ಹುಟ್ಟಿದಾಗ ಪೋಷಕರೇ ಬೇಡವೆಂದು ಬಿಟ್ಟು ಹೋದ ಸಯಾಮಿ ಅವಳಿ ಮೋಹನ್, ಸೋಹನ್ ಕಥೆ!

By Suvarna News  |  First Published Mar 16, 2024, 2:10 PM IST

ಹುಟ್ಟಿದಾಗ ತಂದೆ ತಾಯಿ ಬಿಸಾಕಿ ಹೋದ ಸಯಾಮಿ ಅವಳಿಗಳು ಮೋಹನ್, ಸೋಹನ್. ಸೊಂಟದಿಂದ ಮೇಲೆ ಎರಡು ದೇಹ. ಕೆಳಗೆ ಒಂದೇ ದೇಹ ಹೊಂದಿರುವ ಇವರ ಕಥೆ ಕೇಳಿ.


ಅವಳಿಗಳ ಬದುಕೇ ಕಷ್ಟ. ಕಟ್ಟಿಕೊಂಡ ಹೆಂಡತಿ/ಗಂಡ ಕೂಡ ಒಬ್ಬರನ್ನು ಇನ್ನೊಬ್ಬರು ಅಂತ ಕನ್‌ಫ್ಯೂಸ್‌ ಮಾಡಿಕೊಳ್ಳುವ ಸಾಧ್ಯತೆ ಇರುತ್ತೆ. ಅಂಥದರಲ್ಲಿ ಒಬ್ಬರಿಗೊಬ್ಬರು ಅಂಟಿಕೊಂಡ ಸಯಾಮಿ ಅವಳಿಗಳಾಗಿದ್ದರೆ! ಅವರ ಸ್ಥಿತಿ ಇನ್ನೂ ಕಷ್ಟ. ಹಸಿವಿನಿಂದ ಹಿಡಿದು ವಿಸರ್ಜನೆಯವರೆಗೆ ಎಲ್ಲದರ ಕಷ್ಟ. ಜೊತೆಗೆ ಭಾವನೆಗಳ ತಾಕಲಾಟ ಇತ್ಯಾದಿ. ಹೀಗೆ ಅಂಟಿಕೊಂಡ ದೇಹದಲ್ಲೇ ಬದುಕು ಸಾಗಿಸುತ್ತಿರುವ ಸಯಾಮಿ ಅವಳಿಗಳಾದ ಮೋಹನ ಮತ್ತು ಸೋಹನ ಅವರ ಕತೆ ಇದು. ಅವರ ಮಾತಿನಲ್ಲೇ ಕೇಳಿ:

ಅವನು ಮೋಹನಾ ಮತ್ತು ನಾನು ಸೋಹ್ನಾ. ನಾವು ಸಹೋದರರು. ಆದರೆ ನಾವು ಒಂದಾಗಿ ಹುಟ್ಟಿದ್ದೇವೆ. ನಾವು ಹೇಗೆ ದಿನಚರಿ ನಿರ್ವಹಿಸುತ್ತೇವೆ, ಹೇಗೆ ಬದುಕುತ್ತೇವೆ ಎಂಬ ಕುತೂಹಲ ನಿಮ್ಮದು ಅಂತ ನನಗೆ ಗೊತ್ತಿದೆ. ಆದರೆ ನಮಗೆ ಇದು ನಮ್ಮ ಜೀವನ.

Latest Videos

undefined

ನಮಗೆ ಹೆರಿಗೆ ಮಾಡಿದ ವೈದ್ಯರು ಕೂಡ ನಮ್ಮನ್ನು ನೋಡಿ ಆಘಾತಕ್ಕೊಳಗಾಗಿದ್ದರು. ಹೆರಿಗೆಯಾದ ಕೂಡಲೇ ನಮ್ಮನ್ನು ದೆಹಲಿಯ AIIMಗೆ ಸ್ಥಳಾಂತರಿಸಲಾಯಿತು. ‘ಇದು ಅಪರೂಪದ ಸ್ಥಿತಿ' ಎಂದು ವೈದ್ಯರು ಹೇಳಿದರು. ನಮಗೆ 2 ಹೃದಯಗಳು, 2 ಮೆದುಳುಗಳು ಮತ್ತು 2 ಜೋಡಿ ಕೈಗಳಿವೆ. ಆದರೆ ನಾವು ಸೊಂಟದ ಕೆಳಗಿನಿಂದ ಒಂದೇ. ಕಾಲುಗಳೂ ಎರಡೇ. "ಇವರನ್ನು ಬೇರೆ ಮಾಡಿದರೆ ಒಬ್ಬನ ಜೀವ ಹೋಗಬಹುದು" ಎಂದು ವೈದ್ಯರು ಹೇಳಿದರು. ಇದನ್ನು ಕೇಳಿದ ನಮ್ಮ ತಂದೆ-ತಾಯಿ ನಮ್ಮನ್ನು ಬಿಟ್ಟು ಹೊರಟೇಹೋದರು!

20 ವರ್ಷಗಳಿಂದ ಪತ್ನಿ ಜೊತೆ ಮಾತು ಬಿಟ್ಟ, ಕಾರಣ ಹೇಳ್ತೀವಿ ಕೇಳಿ!

ಆಗ ನಮ್ಮನ್ನು ದತ್ತು ಪಡೆದು ನಮ್ಮನ್ನು ಸಾಕಿದವರು ಅಮೃತಸರದ ಆಶ್ರಯ ಮನೆಯವರು. ಬೇಜಿ ನಮ್ಮ ಉಸ್ತುವಾರಿ ಹೊತ್ತವರು. ನಮಗೆ ಹೆಸರು ಇರಿಸಿದವರು. ಬೇಜಿ ಯಾವಾಗಲೂ, ‘ತುಮ್ ಏಕ್ ಹೋ’ ಎಂದು ಹೇಳುತ್ತಿದ್ದಳು. ನಮ್ಮ 1ನೇ ಹುಟ್ಟುಹಬ್ಬದಂದು ಇಂಟರ್‌ಲಿಂಕ್ಡ್ ಹಾರ್ಟ್ ಕೇಕ್ ಅನ್ನು ತಂದು ನಾವು ಅದನ್ನು ಕತ್ತರಿಸಿ ಸವಿಯುವಂತೆ ಮಾಡಿದಳು.

ಶೆಲ್ಟರ್‌ ಹೋಮ್‌ನಲ್ಲಿ ಯಾರೂ ನಮ್ಮನ್ನು ಬೇರೆ ಎಂದು ಭಾವಿಸಲಿಲ್ಲ. ಅಲ್ಲಿ ಓದಿದೆವು, ಆಟವಾಡಿದೆವು, ಮಲಗಿದೆವು. ಹಾಡುವ ಮೂಲಕ ಅಲ್ಲಿದ್ದವರಿಗೆ ಮನರಂಜನೆ ನೀಡಿದೆವು. ನಾವು ಬಹಳ ಮಸ್ತಿ ಮಜಾ ಮಾಡುತ್ತೇವೆ. ʼನಿಮ್ಮ ತಲೇಲಿ ಯಾವಾಗಲೂ ಏನಾದರೂ ನಡೀತಾ ಇರುತ್ತೆʼ ಎಂದು ಬೇಜಿ ಯಾವಾಗಲೂ ಹೇಳುತ್ತಿದ್ದರು.

ಅನೇಕ ವರದಿಗಾರರು ನಮ್ಮೊಂದಿಗೆ ಮಾತನಾಡಲು ಬರುತ್ತಿದ್ದರು. ಆದರೆ ಏಕೆ ಎಂದು ನಮಗೆ ಅರ್ಥವಾಗಿರಲಿಲ್ಲ. ನಾವು ಮೊದಲ ಬಾರಿಗೆ ಆಶ್ರಯ ಮನೆಯಿಂದ ಹೊರಬಂದ ನಂತರವೇ ನಾವು ಎಲ್ಲರಂತೆ ಅಲ್ಲ ಎಂದು ಅರಿತುಕೊಂಡೆವು. ನಮಗೆ ಆಗ ಕೇವಲ 16 ವರ್ಷ. ಜನರು ನಮ್ಮ ವೀಡಿಯೋಗಳನ್ನು ತೆಗೆಯುತ್ತಾರೆ. ‘ಯೇ ಕ್ಯಾ ಹೈ?’ ಅಂತ ಮೋಹನ ಬೆದರುತ್ತಾನೆ. ಆದ್ದರಿಂದ ಅವನು ನನ್ನ ಕೈಯನ್ನು ತುಂಬಾ ಬಿಗಿಯಾಗಿ ಹಿಡಿದುಕೊಳ್ಳುತ್ತಾನೆ. ಒಂದು ದಿನ, ನಾವು ಇನ್ನು ಮುಂದೆ ಆಶ್ರಯ ಮನೆಯಿಂದ ಹೊರಬರುವುದಿಲ್ಲ ಎಂದು ನಿರ್ಧರಿಸಿದೆವು. ಆದರೆ ಬೇಜಿ ಹೇಳಿದರು, ʼಹೆದರುವವರನ್ನು ಜನ ಇನ್ನಷ್ಟು ಹೆದರಿಸುತ್ತಾರೆ".

ಬಿಲಿಯನೇರ್‌ ಮುಕೇಶ್ ಅಂಬಾನಿ ಮಿಡ್ಲ್‌ ಕ್ಲಾಸ್ ಹುಡುಗಿ ನೀತಾಗೆ ಪ್ರಪೋಸ್ ಮಾಡಿದ್ದು ಹೇಗೆ? ವೀಡಿಯೋ ವೈರಲ್‌

ನಾವು ಈಗ ಹೆದರುವವರಲ್ಲ ಅಂದುಕೊಂಡು ಹೆಚ್ಚು ಹೆಚ್ಚಾಗಿ ಹೊರಗೆ ಹೋಗಲು ಪ್ರಾರಂಭಿಸಿದ್ದೇವೆ. ಜನರು ನಮ್ಮನ್ನು ದಿಟ್ಟಿಸಿದರೆ, ನಾವು ಹಿಂದಿರುಗಿ ನೋಡುತ್ತೇವೆ. ನಿಧಾನವಾಗಿ ಜನ ನಮ್ಮ ಬಳಿಗೆ ಬರಲು ಪ್ರಾರಂಭಿಸಿದರು. ‘ದಯವಿಟ್ಟು ನಿಮ್ಮಿಬ್ಬರೊಂದಿಗೆ ನಾವು ಫೋಟೋ ತೆಗೆದುಕೊಳ್ಳಬಹುದೇ?’ ಎಂದು ಕೇಳ ತೊಡಗಿದರು. ನಮ್ಮ ಸಂದರ್ಶನಗಳು ನಡೆಯತೊಡಗಿದವು. ಜನ ನಮ್ಮನ್ನು ಗುರುತಿಸತೊಡಗಿದರು. ‘ವಿಲಕ್ಷಣ ಒಡಹುಟ್ಟಿನ ಸೋಹನಾ ಮೋಹನಾ’ದಿಂದ ನಾವು ‘ಸೋಹನಾ ಮೋಹನ, ಒಡಹುಟ್ಟಿದವರು’ ಆದೆವು.

ಇತ್ತೀಚೆಗೆ ನಮಗೆ ಸರ್ಕಾರಿ ಕೆಲಸ ಸಿಕ್ಕಿದೆ. ನಾವು ಸರ್ಕಾರಿ ಅತಿಥಿ ಗೃಹದಲ್ಲಿ ವಾಸಿಸಲು ಪ್ರಾರಂಭಿಸಿದ್ದೇವೆ. ಇಂದು ನಮಗೆ 22 ವರ್ಷ. ಕೆಲವು ವರ್ಷಗಳ ಹಿಂದೆ ನಮ್ಮ ಪೋಷಕರು ನಮ್ಮನ್ನು ಸಂಪರ್ಕಿಸಲು ಪ್ರಯತ್ನಿಸಿದರು. ‘ಮನೆಗೆ ಬನ್ನಿ’ ಅಂದರು. ಆದರೆ ನನಗೆ ಮೋಹನನ ನಿರ್ಧಾರ ಮುಖ್ಯ. ನಮ್ಮ ಲೈಫು ಯಾವಾಗಲೂ ಡಬಲ್ ಸಂತೋಷ ಮತ್ತು ಡಬಲ್ ಪ್ರೀತಿ ... ಅಕ್ಷರಶಃ! ನಾವು ಈಗಾಗಲೇ ತುಂಬಾ ಪ್ರೀತಿಯನ್ನು ಹೊಂದಿರುವಾಗ, ನಮಗೆ ಬೇರಿನ್ನೊಂದು ಮನೆಯ ಅಗತ್ಯ ಏನಿದೆ!

 

click me!