ಸಂಭೋಗದ ವೇಳೆ ಸುರಕ್ಷತೆ ಬಹಳ ಮುಖ್ಯ. ಸೇಫ್ಟಿ ಬಯಸುವವರು ಕಾಂಡೋಮ್ ಗೆ ಆದ್ಯತೆ ನೀಡ್ತಾರೆ. ಆದ್ರೆ ಕಾಂಡೋಮ್ ಬಳಕೆ ಬಗ್ಗೆ ಸರಿಯಾದ ಮಾಹಿತಿಯಿಲ್ಲದೆ ಯಡವಟ್ಟು ಮಾಡಿಕೊಳ್ತಾರೆ.
ಶಾರೀರಿಕ ಸಂಬಂಧ (Sex) ದಾಂಪತ್ಯದಲ್ಲಿ ಬಹಳ ಮುಖ್ಯ. ಹಾಗೆಯೇ ಲೈಂಗಿಕ ಸುರಕ್ಷತೆ (Safety) ಬಗ್ಗೆಯೂ ಗಮನ ನೀಡಬೇಕಾಗುತ್ತದೆ. ಶಾರೀರಿಕ ಸಂಬಂಧ ಬೆಳೆಸುವ ವೇಳೆ ಕಾಂಡೋಮ್ (Condom) ಬಳಕೆ ಅತ್ಯಗತ್ಯ. ಕಾಂಡೋಮ್ ಅನಗತ್ಯ ಗರ್ಭಧಾರಣೆ (Pregnancy) ತಡೆಯುವ ಜೊತೆಗೆ ಎಸ್ ಟಿಡಿ (STD)ಯನ್ನು ತಡೆಗಟ್ಟಲು ಪ್ರಮುಖ ಪಾತ್ರವಹಿಸುತ್ತದೆ. ಕೆಲವು ಬಾರಿ ಕಾಂಡೋಮ್ ಬಳಕೆ ನಂತ್ರವೂ ಗರ್ಭಧಾರಣೆ ಅಥವಾ ಲೈಂಗಿಕ ಖಾಯಿಲೆ ಕಾಡುತ್ತದೆ. ಇದಕ್ಕೆ ತಪ್ಪಾದ ಕಾಂಡೋಮ್ ಬಳಕೆ ಕಾರಣವಾಗುತ್ತದೆ. ಕಾಂಡೋಮ್ ಹರಿದುಹೋಗುವುದು ಅಥವಾ ಮಧ್ಯದಲ್ಲಿ ಕಟ್ ಆಗುವುದ್ರಿಂದ ಸಮಸ್ಯೆಯಾಗುತ್ತದೆ. ಯಾವ ದಂಪತಿಯೂ ಇದನ್ನು ಬಯಸುವುದಿಲ್ಲ. ಕಾಂಡೋಮ್ ಹರಿಯಲು ಕಾರಣವೇನು ಎಂಬುದನ್ನು ಮೊದಲು ತಿಳಿಯಬೇಕು. ಅದನ್ನು ಸರಿಯಾಗಿ ಬಳಸಿದಾಗ ಸಮಸ್ಯೆಯಾಗುವುದಿಲ್ಲ. ಸುರಕ್ಷತೆ ಜೊತೆಗೆ ಲೈಂಗಿಕ ಆನಂದವನ್ನು ಯಾವುದೇ ಭಯವಿಲ್ಲದೆ ಪಡೆಯಬಹುದು.
ಕಾಂಡೋಮ್ ಒಡೆಯದಂತೆ/ಹರಿಯದಂತೆ ಹೀಗೆ ಕಾಪಾಡಿ
ಕಾಂಡೋಮ್ ಇಡುವ ಸ್ಥಳ ಬಹಳ ಮುಖ್ಯ : ಕಾಂಡೋಮನ್ನು ಎಲ್ಲೆಂದರಲ್ಲಿ ಇಡುವುದು ಸೂಕ್ತವಲ್ಲ. ಅದನ್ನು ಸರಿಯಾದ ಸ್ಥಳದಲ್ಲಿ ಇಡಬೇಕಾಗುತ್ತದೆ. ನೀವು ತಪ್ಪಾದ ಜಾಗದಲ್ಲಿ ಕಾಂಡೋಮ್ ಇಟ್ಟರೆ ಅದು ಒಡೆಯುವ ಅಪಾಯವಿರುತ್ತದೆ. ಯಾವಾಗ್ಲೂ ಕಾಂಡೋಮನ್ನು ಸೂರ್ಯನ ಕಿರಣ ನಾಟುವ ಜಾಗದಲ್ಲಿ ಇಡಬಾರದು. ಅದನ್ನು ಸ್ವಲ್ಪ ಕತ್ತಲು ಹಾಗೂ ತಂಪಾದ ಸ್ಥಳದಲ್ಲಿ ಇಡಬೇಕು. ಹಾಗಂತ ಹೆಚ್ಚು ತಣ್ಣನೆಯ ಜಾಗದಲ್ಲಿ ಕಾಂಡೋಮ್ ಇಡಬೇಡಿ. ಇದರಿಂದ ಕಾಂಡೋಮ್ ದುರ್ಬಲಗೊಳ್ಳುತ್ತದೆ ಮತ್ತು ಬಳಕೆಯ ಸಮಯದಲ್ಲಿ ಹರಿಯುವ ಅಪಾಯವಿರುತ್ತದೆ.
RELATIONSHIP TIPS: ಪಾರ್ಟ್‌ನರ್ ಪೋಷಕರನ್ನು ಭೇಟಿಯಾಗ್ತಿದ್ದೀರಾ ? ಸ್ಪಲ್ಪ ತಯಾರಿ ಮಾಡ್ಕೊಳ್ಳಿ
ತೈಲ ಆಧಾರಿತ ಲ್ಯೂಬ್ ಬಳಕೆ : ಲೈಂಗಿಕ ಸಮಯದಲ್ಲಿ ಕೆಲವರು ಶುಷ್ಕತೆ ಸಮಸ್ಯೆ ಎದುರಿಸುತ್ತಾರೆ. ಆಗ ಲೂಬ್ರಿಕಂಟ್ ಬಳಕೆ ಮಾಡ್ತಾರೆ. ಲೂಬ್ರಿಕಂಟ್(lubricant) ರೂಪದಲ್ಲಿ ವ್ಯಾಸಲೀನ್, ತೆಂಗಿನ ಎಣ್ಣೆ ಅಥವಾ ಲೋಷನ್ ಬಳಸಬಾರದು. ಈ ತೈಲ-ಆಧಾರಿತ ಲ್ಯೂಬ್ರಿಕಂಟ್, ಲ್ಯಾಟೆಕ್ಸ್ ಕಾಂಡೋಮ್‌ಗಳನ್ನು ಚುಚ್ಚಬಹುದು. ಇದರಿಂದ ಕಾಂಡೋಮ್ ಹರಿಯುವ ಅಪಾಯವಿರುತ್ತದೆ.
ಅತಿ ಸುರಕ್ಷತೆಗಾಗಿ ಎರಡೆರಡು ಕಾಂಡೋಮ್ ಬಳಕೆ : ಕಾಂಡೋಮ್ ಬಳಸುತ್ತಿರುವವರೂ ಅನೇಕ ಬಾರಿ ತಪ್ಪು ಮಾಡ್ತಾರೆ. ಕಾಂಡೋಮ್ ಬಗ್ಗೆ ಸರಿಯಾದ ಜ್ಞಾನವಿಲ್ಲದೆ ಯಡವಟ್ಟು ಮಾಡಿಕೊಳ್ತಾರೆ. ಕಾಂಡೋಮ್ ಸುರಕ್ಷಿತ ಎನ್ನುವ ಕಾರಣಕ್ಕೆ ಎರಡೆರಡು ಕಾಂಡೋಮನ್ನು ಒಂದೇ ಬಾರಿ ಬಳಸ್ತಾರೆ. ಒಂದೇ ಬಾರಿ ಎರಡು ಕಾಂಡೋಮ್ ಬಳಕೆ ಮಾಡಬಾರದು. ಎರಡು ಕಾಂಡೋಮ್ ಬಳಸಿದ್ರೆ ಪರಸ್ಪರ ಘರ್ಷಣೆಯಿಂದಾಗಿ ಅವು ಕತ್ತರಿಸಲ್ಪಡುತ್ತವೆ. ಇದು ಸುರಕ್ಷತೆ ಬದಲು ಸಮಸ್ಯೆ ತಂದೊಡ್ಡುತ್ತದೆ.
ತಪ್ಪಾದ ಬಳಕೆ : ಮೊದಲ ಬಾರಿಗೆ ಕಾಂಡೋಮ್ ಬಳಸುತ್ತಿದ್ದರೆ, ಅದನ್ನು ಹೇಗೆ ಬಳಸಬೇಕು ಎಂಬುದನ್ನು ಮೊದಲು ಕಲಿಯಿರಿ. ಏಕೆಂದರೆ ಅದರ ಬಳಕೆ ತಪ್ಪಾದ್ರೆ ಲೈಂಗಿಕ ಸಮಯದಲ್ಲಿ ತೊಂದರೆ ಉಂಟುಮಾಡಬಹುದು ಮತ್ತು ಸಂಭೋಗದ ವೇಳೆ ಸರಿಯಾದ ರಕ್ಷಣೆ ಸಿಗುವುದಿಲ್ಲ.
The Dumb Husband: ಪತ್ನಿಗೆ ಕೋಪ ಬಂದಿದೆ ಎಂದೇ ಗೊತ್ತಾಗದ ಈ ಆಸಾಮಿ ಜೊತೆ ಏಗೋದು ಕಷ್ಟ ಕಷ್ಟ!
ಶುಷ್ಕತೆ : ಸಂಗಾತಿಗೆ ಶುಷ್ಕತೆಯ ಸಮಸ್ಯೆ ಇದ್ದರೆ, ಖಂಡಿತವಾಗಿಯೂ ಲ್ಯೂಬ್ ಬಳಸಿ. ಖಾಸಗಿ ಅಂಗ ಶುಷ್ಕವಾಗಿದ್ದರೂ ಕಾಂಡೋಮ್ ಹರಿದು ಹೋಗುವ ಅಪಾಯವಿದೆ. ಒಣ ಪ್ರದೇಶವು ಹೆಚ್ಚು ಘರ್ಷಣೆಯನ್ನು ಉಂಟುಮಾಡುತ್ತದೆ. ಇದರಿಂದ ನೋವು ಕಾಡುತ್ತದೆ. ಹಾಗಾಗಿ ಸರಿಯಾದ ಲೂಬ್ರಿಕಂಟ್ ಬಳಕೆ ಮಾಡಿ.
ಗಾತ್ರ ಮತ್ತು ಕ್ವಾಲಿಟಿ : ನಿಮಗೆ ಸೂಕ್ತವೆನಿಸುವ ಕಾಂಡೋಮ್ ಖರೀದಿ ಮಾಡುವುದು ಕೂಡ ಬಹಳ ಮುಖ್ಯ. ತುಂಬಾ ಚಿಕ್ಕದಾಗಿದ್ದರೆ ಸಂಭೋಗದ ಸಮಯದಲ್ಲಿ ಬಿಗಿತದಿಂದಾಗಿ ಒಡೆಯಬಹುದು. ಹಾಗೆ ಕಡಿಮೆ ಗುಣಮಟ್ಟದ ಕಾಂಡೋಮ್ ಕೂಡ ಮಧ್ಯದಲ್ಲಿ ಹರಿಯವ ಅಪಾಯವಿದೆ. ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ ಕಂಪನಿಯಿಂದ ಕಾಂಡೋಮ್ ಖರೀದಿಸಿ. ಇದು ಇತರ ರೀತಿಯ ಸೋಂಕಿನಿಂದ ನಿಮ್ಮನ್ನು ರಕ್ಷಿಸುತ್ತದೆ. ಮಧ್ಯೆದಲ್ಲಿ ಹರಿಯುವ ಭಯವೂ ಇರುವುದಿಲ್ಲ.