ದಾಂಪತ್ಯ ಸುಖವಾಗಿರ್ಬೇಕು ಅಂದ್ರೆ ಇಂಥ ಮಾತಿಗೆ ಹಾಕಿ ಬ್ರೇಕ್!

By Roopa Hegde  |  First Published Jun 24, 2024, 2:38 PM IST

ಕೆಲವೊಂದು ಮಾತು ಮನೆ ಹಾಳು ಮಾಡುತ್ತೆ. ನಿಮ್ಮ ಸಂಸಾರ ಹದಗೆಡಲೂ ನೀವು ಗೊತ್ತೋ ಗೊತ್ತಿಲ್ಲದೆಯೋ ಮಾಡಿದ ಈ ತಪ್ಪು ಕಾರಣವಾಗುತ್ತೆ. ಹಾಗಾಗಿ ಮಾತಿನ ಮೇಲಿರಲಿ ಬಿಗಿ ಹಿಡಿತ. 
 


ಪ್ರೀತಿಯಲ್ಲಿರುವ ಅಥವಾ ಮದುವೆಯಾದ ಜೋಡಿ ಪರಸ್ಪರ ಒಳ್ಳೆಯ ಮತ್ತು ಕೆಟ್ಟ ಎರಡೂ ಗುಣಗಳನ್ನು ಸ್ವೀಕರಿಸಬೇಕಾಗುತ್ತದೆ (Acceptance of Negative and Positive Conersation is must in married life). ಆರಂಭದಲ್ಲಿ ಸಂಗಾತಿ ಏನೇ ಮಾಡಿದ್ರೂ ಅದನ್ನು ಪಾಸಿಟಿವ್ ಆಗಿ ನೋಡುವ ಸಂಗಾತಿ ದಿನ ಕಳೆದಂತೆ ಬದಲಾಗ್ತಾನೆ. ಆತನ ದೃಷ್ಟಿಕೋನ ಬದಲಾಗಲು ಶುರುವಾಗುತ್ತದೆ. ಸಂಗಾತಿ ಅದೆಷ್ಟೆ ಒಳ್ಳೆಯದು ಮಾಡಿದ್ರೂ ಆತನ ಕೆಟ್ಟ ಕೆಲಸ, ಅಭ್ಯಾಸ ಮಾತ್ರ ಕಣ್ಣಿಗೆ ಕಾಣಲು ಶುರುವಾಗುತ್ತದೆ. ಯಾವುದೇ ಸಂಬಂಧ ಗಟ್ಟಿಯಾಗಿ ಮತ್ತು ಸಂತೋಷವಾಗಿರಲು ಇಬ್ಬರೂ ಒಂದಾಗಿ ನಡೆಯಬೇಕು. ಪರಸ್ಪರ ತಿಳುವಳಿಕೆ, ವಿಶ್ವಾಸ ಮತ್ತು ಪ್ರೀತಿಯನ್ನು ಹೊಂದಿರಬೇಕು. ಮಾತಿನ ಮೂಲಕ ಅನೇಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಇಬ್ಬರ ಮಧ್ಯೆ ಸಣ್ಣದೊಂದು ಸಮಸ್ಯೆ ಕಾಣಿಸಿಕೊಳ್ತಿದೆ ಎಂದಾಗ ಕುಳಿತು, ಏನಾಗ್ತಿದೆ ಎಂಬುದನ್ನು ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಅನೇಕ ಬಾರಿ ಈ ಮಾತೇ ಸಂಬಂಧವನ್ನು ಮತ್ತಷ್ಟು ಹದಗೆಡಿಸುತ್ತದೆ. ಇಬ್ಬರ ಮಧ್ಯೆ ಸಣ್ಣದಾಗಿದ್ದ ಬಿರುಕು ದೊಡ್ಡ ಕಂದಕವಾಗಲು ಕಾರಣವಾಗುತ್ತದೆ. ಪ್ರೀತಿಯಲ್ಲಿರುವ ವ್ಯಕ್ತಿಗಳು ಕೆಲ ವಿಷ್ಯಗಳನ್ನು ತಿಳಿದಿರಬೇಕು. ಅಪ್ಪಿತಪ್ಪಿಯೂ ಆ ವಿಷ್ಯಗಳು ತಮ್ಮ ಬಾಯಿಂದ ಬರದಂತೆ ನೋಡಿಕೊಳ್ಬೇಕು.

ಸುಖ ದಾಂಪತ್ಯ (Marriage) ದಲ್ಲಿ ಬರ್ಬಾರದು ಈ ಮಾತು : 
ಮಾಜಿ ಸಂಗಾತಿ ಬಗ್ಗೆ ಮಾತು:
ಇಬ್ಬರು ಸುಖ ಸಂಸಾರ (Family) ನಡೆಸುತ್ತಿದ್ದೀರಿ ಎಂದಾದ್ರೆ ಅಪ್ಪಿತಪ್ಪಿಯೂ ಮಾಜಿಗಳ ಬಗ್ಗೆ ಮಾತನಾಡಲು ಹೋಗ್ಬೇಡಿ. ನಿಮ್ಮ ಮಾಜಿಗಳ ಬಗ್ಗೆ ಸಂಗಾತಿಗೆ ಮೊದಲೇ ವಿಷ್ಯ ತಿಳಿಸಿದ್ರೂ, ಅವರಿಗೆ ನಿಮ್ಮ ಮಾಜಿ ತಿಳಿದಿದ್ದರೂ ನೀವು ಈಗ ಅವರ ಬಗ್ಗೆ ಹೇಳುವ ಅಗತ್ಯವಿಲ್ಲ. ಇದು ನಿಮ್ಮ ಸಂಗಾತಿಯನ್ನು ನೋಯಿಸುತ್ತದೆ. ನೀವಿನ್ನೂ ಅವರ ನೆನಪಿನಿಂದ ಹೊರಗೆ ಬಂದಿಲ್ಲ ಎನ್ನುವ ಭಾವನೆ (Feeling) ಅವರಿಗೆ ಬರುತ್ತದೆ. ಇದು ಅವರು ನಿಮ್ಮ ಬಗ್ಗೆ ತಪ್ಪಾಗಿ ತಿಳಿಯಲು ದಾರಿ ಮಾಡಬಹುದು. ನಿಮ್ಮ ಮಾಜಿ ಬಗ್ಗೆ ಕೆಟ್ಟದಿರಲಿ ಇಲ್ಲ ಒಳ್ಳೆಯ ಮಾತಿರಲಿ ಯಾವುದನ್ನೂ ಸಂಗಾತಿ ಮುಂದೆ ಹೇಳದಿರುವುದು ಒಳ್ಳೆಯದು. ಹೋಲಿಕೆಯಂತೂ ಅನಗತ್ಯ. 

Latest Videos

16 ದೇಶ, 59 ದಿನ ಡ್ರೈವಿಂಗ್; ತಾಯಿ ಭೇಟಿಗೆ ಲಂಡನ್‌ನಿಂದ ಮುಂಬೈಗೆ ಕಾರಿನಲ್ಲಿ ಬಂದ ಮಗ!

ಕುಟುಂಬದ ಬಗ್ಗೆ ಕೆಟ್ಟ ಮಾತು : ಕುಟುಂಬ ಅಂದ್ಮೇಲೆ ಅಲ್ಲಿ ಭಿನ್ನ ವ್ಯಕ್ತಿತ್ವದ ಜನರಿರ್ತಾರೆ. ಎಲ್ಲರೂ ನಿಮ್ಮಂತೆ ಇರಲು ಸಾಧ್ಯವಿಲ್ಲ. ಈ ವಾಸ್ತವವನ್ನು ನೀವು ಅರಿತಿರಬೇಕು. ಮಾತು ಮಾತಿಗೂ ಸಂಗಾತಿ ಕುಟುಂಬದ ಬಗ್ಗೆ ಮಾತನಾಡಿದ್ರೆ ಅವರಿಗೆ ನೋವಾಗುತ್ತದೆ. ಕುಟುಂಬಸ್ಥರನ್ನು ಅವಮಾನಿಸುವ ಮಾತು ಸಂಗಾತಿಗೆ ನಿಮ್ಮ ಬಗ್ಗೆ ಕೆಟ್ಟ ಭಾವನೆ ಬರುವಂತೆ ಮಾಡುತ್ತದೆ. ಕುಟುಂಬಸ್ಥರ ನ್ಯೂನ್ಯತೆಯನ್ನು ಎತ್ತಿ ಹೇಳುವ ಬದಲು ಎಲ್ಲರನ್ನೂ ಗೌರವಿಸಿ, ಹೊಂದಾಣಿಕೆಯಿಂದ ಜೀವನ ನಡೆಸುವುದು ಮುಖ್ಯ. 

ಸಂಗಾತಿ ಬಗ್ಗೆ ಮಾತನಾಡುವಾಗ ಎಚ್ಚರ : ಸಂಗಾತಿಯ ಎಲ್ಲ ಸ್ವಭಾವ, ವರ್ತನೆ, ಚಟ ನಿಮಗೆ ಇಷ್ಟವಾಗ್ಬೇಕೆಂದೇನಿಲ್ಲ. ಹಾಗಂತ ಅದನ್ನು ಗೇಲಿ ಮಾಡುವ ಅಗತ್ಯವಿಲ್ಲ. ಅವರ ತೂಕ, ಸೌಂದರ್ಯ, ಅಭ್ಯಾಸಗಳು ನಿಮಗೆ ಇಷ್ಟವಿಲ್ಲ ಎಂದಾಗ ಶಾಂತವಾಗಿ ಕುಳಿತು ಬದಲಾವಣೆಗೆ ಸಲಹೆ ನೀಡಬಹುದೇ ವಿನಃ ಅದನ್ನೇ ಬಂಡವಾಳ ಮಾಡಿಕೊಂಡು ಕಾಲೆಳೆಯುವ ಕೆಲಸಕ್ಕೆ ಹೋಗ್ಬೇಡಿ. ನೀವು ಮಾಡುವ ಈ ತಮಾಷೆ ಅವನ್ನು ಘಾಸಿಕೊಳಿಸಬಹುದು.

Viral : ಕೊಟ್ಟ ಮಾತು ತಪ್ಪಿದ ಬಾಯ್ ಫ್ರೆಂಡ್…ಜಡ್ಜ್ ಮೊರೆ ಹೋದ ಹುಡುಗಿ… ಪ್ರಕರಣ ನೋಡಿ ಬೆರಗಾದ ನೆಟ್ಟಿಗ

ಸ್ನೇಹಿತರ ಅಭಿಪ್ರಾಯವನ್ನು ಸಂಗಾತಿ ಮುಂದಿಡುವ ಅಗತ್ಯವಿಲ್ಲ : ನಿಮ್ಮ ಸ್ನೇಹಿತರಿಗೆ ನಿಮ್ಮ ಸಂಗಾತಿ ಇಷ್ಟವಿಲ್ಲದೆ ಇರಬಹುದು. ಅವರ ಅಭ್ಯಾಸ, ಮಾತಿನ ಬಗ್ಗೆ ನಿಮ್ಮ ಮುಂದೆ ಅವರು ಸಾಕಷ್ಟು ಮಾತನಾಡಿರಬಹುದು. ಅದನ್ನೆಲ್ಲ ನೀವು ನಿಮ್ಮ ಸಂಗಾತಿಗೆ ಹೇಳುವ ಅಗತ್ಯವಿಲ್ಲ. ಇದ್ರಿಂದ ನಿಮ್ಮಿಬ್ಬರ ಜೀವನ ಹಾಳಾಗುತ್ತದೆಯೇ ವಿನಃ ಸ್ನೇಹಿತರಿಗೆ ಇದ್ರಿಂದ ನಷ್ಟವಿಲ್ಲ. ಸ್ನೇಹಿತರ ಮಾತನ್ನು ಸಂಗಾತಿಗೆ ಹೇಳುವ ಬದಲು ನಿಮ್ಮಲ್ಲಿಯೇ ಬಚ್ಚಿಡಿ. 

click me!