಮಿಂಗ್, ಇಬ್ಬರ ಮಧ್ಯೆ ಇರುವ ಜಗಳವನ್ನು ಬಗೆಹರಿಸುವು ಸಂಬಂಧ ಕ್ಷಮೆಯಾಚಿಸಿದ್ದಾರೆ. ಅಲ್ಲದೆ ತಾನು ಸೈನ್ಯದಿಂದ ಹಿಂದಿರುಗಿದಾಗ ಮೇರಿ ಲೀ ಕ್ರಿಬ್ಸ್ ಮದುವೆಯಾಗುವುದಾಗಿ ಭರವಸೆ ನೀಡಿದ್ದಾರೆ. ಫ್ಲೆಮಿಂಗ್, ಮೇರಿ ಲೀ ಕ್ರಿಬ್ಸ್ ರನ್ನು ಎಷ್ಟು ಪ್ರೀತಿ ಮಾಡ್ತಿದ್ದರು ಎಂಬ ವಿಷ್ಯವನ್ನೂ ಪತ್ರದಲ್ಲಿ ಹೇಳಿದ್ದಾರೆ. ಇದು ನಿಜವಾದ ಪ್ರೇಮಕಥೆ. ಈ ದಿನಗಳಲ್ಲಿ ಜನರು ಈ ರೀತಿಯ ವಿಷಯಗಳನ್ನು ಬರೆಯುವುದಿಲ್ಲ. ಈ ಪತ್ರವು ಕವಿತೆಯಂತಿದೆ ಎಂದು ಟ್ರೋಜಾನೋವ್ಸ್ಕಿ ಹೇಳಿದ್ದಾರೆ.
ಟ್ರೋಜಾನೋವ್ಸ್ಕಿ ಈಗ ಫ್ಲೆಮಿಂಗ್ ಅಥವಾ ಮೇರಿ ಲೀ ಕ್ರಿಬ್ಸ್ ಸಂಬಂಧಿಕರು ಯಾರಾದ್ರೂ ಸಿಗ್ತಾರಾ ಅಂತಾ ಹುಡುಕಾಟ ನಡೆಸುತ್ತಿದ್ದಾರೆ. ನನಗೆ ಈ ಪತ್ರದಿಂದ ಯಾವುದೇ ಪ್ರಯೋಜನವಿಲ್ಲ. ಆದ್ರೆ ಇವರಿಬ್ಬರ ಸಂಬಂಧಿಕರಿಗೆ, ಮೊಮ್ಮೊಕ್ಕಳಿಗೆ ಅಥವಾ ಮಕ್ಕಳಿಗೆ ಈ ಪತ್ರ ಸಿಕ್ಕಿದ್ರೆ ಅವರಿಗೆ ಖುಷಿಯಾಗುತ್ತದೆ. ಅವರಿಗೆ ಇದೊಂದು ಅಮೂಲ್ಯ ವಸ್ತು ಎಂದು ಟ್ರೋಜಾನೋವ್ಸ್ಕಿ ಹೇಳಿದ್ದಾನೆ.
ಇಂಥ ಅನೇಕ ಘಟನೆಗಳು ಈಗಿನ ದಿನಗಳಲ್ಲಿ ಬೆಳಕಿಗೆ ಬರ್ತಿವೆ. ಈ ಹಿಂದೆ ನದಿಯಲ್ಲಿ ಪರ್ಸ್ ಒಂದು ಸಿಕ್ಕಿತ್ತು. ಅನೇಕ ವರ್ಷಗಳ ಹಿಂದೆ ಕಳೆದ ಪರ್ಸ್ನಲ್ಲಿ ಡ್ರೈವಿಂಗ್ ಲೈಸೆನ್ಸ್ ಕೂಡ ಇತ್ತು. ವಿಳಾಸ ಪತ್ತೆ ಮಾಡಿದ್ದ ವ್ಯಕ್ತಿ, ಅದನ್ನು ಮಹಿಳೆಗೆ ಕಳುಹಿಸಿದ್ದ. ಹಳೆ ಮನೆಯ ಫೋಟೋ ಒಂದರ ಹಿಂದೆ ಪ್ರೇಮ ಪತ್ರವನ್ನು ಹುಡುಗಿಯೊಬ್ಬಳು ಪತ್ತೆ ಮಾಡಿದ್ದಳು. ಇದನ್ನು ಆಕೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು.