ಈ Flirting styleಗಳು ಹಳತಾದ್ರೂ, ಬಳಸಿದ್ರೆ ಮಿಸ್ಸಾಗೋ ಚಾನ್ಸೇ ಇಲ್ಲ!

By Suvarna NewsFirst Published Jan 9, 2022, 5:36 PM IST
Highlights

ಆನ್‌ಲೈನ್ ಡೇಟಿಂಗ್ ಶುರುವಾದ ಮೇಲೆ ಫ್ಲರ್ಟಿಂಗ್ ಸ್ಟೈಲ್ ಕೂಡಾ ಬದಲಾಗಿದೆ. ಆದರೆ, ಇಂದಿಗೂ ನವಿರು ಭಾವಗಳನ್ನು ಎಬ್ಬಿಸೋ ಶಕ್ತಿಯಿರುವುದು ಹಳೆಯ ಫ್ಲರ್ಟಿಂಗ್ ವಿಧಾನಗಳಿಗೇ. 

ಫ್ಲರ್ಟಿಂಗ್(Flirting) ವಿಧಾನಗಳು ಕೂಡಾ ಕಾಲ ಬದಲಾದಂತೆ ವೇಷ ಬದಲಾಯಿಸಿವೆ. ಅದರಲ್ಲೂ ಈ ಪ್ಯಾಂಡೆಮಿಕ್ ಟೈಮ್‌ನಲ್ಲಿ ಎಲ್ಲರೂ ಮನೆಯೊಳಗೇ ಕುಳಿತುಕೊಳ್ಳಬೇಕಾಗಿ ಬಂದಾಗ ಆನ್‌ಲೈನ್ ಡೇಟಿಂಗ್ (online dating) ಹಿಂದೆಂದೂ ಇಲ್ಲದಷ್ಟು ಹೆಚ್ಚಿವೆ. ಈಗಿನವರು ಫ್ಲರ್ಟಿಂಗಿಗೂ ಎಮೋಜಿಗಳನ್ನೇ ಬಳಸುತ್ತಾರೆ, ಮಾತಿಗೂ ಅವನ್ನೇ ಬಳಸುತ್ತಾರೆ. ಎಲ್ಲ ವರ್ಚುಯಲ್ ಪ್ರೀತಿಯೇ. ಆದರೆ, ಹಿಂದಿನ ಕಾಲದ್ದು ಎನಿಸಿಕೊಂಡಂಥ ಫ್ಲರ್ಟಿಂಗ್ ವಿಧಾನಗಳು ಇವಕ್ಕಿಂತ ಮಜವಾಗಿದ್ದವು, ಹುಡುಗಿ ಅಥವಾ ಹುಡುಗನ ಮನಸ್ಸಲ್ಲೋ ನವಿರಾದ ಭಾವಗಳ ಅಲೆ ಎಬ್ಬಿಸುತ್ತಿದ್ದವು. ಆ ಅಲೆಗಳು ಎದ್ದಾಗ ಆಗುತ್ತಿದ್ದ ತೇಲುವ ಅನುಭವವೇ ಬೇರೆ. ಈಗಿನವರು ಕೂಡಾ ಹಳೆಯ ಫ್ಲರ್ಟಿಂಗ್ ವಿಧಾನ ಬಳಸಿ ನೋಡಬಹುದು, ಖಂಡಿತಾ ಅವು ಶೇ.99ರಷ್ಟು ಬಾರಿ ಪ್ರೀತಿಸಿದವರನ್ನು ಒಲಿಸಲು ಯಶಸ್ವಿಯಾಗುತ್ತವೆ. 

ಕೈಗಳಿಗೆ ಮುತ್ತನಿಡುವುದು
ಕೈಗಳಿಗೆ ನೀಡುವ ಮುತ್ತು ನೀವು ಇಷ್ಟ ಪಡುವವರನ್ನು ಗೌರವಿಸುವುದನ್ನು ತೋರಿಸುವ ಜೊತೆಗೇ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತವೆ. ಹೀಗಾಗಿ, ನಿಮ್ಮ ಈ ನಡೆ ಆಕೆ/ಆತನ ಮನಸ್ಸಲ್ಲಿ ಸದಾ ಉಳಿಯುತ್ತದೆ. ಈ ರೀತಿಯ ಮುತ್ತು ಪ್ರೀತಿಯ ವಿಷಯದಲ್ಲಿ ನಿಮ್ಮ ಪ್ರಾಮಾಣಿಕತೆಯನ್ನೂ, ಶುದ್ಧತೆಯನ್ನೂ ಅರ್ಥ ಮಾಡಿಸುತ್ತವೆ. 

ಹೊಗಳಿಕೆ(Compliments)
ಹೊಗಳಿಕೆ ಇಷ್ಟ ಪಡದವರು ಯಾರು ತಾನೇ ಇದ್ದಾರೆ? ಆದರೆ, ಆ ಹೊಗಳಿಕೆ ಪ್ರಾಮಾಣಿಕವಾದದ್ದಾಗಿರಬೇಕಷ್ಟೇ. ನೀವು ಮತ್ತೊಬ್ಬರನ್ನು ಇಂಪ್ರೆಸ್ ಮಾಡಬೇಕೆಂದಾಗ ಮೊದಲು ಬಳಸಬೇಕಾಗಿರುವ ಅಸ್ತ್ರವಿದು. ನೀನಿವತ್ತು ಚೆಂದ ಕಾಣ್ತಿದೀಯಾ, ಅದ್ ಹೆಂಗೆ ಯಾವಾಗ್ಲೂ ಇಷ್ಟ್ ಚೆಂದ ಕಾಣುಸ್ತ್ಯಲಾ.., ನಿನ್ ಜೊತೆ ಇರೋಕ್ ಎಷ್ಟ್ ಖುಷಿ ಅನ್ಸತ್ತೆ ಗೊತ್ತಾ... ಇಂಥ ಮಾತ್ಗಳೆಲ್ಲ ಯಾರನ್ನ ಬೇಕಾದ್ರೂ ಫ್ಲ್ಯಾಟ್ ಮಾಡ್ತಾವೆ. ಮಾತಿನೊಂದಿಗೆ ನಿಮ್ಮ ಚೆಂದದ ನಗು(smile) ಸೇರಿದರಂತೂ ನಿಮ್ಮೊಂದಿಗೆ ಅವರು ಪ್ರೀತಿಯಲ್ಲಿ ಬೀಳುವುದು ಖಚಿತ.

ಬಾಗಿಲು ತೆರೆಯುವುದು(Opening the door)
ಕಾರ್ ಬಾಗಿಲನ್ನು ಪುರುಷರು ತೆಗೆಯುವುದು, ರೆಸ್ಟೋರೆಂಟ್ ಡೋರ್ ತೆರೆದು ಹಿಡಿದಿಟ್ಟುಕೊಳ್ಳುವುದು- ಇಂಥ ಗೆಸ್ಚರ್ಸ್ ಎಲ್ಲ ಹುಡುಗಿಯರಿಗೂ ಇಷ್ಟವಾಗುತ್ತದೆ. ಇಬ್ಬರೂ ಪಕ್ಕ ಪಕ್ಕ ಕೂತು ಮಾತನಾಡುವಾಗ ಆಕೆ ಕೂತ ಚೇರ್ ಮೇಲೆ ಹಿಂದಿಂದ ಕೈ ಹಾಕುವುದು ಕೂಡಾ ನೀವು ಆಕೆಗೆ ತುಂಬಾ ಕ್ಲೋಸ್ ಎನಿಸುವ ಫೀಲಿಂಗ್ ತರಿಸುತ್ತವೆ. 

ರಸ್ತೆಯ ಬ್ಯುಸಿ ಬದಿಯಲ್ಲಿ ನಡೆಯುವುದು
ಇದು ನಿಜಕ್ಕೂ ಕ್ಯೂಟ್ ಎನಿಸುವಂಥ ನಡೆ. ಇಬ್ಬರೂ ನಡೆವಾಗ ಹುಡುಗನು ಆಕೆಯನ್ನು ಬದಿಗೆ ಕಳಿಸಿ ತಾನು ವಾಹನ ಬರುವ ಕಡೆಯಲ್ಲಿ ನಡೆಯುವುದು ಮಾಡಿದರೆ, ಅವಳದನ್ನು ಗಮನಿಸದೆ ಇರಲಾರರು. ನಿಮ್ಮ ಕಾಳಜಿ ಅವಳಿಗೆ ಖಂಡಿತಾ ಅರ್ಥವಾಗುತ್ತದೆ. ನಿಮ್ಮ ಸುಪರ್ದಿಯಲ್ಲಿ ತನ್ನ ಸುರಕ್ಷೆ ಇದೆ ಎಂದು ಅವಳಿಗೆ ಎನಿಸಲಾರಂಭಿಸುತ್ತದೆ. 

Relationship and Zodiacs: ಪುರುಷನಿಗೆ ಸಂಬಂಧದಲ್ಲಿ ಅತಿ ಮುಖ್ಯವೆನಿಸೋದು ಏನು?

ಆಹಾರ ಹಂಚಿಕೊಳ್ಳುವುದು(Sharing food)
ಇದೊಂತೂ ಕ್ಲಾಸಿಕ್. ನಿಮ್ಮ ಕ್ರಶ್ ಜೊತೆ ಫುಡ್ ಹಂಚಿಕೊಂಡರೆ, ನೀವಿರುವುದೇ ಅವಳಿಗಾಗಿ ಎಂದು ಅವಳಿಗೆ ಅನಿಸುತ್ತದೆ. ಆಕೆಗೆ ನೀವು ತುಂಬಾ ಕ್ಲೋಸ್ ಎನ್ನುವ ಭಾವ ಗಳಿಸಿ ಕೊಡುತ್ತದೆ. ಇನ್ನು ನೀವೇನಾದರೂ ಕುಕ್ ಮಾಡಿದಾಗ ಮರೆಯದೇ ಅದನ್ನು ಬಾಕ್ಸ್‌ಗೆ ಹಾಕಿಕೊಂಡು ಹೋಗಿ ಅವಳ ಕೈಲಿಟ್ಟು ತಿನ್ನಲು ಹೇಳಿ. ಅದೂ ಕೂಡಾ ನಿಮ್ಮ ಭಾವನೆಗಳನ್ನು ಅವಳಿಗೆ ದಾಟಿಸುತ್ತದೆ.

Relationship Tips : ಇಷ್ಟಪಟ್ಟು ಪ್ರೀತಿಸಿ ಮದುವೆಯಾದವರು ದೂರವಾಗೋದ್ಯಾಕೆ?

ಜಾಕೆಟ್ ನೀಡುವುದು
ಇದಂತೂ ಬಹಳಷ್ಟು ಮೂವಿಗಳಲ್ಲಿ ನೋಡಿ ಕ್ಲೀಷೆ ಎನ್ನಿಸಬಹುದು. ಆದರೆ ಇದು ಹುಡುಗಿಯ ಮನಸ್ಸಿನಲ್ಲಿ ಕಲಕುವ ಭಾವಗಳು ಮಾತ್ರ ಹೊಸತಾಗಿಯೇ ಇರುತ್ತದೆ. ಚಳಿಯಾದಾಗ, ಮಳೆ ಬಂದಾಗ, ಬೇರೆ ಹುಡುಗರು ಗುರಾಯಿಸುವಾಗ ನಿಮ್ಮ ಜಾಕೆಟ್ ತೆಗೆದು ಆಕೆಗೆ ಹಾಕಿಕೊಳ್ಳಲು ಕೊಡಿ. ನಿಧಾನವಾಗಿ ಆಕೆ ನಿಮ್ಮ ಅಪ್ಪುಗೆಯಲ್ಲಿರುವಂತೆ ಭಾವಿಸದಿದ್ದರೆ ಕೇಳಿ. 

click me!