ಬಿರಿಯಾನಿಯಲ್ಲಿ ಚಿಕನ್ ಲೆಗ್‌ಪಿಸ್‌ ಮಿಸ್ ಅಂತ ಹೊಡೆದಾಟ: ಮದುವೆ ಮನೆಯಾಯ್ತು ರಣಾಂಗಣ

Published : Jun 24, 2024, 06:36 PM ISTUpdated : Jun 24, 2024, 06:39 PM IST
ಬಿರಿಯಾನಿಯಲ್ಲಿ ಚಿಕನ್ ಲೆಗ್‌ಪಿಸ್‌ ಮಿಸ್ ಅಂತ ಹೊಡೆದಾಟ: ಮದುವೆ ಮನೆಯಾಯ್ತು ರಣಾಂಗಣ

ಸಾರಾಂಶ

ಬಿರಿಯಾನಿಯಲ್ಲಿ ಚಿಕನ್ ಲೆಗ್ ಪಿಸ್ ಕಾಣಿಸ್ತಿಲ್ಲ ಅಂತ ಮದುವೆ ಮನೆಯಲ್ಲಿ ಹೊಡೆದಾಟ ಶುರುವಾಗಿ ಮದುವೆ ಮನೆಯೊಂದು ರಣಾಂಗಣವಾದ ಘಟನೆ ಉತ್ತರಪ್ರದೇಶದ  ಬರೇಲಿಯ ನವಾಬ್‌ಗಂಜ್ ಬಳಿ ನಡೆದಿದೆ.

ಬರೇಲಿ: ಬಿರಿಯಾನಿಯಲ್ಲಿ ಚಿಕನ್ ಲೆಗ್ ಪಿಸ್ ಕಾಣಿಸ್ತಿಲ್ಲ ಅಂತ ಮದುವೆ ಮನೆಯಲ್ಲಿ ಹೊಡೆದಾಟ ಶುರುವಾಗಿ ಮದುವೆ ಮನೆಯೊಂದು ರಣಾಂಗಣವಾದ ಘಟನೆ ಉತ್ತರಪ್ರದೇಶದ  ಬರೇಲಿಯ ನವಾಬ್‌ಗಂಜ್ ಬಳಿ ನಡೆದಿದೆ. ಆದರೆ ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯವರು ಪೊಲೀಸರಿಗೆ ದೂರು ನೀಡಿಲ್ಲ ಎಂದು ನವಾಬ್‌ಗಂಜ್ ಪೊಲೀಸರು ಹೇಳಿದ್ದರು. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,  ಜನರು ಪರಸ್ಪರರತ್ತ ಚೇರ್ ಎಸೆದುಕೊಂಡು ಹೊಡೆದಾಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. 

ಕೆಲ ವರದಿಗಳ ಪ್ರಕಾರ, ಗಂಡಿನ ಕಡೆಯವರು ಚಿಕನ್ ಬಿರಿಯಾನಿಯಲ್ಲಿ ಲೆಗ್ ಫೀಸ್‌( ಕೋಳಿ ಕಾಲು) ಇಲ್ಲ ಎಂದು ಆಕ್ಷೇಪವೆತ್ತಿದ್ದು, ಇದರಿಂದ ಸಿಟ್ಟಿಗೆದ್ದ ಹುಡುಗಿ ಕಡೆಯವರು, ವರನ ಕುಟುಂಬದವರು ಹಾಗೂ ಸಂಬಂಧಿಗಳನ್ನು ಹೊಡೆದಿದ್ದಾರೆ. ಘಟನೆಯಿಂದ ಸಿಟ್ಟಿಗೆದ್ದ ವರನ ಕಡೆಯವರು ಮದುವೆ ಪ್ರಕ್ರಿಯೆ ಮುಂದುವರೆಸುವುದಕ್ಕೆ ನಿರಾಕರಿಸಿದ್ದಾರೆ. ಆದರೆ ನಂತರದಲ್ಲಿ ಅಲ್ಲಿದ್ದ ಸಂಬಂಧಿಗಳು ಹಿರಿಯರು ಸೇರಿ ಮನವೊಲಿಸಿದ ನಂತರ  ಎರಡೂ ಕುಟುಂಬಗಳು ಮನವೊಲಿಕೆ ಮಾಡಿ ಮದುವೆಯ ಕ್ರಮ ಮುಂದುವರೆಸಿದ್ದಾರೆ. 

ಮದ್ವೆ ಖುಷೀಲಿ ಡ್ಯಾನ್ಸ್ ಮಾಡುತ್ತಾ ಮಂಟಪದಿಂದ ಜಿಗಿದ ವರ, ಅತಿಥಿಗಳು ಕಕ್ಕಾಬಿಕ್ಕಿ!

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಒಂದು ಕಡೆ ಮದುವೆಯ ಸಂಪ್ರದಾಯಗಳು ನಡೆಯುತ್ತಿದ್ದರೆ ಮತ್ತೊಂದು ಕಡೆ ದಿಬ್ಬಣ ಬಂದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಹುಡುಗನ ಕಡೆಯವರಿಗೆ ಬಿರಿಯಾನಿಯಲ್ಲಿ ಲೆಗ್ ಪೀಸ್ ಸಿಕ್ಕಿಲ್ಲ, ಇದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದಾಗ  ಗಲಾಟೆ ಆರಂಭವಾಗಿದ್ದು, ಪರಸ್ಪರ ಎರಡು ಕಡೆಯವರು ಹಿಗ್ಗಾಮುಗ್ಗಾ  ಹೊಡೆದಾಡಿಕೊಂಡಿದ್ದಾರೆ. 

ಈ ಗಲಾಟೆಯಲ್ಲಿ ವರನೂ ಸೇರಿಕೊಂಡಿದ್ದು, ಯಾರೋ ಈ ಘಟನೆಯನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ನವಾಬ್‌ಗಂಜ್  ಪೊಲೀಸರ ಪ್ರಕಾರ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ, ದೂರು ದಾಖಲಾದರೆ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.  

ಮದುವೆ ಮಂಟಪದಲ್ಲೇ ವಧುವಿಗೆ ಮುತ್ತಿಕ್ಕಿದ ವರ: ರಣಾಂಗಣವಾಯ್ತು ಮದ್ವೆ ಮನೆ

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಕುಬೇರನ ಸಂಪತ್ತು ತರುವ ಡಿಫರೆಂಟ್‌ ಹೆಸರು ನಿಮ್ಮ ಮಗನಿಗೂ ಇಡಬಹುದು!