ಬಿಜೆಪಿಗೆ ಮತ ನೀಡಿದ ಪತ್ನಿಗೆ ತ್ರಿವಳಿ ತಲಾಖ್, ಕಮಲ ಬೆಂಬಲಿಸಿ 8 ವರ್ಷದ ದಾಂಪತ್ಯ ಅಂತ್ಯ!

By Kannadaprabha News  |  First Published Jun 26, 2024, 10:01 AM IST

ಕಮಲಕ್ಕೆ ಮತ ನೀಡಿದ ಪರಿಣಾಮ 8 ವರ್ಷದ ದಾಂಪತ್ಯ ಜೀವನ ಅಂತ್ಯಗೊಂಡಿದೆ. ಪತ್ನಿ ಬಿಜೆಪಿಗೆ ಮತ ನೀಡಿದ್ದಾಳೆ ಅನ್ನೋ ಕಾರಣಕ್ಕೆ ತ್ರಿವಳಿ ತಲಾಖ್ ಘಟನೆ ವರದಿಯಾಗಿದೆ. 


ಛಿಂದ್ವಾಡ (ಮ.ಪ್ರ.) ಜೂ.26: ಬಿಜೆಪಿಯನ್ನು ಬೆಂಬಲಿಸಿದಕ್ಕೆ ಪತಿ ತ್ರಿವಳಿ ತಲಾಖ್‌ ನೀಡಿದ್ದಾನೆ ಎಂದು ಆರೋಪಿಸಿ ಮಧ್ಯಪ್ರದೇಶದ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ ಇದನ್ನು ತಳ್ಳಿಹಾಕಿರುವ ಪತಿ ಆಕೆಗೆ ಅಕ್ರಮ ಸಂಬಂಧಗಳಿದ್ದವು ಎಂದಿದ್ದಾನೆ.8 ವರ್ಷಗಳ ಹಿಂದೆ ಅವರಿಬ್ಬರು ವಿವಾಹವಾಗಿದ್ದು ಮೊದಲ ಕೆಲ ಕಾಲ ಯಾವುದೇ ತೊಂದರೆಯಿರಲಿಲ್ಲ. ನಂತರ ಆಕೆಯ ಅತ್ತೆ ನಾದಿನಿಯರು ಹಿಂಸಿಸತೊಡಗಿದ್ದು ಒಂದೂವರೆ ವರ್ಷಗಳ ಕಾಲ ಮನೆಯಿಂದ ಹೊರಹಾಕಿದ್ದರು ಎಂದು ಕೋತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಉಮೇಶ್ ಗೊಲ್ಹಾನಿ ಮಾಹಿತಿ ನೀಡಿದ್ದಾರೆ.

ದೂರಿನ ಪ್ರಕಾರ ಮಹಿಳೆ ಪಕ್ಷವೊಂದನ್ನು ಬೆಂಬಲಿಸಿ ಮತ ಹಾಕಿದ್ದು ಆಕೆಯ ಪತಿಗೆ ಇಷ್ಟವಾಗದೆ ವಿಚ್ಛೇದನ ಕೋರಿದ್ದಾನೆ. ಇದರ ಆಧಾರದಲ್ಲಿ ಸಂತ್ರಸ್ತೆಯ ಪತಿ, ಅತ್ತೆ ಹಾಗೂ 4 ನಾದಿನಿಯರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲೂ ಮಹಿಳೆ ಪಾಲ್ಗೊಂಡಿದ್ದರು ಅನ್ನೋ ಮಾಹಿತಿಯೂ ಬಹಿರಂಗವಾಗಿದೆ. ಇದು ಪತಿಯ ಆಕ್ರೋಶಕ್ಕೆ ಕಾರಣವಾಗಿತ್ತು. 

Tap to resize

Latest Videos

ವಾಟ್ಸಪ್ ವಾಯ್ಸ್‌ ನೋಟ್‌ನಲ್ಲಿ ತಲಾಖ್ ನೀಡಿದ್ದ ಗಂಡ ಅರೆಸ್ಟ್ 

3 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಆಕೆ ಅನ್ಯರೊಂದಿಗೆ ಸಂಬಂಧ ಹೊಂದಿದ್ದು ಮಕ್ಕಳಿ ಒಳಿತಿಗಾಗಿ ಸುಧಾರಿಸಿಕೊಳ್ಳಲು ಅವಕಾಶವನ್ನೂ ಕೊಟ್ಟಿದ್ದೆ. ನಂತರ ಮುಸ್ಮಿಂ ಕಾನೂನಿನ ಪ್ರಕಾರ 2022ರ ಮಾ.30ರಲ್ಲಿ ಮೊದಲ ಹಾಗೂ 2023ರ ಅಕ್ಟೋಬರ್ ಮತ್ತು ನವೆಂಬರ್‌ಗಳಲ್ಲಿ ಎರಡು ತಲಾಕ್ ನೀಡಿದ್ದೇನೆ ಎಂದು ಪತಿ ಹೇಳಿದ್ದಾನೆ.

ರೈಲು ಹತ್ತುವಾಗ ಸತಿ-ಪತಿ, ಇಳಿಯುವಾಗ ವಿಚ್ಛೇದಿತೆ
ಇತ್ತೀಚೆಗೆ ಚಲಿಸುತ್ತಿರುವ ರೈಲಿನಲ್ಲೇ ತನ್ನ ಪತ್ನಿಗೆ ತ್ರಿವಳಿ ತಲಾಖ್‌ ನೀಡಿದ ಪತಿ, ಮುಂದಿನ ನಿಲ್ದಾಣದಲ್ಲಿ ಇಳಿದು ಪರಾರಿಯಾಗಿರುವ ವಿಚಿತ್ರ ಘಟನೆ ಉತ್ತರಪ್ರದೇಶದಲ್ಲಿ ನಡೆದಿತ್ತು. ಮೊಹಮ್ಮದ್‌ ಅರ್ಶದ್‌ ಮತ್ತು ಅಫ್ಸಾನಾ ಎಂಬುವವರು ಜ.12ರಂದು ವಿವಾಹವಾಗಿದ್ದರು. ಬಳಿಕ ಅರ್ಶದ್‌ ಅವರ ಕಾನ್ಪುರದ ಮನೆಗೆ ತನ್ನ ಪತ್ನಿಯನ್ನು ಕರೆದೊಯ್ದು ಅಲ್ಲಿ ತನಗೆ ಇನ್ನೊಂದು ಮದುವೆಯಾಗಿರುವುದನ್ನು ತಿಳಿಸಿದ್ದ. ಜೊತೆಗೆ ಆರ್ಶದ್‌ನ ಕುಟುಂಬಸ್ಥರು ಅಫ್ಸಾನಾಗೆ ವರದಕ್ಷಿಣೆಗೆ ಕಿರುಕುಳ ಪ್ರಾರಂಭಿಸಿದ್ದರು.

ತ್ರಿವಳಿ ತಲಾಕ್‌ ಆಘಾತ, ಮುಸ್ಲಿಂ ಧರ್ಮವನ್ನೇ ತೊರೆದು ಹಿಂದು ಯುವಕರ ಮದುವೆಯಾದ ಮಹಿಳೆಯರು!

ಬಳಿಕ ಏ.29ರಂದು ಪತಿ ತಾನು ಕೆಲಸ ಮಾಡುತ್ತಿದ್ದ ಭೋಪಾಲ್‌ಗೆ ತನ್ನ ಪತ್ನಿ ಅಫ್ಸಾನಾ ಜೊತೆಗೆ ರೈಲಲ್ಲಿ ತೆರಳುವಾಗ ತ್ರಿವಳಿ ತಲಾಖ್‌ ಹೇಳಿ ಪರಾರಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಅಫ್ಸಾನಾ ಪೊಲೀಸರಿಗೆ ದೂರು ನೀಡಿದ್ದು, ಪತಿಯ ಕುಟುಂಬಸ್ಥರ ಮೇಲೆ ಪ್ರಕರಣ ದಾಖಲಿಸಿ ಅಫ್ಸಾನಾರನ್ನು ಅವರ ತವರಿಗೆ ಕಳುಹಿಸಿ ಕೊಡಲಾಗಿದೆ.
 

click me!