Love Obsession: ಹಾಗಂದ್ರೇನು? ಪಾರಾಗಲು ಇಲ್ಲಿವೆ ಪರಿಹಾರ

Suvarna News   | Asianet News
Published : Nov 11, 2021, 05:15 PM ISTUpdated : Nov 12, 2021, 11:05 AM IST
Love Obsession:  ಹಾಗಂದ್ರೇನು? ಪಾರಾಗಲು ಇಲ್ಲಿವೆ ಪರಿಹಾರ

ಸಾರಾಂಶ

ಲವ್‌/ಪ್ರೀತಿ ಪ್ರೇಮ ಪ್ರಣಯ ಒಳ್ಳೆಯದೇ. ಆದರೆ ಅದು ಗೀಳು ರೋಗ ಆಗಬಾರದು. ಪ್ರೀತಿ ಯಾವಾಗ ಗೀಳು ಆಗುತ್ತದೆ? ಅದರಿಂದ ಪಾರಾಗುವುದು ಹೇಗೆ?    

ಪ್ರೀತಿ (Love) ಯೊಂದು ಮಧುರಾನುಭೂತಿ ನಿಜ. ಆದರೆ ಕೆಲವೊಮ್ಮೆ ನಿಮ್ಮ ಪ್ರೀತಿ ಇನ್ನೊಬ್ಬರಿಗೆ ಭಯಾನಕ ಮತ್ತು ಉಸಿರುಗಟ್ಟಿಸಬಹುದು. ಇದು ನಿಮಗೆ ಈ ವಿಚಾರದಲ್ಲಿ ಚಿಕಿತ್ಸೆಯ ಅಗತ್ಯವಿದೆ ಎನ್ನುವ ಸಂಕೇತವಾಗಿದೆ. ಹಾಗಾಗಿ ಒಬ್ಸೆಸಿವ್ ಲವ್ ಡಿಸಾರ್ಡರ್ (OLD) ಅನ್ನು ಪತ್ತೆಹಚ್ಚಲು ನೀವು ಈ ಕೆಲವು ಪ್ರಮುಖ ಚಿಹ್ನೆಗಳು ನಿಮ್ಮಲ್ಲಿದೆಯೇ ಎಂಬುದ್ನು ಪರಿಶೀಲಿಸಿಕೊಳ್ಳೀ. ಹಾಗೇ ನಿಮ್ಮ ಸಂಗಾತಿಯಲ್ಲಿ ಕೂಡ ಇಂಥ ಗೀಳೂರೋಗ ಇದೆಯೇ ಎಂಬುದನ್ನೂ ಪರಿಶೀಲಿಸಿ. ಅವರಲ್ಲಿ ಈ ಗುಣಗಳಿದ್ದರೆ ಅದನ್ನು ಪರಿಹರಿಸಲು ಸಹಾಯ ಮಾಡಿ.

ಸದಾಕಾಲ ಅವರದೇ ಯೋಚನೆ

ನೀವು ಯಾವಾಗಲೂ ಅವನ ಅಥವಾ ಅವಳ ಬಗ್ಗೆ ಯೋಚಿಸುತ್ತಿರುತ್ತೀರಿ. ನೀವು ಏನು ಮಾಡುತ್ತಿದ್ದೀರಿ ಎಂಬುದು ಮುಖ್ಯವಲ್ಲ, ವಾಷ್‌ರೂಮಿನಲ್ಲಿದ್ದರೂ ಅಥವಾ ಪೋಷಕರೊಂದಿಗೆ ಸುಮ್ಮನೆ ಊಟ ಮಾಡುತ್ತಿದ್ದರೂ ಇನ್ನೊಬ್ಬರು ಏನು ಮಾಡುತ್ತಿದ್ದಾರೆಂದು ನೀವು ಆಶ್ಚರ್ಯ ಪಡುತ್ತೀರಿ. ಅವರಿಗೆ ಕಣ್ಗಾವಲು ಕ್ಯಾಮೆರಾ ಆಗುವ ಆಲೋಚನೆ ನಿಮ್ಮ ಮನಸ್ಸಿಗೆ ಬರುತ್ತದೆ, ಅದು ತಪ್ಪೆಂದು ನಿಮಗೆ ಅನಿಸುವುದಿಲ್ಲ- ಹೀಗಿದ್ದಾಗ ನಿಮಗೆ ಅದೊಂದು ಗೀಳು ಎಂದು ಅರ್ಥವಾಗಬೇಕು.

ಪೊಸೆಸಿವ್‌ನೆಸ್‌ (Posseciveness) 

ಸ್ವಲ್ಪ ಪೊಸೆಸಿವ್‌ನೆಸ್‌ ಒಳ್ಳೆಯದೇ, ಇದು ಸಹಜ. ಆದರೆ ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಸಂಗಾತಿ ಅವರ ಆತ್ಮೀಯ ಸ್ನೇಹಿತರು ಅಥವಾ ಪೋಷಕರೊಂದಿಗೆ ಸಹ ನಗುವನ್ನು ಹಂಚಿಕೊಳ್ಳುವುದು, ಮುಕ್ತವಾಗಿ ಮಾತಾಡುವುದು ನಿಮಗೆ ಇಷ್ಟವಾಗದಿದ್ದಾಗ, ನನ್ನ ಪ್ರೀತಿಯನ್ನು ಕಳೆದುಕೊಂಡೆ ಎಂದೆಲ್ಲ ನೀವು ಭಾವಿಸಿದರೆ, ಇದನ್ನೇ ಅತಿ ಪೊಸೆಸಿವ್‌ನೆಸ್‌ ಅಥವಾ ಅಸೂಯೆ ಎಂದು ಹೇಳಬಹುದು. ಇವರು ಮುಕ್ತವಾಗಿ ಮಾರುಕಟ್ಟೆಗೆ ಹೋಗುವುದೂ ನಿಮಗೆ ಅಸೂಯೆ ಉಂಟುಮಾಡಬಹುದು. ದಯವಿಟ್ಟು ಇದರಿಂದ ಹಿಂದೆ ಸರಿಯಿರಿ!

ನಿರಂತರ ಮೆಸೇಜ್ (Texting)

ಪ್ರೀತಿಪಾತ್ರರು ಸಂಪರ್ಕದಲ್ಲಿರಬೇಕು. ಆದರೆ ಅವರು ಸ್ನಾನ ಮಾಡುತ್ತಿರುವಾಗಲೂ ನಿಮ್ಮ ಸಂದೇಶಕ್ಕೆ ಅವರು ಉತ್ತರಿಸಬೇಕಿಲ್ಲ. ನೀವು ಪ್ರತಿ ನಿಮಿಷಕ್ಕೊಮ್ಮೆ ಅವರಿಗೆ ಮೆಸೇಜ್ ಮಾಡಿದರೆ ಉತ್ತರಿಸುವುದು ಕಷ್ಟ. ಹಾಗೇ ನಿಮ್ಮ ಸಂಗಾತಿ ನಿಮಿಷಕ್ಕೊಮ್ಮೆ ನಿಮಗೆ ಮೆಸೇಜ್ ಮಾಡುತ್ತಾ ಇದ್ದರೆ ನಿಮಗೆ ಕಿರಿಕಿರಿ ಆಗುವುದಿಲ್ಲವೇ? ನಿರಂತರ ಸಂಪರ್ಕದಲ್ಲಿರಬೇಕಾದ ಅಗತ್ಯವು ಸಾಮಾನ್ಯವಲ್ಲ. ನಿಮ್ಮ ಎಲ್ಲ ಚಟುವಟಿಕೆಯನ್ನೂ ಅವರಿಗೆ ತಿಳಿಸಬೇಕು ಎಂದು ಯಾರಾದರೂ ಬಯಸಿದರೆ ಅದು ಒಂದು ಗೀಳು.

Parenting Tips: ಮಕ್ಕಳ ವಿಚಾರದಲ್ಲಿ ಮಾಡೋ ಈ ತಪ್ಪುಗಳು ಅವರ ಜೀವನಕ್ಕೆ ನೆಗೆಟಿವ್ ಆಗಬಹುದು!

ಜಗತ್ತನ್ನು ಮರೆಯುವುದು

ನೀವು ಅಥವಾ ಯಾರಾದರೂ ಒಬ್ಬ ವ್ಯಕ್ತಿಯೊಂದಿಗೆ ಗೀಳನ್ನು ಹೊಂದಿದ್ದರೆ, ಅವನು ಅಥವಾ ಅವಳು ತಮ್ಮ ಸುತ್ತಲಿನ ಎಲ್ಲರನ್ನು ಎಲ್ಲವನ್ನೂ ಮರೆತುಬಿಡುತ್ತಾರೆ. ಅವರು ಸ್ನೇಹಿತರು ಅಥವಾ ಕುಟುಂಬದೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗುವುದಿಲ್ಲ. ಅವರ ದೈನಂದಿನ ನಿಯಮಿತ ಸಂಗತಿಗಳು ತಪ್ಪುತ್ತವೆ. ನಿಯಮಿತವಾಗಿ ನಡೆಯುವುದಿಲ್ಲ.

ದ್ರೌಪದಿಗೆ ಐದು ಜನ ಗಂಡಂದಿರು ಅನ್ನೋದರ ಅರ್ಥವೇನು?

ನಿಯಂತ್ರಿಸುವ ಚಟ (controling)

ನೀನು ಎಲ್ಲಿಗೆ ಹೋಗುತ್ತಿದ್ದೀಯಾ? ಅವನು ಯಾರು? ಫೋನಿನಲ್ಲಿ ಯಾಕೆ ಇಷ್ಟು ಹೊತ್ತು ಮಾತಾಡ್ತಿದ್ದೆ? ನಿನ್ನ ಗೆಳತಿಯ ಸ್ಥಳಕ್ಕೆ ಹೋಗಬೇಕಾದ ಅಗತ್ಯವೇನು? ನೀನು ಅವನನ್ನು ಅಥವಾ ಅವಳನ್ನು ಏಕೆ ಆಗಾಗ್ಗೆ ಭೇಟಿಯಾಗುತ್ತೀಯಾ? ಸ್ನೇಹಿತರಾಗಿದ್ದರೂ ಸಹ, ಅಥೌಆ ಸಲಿಂಗ ಸಂಬಂಧದಲ್ಲಿಯೂ ಕೆಲವರು ಇಂಥ ಪ್ರಶ್ನೆಗಳಿಂದ ನಿಮ್ಮ ತಲೆ ತಿನ್ನಬಹುದು. ಅಂಥವರು ನಿಮ್ಮ ಕುರಿತು ಗೀಳು ಹೊಂದಿದ್ದಾರೆಂದೇ ಅರ್ಥ. ಇವರಿಗೆ ಕೌನ್ಸೆಲಿಂಗ್ ಮಾಡಿಸಬೇಕು, ಮನೋವೈದ್ಯಕೀಯ ಚಿಕಿತ್ಸೆ ಕೊಡಿಸಬೇಕು. ಅಥವಾ ಅವರಿಂದ ದೂರ ಸರಿಯು ನಿರ್ಧಾರವನ್ನಾದರೂ ನೀವು ಮಾಡಲೇಬೇಕು.

Weight loss: ಏನೇನೋ ಸರ್ಕಸ್ ಮಾಡೋ ಬದಲು ಚೆನ್ನಾಗಿ ನಿದ್ರಿಸಿ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?
ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ