ಮದುವೆ (Marriage)ಯೆಂಬ ಸಂಬಂಧ ತುಂಬಾ ಸೂಕ್ಷ್ಯವಾದುದು. ಅನುಸರಿಸಿಕೊಂಡು ಜೀವನ (Life) ನಡೆಸಿದರೆ ಸಂಪೂರ್ಣ ಖುಷಿಯ ಜೀವನವಾಗುತ್ತದೆ. ಅದರ ಬದಲು ಭಿನ್ನಾಭಿಪ್ರಾಯಗಳು ಹೆಚ್ಚಾದರೆ ನರಕಯಾತನೆ ಅನುಭವಿಸುವಂತಾಗುತ್ತದೆ. ಹಾಗಿದ್ರೆ ದಾಂಪತ್ಯ (Married Life) ಖುಷಿಯಾಗಿರಲು ಏನು ಮಾಡಬೇಕು ? ಗಂಡ-ಹೆಂಡತಿ (Husband-Wife) ಹೇಗಿದ್ದರೆ ಯಾವಾಗ್ಲೂ ಖುಷಿಯಾಗಿರಬಹುದು ?
ಮದುವೆ (Marriage)ಯೆಂಬುದು ಒಂದು ಸುಂದರವಾದ ಅನುಬಂಧ. ಹೆಣ್ಣು ತನ್ನವರನ್ನೆಲ್ಲಾ ತೊರೆದು ಗಂಡನ ಮನೆಗೆ ಬರುತ್ತಾಳೆ. ಸಂಪೂರ್ಣವಾಗಿ ಅಪರಿಚಿತರಾದವರು ಕುಟುಂಬ ಸದಸ್ಯರಾಗುತ್ತಾರೆ, ಆಪ್ತರಾಗುತ್ತಾರೆ. ಗಂಡ-ಹೆಂಡತಿಯೆಂಬ ಪುಟ್ಟ ಕುಟುಂಬ ಅಲ್ಲಿ ತಯಾರಾಗುತ್ತದೆ. ಸಂಗಾತಿ (Partner)ಗಳ ನಡುವೆ ಪ್ರೀತಿ (Love), ವಿಶ್ವಾಸ ಮತ್ತು ತಿಳುವಳಿಕೆ ಇದ್ದಾಗ ಜೀವನ (Married Life) ನಡೆಸುವುದು ತುಂಬಾ ಸುಲಭವಾಗುತ್ತದೆ. ದಂಪತಿ ನಡುವೆ ಸಾಮರಸ್ಯವಿದ್ದಲ್ಲಿ ಆರೋಗ್ಯಕರ ಸಂಬಂಧ (relationship) ಮುಂದುವರೆಯುತ್ತದೆ.
ಆದರೆ ಎಲ್ಲರ ವಿಷಯದಲ್ಲಿ ಹೀಗಾಗುವುದಿಲ್ಲ. ಕೆಲವೊಬ್ಬರ ಮಧ್ಯೆ ಮದುವೆಯಾಗಿ ಎಷ್ಟು ವರ್ಷಗಳಾದರೂ ಒಮ್ಮತವೇ ಮೂಡುವುದಿಲ್ಲ. ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಲೇ ಹೋಗುತ್ತದೆ. ಇಂಥಹಾ ಜಗಳ ಕೊನೆಗೆ ವಿಚ್ಛೇದನದಲ್ಲಿ ಮುಗಿಯುವಂತಾಗುತ್ತದೆ. ಹಾಗಿದ್ರೆ ದಾಂಪತ್ಯದಲ್ಲಿ ಖುಷಿಯಾಗಿರಲು ಏನು ಮಾಡಬೇಕು. ಪತಿ-ಪತ್ನಿ ಮಧ್ಯೆ ಜಗಳವಾದರೂ ಒಮ್ಮತದಿಂದ ಇರಲು ಸಾಧ್ಯವಾಗುತ್ತದಾ ? ಅದಕ್ಕಾಗಿ ದಂಪತಿಗಳು ಮಾಡಬೇಕಾಗಿದ್ದೇನು ಎಂಬುದನ್ನು ತಿಳಿಯೋಣ ?
ಆಗಾಗ ಹೊಸ ಸ್ಥಳಗಳಿಗೆ ಟ್ರಿಪ್ ಹೋಗುತ್ತಿರಿ
ಗಂಡ-ಹೆಂಡತಿ ಇಬ್ಬರೂ ಅದೆಷ್ಟೇ ಬಿಝಿಯಾಗಿದ್ದರೂ ಆಗಾಗ ಜತೆಯಾಗಿ ಸಮಯ ಕಳೆಯುವುದನ್ನು ಮರೆಯಬೇಡಿ. ಇಬ್ಬರೇ ಜತೆಯಾಗಿ ಎಲ್ಲಾದರೂ ಹೊಸ ಪ್ರದೇಶಕ್ಕೆ ಟ್ರಿಪ್‌ಗೆ ಹೋಗಿ. ನೀವಿಬ್ಬರೂ ಎಷ್ಟೇ ಕಾರ್ಯನಿರತರಾಗಿದ್ದರೂ, ಕೆಲಸದ ಕಾರಣಕ್ಕಾಗಿ ಯೋಜಿತ ರಜೆಯನ್ನು ಎಂದಿಗೂ ಬಿಡಬೇಡಿ. ರಜೆಯನ್ನು ಪ್ರಮುಖ ಆದ್ಯತೆಯಾಗಿ ಪರಿಗಣಿಸಿ. ಏಕೆಂದರೆ ಇದು ನಿಮ್ಮ ಸಂಗಾತಿಯೊಂದಿಗೆ ಉತ್ತಮವಾಗಿ ಸಮಯ ಕಳೆಯಲು ನೆರವಾಗುತ್ತದೆ. ಇದರಿಂದ ಗಂಡ-ಹೆಂಡತಿ ಇಬ್ಬರೂ ಮನೆಮಂದಿಯ ಹಸ್ತಕ್ಷೇಪವಿಲ್ಲದೆ ಆರಾಮವಾಗಿ ಮನದ ಮಾತುಗಳನ್ನಾಡಲು ಸಾಧ್ಯವಾಗುತ್ತದೆ.
ಮಗಳ ಮದುವೆಯಲ್ಲಿ ಊ ಅಂಟಾವಾ ಮಾವ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ ಅಪ್ಪ
ಹಣಕಾಸಿನ ಬಗ್ಗೆ ಸಮಯೋಚಿತ ಚರ್ಚೆಗಳನ್ನು ಮಾಡಿ
ದಾಂಪತ್ಯದಲ್ಲಿ ಹಣಕಾಸಿನ ವಿಚಾರಕ್ಕೆ ಪತಿ-ಪತ್ನಿಯ ಮಧ್ಯೆ ಜಗಳವಾಗುವುದೂ ಇದೆ. ಹಣಕಾಸಿನ ಸಮಸ್ಯೆಗಳಿಂದಾಗಿ ಬಹಳಷ್ಟು ದಂಪತಿಗಳು ವಿಚ್ಛೇದನವನ್ನು ಪಡೆಯುತ್ತಾರೆ. ಹೀಗಾಗಿ ದಂಪತಿ ಖರ್ಚು, ಉಳಿತಾಯದ ಬಗ್ಗೆ ಯಾವಾಗಲೂ ಓಪನ್ ಆಗಿ ಮಾತನಾಡಬೇಕು. ಹಣಕಾಸಿನ ಹೂಡಿಕೆಗಳು ಮತ್ತು ಬ್ಯಾಲೆನ್ಸ್‌ಗಳ ಬಗ್ಗೆ ತಪ್ಪು ಮಾಹಿತಿ ಹೇಳುವುದು ಸರಿಯಲ್ಲ. ಸಮತೋಲನಗಳು ಮತ್ತು ಅಲ್ಪಾವಧಿಯ ಅಥವಾ ದೀರ್ಘಾವಧಿಯ ಹಣಕಾಸಿನ ಗುರಿಗಳ ಬಗ್ಗೆ ಗಂಡ-ಹೆಂಡತಿ ಇಬ್ಬರೂ ತಿಳಿದಿರಬೇಕು
ಲೈಂಗಿಕ ಜೀವನ ಖುಷಿಯಾಗಿರಿಸಿ
ದಾಂಪತ್ಯ ಚೆನ್ನಾಗಿರಬೇಕಾದರೆ ಲೈಂಗಿಕ ಜೀವನ ಚೆನ್ನಾಗಿರಬೇಕಾದುದು ಸಹ ಮುಖ್ಯ. ನೀವು ಮತ್ತು ನಿಮ್ಮ ಸಂಗಾತಿಯು ಯಾವಾಗಲೂ ಒಟ್ಟಿಗೆ ನಿಮ್ಮ ಸಮಯವನ್ನು ಉತ್ತಮವಾಗಿ ಬಳಸಿಕೊಳ್ಳುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸಾಧ್ಯವಾದಾಗಲೆಲ್ಲಾ ಉತ್ತಮವಾದ ಲೈಂಗಿಕತೆಯನ್ನು ಹೊಂದಲು ಪ್ರಯತ್ನಿಸಿ. ಲೈಂಗಿಕತೆಯಲ್ಲಿ ಹೊಸ ಹೊಸ ಪ್ರಯತ್ನವನ್ನು ಮಾಡುವ ಮೂಲಕ ನೀವು ಇಬ್ಬರ ನಡುವಿನ ಸಂಬಂಧವನ್ನು ತಾಜಾವಾಗಿರಿಸಿಕೊಳ್ಳಬಹುದು.
ಮದುವೆಯ ನಂತರವೂ ಒಂಟಿತನ ಕಾಡ್ತಿದ್ತಾ ? ಕಾರಣವೇನು ತಿಳ್ಕೊಳ್ಳಿ
ಒಟ್ಟಿಗೆ ಸಿನಿಮಾ ವೀಕ್ಷಿಸಿ
ನೀವಿಬ್ಬರೂ ಒಟ್ಟಿಗೆ ವೀಕ್ಷಿಸಬಹುದಾದ ಯಾವುದೇ ಕಾರ್ಯಕ್ರಮವನ್ನು ಆರಿಸಿಕೊಳ್ಳಿ. ಒಟ್ಟಿಗೆ ಸಮಯವನ್ನು ನಿಗದಿಪಡಿಸಿ. ಒಟ್ಟಿಗೆ ಯಾವುದಾದರೂ ಸಿನಿಮಾ ಅಥವಾ ಕಾರ್ಯಕ್ರಮವನ್ನು ವೀಕ್ಷಿಸಿ. ಈ ರೀತಿ ಪ್ರದರ್ಶನವನ್ನು ಒಟ್ಟಿಗೆ ವೀಕ್ಷಿಸುತ್ತಿರುವಾಗ ಪರಸ್ಪರರ ತೋಳುಗಳಲ್ಲಿ ವಿಶ್ರಾಂತಿ ಪಡೆಯುವುದು ಸಂಬಂಧವನ್ನು ಇನ್ನಷ್ಟು ಹತ್ತಿರಗೊಳಿಸುತ್ತದೆ.
ಜೊತೆಯಾಗಿ ಮನೆ ಕ್ಲೀನ್ ಮಾಡಿ
ಗಂಡ-ಹೆಂಡತಿ ಇಬ್ಬರೂ ಯಾವುದೇ ಕೆಲಸವನ್ನು ಜತೆಯಾಗಿ ಮಾಡಿದಾಗ ಸಾಮರಸ್ಯ ಹೆಚ್ಚಾಗುತ್ತದೆ. ರಜೆ ಸಿಕ್ಕಾಗಲೆಲ್ಲಾ ನೀವಿಬ್ಬರೂ ನಿಮ್ಮ ಮನೆಯನ್ನು ಸ್ವಚ್ಛಗೊಳಿಸಲು ಮತ್ತು ನಿಮ್ಮಿಬ್ಬರಿಗೂ ಅಗತ್ಯವಿಲ್ಲದ ಎಲ್ಲಾ ವಸ್ತುಗಳನ್ನು ತೊಡೆದುಹಾಕಲು ಸಮಯವನ್ನು ಯೋಜಿಸಿ. ಇದು ಮನೆಯಲ್ಲಿನ ಅಸ್ತವ್ಯಸ್ತತೆಯನ್ನು ಕಡಿಮೆ ಮಾಡುತ್ತದೆ. ಇಂಥಾ ಚಟುವಟಿಕೆಗಳು ಇಬ್ಬರಲ್ಲೂ ಹೊಂದಾಣಿಕೆಯನ್ನು ಹೆಚ್ಚು ಮಾಡುತ್ತದೆ. ಮನೆಕೆಲಸದ ವಿಷಯದಲ್ಲಿ ಗಂಡ-ಹೆಂಡತಿ ಜಗಳ ಮಾಡುವುದು ಕಡಿಮೆಯಾಗುತ್ತದೆ.