
ಹೇಮಾ ಯಾವಾಗಲೂ ಅಲವತ್ತುಕೊಳ್ಳುತ್ತಾಳೆ, “ನನ್ನ ಗಂಡ (Husbond) ನನ್ನೊಂದಿಗೆ ಹೆಚ್ಚು ಮಾತನಾಡುವುದಿಲ್ಲ. ಮನೆಯ ಕೆಲವು ವಿಚಾರಗಳು ನನಗೆ ಗೊತ್ತಿರುವುದಿಲ್ಲ. ಎಲ್ಲವನ್ನೂ ತಾವೊಬ್ಬರೇ ಡಿಸೈಡ್ (Decide) ಮಾಡ್ತಾರೆ. ಹೀಗಾಗಿ, ನನ್ನ ಗಂಡನಿಗೆ ನಾನೆಂದರೆ ಇಷ್ಟವೇ ಇಲ್ಲ’ ಎಂದು. ಆದರೆ, ಹೇಮಾಳ ಗಂಡನನ್ನೂ ಬಲ್ಲವರು ಹೇಳುವುದೆಂದರೆ, “ಆತ ತುಂಬ ಒಳ್ಳೆಯ ಮನುಷ್ಯ. ಹೆಂಡತಿ(Wife)ಯನ್ನು ಖಂಡಿತವಾಗಿ ನಿರ್ಲಕ್ಷ್ಯಿಸುವುದಿಲ್ಲ. ಮಾತುಕತೆ (Talk) ಕಡಿಮೆ, ಹೆಚ್ಚು ಮೌನವಾಗಿರುತ್ತಾನೆ ಅಷ್ಟೆ’. ಹಾಗಿದ್ದರೆ ಇಲ್ಲಿರುವುದು ಸಂವಹನದ ಸಮಸ್ಯೆಯೇ ಇರಬಹುದು! ಆದರೆ, ಹೇಮಾಳನ್ನು ಕನ್ವಿನ್ಸ್ ಮಾಡುವವರು ಯಾರು?
ಸಂಬಂಧ(Relationship)ವೊಂದು ಚೆನ್ನಾಗಿರಬೇಕಾದರೆ ಕೇವಲ ಸೆಕ್ಸ್ (Sex) ಒಂದೇ ಮುಖ್ಯವಾಗಿರುವುದಿಲ್ಲ. ಸಂಗಾತಿ ತನ್ನನ್ನು ಆಳವಾಗಿ ಪ್ರೀತಿ(Love)ಸುತ್ತಾನೆ ಎನ್ನುವ ಭಾವವೊಂದೇ ಸಾಕು, ಮನಸ್ಸು ಬೆಚ್ಚಗಿರುತ್ತದೆ. ಆದರೆ, ಪ್ರೀತಿಯಿದ್ದೂ ತೋರ್ಪಡಿಸಿಕೊಳ್ಳುವ ಸ್ವಭಾವ ಇಲ್ಲದೇ ಹೋದರೆ...ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಸ್ಯೆ ಆಗಬಹುದು. ಹಾಗೆಯೇ, ದಂಪತಿ ಮಧ್ಯೆ ಉತ್ತಮ ಕಮ್ಯೂನಿಕೇಷನ್ (Communication) ಇಲ್ಲದೇ ಹೋದರೆ...ಖಂಡಿತವಾಗಿ ಅಂತರ(Gap)ವೊಂದು ಸೃಷ್ಟಿಯಾಗಿ ಕಂದಕ ಮೂಡಿಸಬಲ್ಲದು. ಹೀಗಾಗಿ, ಸಂಬಂಧ ಚೆನ್ನಾಗಿರಬೇಕಾದರೆ ಕೆಲವು ಪದ್ಧತಿಗಳನ್ನು ಅನುಸರಿಸುವುದು ಅತಿ ಮುಖ್ಯ.
ಸಾಮಾನ್ಯವಾಗಿ ಮಹಿಳೆಯರು (Women) ಬಹಿರ್ಮುಖಿಗಳು. ಆದರೆ, ಪುರುಷರು ಹಾಗಲ್ಲ, ಮನಸಲ್ಲಿರೋದನ್ನು ಸ್ಪಷ್ಟವಾಗಿ ಹೇಳಲು ಹಿಂಜರಿಯುತ್ತಾರೆ. ಅಲ್ಲದೆ, ಬಹಳ ಮಹಿಳೆಯರು ಚಿಕ್ಕದ್ದನ್ನೂ ಕೆದಕಿ ಕೆದಕಿ ಕೇಳಿ ಬೋರು ಹೊಡೆಸುತ್ತಾರೆ. ಹೀಗಾಗಿ, ಅವರಿಂದ ದೂರ ಓಡುವ ಸಂಗಾತಿಯೂ ಇದ್ದಿರಬಹುದು. ಆದರೆ, ಕ್ರಮೇಣ ಇಂಥವುಗಳಿಂದ ಸಂಬಂಧ ಹದಗೆಡಲು ಆರಂಭವಾಗುತ್ತದೆ. “ಜೀವನ ಇಷ್ಟೇ’ ಎನ್ನುವ ನೀರಸ ಭಾವನೆ ಮೂಡುತ್ತದೆ. ಸಂಗಾತಿಯೊಂದಿಗೆ ಭಾವನಾತ್ಮಕ (Emotional) ಸಂಪರ್ಕ ಇರಬೇಕಾದುದು ಮುಖ್ಯ. ಅದಕ್ಕಾಗಿ ಹೀಗ್ಮಾಡಿ.
ಕೈ (Hand) ಹಿಡಿದುಕೊಳ್ಳಿ!
ಇದೇನು ಮಹಾ! ಎನಿಸಬಹುದು. ಇದೊಂದು ಸರಳ ಆದರೆ, ಅತ್ಯಂತ ಆಪ್ತವೆನಿಸುವ ಕ್ರಿಯೆ. ನಿಮ್ಮ ಮೇಲೆ ಭರವಸೆ ಮೂಡಿಸಲು ಇದರಂತಹ ಕ್ರಿಯೆ ಬೇರೊಂದಿಲ್ಲ. ಆತ್ಮೀಯ ಭಾವನೆ ಬರಲು ಸಹಕಾರಿ. ದಿನವೂ ರಾತ್ರಿ ಮಲಗುವ ಸಮಯದಲ್ಲಿ ಹೆಚ್ಚು ಮಾತನಾಡದಿದ್ದರೂ ಸರಿ, ಪರಸ್ಪರ ಕೈ ಹಿಡಿದುಕೊಳ್ಳುವುದರಿಂದ ಆತ್ಮೀಯತೆ ಹೆಚ್ಚುತ್ತದೆ. ನಮಗಾಗಿ ಇನ್ನೊಬ್ಬರಿದ್ದಾರೆ ಎನ್ನುವ ಭಾವನೆ ಬರುತ್ತದೆ.
Nitrogen Dioxideನಿಂದ ಮಕ್ಕಳಲ್ಲಿ ಹೆಚ್ತಿದೆ ಅಸ್ತಮಾ
ಸೂಕ್ತವಾಗಿ ಮಾತಾಡಿ(Speak)!
ಸಂಗಾತಿ(Partner)ಗೆ ಏನು ಹೇಳಬೇಕೋ ಅದನ್ನು ಗೊಂದಲವಿಲ್ಲದಂತೆ ಹೇಳುವುದು ಒಂದು ಕಲೆ. ಹೇಳಬೇಕಾದುದನ್ನು ಸಂಗಾತಿಗೆ ಹೇಳಲೇಬೇಕು, ಇಲ್ಲವಾದಲ್ಲಿ ಅನಗತ್ಯ ಕಮ್ಯೂನಿಕೇಷನ್ (Communication) ಗ್ಯಾಪ್ ಸೃಷ್ಟಿಯಾಗುತ್ತದೆ. ಸಂಬಂಧದ ಆಕ್ಸಿಜನ್ ಆಗಿ ಕೆಲಸ ಮಾಡುವುದೇ ಸಂವಹನ. ತಪ್ಪು ತಿಳಿವಳಿಕೆ ಮೂಡದಿರಲು ಸಹ ಮಾತುಕತೆಯಾಡುವುದೇ ಪರಿಹಾರ. ಅಲ್ಲದೆ, ಮನೆಯ ಎಲ್ಲ ವಿಚಾರಗಳ ಬಗ್ಗೆ ಸಂಗಾತಿಯೊಂದಿಗೆ ಚರ್ಚೆ ಮಾಡಿ.
Early Marriage : 25ರೊಳಗೆ ವಿವಾಹವಾಗುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆ!
ಭಾವನೆ(Feelings)ಗಳನ್ನು ಹಂಚಿಕೊಳ್ಳಿ
ಭಾವನೆಗಳನ್ನು ಹೇಳಿಕೊಳ್ಳುವುದು ಸಂಬಂಧದಲ್ಲಿ ಮುಖ್ಯ. ಭಾವನೆಗಳು ನಿಮ್ಮಲ್ಲಿದ್ದರೆ ಸಾಲದು. ಅವುಗಳನ್ನು ಸಂಗಾತಿಗೂ ವ್ಯಕ್ತಪಡಿಸುವುದು ಅಗತ್ಯ. ಪ್ರೀತಿ, ವಿಶ್ವಾಸ, ಸಂಗಾತಿಯ ಯಾವುದಾದರೊಂದು ನಿಮಗೆ ಇಷ್ಟವಾಗುವ ಗುಣದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಬೇಕು. ಅವರಿಗೆ ಅಗತ್ಯವಾದಾಗ ಸಹಾಯ ಮಾಡಬೇಕು. ಭಾವನಾತ್ಮಕವಾಗಿ ಕುಗ್ಗಿದಾಗ ಧೈರ್ಯದ ಮಾತುಗಳನ್ನಾಡಬೇಕು.
ಕೃತಜ್ಞತೆ (Gratitude) ಹೇಳಿ
ಸಾಮಾನ್ಯವಾಗಿ ಸಂಗಾತಿಗೆ ಕೃತಜ್ಞತೆ ಹೇಳಲು ಎಲ್ಲರೂ ಮರೆಯುತ್ತಾರೆ. ಸಂಬಂಧವೊಂದು ಚೆನ್ನಾಗಿರಬೇಕಾದರೆ ಪರಸ್ಪರ ಕೃತಜ್ಞರಾಗಿರುವುದು ಅಗತ್ಯ. ಕೆಲವೊಮ್ಮೆ ಧನ್ಯವಾದ ಹೇಳುವುದರಿಂದ ಯಾರ ಸ್ಥಾನವೂ ಕಡಿಮೆಯಾಗುವುದಿಲ್ಲ.
ಜತೆಯಾಗಿ ಚಟುವಟಿಕೆ (Activities) ಮಾಡಿ
ಇಂದು ಎಲ್ಲರೂ ಬ್ಯುಸಿಯಾಗಿರುತ್ತಾರೆ. ಅವರವರ ಕೆಲಸ ಅವರಿಗೆ, ಅದೇ ಗುಂಗು, ಅದೇ ದಿನನಿತ್ಯದ ಪಾಡು. ಆದರೆ, ಹೇಗಾದರೂ ಸಮಯ (Time) ಮಾಡಿಕೊಂಡು ಜತೆಯಾಗಿ ಕೆಲವು ಚಟುವಟಿಕೆ ಮಾಡುವುದರಿಂದ ಅತೀವ ಖುಷಿಯೆನಿಸುತ್ತದೆ. ವ್ಯಾಯಾಮ, ಗಾರ್ಡನಿಂಗ್, ವಾಕಿಂಗ್, ಓದುವುದರಲ್ಲಿ ಜತೆಯಾಗಬಹುದು. ಉತ್ತಮ ಸಿನಿಮಾ ಅಥವಾ ನಾಟಕ ನೋಡಬಹುದು. ಆಗ ಪರಸ್ಪರ ಸಮಾನ ಅಭಿರುಚಿ ಮೂಡುವ ಸಾಧ್ಯತೆಯೊಂದಿಗೆ ಒಡನಾಟ ಹೆಚ್ಚುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.