ವಿಮಾನ ನಿಲ್ದಾಣಕ್ಕೆ ಬಿಡಲು ಬಾರದ ಲವರ್, ಮಾತು ತಪ್ಪಿದವನ ವಿರುದ್ಧ ಮಹಿಳೆ ದೂರು!

By Roopa HegdeFirst Published Jun 24, 2024, 11:19 AM IST
Highlights

ಪ್ರೀತಿಯಲ್ಲಿ ಮೋಸವಾದ್ರೆ ರೂಮ್ ಗೆ ಬಂದು ಅಳೋರನ್ನು ನೋಡಿದ್ದೀರಿ. ಆದ್ರೆ ಈ ಹುಡುಗಿ ಸ್ವಲ್ಪ ಭಿನ್ನವಾಗಿದ್ದಾಳೆ. ಬಾಯ್ ಫ್ರೆಂಡ್ ಮಾಡಿದ ಈ ಒಂದು ಕೆಲಸಕ್ಕೆ ಕೋಪಗೊಂಡು ಕೋರ್ಟ್ ಮೊರೆ ಹೋಗಿದ್ದಾಳೆ. ಅದೇನು ಅಂತಾ ನೀವೇ ಓದಿ.
 

ಪ್ರೀತಿಸುವ ವ್ಯಕ್ತಿ ಜೊತೆ ಸಣ್ಣಪುಟ್ಟ ಜಗಳ, ಗಲಾಟೆಗಳು ಸಾಮಾನ್ಯ. ಪ್ರತಿಯೊಂದು ಸಂಬಂಧದಲ್ಲಿ ಒಂದಿಷ್ಟು ನಿರೀಕ್ಷೆಗಳಿರುತ್ತವೆ. ಪ್ರೀತಿಸುವ  ವ್ಯಕ್ತಿ ಕೆಲವೊಂದು ಜವಾಬ್ದಾರಿ ಹೊತ್ತು, ತಮ್ಮ ಆಸೆ, ಕನಸಿಗೆ ನೆರವಾಗಬೇಕೆಂದು ಸಂಗಾತಿ ಬಯಸುತ್ತಾರೆ. ಆದ್ರೆ ಅವರ ಭರವಸೆಯನ್ನು ಸಂಗಾತಿ ಈಡೇರಿಸದೆ ಹೋದಾಗ ಕಿತ್ತಾಟ, ಮನಸ್ತಾಪಗಳಾಗ್ತಿರುತ್ತವೆ. ದಾಂಪತ್ಯದಲ್ಲಿ ಇಂಥ ಗಲಾಟೆ ವಿಕೋಪಕ್ಕೆ ಹೋದಾಗ ಜನರು ಕೋರ್ಟ್ ಮೊರೆ ಹೋಗ್ತಾರೆ. ನ್ಯಾಯ ಕೊಡಿಸುವಂತೆ ಕೋರ್ಟ್ ಗೆ ಅರ್ಜಿ ಸಲ್ಲಿಸ್ತಾರೆ. ಇಲ್ಲವೆ ವಿಚ್ಛೇದನಕ್ಕೆ ಮುಂದಾಗ್ತಾರೆ. ಆದ್ರೆ ಪ್ರೀತಿಸುವ ವೇಳೆ ಮೋಸವಾದ್ರೆ ಅದನ್ನು ಕೋರ್ಟ್ ವರೆಗೆ ತೆಗೆದುಕೊಂಡು ಹೋದ ಪ್ರಕರಣಗಳು ತುಂಬಾ ಕಡಿಮೆ. ಮದುವೆ ಆಗ್ತೇನೆಂದು ಮೋಸ ಮಾಡಿ ಮಹಿಳೆ ಗರ್ಭ ಧರಿಸುವಂತೆ ಮಾಡಿದ ಕೆಲ ಪ್ರಕರಣಗಳು ಮಾತ್ರ ಕೋರ್ಟ್ ನಲ್ಲಿ ಇತ್ಯರ್ಥವಾದದ್ದಿದೆ. 

ಹುಡುಗ ಮೋಸ ಮಾಡಲಿ ಇಲ್ಲ ಹುಡುಗಿ, ಪ್ರೀತಿ (Love) ಸುವ ವೇಳೆ ಮೋಸವಾದಾಗ ಮೋಸ ಹೋದವರು ಕಣ್ಣೀರು (Tears) ಹಾಕ್ತಾ, ಒತ್ತಡಕ್ಕೆ ಒಳಗಾಗಿ, ಒಳಗೊಳಗೇ ನೋವು ತಿನ್ನುತ್ತಾರೆಯೇ ವಿನಃ ಕೋರ್ಟ್ (Court) ಗೆ ಹೋಗೋದಿಲ್ಲ. ಆದ್ರೆ ಈ ಹುಡುಗಿ ಪ್ರಕರಣ ಭಿನ್ನವಾಗಿದೆ. ಹುಡುಗಿ ಪ್ರೇಮಿ ವಿರುದ್ಧ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾಳೆ. ಆಕೆಗೆ ಪ್ರೀತಿಯದಲ್ಲಿ ಮೋಸವಾಗ್ಲಿಲ್ಲ. ಪ್ರೀತಿಸಿದ ಹುಡುಗ ಆಕೆಯನ್ನು ಬಿಟ್ಟು ಹೋಗಿಲ್ಲ. ಬದಲು ಆತ ನೀಡಿದ್ದ ಭರವಸೆಯೊಂದನ್ನು ಮುರಿದಿದ್ದಾನೆ. ಇಷ್ಟಕ್ಕೆ ಕೋಪಗೊಂಡ ಹುಡುಗಿ ನ್ಯಾಯ ಕೊಡಿಸುವಂತೆ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾಳೆ. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಅರ್ಜಿ ವಜಾ ಮಾಡಿ ಹುಡುಗಿಯನ್ನು ನಿರಾಸೆಗೊಳಿಸಿದೆ.

Latest Videos

ಅದೇ ಫೇಕ್ ಐಡಿಯಿಂದ ನನಗೂ ಅಶ್ಲೀಲ ಮೆಸೇಜ್ ಬಂದಿತ್ತು; ಕಿರುತೆರೆ ನಟಿಯೊಬ್ಬರ ಆರೋಪ!

ಮೌಖಿಕ ಒಪ್ಪಂದ ಮುರಿದ ಪ್ರೇಮಿ : ಈ ಪ್ರಕರಣ ನಡೆದಿದ್ದು ನ್ಯೂಜಿಲೆಂಡ್‌ ನಲ್ಲಿ. ಹುಡುಗಿಯೊಬ್ಬಳು ತನ್ನ ಪ್ರೇಮಿ ವಿರುದ್ಧ ದೂರು ನೀಡಿದ್ದಾಳೆ. ಆತ ಪ್ರೀತಿಸಿ ಮೋಸ ಮಾಡಿದ್ದಾನೆ ಎಂದಲ್ಲ. ಮೌಖಿಕ ಒಪ್ಪಂದವನ್ನು ಮುರಿದಿದ್ದಾನೆ ಎಂಬ ಕಾರಣಕ್ಕೆ ಮೊಕದ್ದಮೆ ಸಲ್ಲಿಸಿದ್ದಾಳೆ. ಅಷ್ಟಕ್ಕೂ ಆಗಿದ್ದು ಏನೆಂದ್ರೆ, ಹುಡುಗಿ ಮ್ಯೂಜಿಕ್ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬೇರೆ ಊರಿಗೆ ಹೋಗ್ಬೇಕಿತ್ತು. ಆಕೆ ಬಾಯ್ ಫ್ರೆಂಡ್ ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡುವುದಾಗಿ ಭರವಸೆ ನೀಡಿದ್ದ. ಅಲ್ಲದೆ ಹುಡುಗಿ ಸಾಕಿದ್ದ ನಾಯಿಗಳನ್ನು ಎರಡು ದಿನ ನೋಡಿಕೊಳ್ಳೋದಾಗಿ ಹೇಳಿದ್ದ. ಆದ್ರೆ ಅಲ್ಲಿ ಆಗಿದ್ದೇ ಬೇರೆ. ಹುಡುಗ ಹೇಳಿದ ಸಮಯಕ್ಕೆ ಹುಡುಗಿ ಮನೆಗೆ ಬರಲಿಲ್ಲ. ಇದ್ರಿಂದಾಗಿ ಹುಡುಗಿಗೆ ಫ್ಲೈಟ್ ತಪ್ಪಿತ್ತು. ಮರುದಿನ ಫ್ಲೈಟ್ ಬುಕ್ ಮಾಡ್ಕೊಂಡು ಹುಡುಗಿ ಪ್ರಯಾಣ ಬೆಳೆಸುವ ಅನಿವಾರ್ಯತೆ ಬಂದಿತ್ತು. ಇದಕ್ಕಾಗಿ ಆಕೆ ದೊಡ್ಡ ಮೊತ್ತವನ್ನು ಖರ್ಚು ಮಾಡ್ಬೇಕಾಯ್ತು. 

ಬಾಯ್ ಫ್ರೆಂಡ್ ಈ ಕ್ರಮದಿಂದ ಬೇಸತ್ತ ಹುಡುಗಿ ಕೋರ್ಟ್ ಮೆಟ್ಟಿಲೇರುವ ನಿರ್ಧಾರಕ್ಕೆ ಬಂದಿದ್ದಳು. ಆಕೆ ತನ್ನ ಬಾಯ್ ಫ್ರೆಂಡ್ ಮೌಖಿಕ ಒಪ್ಪಂದವನ್ನು ಮುರಿದಿದ್ದಾನೆ. ಇದ್ರಿಂದ ನನಗೆ ತುಂಬ ನಷ್ಟವಾಗಿದೆ ಎಂದು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಳು. ಆಕೆ ಅರ್ಜಿ ಪ್ರಕಾರ, ಕಳೆದ ಆರು ವರ್ಷಗಳಿಂದ ಅವರಿಬ್ಬರು ರಿಲೇಶನ್ಶಿಪ್ ನಲ್ಲಿರೋದು ಸ್ಪಷ್ಟವಾಗುತ್ತದೆ.

ಅಪ್ಪು ಸಾವಿನ ಹಿಂದಿನ ರಾತ್ರಿ, ರಮೇಶ್ ಅರವಿಂದ್ ಜೊತೆಗಿನ ಚರ್ಚೆಯಲ್ಲಿ ಬುದ್ಧ ಬಂದಿದ್ದು ಯಾಕೆ?

ಹುಡುಗಿ ಅರ್ಜಿ ವಿಚಾರಣೆಯನ್ನು ಕೈಗೊಂಡ ಕೋರ್ಟ್ ಮುಂದೆ ಹುಡುಗ ಯಾವುದೇ ಹೇಳಿಕೆ ನೀಡಲಿಲ್ಲ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಹುಡುಗಿಗೆ ನಿರಾಶೆ ಮಾಡಿದೆ. ಇಬ್ಬರ ಮಧ್ಯೆ ಯಾವುದೇ ಕಾನೂನು ಸಂಬಂಧವಿಲ್ಲ. ಹಾಗಾಗಿ ಯಾವುದೇ ಒತ್ತಡ ಹೇರಲು ಸಾಧ್ಯವಾಗೋದಿಲ್ಲ ಎನ್ನುವ ಮೂಲಕ ಹುಡುಗಿ ಅರ್ಜಿಯನ್ನು ವಜಾ ಮಾಡಿದೆ. ಹುಡುಗಿ ಕೆಲಸ ನೋಡಿದ ಅನೇಕರು ನಗ್ತಿದ್ದಾರೆ. ಮೌಖಿಕ ಒಪ್ಪಂದ ಮುರಿದ ಎನ್ನುವ ಕಾರಣಕ್ಕೆ ಕೋರ್ಟ್ ಮೊರೆ ಹೋಗೋದಾದ್ರೆ ಪ್ರತಿ ದಿನ ನಾಲ್ಕೈದು ಬಾರಿ ನಾವು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಬೇಕಾಗಿತ್ತು ಎಂದಿದ್ದಾರೆ.

click me!