ಲವ್ ಅಫೇರ್, ಕೊಲೆ, ಡಿವೋರ್ಸ್ ಇವೆಲ್ಲಕ್ಕೂ ಜಾತಕದ ದೋಷವೇ ಕಾರಣ: ಸಂಶೋಧನೆಯಲ್ಲಿ ಬಯಲಾಯ್ತು ಅಚ್ಚರಿಯ ವಿಚಾರ!

Published : Oct 16, 2025, 01:08 PM IST
modern marriage problems

ಸಾರಾಂಶ

Why Marriages Fail: ಶೇಕಡ 37 ರಷ್ಟು ಪ್ರಕರಣಗಳಲ್ಲಿ, ಜಾತಕ ಹೊಂದಾಣಿಕೆ ಅಪೂರ್ಣ ಅಥವಾ ತಪ್ಪಾಗಿದೆ ಎಂದು ಸಂಶೋಧನೆಯ ಫಲಿತಾಂಶಗಳು ಬಹಿರಂಗಪಡಿಸಿವೆ. ಶೇಕಡ 63 ರಷ್ಟು ಪ್ರಕರಣಗಳಲ್ಲಿ, ಸಾಂಪ್ರದಾಯಿಕ ವಿಧಾನಗಳು ಮತ್ತು ಶುಭ ಸಮಯಗಳನ್ನು ನಿರ್ಲಕ್ಷಿಸಲಾಗಿದೆ.

ಉತ್ತರ ಪ್ರದೇಶದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ಜ್ಯೋತಿಷ್ಯ ವಿಭಾಗದ ಹೊಸ ಸಂಶೋಧನಾ ವರದಿಯು ಆಧುನಿಕ ವಿವಾಹಗಳ ಬಗ್ಗೆ ಶಾಕಿಂಗ್‌ ವಿಷಯವನ್ನ ಬಹಿರಂಗಪಡಿಸಿದೆ. ಮೂವರು ಪ್ರಾಧ್ಯಾಪಕರು ಮತ್ತು ಇಬ್ಬರು ಸಂಶೋಧನಾ ವಿದ್ವಾಂಸರು ನಡೆಸಿದ ಆರು ತಿಂಗಳ ಅಧ್ಯಯನವು ದೇಶದಲ್ಲಿ ಶೇಕಡ 37 ರಷ್ಟು ವಿವಾಹಗಳು ವಧು-ವರರ ಜಾತಕಗಳು ಸರಿಯಾಗಿ ಹೊಂದಾಣಿಕೆಯಾಗದ ಕಾರಣ ಮುರಿದು ಬೀಳುತ್ತಿವೆ ಎಂದು ಕಂಡುಹಿಡಿದಿದೆ. ಈ ವರದಿಯ ಪ್ರಕಾರ, ಗ್ರಹ ದೋಷಗಳನ್ನು ಮರೆತು ಮದುವೆಯಾಗುವುದು ಲವ್ ಅಫೇರ್, ಕೌಟುಂಬಿಕ ಹಿಂಸಾಚಾರ ಮತ್ತು ಕೊಲೆಯಂತಹ ಗಂಭೀರ ಕೃತ್ಯಗಳಿಗೆ ಕಾರಣವಾಗುತ್ತಿವೆ.

ಸಂಶೋಧನೆ ಹೇಗೆ ಮಾಡಲಾಯಿತು?

ಬಿಎಚ್‌ಯು ಜ್ಯೋತಿಷ್ಯ ವಿಭಾಗದ ಪ್ರಾಧ್ಯಾಪಕರಾದ ವಿನಯ್ ಪಾಂಡೆ, ಅಶುತೋಷ್ ತ್ರಿಪಾಠಿ ಮತ್ತು ಅಮಿತ್ ಕುಮಾರ್ ಮಿಶ್ರಾ, ಸಂಶೋಧಕರಾದ ಗಣೇಶ್ ಪ್ರಸಾದ್ ಮತ್ತು ನೇಪಾಳಿ ಪಿಎಚ್‌ಡಿ ವಿದ್ಯಾರ್ಥಿನಿ ರೋಡ್ನಾ ಘಿನ್ರೆ ಅವರೊಂದಿಗೆ ಈ ಅಧ್ಯಯನವನ್ನು ನಡೆಸಲಾಯ್ತು. ಸಂಶೋಧನೆ ಪೂರ್ಣಗೊಳ್ಳಲು ಆರು ತಿಂಗಳುಗಳು ಬೇಕಾಯಿತು. ಈ ಸಮಯದಲ್ಲಿ, ಎರಡು ಹಂತಗಳಲ್ಲಿ ಡೇಟಾವನ್ನು ಸಂಗ್ರಹಿಸಲಾಯಿತು. ಮೊದಲನೆಯದಾಗಿ ಬಿಎಚ್‌ಯು ಜ್ಯೋತಿಷ್ಯ ಹೊರರೋಗಿ ವಿಭಾಗಕ್ಕೆ ಭೇಟಿ ನೀಡಿದ ದೇಶಾದ್ಯಂತದ ದಂಪತಿಯಿಂದ ಪ್ರಕರಣ ಅಧ್ಯಯನಗಳನ್ನು ನಡೆಸಲಾಯಿತು. ಎರಡನೆಯದಾಗಿ, ಮದುವೆಯಾದ ಮೂರು ವರ್ಷದಲ್ಲಿ ವಿಚ್ಛೇದನ ಪಡೆದ 250 ಜೋಡಿಗಳನ್ನು ಆಯ್ಕೆ ಮಾಡಲು ರಾಜ್ಯದ 12 ಜಿಲ್ಲೆಗಳಿಗೆ ಸಂಶೋಧಕರನ್ನು ಕಳುಹಿಸಲಾಯಿತು.

ಕುಟುಂಬಗಳಿಗೆ ಮೂರು ಪ್ರಮುಖ ಪ್ರಶ್ನೆ ಕೇಳಿದ ಸಂಶೋಧಕರು
*ಮದುವೆಗೆ ಮೊದಲು ಜಾತಕಗಳು ಹೊಂದಾಣಿಕೆಯಾಗಿವೆಯೇ?.
*ಯಾವುದೇ ಗ್ರಹ ದೋಷಗಳ ಹೊರತಾಗಿಯೂ ಮದುವೆ ನಡೆದಿದೆಯೇ?
*ವಿವಾಹದ ಸಮಯದಲ್ಲಿ ಸಾಂಪ್ರದಾಯಿಕ ಆಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆಯೇ.

ಸಂಶೋಧನೆಯ ಫಲಿತಾಂಶ

ಶೇಕಡ 37 ರಷ್ಟು ಪ್ರಕರಣಗಳಲ್ಲಿ, ಜಾತಕ ಹೊಂದಾಣಿಕೆ ಅಪೂರ್ಣ ಅಥವಾ ತಪ್ಪಾಗಿದೆ ಎಂದು ಸಂಶೋಧನೆಯ ಫಲಿತಾಂಶಗಳು ಬಹಿರಂಗಪಡಿಸಿವೆ. ಶೇಕಡ 63 ರಷ್ಟು ಪ್ರಕರಣಗಳಲ್ಲಿ, ಸಾಂಪ್ರದಾಯಿಕ ವಿಧಾನಗಳು ಮತ್ತು ಶುಭ ಸಮಯಗಳನ್ನು ನಿರ್ಲಕ್ಷಿಸಲಾಗಿದೆ. ಜಾತಕ ಹೊಂದಾಣಿಕೆಯು ಕೇವಲ ಜಾತಕದ ಗುಣಲಕ್ಷಣಗಳ ಮೇಲೆ ಅಲ್ಲ, ಗ್ರಹಗಳ ಜೋಡಣೆಯನ್ನು ಆಧರಿಸಿದೆ ಎಂದು ಪ್ರಾಧ್ಯಾಪಕ ವಿನಯ್ ಪಾಂಡೆ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜನರು ಪ್ರದರ್ಶನಕ್ಕಾಗಿ ಮದುವೆಯಾಗುತ್ತಾರೆ ಎಂದು ಪ್ರೊಫೆಸರ್ ಪಾಂಡೆ ಹೇಳಿದರು. ಅವರು ಫೋಟೋಶೂಟ್‌ಗಳಲ್ಲಿ ನಿರತರಾಗಿದ್ದಾರೆ ಮತ್ತು ಮಂತ್ರಗಳನ್ನು ಪಠಿಸುವುದನ್ನು ಹಾಗೂ ಗ್ರಹ ಹೊಂದಾಣಿಕೆಯನ್ನು ನಿರ್ಲಕ್ಷಿಸುತ್ತಾರೆ. ಪರಿಣಾಮವಾಗಿ, ಸಂಬಂಧಗಳು ಮುರಿದು ಬೀಳುತ್ತಿವೆ. ಗಂಡ ಮತ್ತು ಹೆಂಡತಿ ಒಬ್ಬರಿಗೊಬ್ಬರು ಕೊಲ್ಲುವ ಮಟ್ಟಕ್ಕೆ ಹೋಗುತ್ತಿದ್ದಾರೆ. ಅಷ್ಟಕೂಟ (ಗುಣಗಳ ಹೊಂದಾಣಿಕೆ) ಜೊತೆಗೆ ಗ್ರಹ ಹೊಂದಾಣಿಕೆಯೂ ಅಷ್ಟೇ ಮುಖ್ಯ ಎಂದು ಅವರು ವಿವರಿಸಿದರು.

ಗ್ರಹಗಳ ಅಸಮತೋಲನದಿಂದಾಗಿ ಮದುವೆ ಅಸ್ಥಿರ
ಹುಡುಗ ಮತ್ತು ಹುಡುಗಿ 32 ಗುಣಗಳನ್ನು ಹೊಂದಿದ್ದಾಳೆ ಎಂದ ಮಾತ್ರಕ್ಕೆ ಗ್ರಹಗಳು ಹೊಂದಾಣಿಕೆಯಾಗುತ್ತವೆ ಎಂದರ್ಥವಲ್ಲ ಎಂದು ಪ್ರೊಫೆಸರ್ ವಿನಯ್ ಪಾಂಡೆ ಹೇಳಿದ್ದಾರೆ. ಗ್ರಹಗಳ ಅಸಮತೋಲನವು ಅಸ್ಥಿರವಾದ ಮದುವೆಗೆ ಕಾರಣವಾಗಬಹುದು. ಏತನ್ಮಧ್ಯೆ, ಆಧುನಿಕತೆಯ ಅನ್ವೇಷಣೆಯಲ್ಲಿ ಜನರು ಸಂಪ್ರದಾಯಗಳನ್ನು ಮರೆತುಬಿಡುತ್ತಿದ್ದಾರೆ ಎಂದು ಪ್ರೊಫೆಸರ್ ಶತ್ರುಘ್ನ ತ್ರಿಪಾಠಿ ಹೇಳಿದ್ದಾರೆ. ಸೆಮಿನಾರ್‌ನಲ್ಲಿ ಹಾಜರಿದ್ದ ಶತ್ರುಘ್ನ ತ್ರಿಪಾಠಿ, ಆಧುನಿಕತೆಯ ಹೆಸರಿನಲ್ಲಿ ಜನರು ಜಾತಕ ಮತ್ತು ಶುಭ ಸಮಯಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಮದುವೆಯು ಒಂದು ಸಂಸ್ಕಾರ, ಒಪ್ಪಂದವಲ್ಲ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜನರು ಪಂಚಾಂಗವಲ್ಲ, ಹೋಟೆಲ್ ಬುಕಿಂಗ್ ಆಧರಿಸಿ ಶುಭ ಸಮಯಗಳನ್ನು ನಿರ್ಧರಿಸುತ್ತಾರೆ. ಮದುವೆಗೆ 36 ಗುಣಗಳಲ್ಲಿ ಕನಿಷ್ಠ 18 ಗುಣಗಳು ಹೊಂದಿಕೆಯಾಗಬೇಕು ಎಂದು ಅವರು ಹೇಳಿದರು. ಇಲ್ಲದಿದ್ದರೆ, ಗ್ರಹಗಳ ಘರ್ಷಣೆಗಳು ದಂಪತಿಗಳ ನಡುವೆ ಮಾನಸಿಕ ಅಂತರ ಮತ್ತು ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು.

ಸಂಶೋಧನೆಯಲ್ಲಿ ಬಹಿರಂಗಗೊಂಡ ಕಾರಣಗಳು
ಬಿಎಚ್‌ಯುನಲ್ಲಿ ನಡೆಸಿದ ಸಂಶೋಧನೆಯು ವಿವಾಹವು ಫೇಲ್ಯೂರ್ ಆಗುತ್ತಿರುವ ಹಿಂದೆ ಹಲವಾರು ಸಾಮಾನ್ಯ ಕಾರಣಗಳಿವೆ ಎಂದು ಕಂಡುಹಿಡಿದಿದೆ. ಅವುಗಳಲ್ಲಿ ಮಾಂಗಲೀಕ ದೋಷ, ನಾಡಿ ದೋಷ ಮತ್ತು ಗಣ ದೋಷದಂತಹ ಗ್ರಹ ದೋಷಗಳನ್ನು ನಿರ್ಲಕ್ಷಿಸುವುದು ಸೇರಿವೆ. ಇದಲ್ಲದೆ, ಜಾತಕ ಹೊಂದಾಣಿಕೆಯಲ್ಲಿನ ಗುಣಗಳನ್ನು ಎಣಿಸುವುದು ಮತ್ತು ಗ್ರಹಗಳ ಸ್ಥಾನಗಳನ್ನು ನಿರ್ಲಕ್ಷಿಸುವುದು ಸಹ ಒಂದು ಅಂಶವಾಗಿದೆ. ವಿವಾಹ ಆಚರಣೆಗಳ ಸಮಯದಲ್ಲಿ ಮಂತ್ರಗಳ ಅಪೂರ್ಣ ಪಠಣವೂ ಒಂದು ಅಂಶವಾಗಿದೆ. ಶುಭ ಸಮಯಕ್ಕಿಂತ ಹೆಚ್ಚಾಗಿ ಹೋಟೆಲ್ ಬುಕಿಂಗ್ ಅಥವಾ ಛಾಯಾಗ್ರಾಹಕನ ಅನುಕೂಲತೆಯ ಆಧಾರದ ಮೇಲೆ ವಿವಾಹ ದಿನಾಂಕಗಳನ್ನು ನಿಗದಿಪಡಿಸುವುದು ಸಹ ವಿವಾಹಗಳ ವಿಘಟನೆಗೆ ಕಾರಣವಾಗಿದೆ.

ಪ್ರಾಧ್ಯಾಪಕರ ಸಲಹೆಗಳು
ಪ್ರಾಧ್ಯಾಪಕರು ಮದುವೆಗೆ ಸಂಬಂಧಿಸಿದಂತೆ ಹಲವು ಸಲಹೆಗಳನ್ನು ನೀಡಿದರು. ಮದುವೆಗೆ ಮೊದಲು ಜಾತಕ ಹೊಂದಾಣಿಕೆ ಕಡ್ಡಾಯಗೊಳಿಸಬೇಕು.   ಗ್ರಹಗಳು ಮತ್ತು ಮನೆಗಳ ಸಂಪೂರ್ಣ ತನಿಖೆ ಮಾಡಿ. ಹೋಟೆಲ್ ಕ್ಯಾಲೆಂಡರ್‌ನಿಂದ ಅಲ್ಲ, ಪಂಚಾಂಗದಿಂದ ಶುಭ ಸಮಯವನ್ನು ನಿರ್ಧರಿಸಿ. ವಿವಾಹ ವಿಧಿಗಳನ್ನು ಸಂಪೂರ್ಣವಾಗಿ ಮಾಡಿ, ಮಂತ್ರಗಳು ಮತ್ತು ಹವನವನ್ನು ಔಪಚಾರಿಕವಾಗಿ ಮಾಡಬೇಡಿ. ಮೊದಲು ಮಂಗಳ ದೋಷ ಅಥವಾ ಇತರ ಗ್ರಹಗಳ ಅಸಮತೋಲನಕ್ಕೆ ಕ್ರಮಗಳನ್ನು ತೆಗೆದುಕೊಳ್ಳಿ, ನಂತರವೇ ಮದುವೆಯನ್ನು ನೆರವೇರಿಸಬೇಕು ಎಂದು ಅವರು ಹೇಳಿದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
Chanakya Niti: ಬೆಳಗ್ಗೆ ಎದ್ದಾಗ ಇವನ್ನೆಲ್ಲಾ ನೋಡ್ಬೇಡಿ.. ಚಾಣಕ್ಯ ಹೇಳಿದ ರಹಸ್ಯಗಳು