Latest Videos

20ರ ವಿದ್ಯಾರ್ಥಿನಿ 50ರ ವಿವಾಹಿತ ಅಂಕಲ್ ಜೊತೆಗೆ ನಾಪತ್ತೆ; ಕೆರೆ ಬಳಿ ಜೋಡಿಗಳ ಚಪ್ಪಲಿ ಪತ್ತೆ!

By Sathish Kumar KHFirst Published Jun 22, 2024, 7:28 PM IST
Highlights

ಕಾಲೇಜು ಓದುತ್ತಿರುವ 20 ವರ್ಷದ ವಿದ್ಯಾರ್ಥಿನಿ 50 ವರ್ಷದ ವಿವಾಹಿತ ಪುರುಷನೊಂದಿಗೆ ನಾಪತ್ತೆಯಾಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದ್ದು, ಇಬ್ಬರ ಚಪ್ಪಲಿಗಳು ಮಾವಿನಕೆರೆಯ ದಡದಲ್ಲಿ ಪತ್ತೆಯಾಗಿವೆ. 

ತುಮಕೂರು (ಜೂ.22): ಕಾಲೇಜು ಓದುತ್ತಿರುವ 20 ವರ್ಷದ ವಿದ್ಯಾರ್ಥಿನಿ 50 ವರ್ಷದ ವಿವಾಹಿತ ಪುರುಷನೊಂದಿಗೆ ನಾಪತ್ತೆಯಾಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದ್ದು, ಇಬ್ಬರ ಚಪ್ಪಲಿಗಳು ಮಾವಿನಕೆರೆಯ ದಡದಲ್ಲಿ ಪತ್ತೆಯಾಗಿವೆ. 

ಮಗಳು ಓದಿ ಉತ್ತಮ ಶಿಕ್ಷಣ ಪಡೆದು ಸ್ವಂತ ಕಾಲಿನ ಮೇಲೆ ನಿಂತುಕೊಳ್ಳಿ ಎಂದು ತಂದೆ ತಾಯಿ ಕಾಲೇಜಿಗೆ ಕಳಿಸಿದರೆ, ಇತ್ತ ವಿವಾಹಿತ ಪುರುಷನೊಬ್ಬ ವಿದ್ಯಾರ್ಥಿನಿಯ ಮನಸ್ಸು ಕೆಡಿಸಿ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದಾನೆ. ಅಕ್ಕಪಕ್ಕದ ಗ್ರಾಮಸ್ಥರಾದ ಇಬ್ಬರೂ ಈಗ ನಾಪತ್ತೆಯಾಗಿದ್ದಾರೆ. ಎರಡೂ ಕಡೆಯ ಕುಟುಂಬಸ್ಥರು ಇಬ್ಬರನ್ನೂ ಹುಡುಕಲು ಆರಂಭಿಸಿದ್ದು, ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಮಾವತ್ತೂರು ಕೆರೆಯ ಬಳಿ ಮೊಬೈಲ್ ಟ್ರೇಸ್ ಆಗಿದೆ. ಇಬ್ಬರೂ ಕಾರಿನಲ್ಲಿ ಮಾವತ್ತೂರು ಕೆರೆ ಸಮೀಪ ಬಂದಿದ್ದಾರೆ. ಕಾರಿನಲ್ಲಿ ತಮ್ಮ ಮೊಬೈಲ್ ಇಟ್ಟು, ಕೆರೆಯ ಬಳಿ ಹೋಗಿದ್ದಾರೆ. ಕೆರೆ ತೀರದ ಬಳಿ ಇಬ್ಬರ ಚಪ್ಪಲಿಗಳು ಪತ್ತೆಯಾಗಿದ್ದು, ಇಬ್ಬರೂ ನಾಪತ್ತೆ ಆಗಿದ್ದಾರೆ.

ಶಿವಮೊಗ್ಗದಲ್ಲಿ ಭೀಕರ ಕೃತ್ಯ; ಅಪ್ಪನನ್ನೇ ಕೊಲೆಗೈದ ಅಪ್ರಾಪ್ತ ಮಗ

ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ:
ಇಬ್ಬರೂ ಪರಸ್ಪರ ಪ್ರೀತಿ ಮಾಡುವ ವಿಚಾರ ಯುವತಿಯ ಮನೆಯಲ್ಲಿ ತಿಳಿದಿದೆ. ಆಗ ಮನೆಯವರು ಬುದ್ಧಿ ಹೇಳಿ ನಿನ್ನ ತಂದೆಯ ವಯಸ್ಸಿನ ವ್ಯಕ್ತಿಯೊಡನೆ ಪ್ರೀತಿ ಪ್ರೇಮ ಅಂತೆಲ್ಲಾ ಬಿಟ್ಟುಬಿಡು ಎಂದು ಮನೆಯವರು ಬೈದು ಬುದ್ಧಿ ಹೇಳಿದ್ದಾರೆ. ಇದಾದ ನಂತರ ಕಾಲೇಜಿಗೆ ಹೋಗುವುದಾಗಿ ತಿಳಿಸಿ ಹೋದ ಯುವತಿ 3 ದಿನದಿಂದ ನಾಪತ್ತೆಯಾಗಿದ್ದಾಳೆ. ಇನ್ನು ವಿವಾಹಿತ ಪುರುಷನೂ ಕೂಡ ಕಾರು ತೆಗೆದುಕೊಂಡು ಹೋದವನು 3 ದಿನದಿಂದ ಮನೆಗೆ ಬಂದಿಲ್ಲ. ಈಗ ಮಾವತ್ತೂರು ಕೆರೆ ಬಳಿ ಕಾರು, ಇಬ್ಬರ ಮೊಬೈಲ್ ಹಾಗೂ ಚಪ್ಪಲಿಗಳು ಪತ್ತೆಯಾಗಿವೆ. ಹೀಗಾಗಿ, ಇಬ್ಬರೂ ವಯಸ್ಸಿನಲ್ಲಿ 30 ವರ್ಷಗಳ ಅಂತರವಿರುವ ನಮ್ಮ ಪ್ರೀತಿಯನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ ಎಂದು ಭಾವಿಸಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಇವರ ಪ್ರೀತಿ ಒಪ್ಪಿಕೊಳ್ಳದೇ ಯುವತಿ ಮನೆಯವರೂ ಕೊಲೆ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಮತ್ತೊಬ್ಬ ಸ್ವಾಮೀಜಿ ಭೀಕರ ಹತ್ಯೆ; ಆನಂದ ಮಾರ್ಗ ಆಶ್ರಮ ಆಸ್ತಿಗೆ ಸ್ವಾಮೀಜಿ ಹೊಡೆದು ಕೊಂದ ಆಚಾರ್ಯರು

ನಾಪತ್ತೆಯಾದ ವಿದ್ಯಾರ್ಥಿನಿ ಕೋಳಾಲ ಹೋಬಳಿ ಲಕ್ಕಯ್ಯನಪಾಳ್ಯದ ಅನನ್ಯ (19) ಆಗಿದ್ದಾಳೆ. ಈಕೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಓದುತ್ತಿದ್ದಳು. ವಿದ್ಯಾರ್ಥಿನಿಯೊಂದಿಗೆ ನಾಪತ್ತೆಯಾದ ವ್ಯಕ್ತಿ ಬೈರಗೊಂಡ್ಲು ಗ್ರಾಮದ  ರಂಗಶಾಮಣ್ಣ (50) ವಿವಾಹಿತ ಪುರುಷ. ಕಳೆದ 3 ದಿನಗಳಿಂದ ಇಬ್ಬರೂ ನಾಪತ್ತೆಯಾಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಕೆರೆಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ನುರಿತ ಈಜುಪಟುಗಳಿಂದ ಕೆರೆಯಲ್ಲಿ ಇಬ್ಬರಿಗಾಗಿ ದೇಹಕ್ಕೆ ಶೋಧ ಕಾರ್ಯ ಮುಂದಿವರೆದಿದೆ. ಜೊತೆಗೆ, ಅಗ್ನಿ ಶಾಮಕ ದಳದಿಂದಲೂ ಬೋಟ್ ಮೂಲಕ ಮೃತದೇಹ ಪತ್ತೆಗೆ ಶೋಧ ಮಾಡಲಾಗುತ್ತಿದೆ. 

ಕೊರಟಗೆರೆ ಪೊಲೀಸ್ ಠಾಣೆಯ ಸಿಪಿಐ ಅನಿಲ್, ಕೊಳಾಲ ಪಿಎಸ್‌ಐ ರೇಣುಕಾ ಯಾದವ್, ಯೋಗೇಶ್ ಮಾವತ್ತೂರು ಕೆರೆ ಬಳಿಯೇ ಠಿಕಾಣಿ ಹೂಡಿ ಮೃತದೇಹ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ಘಟನೆ ಕೊಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತದೇಹ ಸಿಕ್ಕರೆ ಮುಂದಿನ ಪ್ರಕ್ರಿಯೆಯನ್ನು ಕೈಗೊಳ್ಳಿದ್ದಾರೆ.

click me!