ಕಹಿ ಅನಿಸುತ್ತಿರುವ ಸಂಬಂಧಕ್ಕೆ ಸಿಹಿ ನೀಡುವ ಅಭ್ಯಾಸಗಳಿವು!

By Suvarna News  |  First Published Jun 18, 2020, 5:21 PM IST

ಸಂಬಂಧದ ಆರಂಭದಷ್ಟೇ ಅದರ ನಂತರದ ವರ್ಷಗಳೂ ಸಿಹಿಯಾಗಿರುತ್ತವೆ ಎನ್ನಲಾಗದು. ಸಂಬಂಧ ಸಿಹಿ ಕಳೆದುಕೊಳ್ಳುತ್ತಿದೆ ಎಂಬ ಭಾವನೆ ಮೂಡುತ್ತಿದ್ದಂತೆ ಅಲ್ಲೊಂದಿಷ್ಟು ಸಿಹಿ ಹೆಚ್ಚಿಸುವ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು.


ಮದುವೆಯಾಗಿ ಕೆಲವು ವರ್ಷಗಳು ಕಳೆದ ಮೇಲೆ ಇಬ್ಬರ ನಡುವೆ ಮೊದಲಿನ ಪ್ರೀತಿ,ಆತ್ಮೀಯತೆ ಉಳಿದಿಲ್ಲ ಎಂಬ ಭಾವನೆ ಮೂಡಬಹುದು.ವಿವಾಹದ ಹೊಸತರಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಒಲಿಸಿಕೊಳ್ಳುವ, ತಿಳಿದುಕೊಳ್ಳುವ ಪ್ರಯತ್ನದಲ್ಲಿ ಇಬ್ಬರ ನಡುವೆ ಮಾತುಕತೆ, ಪ್ರೀತಿ ಹಂಚಿಕೆ, ಕಾಳಜಿ ಎಲ್ಲವೂ ಹೆಚ್ಚಿರುತ್ತೆ. ಆದ್ರೆ ದಾಂಪತ್ಯ ಒಂದು ಹಂತ ತಲುಪಿದ ಮೇಲೆ ಜವಾಬ್ದಾರಿಗಳು ಹೆಚ್ಚುತ್ತವೆ.ಅದ್ರಲ್ಲೂ ಮಕ್ಕಳಾಗುತ್ತಿದ್ದಂತೆ ಸಹಜವಾಗಿ ಪತ್ನಿಯ ಗಮನ ಅವರ ಪಾಲನೆ ಕಡೆಗೇ ಹೋಗುತ್ತದೆ.ಇದ್ರಿಂದ ಪತಿ-ಪತ್ನಿಗೆ ಮೊದಲಿನಷ್ಟು ಮುಕ್ತವಾಗಿ ಮಾತನಾಡಲು, ಕಾಲ ಕಳೆಯಲು ಸಾಧ್ಯವಾಗೋದಿಲ್ಲ. ಇಂಥದ್ದೇ ಕೆಲವು ಕಾರಣಗಳಿಂದ ಇಬ್ಬರ ನಡುವೆ ಕಣ್ಣಿಗೆ ಕಾಣಿಸದ ಅಂತರವೊಂದು ಸೃಷ್ಟಿಯಾಗಬಹುದು. ಸಂಬಂಧ ಸಡಿಲಗೊಳ್ಳುತ್ತಿರುವ ಅಥವಾ ಅಲ್ಲೇನೋ ಕೊರತೆಯಿದೆ ಎಂಬ ಭಾವನೆ ಮೂಡುತ್ತದೆ. ಇಂಥ ಸಮಯದಲ್ಲಿ ಭಾವನಾತ್ಮಕವಾಗಿ ಸಂಗಾತಿಗೆ ಹತ್ತಿರವಾಗಲು ಪ್ರಯತ್ನಿಸುವ ಮೂಲಕ ಸಂಬಂಧ ಬಲಪಡಿಸಬೇಕು. ಅದಕ್ಕೆ ಇಲ್ಲಿವೆ ಒಂದಿಷ್ಟು ಟಿಪ್ಸ್.

ವರ್ಷಗಳಾದ್ರೂ ಮಕ್ಕಳಾಗ್ಲಿಲ್ಲ, ಸೆಕ್ಸ್‌ ಮಾಡ್ಬೇಕೆಂದು ಈ ದಂಪತಿಗೆ ಗೊತ್ತೇ ಇರ್ಲಿಲ್ಲ!

Tap to resize

Latest Videos

ಮುಕ್ತ ಮಾತುಕತೆ
ದಾಂಪತ್ಯದಲ್ಲಿ ಜವಾಬ್ದಾರಿ ಅಥವಾ ಒತ್ತಡದ ಕಾರಣಕ್ಕೆ ನಿಮಗೆ ಸಂಗಾತಿ ಜೊತೆ ಹಿಂದಿನಷ್ಟು ಸಮಯ ಕಳೆಯಲು ಸಾಧ್ಯವಾಗದಿರಬಹುದು. ಆದ್ರೆ ಅವರಿಗೋಸ್ಕರ ದಿನದಲ್ಲಿ ಒಂದಿಷ್ಟು ಸಮಯ ಮೀಸಲಿಡಲು ಮರೆಯಬೇಡಿ. ಒಂದು ವೇಳೆ ಇಬ್ಬರೂ ಎದುರು ಬದುರು ಕುಳಿತು ಮಾತನಾಡುವಷ್ಟು ಸಮಯ ಸಿಗೋದಿಲ್ಲ ಅಂದ್ರೆ ಫೋನ್‍ನಲ್ಲಾದ್ರೂ ಮಾತನಾಡಿ. ನಿಮ್ಮ ಮನಸ್ಸಿನಲ್ಲಿರುವ ಆತಂಕಗಳು, ಕನಸುಗಳು, ನೆನಪುಗಳನ್ನು ಮುಕ್ತವಾಗಿ ಅವರ ಮುಂದೆ ಹರವಿ ಬಿಡಿ. ನೀವು ಅವರಿಂದ ಏನನ್ನೂ ಮುಚ್ಚಿಡುತ್ತಿಲ್ಲ ಎಂಬುದನ್ನು ಮನವರಿಕೆ ಮಾಡಿಸಿ. ಹೀಗೆ ಮಾಡೋದ್ರಿಂದ ಅವರು ಕೂಡ ಮನಸ್ಸು ಬಿಚ್ಚಿ ಮಾತಾಡುತ್ತಾರೆ. ಇದ್ರಿಂದ ನಿಧಾನವಾಗಿ ನಿಮ್ಮ ಮನಸ್ಸಿನಲ್ಲಿ ಮನೆ ಮಾಡಿದ್ದ ಸಂಶಯ, ಆತಂಕಗಳು ಕೂಡ ದೂರವಾಗುತ್ತವೆ.

ಕಾಳಜಿ ತೋರ್ಪಡಿಸಿ
ಪ್ರೀತಿಗೂ ಕಾಳಜಿಗೂ ಅವಿನಾಭಾವ ಸಂಬಂಧ. ಪ್ರೀತಿ ಹುಟ್ಟೋದೆ ಕಾಳಜಿಯಿಂದ. ನೀವು ನಿಮ್ಮ ಸಂಗಾತಿ ಮೇಲೆ ಎಷ್ಟು ಕಾಳಜಿ ತೋರುತ್ತೀರೋ ನಿಮ್ಮ ಮೇಲೆ ಅವರಿಗೆ ಅಷ್ಟೇ ಪ್ರೀತಿ ಹೆಚ್ಚುತ್ತೆ. ಮಾತಿನ ಮೂಲಕ ಭಾವನೆಗಳನ್ನು ವ್ಯಕ್ತಪಡಿಸೋದ್ರಲ್ಲಿ ನೀವು ವೀಕ್ ಆಗಿದ್ರೆ ಸಂಗಾತಿಗೆ ಕಾಳಜಿ ತೋರುವ ಮೂಲಕ ನಿಮ್ಮ ಪ್ರೀತಿ ತೋರ್ಪಡಿಸಬಹುದು. 

ಅನುಮಾನ ಬಿಡಿ
ಒಂದು ಚಿಕ್ಕ ಅನುಮಾನ ಸಂಬಂಧದಲ್ಲಿ ದೊಡ್ಡ ಬಿರುಕನ್ನೇ ಮೂಡಿಸಬಲ್ಲದು. ಕಾರಣವಿಲ್ಲದೆ, ಸುಖಾಸುಮ್ಮನೆ ನಿಮ್ಮ ಸಂಗಾತಿ ಮೇಲೆ ಅನುಮಾನ ಪಡೋದನ್ನು ಬಿಡಿ. ಪ್ರತಿ ವಿಷಯವನ್ನು ಬಿಡಿಸಿ ಕೇಳೋದು, ಎಲ್ಲಿಗೆ ಹೋದ್ರೂ, ಎಲ್ಲಿಗೆ ಬಂದ್ರೂ  ಆ ಬಗ್ಗೆ ಪದೇಪದೆ ವಿಚಾರಣೆ ನಡೆಸೋದು ಎಂಥವರಿಗಾದ್ರೂ ಇರಿಸುಮುರಿಸು ಉಂಟು ಮಾಡುತ್ತೆ. ಇದೇ ಕಾರಣಕ್ಕೆ ಅವರು ನಿಮ್ಮಿಂದ ಕೆಲವೊಂದು ವಿಷಯಗಳನ್ನು ಮುಚ್ಚಿಡಬಹುದು. 

ಮನೆಮಂದಿಯೊಟ್ಟಿಗೆ ಕುಳಿತು ಊಟ ಮಾಡಿದ್ರೆ ಟೆನ್ಷನ್ ಮಾಯ!

ದೈಹಿಕ ಪ್ರೀತಿಯೂ ಇರಲಿ
ಸಂಬಂಧದಲ್ಲಿ ದೈಹಿಕ ಆಕರ್ಷಣೆ, ಪ್ರೀತಿ ಎರಡೂ ಮುಖ್ಯ. ದೈಹಿಕ ಪ್ರೀತಿ ಎಂದ ಕ್ಷಣ ಅದು ಸೆಕ್ಸ್ ಎಂದೇ ಭಾವಿಸಬೇಕಿಲ್ಲ. ಆಗಾಗ ಸಂಗಾತಿಯನ್ನು ತಬ್ಬಿಕೊಳ್ಳೋದು ಇಲ್ಲವೆ ಕಿಸ್ ನೀಡೋದು ಸಂಬಂಧದ ಗಾಢತೆಯನ್ನು ಹೆಚ್ಚಿಸುತ್ತೆ. ಸಂಗಾತಿ ಏನೋ ಒತ್ತಡದಲ್ಲಿರುವಾಗ ಅವರ ಭುಜದ ಮೇಲೆ ನೀವಿಡುವ ಕೈ ಅಥವಾ ಅವರ ಕೈಗಳನ್ನು ನೀವು ಗಟ್ಟಿಯಾಗಿ ಹಿಡಿದುಕೊಳ್ಳೋದು ಅವರಲ್ಲಿರುವ ಅಭದ್ರತಾ ಭಾವನೆಯನ್ನು ತಗ್ಗಿಸುತ್ತೆ. ಇಂಥ ಚಿಕ್ಕಪುಟ್ಟ ದೈಹಿಕ ಸ್ಪರ್ಶ ಸಂಬಂಧ ಗಟ್ಟಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತೆ.

ಟೀಕಿಸುವ ಪ್ರವೃತ್ತಿಗೆ ಕಡಿವಾಣ ಹಾಕಿ
ಸಂಗಾತಿಯ ವರ್ತನೆ, ಕಾರ್ಯಗಳನ್ನು ಟೀಕಿಸುವ ಅಭ್ಯಾಸ ನಿಮಗಿದ್ರೆ ಅದನ್ನು ಆದಷ್ಟು ಕಡಿಮೆ ಮಾಡಿ. ವರ್ತನೆಗಳನ್ನು ಜಡ್ಜ್ ಮಾಡುವ ಪ್ರವೃತ್ತಿ ಇಬ್ಬರ ಸಂಬಂಧದ ಮೇಲೆ ಪ್ರಭಾವ ಬೀರುತ್ತದೆ. ಅಗತ್ಯ ಸಂದರ್ಭಗಳಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ, ಆದ್ರೆ ಟೀಕಾಕಾರರಾಗಬೇಡಿ.

ಸಂಬಂಧ ಹಳಿ ತಪ್ಪುತ್ತಿದ್ದಾಗ ಎಚ್ಚರಿಸುವ ರೆಡ್ ಫ್ಲ್ಯಾಗ್‌ಗಳು

ಅವರ ಕುಟುಂಬವನ್ನೂ ಗೌರವಿಸಿ
ಗಂಡ-ಹೆಂಡ್ತಿ ಇಬ್ಬರೂ ಒಬ್ಬರ ಕುಟುಂಬವನ್ನು ಇನ್ನೊಬ್ಬರು ಗೌರವಿಸುವ, ಪ್ರೀತಿಸುವ ಗುಣ ಬೆಳೆಸಿಕೊಳ್ಳೋದು ಅಗತ್ಯ. ಸಂಗಾತಿಯ ಕುಟುಂಬ ವರ್ಗದವರನ್ನು ಸದಾ ಟೀಕಿಸುತ್ತಿದ್ದರೆ, ಅವರಿಗೆ ನಿಮ್ಮ ಮೇಲಿನ ಗೌರವ ಕಡಿಮೆಯಾಗಬಹುದು.

click me!