ಹಿಂದಿನ ಕಾಲದಲ್ಲಿ ಕನ್ಯತ್ವಕ್ಕೆ ಹೆಚ್ಚಿನ ಮಹತ್ವ ನೀಡಲಾಗಿತ್ತು. ಫಸ್ಟ್ ನೈಟ್ ಬ್ಲೀಡಿಂಗ್ ಆಗಿಲ್ಲವೆಂದ್ರೆ ಆಕೆ ಕನ್ಯೆಯಲ್ಲ ಎಂದು ಆರೋಪ ಮಾಡ್ತಿದ್ದರು. ಆದ್ರೀಗ ಜನರ ಆಲೋಚನೆ ಬದಲಾಗಿದೆಯಾದ್ರೂ ಕನ್ಯೆಯಾಗಿರುವ ಹುಡುಗಿಯೇ ನನ್ನ ಪತ್ನಿಯಾಗಿರ್ಬೇಕೆಂಬ ಕನಸು ಅನೇಕ ಪುರುಷರಿಗಿರುತ್ತದೆ. ಪತ್ನಿ ಕನ್ಯೆಯಲ್ಲ ಎಂಬದು ಗೊತ್ತಾದ್ರೆ ಕಷ್ಟ. ಆಗ ಹುಡುಗಿಯರು ಕೆಲ ಟಿಪ್ಸ್ ಪಾಲನೆ ಮಾಡ್ಲೇಬೇಕು.
ಇತ್ತೀಚಿನ ದಿನಗಳಲ್ಲಿ ಯುವಜನರು ಮದುವೆ (Marriage) ಗೆ ಮೊದಲು ಸಂಭೋಗ (Intercourse) ನಡೆಸಲು ಮುಂದಾಗ್ತಾರೆ. ಹೆಚ್ಚಿನ ಹುಡುಗಿಯರು ಬೋಲ್ಡ್ (Bold) ಆಗಿರ್ತಾರೆ. ಮದುವೆಗೆ ಮುಂಚೆ ಸಂಭೋಗ ಬೆಳೆಸುವುದು ಅವರಿಗೆ ವಿಶೇಷವಾಗಿರೋದಿಲ್ಲ. ಆದ್ರೆ ಮದುವೆ ನಂತ್ರ ಮೊದಲ ರಾತ್ರಿ ಸ್ವಲ್ಪ ಭಯ ಕಾಡುತ್ತದೆ. ಮದುವೆಗೆ ಮೊದಲು ನಡೆಸಿದ ಸೆಕ್ಸ್ (Sex) ಬಗ್ಗೆ ಪತಿಗೆ ತಿಳಿದ್ರೆ ಎಂಬ ಭಯ. ಕೆಲ ಹುಡುಗಿಯರು ಕನ್ಯತ್ವ ಪುನರ್ ಸ್ಥಾಪಿಸಿಕೊಳ್ಳಲು ಆಪರೇಷನ್ (Operation ) ಮಾಡಿಸಿಕೊಳ್ತಾರೆ. ಮತ್ತೆ ಕೆಲ ಹುಡುಗಿಯರು ಏನ್ ಮಾಡ್ಬೇಕೆಂಬ ಗೊಂದಲದಲ್ಲಿರ್ತಾರೆ. ಹನಿಮೂನ್ ಹೆಸರು ಕೇಳಿದ ಹುಡುಗಿಯರು ನಾಚಿಕೆಕೊಳ್ತಾರೆ. ಆದ್ರೆ ಮದುವೆಗೂ ಮುನ್ನ ಸಂಭೋಗ ನಡೆಸಿದ ಹುಡುಗಿಯರಿಗೆ ನಾಚಿಕೆ ಬದಲು ಭಯ, ಆತಂಕವಿರುತ್ತದೆ. ಗಂಡನ ಮುಂದೆ ತನ್ನ ನೈಜತೆಯನ್ನು ಬಹಿರಂಗಪಡಿಸೋದು ಹೇಗೆ ಎಂಬುದನ್ನು ನಾವು ಹೇಳ್ತೇವೆ.
ಸೆಕ್ಸ್ ಬಗ್ಗೆ ಅಜ್ಞಾನಿ ಎನ್ನುವಂತೆ ವರ್ತಿಸಿ : ಈಗಾಗಲೇ ಅನುಭವವಾಗಿದೆ ಎಂಬುದು ಗೊತ್ತಾದ್ರೆ ಪತಿ ತನ್ನನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ಆತಂಕವಿರುತ್ತದೆ. ದಾಂಪತ್ಯ ಸುಖಕರವಾಗಿರಬೇಕೆಂದ್ರೆ ಕೆಲವೊಂದು ಸಂಗತಿಯನ್ನು ಮುಚ್ಚಿಡುವುದು ಅನಿವಾರ್ಯ. ಹಾಗಾಗಿ ನೀವು ಈ ವಿಷ್ಯವನ್ನು ಮುಚ್ಚಿಟ್ಟು ಜೀವನ ನಡೆಸ್ತೀರಿ ಎಂದಾದ್ರೆ ಸೆಕ್ಸ್ ಬಗ್ಗೆ ನಿಮಗೆ ಏನೂ ತಿಳಿದಿಲ್ಲ ಎನ್ನುವಂತೆ ನೀವು ವರ್ತಿಸಬೇಕು.
ಇದನ್ನೂ ಓದಿ: ಮದುವೆಯಾದ ನಂತರ ಹೊಸ ಮನೆಯಲ್ಲಿ ಹೇಗಿದ್ರೆ ಲೈಫ್ ಚೆನ್ನಾಗಿರುತ್ತೆ
ನಿಮ್ಮ ಮೇಲೆ ಸಂಪೂರ್ಣ ಗಮನ ಇರುವಂತ ಜಾದುಮಾಡಿ : ಮೊದಲೇ ಸಂಭೋಗ ನಡೆಸಿಯಾಗಿ ಹೋಗಿದೆ. ಈಗ ಅದ್ರ ಬಗ್ಗೆ ಚಿಂತಿಸಿ ಪ್ರಯೋಜನವಿಲ್ಲ. ಹಾಗಾಗಿ ನಿಮ್ಮನ್ನು ನೀವು ಸಂಪೂರ್ಣ ಪತಿಗೆ ಅರ್ಪಿಸಿಕೊಳ್ಳಬೇಕು. ಹಾಗೆಯೇ ಪತಿಯ ಗಮನ ಸಂಪೂರ್ಣ ನಿಮ್ಮ ಮೇಲಿರಬೇಕು. ಈ ವೇಳೆ ನೀವು ಜಾದು ಮಾಡ್ಬೇಕಾಗುತ್ತದೆ. ನಿಮ್ಮ ಪತಿ ಕಣ್ಣು ನಿಮ್ಮ ಸೌಂದರ್ಯದ ಮೇಲೆ ಬೀಳುವಂತೆ ಮಾಡಿ. ಕೆಲ ಚೇಷ್ಟೆಗಳಿಂದ ಅವರನ್ನು ಉತ್ತೇಜಿಸಿ. ಅವರ ತಲೆಗೆ ಬೇರೆ ಆಲೋಚನೆ ಬರದಂತೆ ಮಾಡಿ.
ಫೋರ್ಪ್ಲೇಗೆ ಗಮನ ನೀಡಿ : ಮೊದಲ ರಾತ್ರಿ ಫೋರ್ ಪ್ಲೇಯನ್ನು ತರಾತುರಿಯಲ್ಲಿ ಮುಗಿಸಬೇಡಿ. ಇದ್ರಿಂದ ನಿಮ್ಮ ಸಂಗಾತಿಗೆ ನಿಮ್ಮ ಬಗ್ಗೆ ಆಲೋಚನೆ ಮಾಡಲು ತುಂಬಾ ಸಮಯ ಸಿಗುತ್ತದೆ. ಫೋರ್ ಪ್ಲೇಯನ್ನು ನಿಧಾನವಾಗಿ ಶುರು ಮಾಡಿ ನಿಧಾನವಾಗಿ ಮುಗಿಸಿ.
ಕೆಲ ತಪ್ಪುಗಳನ್ನು ಉದ್ದೇಶಪೂರ್ವಕವಾಗಿ ಮಾಡಿ : ಸೆಕ್ಸ್ ಬಗ್ಗೆ ನಿಮಗೆ ತಿಳಿದಿದ್ದರೂ ಸಹ, ಉದ್ದೇಶಪೂರ್ವಕವಾಗಿ ಅವರ ಮುಂದೆ ಗೊತ್ತಿಲ್ಲದಂತೆ ವರ್ತಿಸಿ. ಅವರ ಖಾಸಗಿ ಅಂಗ ನೋಡಿ ನಾಚಿಕೊಳ್ಳುವುದು, ಭಯಪಡುವುದು ಸೇರಿದಂತೆ ಕೆಲ ತಪ್ಪು ಮಾಡಿ. ನಿಮ್ಮ ಪತಿ ಕೂಡ ಇದರಲ್ಲಿ ಹೊಸಬರಾಗಬಹುದು ಎಂಬುದನ್ನು ನೆನಪಿನಲ್ಲಿಡಿ. ಅವರು ಮಾಡುವ ತಪ್ಪನ್ನು ನೀವು ಸರಿಪಡಿಸಲು ಹೋದ್ರೆ ಅವರಿಗೆ ಅನುಮಾನ ಬರಬಹುದು.
ಇದನ್ನೂ ಓದಿ: Relationship Tips: ಲೈಂಗಿಕ ಬಯಕೆಯಾದಾಗ ಬರುವ ಪತಿ, ಇನ್ನೊಬ್ಬನ ಪ್ರೀತಿಗೆ ಬಿದ್ದ ಪತ್ನಿ
ಇಲ್ಲಿ ಸೌಂಡ್ ಅತ್ಯಗತ್ಯ : ಮೊದಲ ರಾತ್ರಿ ಸಂಗಾತಿ ಜೊತೆ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಸೌಂಡ್ ಬೇಕು ಎನ್ನುತ್ತಾರೆ ತಜ್ಞರು. ಇದು ಪತಿಯನ್ನು ಮತ್ತಷ್ಟು ಉತ್ತೇಜಿಸುತ್ತದೆ. ಹಾಗೆಯೇ ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಮಹಿಳೆಯರಿಗೆ ನೋವಾಗುತ್ತದೆ. ಸುಮ್ಮನೆ ಸೌಂಡ್ ಇಲ್ಲದೆ ಸಂಬಂಧ ಬೆಳೆಸಲು ಇದು ಬಾಯ್ ಫ್ರೆಂಡ್ ಮನೆಯಲ್ಲ. ಇಲ್ಲವೆ ಕದ್ದುಮುಚ್ಚಿ ನೀವು ಸಂಬಂಧ ಬೆಳೆಸುತ್ತಿಲ್ಲ. ನಿಮಗೆ ನೋವಾಗಿಲ್ಲವೆಂದ್ರೂ ನೋವಾದಂತೆ ನೀವು ನಾಟಕವಾಡುವ ಅನಿವಾರ್ಯತೆಯಿರುತ್ತದೆ.
ಮೊದಲ ರಾತ್ರಿ ಬ್ಲೀಡಿಂಗ್ : ಈ ಎಲ್ಲ ವಿಧಾನವನ್ನು ಅನುಸರಿಸಿದ್ರೂ ನಿಮ್ಮ ಪತಿ ಇನ್ನೂ ಹಳೇ ಪದ್ಧತಿಯನ್ನು ನಂಬುತ್ತಿದ್ದರೆ ಅವರಿಗೆ ಮಾಹಿತಿ ನೀಡಬೇಕು. ಮೊದಲ ಬಾರಿಯ ಸಂಭೋಗದಿಂದ ಮಾತ್ರವಲ್ಲ ಕ್ರೀಡೆ ಸೇರಿದಂತೆ ಬೇರೆ ಕಾರಣಗಳಿಂದಲೂ ಕನ್ಯತ್ವ ಪೊರೆ ಹರಿಯುತ್ತದೆ ಎಂಬುದನ್ನು ತಿಳಿಸಬೇಕು.