ಒಂದೇ ವಿಷ್ಯವನ್ನು ನಾನಾ ತರದಲ್ಲಿ, ಗಂಟೆಗಟ್ಟಲೆ ಹೇಳ್ತಿದ್ದರೆ ಅಥವಾ ಕೇಳ್ತಿದ್ದರೆ ಬೋರ್ ಆಗುತ್ತೆ. ಅಲ್ಲಿಂದ ದೂರ ಹೋಗುವ ಮನಸ್ಸಾಗುತ್ತೆ. ಆದ್ರೆ ಈ ಮಾತು ಸಂಗಾತಿ ಬಾಯಿಂದ ಬರ್ತಿದ್ದರೆ ಅನಿವಾರ್ಯವಾಗಿ ಅಲ್ಲಿರಲೇಬೇಕು. ಆಗ ಏನ್ಮಾಡ್ಬೇಕು ಗೊತ್ತಾ?
ಒಬ್ಬ ವ್ಯಕ್ತಿ ಜೊತೆ ನೀವು ದೀರ್ಘಕಾಲ ವಾಸವಿದ್ರೆ ಅವರು ಸಾಮಾರ್ಥ್ಯ, ದೌರ್ಬಲ್ಯದ ಅರಿವು ನಿಮಗಾಗಿರುತ್ತದೆ. ಪ್ರತಿಯೊಬ್ಬ ವ್ಯಕ್ತಿ ಕೂಡ ತನ್ನದೇ ವ್ಯಕ್ತಿತ್ವ ಹೊಂದಿರುತ್ತಾನೆ. ಕೆಲವು ವಿಶೇಷವೆನ್ನಿಸಿದ್ರೆ ಮತ್ತೆ ಕೆಲವು ವಿಚಿತ್ರವಾಗಿರುತ್ತವೆ. ನಿಮ್ಮ ಜೊತೆಗಿರುವ ವ್ಯಕ್ತಿಯ ಕೆಟ್ಟ ಅಭ್ಯಾಸಗಳು ನಿಮ್ಮನ್ನು ಕಾಡುವ ಸಾಧ್ಯತೆಯಿರುತ್ತದೆ. ಅದ್ರಲ್ಲಿ ಒಂದು, ವಿಷ್ಯದ ಬಗ್ಗೆ ಅತಿಯಾದ ಚಿಂತನೆ. ಕೆಲವರು ಯಾವುದೇ ಒಂದು ವಿಷ್ಯವನ್ನು ವಿಪರೀತ ಎನ್ನುಷ್ಟು ಆಲೋಚಿಸುತ್ತಾರೆ. ಅತಿ ಯೋಚನೆ ಮಾಡುವ ವ್ಯಕ್ತಿ ಜೊತೆ ಹೊಂದಿಕೊಳ್ಳೋದು ಸುಲಭವಲ್ಲ. ಹಾಗಂತ ಪ್ರೀತಿಸುತ್ತಿರುವ ವ್ಯಕ್ತಿಯಿಂದ ದೂರವಿರಲೂ ಸಾಧ್ಯವಿಲ್ಲ. ನಿಮ್ಮ ಸಂಗಾತಿ ಅಥವಾ ನೀವು ಜೊತೆಗಿರುವ ವ್ಯಕ್ತಿ ಹೆಚ್ಚು ಯೋಚಿಸುವ ಸ್ವಭಾವ ಹೊಂದಿದ್ದರೆ ಏನ್ ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ಅತಿಯಾಗಿ ಯೋಚಿಸುವ ಪಾರ್ಟನರ್ (Partner) ಹೇಗಿರ್ತಾರೆ ಗೊತ್ತಾ? : ಯಾವುದೋ ಒಂದು ವಿಷ್ಯದ ಬಗ್ಗೆ ದೀರ್ಘ ಸಮಯ ಆಲೋಚನೆ ಮಾಡೋದನ್ನು ಓವರ್ ಥಿಂಕಿಂಗ್ (Overthinking) ಎನ್ನಬಹುದು. ವಸ್ತು ಯಾಕೆ ಅಲ್ಲಿಟ್ಟಿದ್ದೀರಿ? ನೀವ್ಯಾಕೆ ನನಗೆ ಈ ಮಾತು ಹೇಳಿದ್ರಿ? ಅದೇಕೇ ಹೀಗೆ ಆಯ್ತು? ಅವರ್ಯಾಕೆ ಹೀಗೆ ಮಾಡಿದ್ರು.. ಹೀಗೆ ಯಾವುದೇ ಸಣ್ಣ ಅಥವಾ ದೊಡ್ಡ ಸಂಗತಿ ಇರಬಹುದು, ಅದನ್ನು ಸಂಗಾತಿ ಜೊತೆ ಬೇರೆ ಬೇರೆ ವಿಧದಲ್ಲಿ ದೀರ್ಘಸಮಯ ಹೇಳ್ತಿರುವುದು. ಸಂಗಾತಿ ಒಂದೇ ಸಂಗತಿಯನ್ನು ದಿನವಿಡೀ ಮಾತನಾಡಿದಾಗ ಬೋರ್ ಬರೋದು ಸಾಮಾನ್ಯ. ಇದಕ್ಕೆ ನೀವು ಅಸಮಾಧಾನ ವ್ಯಕ್ತಪಡಿಸುವ ಬದಲು ಶಾಂತಿಯಿಂದ ವರ್ತಿಸುವುದು ಮುಖ್ಯವಾಗುತ್ತದೆ.
Throuple Relationship: ಇಲ್ಲಿ ಇಬ್ಬರಲ್ಲ, ಪತಿ–ಪತ್ನಿ ಜೊತೆಗಿರ್ತಾರೆ ಮೂರನೇಯವರು…!
ನಿಮ್ಮ ಸಂಗಾತಿ ಅತಿಯಾಗಿ ಆಲೋಚನೆ ಮಾಡೋರಾದ್ರೆ ಏನು ಮಾಡ್ಬೇಕು? :
ಮಾತುಕತೆ : ಸಂಬಂಧಗಳ ವಿಷಯಕ್ಕೆ ಬಂದಾಗ, ಮುಕ್ತ ಮತ್ತು ಆರೋಗ್ಯಕರ ಸಂವಹನವು ಅತ್ಯಂತ ಮಹತ್ವದ್ದಾಗಿದೆ. ಅವರ ಎಲ್ಲ ಸಣ್ಣಪುಟ್ಟ, ಅನುಪಯುಕ್ತ ಪ್ರಶ್ನೆಗೆ ನೀವು ಉತ್ತರಿಸಬೇಕಾಗಿಲ್ಲ. ಹಾಗಂತ ಸಂಪೂರ್ಣ ಸುಮ್ಮನಿರುವುದು ಕೂಡ ಸರಿಯಲ್ಲ. ಅವರು ಹೇಳುವುದನ್ನು ತಾಳ್ಮೆಯಿಂದ ಕೇಳಿ. ಸಾಧ್ಯವಾದಷ್ಟು ಅದಕ್ಕೆ ಉತ್ತರ ನೀಡಲು ಪ್ರಯತ್ನಿಸಿ. ವಿಷ್ಯವನ್ನು ಚರ್ಚಿಸಿ. ಹಾಗೆಯೇ ಸಂಬಂಧದಲ್ಲಿ ನೀವು ಏನನ್ನು ಬಯಸುತ್ತಿದ್ದೀರಿ ಎಂಬುದನ್ನು ಅವರಿಗೆ ಹೇಳಿ.
ಭಾವನೆಗಳನ್ನು ವ್ಯಕ್ತಪಡಿಸಿ : ಅತಿಯಾಗಿ ಆಲೋಚನೆ ಮಾಡುವ ವ್ಯಕ್ತಿಗಳು, ಸಂಗಾತಿ ತಮ್ಮನ್ನು ಪ್ರೀತಿ ಮಾಡ್ತಾರಾ ಎಂಬುದನ್ನು ತಿಳಿಯಲು ಪದೇ ಪದೇ ಪ್ರಯತ್ನಿಸ್ತಾರೆ. ನಿಮ್ಮ ಭಾವನೆಗಳನ್ನು ನೀವು ಅವರ ಮುಂದೆ ಹೇಳಿಲ್ಲವೆಂದ್ರೆ ಅವರು ತಮ್ಮ ಸಂಬಂಧ ಅಸುರಕ್ಷಿತವಾಗಿದೆ ಎಂದು ಭಾವಿಸ್ತಾರೆ. ಅತಿಯಾಗಿ ಯೋಚನೆ ಮಾಡುವ ಸಂಗಾತಿ ನಿಮಗೆ ಸಿಕ್ಕಿದ್ದಲ್ಲಿ, ನಿಮ್ಮ ಭಾವನೆ ಮೇಲೆ ನಿಯಂತ್ರಣ ಹೇರಿ ಅವರನ್ನು ಮತ್ತಷ್ಟು ಗೊಂದಲಕ್ಕೆ ಸಿಕ್ಕಿಸಬೇಡಿ. ನೀವೆಷ್ಟು ಅವರನ್ನು ಪ್ರೀತಿ ಮಾಡ್ತೀರಿ, ಎಷ್ಟು ಮಿಸ್ ಮಾಡ್ಕೊಳ್ತಿರಿ ಎಂಬುದನ್ನೆಲ್ಲ ಅವರ ಮುಂದೆ ಹೇಳಿ. ನಿಮ್ಮ ಈ ಭಾವನೆ ಅವರನ್ನು ಸ್ವಲ್ಪ ಮಟ್ಟಿಗೆ ಸಮಾಧಾನಗೊಳಿಸುತ್ತದೆ.
Relationship Tips: ಮಗಳ ಪ್ರೀತಿಯಲ್ಲಿ ಅಮ್ಮ ಮಾಡ್ತಾಳೆ ಮುಗ್ದ ತಪ್ಪು
ತಮಾಷೆಗೂ ಈ ಮಾತನ್ನಾಡ್ಬೇಡಿ : ನನಗೆ ನಿನ್ನ ಅವಶ್ಯಕತೆಯಿಲ್ಲ ಅಥವಾ ನಿನ್ನಿಂದ ಆಗುವಂತಹದ್ದು ಏನೂ ಇಲ್ಲ ಎನ್ನುವ ಮಾತನ್ನು ಅಪ್ಪಿತಪ್ಪಿಯೂ ಹೇಳ್ಬೇಡಿ. ಓವರ್ ಥಿಂಕಿಂಗ್ ಜನರು ಇದನ್ನು ಗಂಭೀರವಾಗಿ ಪರಿಗಣಿಸ್ತಾರೆ. ನಿಮ್ಮ ಬಗ್ಗೆ ತಪ್ಪು ತೀರ್ಮಾನಕ್ಕೆ ಬರುವ ಸಾಧ್ಯತೆಯಿರುತ್ತದೆ. ಅವರ ಮುಂದೆ ಅನವಶ್ಯಕವಾಗಿರುವ ಯಾವುದೇ ವಿಷ್ಯ ಹೇಳದೆ ಇರುವುದು ಒಳ್ಳೆಯದು.
ಅತಿಯಾಗಿ ಯೋಚನೆ ಮಾಡ್ಬೇಡ : ಸಂಗಾತಿ ಎಲ್ಲ ವಿಷ್ಯವನ್ನೂ ಅತಿಯಾಗಿ ಯೋಚಿಸ್ತಾರೆ ಎಂಬುದು ನಿಮಗೆ ಗೊತ್ತಾದ್ರೂ ಸುಮ್ಮನಿರಿ. ಅತಿಯಾಗಿ ಆಲೋಚನೆ ಮಾಡ್ಬೇಡ ಎಂದು ನೀವು ಅವರಿಗೆ ಹೇಳಿದ್ರೆ ಅವರು ಮುಜುಗರಕ್ಕೆ ಬೀಳ್ತಾರೆ. ಭಾವನೆಯನ್ನು ಹೊರಹಾಕಲಾಗದೆ ಮನಸ್ಸಿನಲ್ಲಿಯೇ ಅದ್ರ ಬಗ್ಗೆ ಚಿಂತಿಸಿ ಆರೋಗ್ಯ ಹಾಳುಮಾಡಿಕೊಳ್ತಾರೆ.