ಇಡೀ ದೆಹಲಿ ನಗರ ಟ್ರೆಷರ್ ಹಂಟ್ ಆಟದ ಸ್ಥಳವಾಗಿ ಮಾರ್ಪಟ್ಟಿದೆ. “ಟ್ರೆಷರ್ ಹಂಟ್ ದೆಹಲಿʼ ಎನ್ನುವ ಇನ್ ಸ್ಟಾಗ್ರಾಮ್ ಖಾತೆಯ ಮೂಲಕ ವ್ಯಕ್ತಿಯೊಬ್ಬರು ಆರಂಭಿಸಿರುವ ಈ ಆಟ ಇದೀಗ ಸಾಕಷ್ಟು ಕುತೂಹಲ ಕೆರಳಿಸಿದೆ.
ಟ್ರೆಷರ್ ಹಂಟ್ ಆಟದ ಗಮ್ಮತ್ತು ಬಲ್ಲವರಿಗೆ ಗೊತ್ತು. ಅಡಗಿಸಿಟ್ಟ ವಸ್ತುವನ್ನು ಹುಡುಕುವುದು, ಮತ್ತು ಅದನ್ನು ಹುಡುಕಿದವರೇ ಪಡೆಯುವುದು ಈ ಆಟದ ಮಜಾ. ಆ ವಸ್ತು ನಮಗೇ ದೊರೆಯುವ ಉತ್ಸಾಹದಲ್ಲಿ ಹುಡುಕುವುದೂ ಸಹ ಸಾಕಷ್ಟು ಥ್ರಿಲ್ ನೀಡುತ್ತದೆ. ಪುಟ್ಟ ಮಕ್ಕಳಿಗೆ ತಾಯಂದಿರು ಈ ಆಟವನ್ನು ಆಡಿಸುತ್ತಾರೆ. ಅಷ್ಟೇ ಏಕೆ? ಪಾರ್ಟಿಗಳಲ್ಲೂ ವಿವಿಧ ನಮೂನೆಯ ಟ್ರೆಷರ್ ಹಂಟ್ ಆಟವಿರುತ್ತದೆ. ಸೀಮಿತ ಪ್ರದೇಶದಲ್ಲಿ ಈ ಆಟವಾಡುವುದು ಸಾಮಾನ್ಯ. ಆದರೆ, ಇಡೀ ನಗರವನ್ನೇ ಒಂದು ಟ್ರೆಷರ್ ಹಂಟ್ ಪ್ರದೇಶವನ್ನಾಗಿ ಮಾಡಿದರೆ ಹೇಗೆ? ಅಬ್ಬಾ, ಬೆಚ್ಚಿಬೀಳಬೇಡಿ. ಅದೇಗೆ ಸಾಧ್ಯ ಅನ್ನಲೂಬೇಡಿ. ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ. ನಗರ ಪ್ರದೇಶ ಹೇಳಿಕೇಳಿ ಓಡಾಡಲು ಕಷ್ಟಕರ. ನಗರಗಳ ಟ್ರಾಫಿಕ್ ಎಂಥವರನ್ನೂ ಬೇಸರಕ್ಕೀಡು ಮಾಡುತ್ತದೆ. ಅಂಥ ಪ್ರದೇಶದಲ್ಲಿ ಟ್ರೆಷರ್ ಹಂಟ್ ಗಾಗಿ ಓಡಾಡುವುದು ಎಷ್ಟು ಕಷ್ಟ ಎನ್ನಿಸಬಹುದು. ಆದರೆ, ಅಂಥದ್ದೊಂದು ಪ್ರಯತ್ನವಂತೂ ನಮ್ಮ ದೇಶದ ರಾಜಧಾನಿ ದೆಹಲಿಯಲ್ಲಿ ಚಾಲ್ತಿಯಲ್ಲಿದೆ. ಹೌದು, ಇನ್ ಸ್ಟಾಗ್ರಾಮ್ ಪೇಜ್ “ಟ್ರೆಷರ್ ಹಂಟ್ ದೆಹಲಿʼ ಎನ್ನುವ ಖಾತೆಯ ಮೂಲಕ ಈ ಕುರಿತು ಸುಳಿವು ನೀಡಲಾಗುತ್ತಿದೆ. ಜನರ ಗಮನವನ್ನು ಸೆಳೆಯಲು ಇದೊಂದು ವಿಭಿನ್ನ ರೀತಿಯ ಸಾಹಸಿ ವಿಧಾನವಾಗಿದೆ.
ಬಹಳಷ್ಟು ಜನರಿಗೆ ಅನ್ವೇಷಣಾತ್ಮಕ (Innovative) ಚಟುವಟಿಕೆ (Activity), ಸಾಹಸಿ (Adventurous) ಕಾರ್ಯಗಳಲ್ಲಿ ಭಾಗಿಯಾಗುವುದು ಬಹಳ ಖುಷಿ ನೀಡುತ್ತದೆ. ಅಂಥವರು ಈ ಟ್ರೆಷರ್ ಹಂಟ್ (Treasure Hunt) ನಲ್ಲಿ ಮಜವಾಗಿ ಭಾಗವಹಿಸಬಹುದು. ಯಾರೋ ಒಬ್ಬರು ವ್ಯಕ್ತಿ ದೆಹಲಿಯ (Delhi) ಬೇರೆ ಬೇರೆ ಪ್ರದೇಶಗಳಲ್ಲಿ 500 ರೂಪಾಯಿ ನೋಟನ್ನು ಅಡಗಿಸಿಡುತ್ತಾರೆ. ಬಳಿಕ, ಅದರ ಬಗ್ಗೆ ಸಣ್ಣದೊಂದು ಕ್ಲೂ (Clue) ನೀಡುತ್ತಾರೆ. ತಮ್ಮ ಟ್ರೆಷರ್ ಹಂಟ್ ಖಾತೆಯಲ್ಲಿ ಅವರು “ರಿಯಲ್ ಟ್ರೆಷರ್ ಹಂಟ್ ಇಡೀ ದೆಹಲಿಯಲ್ಲಿದೆʼ ಎಂದೂ ಹೇಳಿಕೊಂಡಿದ್ದಾರೆ.
undefined
ಕೆಲ ಗಂಟೆಗಳ ಹಿಂದಷ್ಟೇ ಅವರು ಮಾಡಿದ್ದ ಪೋಸ್ಟ್ ನಲ್ಲಿ “ಉತ್ತರ ದೆಹಲಿಯಲ್ಲಿ ಬೋಟಿಂಗ್ (Boating) ಮಾಡಲು ಬನ್ನಿʼ ಎಂದು ಆಹ್ವಾನಿಸಿದ್ದಾರೆ. ಜತೆಗೆ ವೀಡಿಯೋವಿದೆ. ಅದರಲ್ಲಿ ಅವರು 500 ರೂಪಾಯಿ ನೋಟನ್ನು ಸಣ್ಣದೊಂದು ಗೋಡೆ (Wall) ತೆರೆದುಕೊಂಡಿರುವ ಪ್ರದೇಶದಲ್ಲಿ ಅಡಗಿಸಿ ಇಡುತ್ತಾರೆ. “ಸ್ಥಳ (Location) ಯಾವುದೆಂದು ಪತ್ತೆ ಹೆಚ್ಚಿ, ಹಣವನ್ನು ನಿಮ್ಮದಾಗಿಸಿಕೊಳ್ಳಿʼ ಎನ್ನುವ ಸಂದೇಶ ನೀಡಲಾಗಿದೆ. ಸುತ್ತಲ ಪ್ರದೇಶ ಯಾವುದೆಂದು ಗುರುತಿಸಲು ಅನುಕೂಲವಾಗುವಂತೆ ಚಿಕ್ಕದೊಂದು ನೋಟ ಒದಗಿಸಲಾಗಿದೆ.
ಬಳಿಕ, ಕೆಲ ಗಂಟೆಗಳ ಕಾಲ ಈ ಟ್ರೆಷರ್ ಗಾಗಿ ಹುಡುಕಾಟ ನಡೆದಿತ್ತು. ಹಲವರು ಅದರ ಬೆನ್ನುಬಿದ್ದಿದ್ದರು. ಕುತೂಹಲಕಾರಿ ಘಟ್ಟದಲ್ಲಿ ಯಾರೋ ಒಬ್ಬರು ಅದನ್ನು ಪತ್ತೆ ಹೆಚ್ಚಿದ್ದರು. ಟ್ರೆಷರ್ ಅನ್ನು ಕ್ಲೇಮ್ (Claim) ಮಾಡಿ 500 ರೂಪಾಯಿಯನ್ನು ತಮ್ಮದಾಗಿಸಿಕೊಂಡಿದ್ದರು. ಆದರೆ, ವಿಜಯಿಯಾದವರು (Winner) ಯಾರೆಂದು ತಿಳಿದಿಲ್ಲ. ಹೀಗಾಗಿ, ಸ್ವತಃ ಅವರೇ ಮುಂದೆ ಬಂದು ತಿಳಿಸಬೇಕೆಂದು ಕೋರಲಾಗಿದೆ.
ಹುಟ್ಟಿದಾಗ ಪೋಷಕರೇ ಬೇಡವೆಂದು ಬಿಟ್ಟು ಹೋದ ಸಯಾಮಿ ಅವಳಿ ಮೋಹನ್, ಸೋಹನ್ ಕಥೆ!
ಇಂಥದ್ದೊಂದು ಅಸಾಂಪ್ರದಾಯಿಕ ಆಟವು ಈಗ ಸಾಕಷ್ಟು ಜನರ ಗಮನ ಸೆಳೆದಿದೆ. ಪ್ರತಿಯೊಂದು ವೀಡಿಯೋಕ್ಕೂ (Video) ಸಿಕ್ಕಾಪಟ್ಟೆ ಪ್ರತಿಕ್ರಿಯೆ ಬರುತ್ತಿದೆ. ಕೆಲವು ಉತ್ಸಾಹಿಗಳು ಈ ಸವಾಲನ್ನು ಖುಷಿಯಿಂದ ಸ್ವೀಕಾರ ಮಾಡಿದ್ದಾರೆ. ಕೆಲವರು ಅಲ್ಲಿ ನೀಡಿರುವ ಕ್ಲೂ ಆಧರಿಸಿ ಸ್ಥಳ ಯಾವುದಿರಬಹುದು ಎಂದು ಅಂದಾಜು ಮಾಡಿದ್ದಾರೆ. ಆಟಕ್ಕೆ ಸಲಹೆಗಳೂ ಬಂದಿವೆ. “ಅತಿ ಕಡಿಮೆ ಕ್ಲೂ ನೀಡುವ ಮೂಲಕ ಆಟವನ್ನು ಇನ್ನಷ್ಟು ಕ್ಲಿಷ್ಟಕರವನ್ನಾಗಿ ಮಾಡಿʼ ಎಂದೂ ಕೆಲವರು ಹೇಳಿದ್ದಾರೆ. ಒಟ್ಟಿನಲ್ಲಿ ಟ್ರೆಷರ್ ಹಂಟ್ ಸಿಕ್ಕಾಪಟ್ಟೆ ಆಸಕ್ತಿ (Interest) ಮೂಡಿಸಿದೆ. ಬಹಳಷ್ಟು ಜನ ತಮ್ಮ ನಗರದಲ್ಲೂ ಇಂಥದ್ದೊಂದು ಆಟವನ್ನು ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಕಳೆದ ಫೆಬ್ರವರಿ 25ರಂದು ಟ್ರೆಷರ್ ಹಂಟ್ ಖಾತೆ (Account) ಓಪನ್ ಆಗಿದ್ದು, ಈಗಾಗಲೇ 12 ಸಾವಿರಕ್ಕೂ ಅಧಿಕ ಫಾಲೊವರ್ ಗಳನ್ನು ಹೊಂದಿದೆ.