ಮದ್ವೆಯಾದ್ಮೇಲೆ ಪ್ರೀತಿ ಹೆಚ್ಚಾಗಲು ಏನು ಮಾಡ್ಬೇಕು ಹೇಳ್ತಾರೆ ಜಯಾ ಕಿಶೋರಿ!

By Suvarna News  |  First Published Dec 8, 2023, 3:43 PM IST

ಮನಸ್ಸು ಮರ್ಕಟ. ಅದರಲ್ಲಿ ಮೂಡುವ ಪ್ರೀತಿಯನ್ನು ಸದಾ ನಿಮ್ಮ ಬಳಿಯೇ ಹಿಡಿದಿಟ್ಟುಕೊಳ್ಳಬೇಕು ಅಂದರೆ ನಿರಂತರ ಪ್ರಯತ್ನ ಮುಖ್ಯ. ಸಂಗಾತಿ ಮಧ್ಯೆ ಪ್ರೀತಿ ಬಲಗೊಳ್ಳಬೇಕು ಎಂದಾದ್ರೆ ಕೆಲ ಟಿಪ್ಸ್ ಪಾಲಿಸಿ.   
 


ಮನುಷ್ಯನಿಗೆ ಯಾವುದ್ರಲ್ಲೂ ತೃಪ್ತಿ ಸಿಗೋದಿಲ್ಲ. ಇನ್ನಷ್ಟು ಬೇಕು ಎನ್ನುವ ಭಾವನೆ ಸದಾ ಇರುತ್ತದೆ. ಕೆಲವೊಂದು ವಿಷ್ಯದಲ್ಲಿ ಇದು ಒಳ್ಳೆಯದಾದ್ರೂ ಮತ್ತೆ ಕೆಲವೊಂದು ವಿಷ್ಯ ಬಂದಾಗ ಇದು ಅಪಾಯಕಾರಿ. ಹೊಸದು ಕಂಡಾಗ ಅದನ್ನು ಪಡೆಯಲು ಹೋಗುವ ವ್ಯಕ್ತಿ ಹಳೆಯದನ್ನು ನಿರ್ಲಕ್ಷ್ಯಿಸುತ್ತಾನೆ. ಕೊನೆಯಲ್ಲಿ ಆತನಿಗೆ ಎರಡೂ ಸಿಗೋದಿಲ್ಲ. ಮನೆ ಬಲವಾಗಿರಬೇಕೆಂದ್ರೆ ಅಡಿಪಾಯ ಬಹಳ ಮುಖ್ಯವಾಗುತ್ತದೆ. ಅದೇ ರೀತಿ ದಾಂಪತ್ಯ ಗಟ್ಟಿಯಾಗಿರಬೇಕೆಂದ್ರೆ ಅಲ್ಲಿ ಪ್ರೀತಿಯ ಅಡಿಪಾಯ ಬಲವಾಗಿರಬೇಕು. 

ಈಗಿನ ದಿನಗಳಲ್ಲಿ ವಿಚ್ಛೇದನ (Divorce) ಪ್ರಕರಣಗಳು ಹೆಚ್ಚಾಗ್ತಿವೆ. ಪ್ರೀತಿಸಿ ವಾರಕ್ಕೆ ಜನರು ಬ್ರೇಕ್ ಅಪ್ (Break Up) ಮಾಡಿಕೊಳ್ತಿದ್ದಾರೆ. ದೀರ್ಘಕಾಲ ಪ್ರೀತಿ (Love) ಉಳಿಯೋದೇ ಅಪರೂಪ ಎನ್ನುವಂತಾಗಿದೆ. ಇದಕ್ಕೆ ಕಾರಣ ಜನರಲ್ಲಿ ಪ್ರೀತಿಯ ಅರ್ಥ ಬದಲಾಗಿರುವುದು. ಅನೇಕರು ಆಕರ್ಷಣೆಯನ್ನೇ ಪ್ರೀತಿ ಎಂದುಕೊಳ್ತಾರೆ. ಹಣ, ಸೌಂದರ್ಯಕ್ಕೆ ನೀಡುವ ಮಹತ್ವವನ್ನು ಭಾವನೆಗಳಿಗೆ ನೀಡೋದಿಲ್ಲ. ಹಾಗಾಗಿ ಕೆಲವೇ ದಿನಗಳಲ್ಲಿ ಇಷ್ಟಪಟ್ಟ ವ್ಯಕ್ತಿ ಬಳಿ ಇರುವ ಹಣ ಹಾಗೂ ಸೌಂದರ್ಯ ಕಡಿಮೆ ಎನ್ನಿಸಲು ಶುರುವಾಗುತ್ತದೆ. ಹೊಸ ವ್ಯಕ್ತಿ ಮೇಲೆ ಕಣ್ಣು ಹೊರಳುತ್ತದೆ. ನಿಮ್ಮ ಪ್ರೀತಿ, ದಾಂಪತ್ಯ ದೀರ್ಘಕಾಲ ಉಳಿಯಬೇಕು, ಇಬ್ಬರೂ ಸುಂದರ ಜೀವನ ನಡೆಸಬೇಕು ಅಂದ್ರೆ ಪ್ರೀತಿಯ ಅಡಿಪಾಯ ಬಲವಾಗಿರಬೇಕು. ಒಂದ್ವೇಳೆ ಸಂಗಾತಿ ಮಧ್ಯೆ ಪ್ರೀತಿಯ ಅಡಿಪಾಯ ಪ್ರಬಲವಾಗಿಲ್ಲವೆಂದ್ರೆ ನಾವದನ್ನು ಬಲಪಡಿಸಿಕೊಳ್ಳಲು ಸದಾ ಪ್ರಯತ್ನಿಸಬೇಕು. ಪ್ರೀತಿ, ದಾಂಪತ್ಯ ಎಂಬುದು ಒಂದು ದಿನದ ಮಾತಲ್ಲ. ಜೀವನ ಪರ್ಯಂತ ಅದನ್ನು ಗಟ್ಟಿಗೊಳಿಸುವ ಪ್ರಯತ್ನ ನಡೆಯಬೇಕಾಗುತ್ತದೆ. ಮೋಟಿವೇಶನಲ್ ಸ್ಪೀಕರ್ ಜಯ ಕಿಶೋರಿ ಅವರು ಪ್ರೀತಿಯ ಅಡಿಪಾಯವನ್ನು ಹೇಗೆ ಬಲಪಡಿಸೋದು ಎನ್ನುವ ಬಗ್ಗೆ ಹೇಳಿದ್ದಾರೆ.

Tap to resize

Latest Videos

ಮತ್ತೊಂದು ಮದ್ವೆಯಾದ ಅಪ್ಪನಿಗೇ ಬೇಡವಾದ ಹೆತ್ತ ಮಗ, ಒಂದೂ ಕ್ಷಣವೂ ಬಿಡುತ್ತಿಲ್ಲ ನಿರ್ಗತಿಕ ಶ್ವಾನ!

ಜಯ ಕಿಶೋರಿ ಪ್ರಕಾರ ಪ್ರೀತಿಯ ಅಡಿಪಾಯವನ್ನು ಹೀಗೆ ಬಲಪಡಿಸಿ : 

ಬಾಹ್ಯ ಸೌಂದರ್ಯಕ್ಕೆ ಮಹತ್ವ ನೀಡಬೇಡಿ : ಬಾಹ್ಯ ಸೌಂದರ್ಯ ನೋಡಿ ಪ್ರೀತಿಗೆ ಬೀಳಬಾರದು. ನಿಮ್ಮ ಬಣ್ಣ, ಸೌಂದರ್ಯ ನೋಡಿ ಪ್ರೀತಿ ಮಾಡುವ ವ್ಯಕ್ತಿ ನಿಜವಾಗಿ ನಿಮ್ಮನ್ನು ಪ್ರೀತಿಸಿರೋದಿಲ್ಲ. ನಿಮ್ಮ ಸೌಂದರ್ಯ ಕೆಲವೇ ತಿಂಗಳಲ್ಲಿ ಅವರಿಗೆ ಬೇಸರತರಿಸುತ್ತದೆ. ಇದ್ರಿಂದ ಸಂಬಂಧ ಮುರಿದು ಬೀಳುತ್ತದೆ. ಪ್ರೀತಿ ಆಂತರಿಕ ಸೌಂದರ್ಯಕ್ಕೆ ಸಂಬಂಧಿಸಿದ್ದೇ ಹೊರತು ಬಾಹ್ಯ ಸೌಂದರ್ಯಕ್ಕಲ್ಲ. ಬಾಹ್ಯ ಸೌಂದರ್ಯವನ್ನು ನೋಡಿ ನೀವು ವ್ಯಕ್ತಿಯನ್ನು ಪ್ರೀತಿಸಲು ಶುರು ಮಾಡಿದ್ರೆ ಅದನ್ನು ಪ್ರೀತಿ ಎನ್ನುವ ಬದಲು ಆಕರ್ಷಣೆ ಎನ್ನಬೇಕು. ಈ ಆಕರ್ಷಣೆ ಶಾಶ್ವತವಲ್ಲ ಎನ್ನುತ್ತಾರೆ ಜಯಾ ಕಿಶೋರಿ.

ಕುಲುಮೆಯಲ್ಲಿ ಬೆವರು ಹರಿಸಿದ ಆನಂದ್-ಚೈತ್ರಾ; ಬಳೆಗಾರರಾಗಿ ಮನೆಗೆ ಬಂದ ಚಿದಾನಂದ್-ಕವಿತಾ!

ಸಂಗಾತಿಯ ಈ ಅಭ್ಯಾಸಗಳನ್ನು ಇಷ್ಟಪಡಿ : ನಿಜವಾದ ಪ್ರೀತಿಯು ವ್ಯಕ್ತಿಯ ಅಭ್ಯಾಸ, ಆಲೋಚನೆ ಮತ್ತು ಮನಸ್ಥಿತಿಯಿಂದ ಬರುತ್ತದೆ. ಈ ವಿಷಯಗಳು ಯಾವಾಗಲೂ ಇಬ್ಬರನ್ನು ಸಂಪರ್ಕಿಸುತ್ತವೆ. ಇಬ್ಬರು ಹತ್ತಿರ ಬರಲು ಸಹಕಾರಿಯಾಗುತ್ತದೆ. ನಿಮ್ಮ ಸಂಗಾತಿಯ ಆಂತರಿಕ ವಿಷಯಗಳನ್ನು ನೀವು ಇಷ್ಟಪಟ್ಟಾಗ ಸಂಬಂಧವು ಸಮಯದೊಂದಿಗೆ ಹಳಸುವ ಬದಲು ಸುಂದರವಾಗುತ್ತದೆ. ಬಲ ಪಡೆಯುತ್ತದೆ. ಇಬ್ಬರ ಮಧ್ಯೆ ಪ್ರೀತಿ ಹೆಚ್ಚಾಗುತ್ತದೆ. ಇಬ್ಬರ ಮಧ್ಯೆ ಸಂಬಂಧ ಕೊನೆಯಾಗುವ ಪ್ರಶ್ನೆಯೇ ಬರೋದಿಲ್ಲ. ನಿಮ್ಮ ಸಂಗಾತಿ ಹವ್ಯಾಸ ಏನು, ಅವರ ಆಸಕ್ತಿ ಏನು ಎಂಬುದನ್ನು ಮೊದಲು ತಿಳಿಯಬೇಕು. ನಂತ್ರ ಅದನ್ನು ನೀವು ಅಳವಡಿಸಿಕೊಳ್ಳದೆ ಹೋದ್ರೂ ಅವರ ಅಭ್ಯಾಸ, ಹವ್ಯಾಸದ ಜೊತೆ ಅವರನ್ನು ಇಷ್ಟಪಡಲು ಶುರು ಮಾಡ್ಬೇಕು. 

ಪ್ರೀತಿ ಹೆಚ್ಚಾಗಲು ಹೀಗೆ ಮಾಡಿ : ಒಂದ್ವೇಳೆ ನಿಮ್ಮಿಬ್ಬರ ಮಧ್ಯೆ ಪ್ರೀತಿ ಕಡಿಮೆ ಆಗ್ತಿದೆ ಎಂಬ ಭಾವನೆ ಬಂದಾಗ ನೀವು ಎಚ್ಚೆತ್ತುಕೊಳ್ಳಬೇಕು. ಪ್ರೀತಿಯನ್ನು ಬಲಪಡಿಸುವ ಕೆಲಸ ಮಾಡಬೇಕು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು. ಸಂಗಾತಿ ಅರ್ಥವಾದಾಗ ಪ್ರೀತಿ ಹೆಚ್ಚಾಗುತ್ತದೆ ಎಂದು ಜಯ ಕಿಶೋರಿ ಹೇಳುತ್ತಾರೆ. 

click me!