ಮೆಕ್ಸಿಕೋದಲ್ಲಿ ಮೊಸಳೆಯನ್ನೇ ಮದುವೆಯಾದ ಮೇಯರ್ !

Published : Jul 02, 2022, 10:37 AM IST
ಮೆಕ್ಸಿಕೋದಲ್ಲಿ ಮೊಸಳೆಯನ್ನೇ ಮದುವೆಯಾದ ಮೇಯರ್ !

ಸಾರಾಂಶ

ಒಂದೊಂದು ದೇಶದಲ್ಲಿ ಒಂದೊಂದು ರೀತಿಯ ಪದ್ಧತಿ, ಆಚರಣೆಗಳು ಇರುತ್ತವೆ. ಹಾಗೆಯೇ ಮದುವೆ (Marriage) ವಿಚಾರದಲ್ಲಿಯೂ ಭಿನ್ನ-ವಿಭಿನ್ನ ರೀತಿ-ನೀತಿಯನ್ನು ಅನುಸರಿಸಲಾಗುತ್ತದೆ. ಆದ್ರೆ ಮೆಕ್ಸಿಕೋ (Mexico)ದಲ್ಲಿ ಮಾತ್ರ ಮೇಯರ್‌ (Mayor) ಒಬ್ರು ಮೊಸಳೆ (Alligator)ಯನ್ನು ವಿವಾಹವಾಗಿದ್ದಾರೆ. ಇದೆಂಥಾ ವಿಚಿತ್ರ ಪದ್ಧತಿ, ಇದಕ್ಕೇನು ಕಾರಣ. ಇಲ್ಲಿದೆ ಡೀಟೈಲ್ಸ್.

ಕಾಲ ಬದಲಾಗುತ್ತಿದೆ. ಜೊತೆಗೆ ಸಂಬಂಧದ (Relationship) ಕುರಿತಾಗಿರುವ ಜನರ ಮನೋಭಾವ ಸಹ ವಿಚಿತ್ರವಾಗಿ ಪರಿವರ್ತನೆಗೊಳ್ಳುತ್ತಿದೆ. ಸಮಾಜ (Society)ದಲ್ಲಿ ಹಿಂದಿನಿಂದಲೂ ಗಂಡು-ಹೆಣ್ಣು (Men-women) ಮದುವೆಯಾಗೋದು ರೂಢಿಯಲ್ಲಿದೆ. ಆದ್ರೆ ಇತ್ತೀಚಿಗೆ ಜನ್ರು ರೋಬೋಟ್‌ (Robot), ಕನಸಿನಲ್ಲಿ ಬರುವ ಹುಡುಗಿ, ವಿಮಾನದ ಜೊತೆ ಹೀಗೆ ಚಿತ್ರ-ವಿಚಿತ್ರವಾಗಿ ಮದ್ವೆಯಾಗ್ತಾರೆ. ಹೆಣ್ಣು ಗಂಡು ಮದುವೆಯಾಗುವುದು ಹಾಗಿರಲಿ, ಹೆಣ್ಣು ಹೆಣ್ಣನ್ನೇ ಮದುವೆಯಾಗುವುದು, ಗಂಡು ಗಂಡನ್ನೇ ಮದುವೆಯಾಗುವುದು ಅಚ್ಚರಿಯ ವಿಷಯವಾಗಿ ಉಳಿದಿಲ್ಲ. ಇದೆಲ್ಲವನ್ನೂ ಬಿಟ್ಟು ರೋಬೋಟ್, ಕಂಪ್ಯೂಟರೈಸ್ಡ್‌ ವರ್ಷನ್ ವ್ಯಕ್ತಿ, ಹೋಲೋಗ್ರಾಮ್ (ವ್ಯಕ್ತಿಯ ಕಾಲ್ಪನಿಕ ರೂಪ)ನ್ನೂ ಮದುವೆಯಾದವರೂ ಇದ್ದಾರೆ.  

ಜನರು ವಿಮಾನ, ಗೊಂಬೆ ಹೀಗೆ ವಸ್ತುಗಳನ್ನು ಮದ್ವೆಯಾಗೋದು ಒಂದೆಡೆಯಾದ್ರೆ, ಇಲ್ಲೊಂದೆಡೆ ವ್ಯಕ್ತಿಯೊಬ್ಬರು ಮೊಸಳೆಯನ್ನೇ ಮದ್ವೆಯಾಗಿದ್ದಾರೆ. ಹೌದು, ಮೆಕ್ಸಿಕೋದಲ್ಲಿ ಮೇಯರ್‌ ಒಬ್ರು ಮೊಸಳೆಯನ್ನು ವಿವಾಹವಾಗಿರೋದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಮೆಕ್ಸಿಕೋದಲ್ಲಿ ಶತಮಾನಗಳಷ್ಟು ಹಳೆಯ ಆಚರಣೆಯ ಪ್ರಕಾರ ಅಲ್ಲಿನ ನಗರದ ಮೇಯರ್ ಮೊಸಳೆಯನ್ನು ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ. ಹೀಗೆ ಮದುವೆಯಾಗುವುದರ ಹಿಂದೆ ನಿರ್ಧಿಷ್ಟ ಉದ್ದೇಶವೂ ಇದೆ. ಭಾರತದ ಕೆಲ ಭಾಗಗಳಲ್ಲಿ ಕಾಲಕ್ಕೆ ತಕ್ಕಂತೆ ಮಳೆಯಾಗದಿದ್ದರೆ ಕಪ್ಪೆಗಳಿಗೆ, ಕತ್ತೆಗಳಿಗೆ ಮದುವೆ ಮಾಡಿಸುತ್ತಾರೆ. ನಂಬಿಕೆಯೋ, ಮೂಢನಂಬಿಕೆಯೋ ಜನರಂತೂ ಇಂಥಾ ವಿಚಾರಗಳನ್ನು ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಾರೆ. ಹಾಗೆಯೇ ಮೆಕ್ಸಿಕೋದಲ್ಲಿ ನಿರ್ಧಿಷ್ಟ ಕಾರಣವಿಟ್ಟುಕೊಂಡು ಮೇಯರ್‌ಗೆ ಮೊಸಳೆ ಜೊತೆ ಮದುವೆ ಮಾಡಲಾಗಿದೆ. 

ಹುಡುಗರು ಯಾರೂ ಇಷ್ಟವಾಗ್ತಿಲ್ವಂತೆ ! ವಿಮಾನಾನೇ ಬಾಯ್‌ಫ್ರೆಂಡ್, ಅದನ್ನೇ ಮದ್ವೆಯಾಗ್ತೀನಿ ಅಂತಾಳೆ !

ಮೇಯರ್‌-ಮೊಸಳೆ ವಿವಾಹಕ್ಕೆ ಮಹತ್ವದ ಉದ್ದೇಶವಿದೆ. ಅಲ್ಲಿನ ಸಂಪ್ರದಾಯದ ಪ್ರಕಾರ, ನದಿಯಲ್ಲಿ ಮೀನು ಹಿಡಿಯಲು ಅನುಕೂಲವಾಗುವಂತೆ ಸಾಕಷ್ಟು ಮಳೆಯಾಗಿ, ಬೆಳೆ ಬೆಳೆದರೆ ಜನ ಜೀವನ ಸಮೃದ್ಧವಾಗಿರುತ್ತದೆ. ಕಾಲಕ್ಕೆ ಸರಿಯಾಗಿ ಮಳೆಯಾಗದಿದ್ದಾಗ ಇಲ್ಲಿನ ಮೇಯರ್ ಮೊಸಳೆಯನ್ನು ಮದುವೆಯಾಗಬೇಕಾಗುತ್ತದೆ. ಹಿಸ್ಪಾನಿಕ್ ಯುಗಕ್ಕೂ ಮೊದಲಿನ ಅವಧಿಯ ಚೊಂಟಾಲ್ ಮತ್ತು ಹುವೆ ಬುಡಕಟ್ಟು ಸಮುದಾಯದಲ್ಲಿ ಪ್ರಕೃತಿಯನ್ನು ಪೂಜಿಸಲು ಈ ಆಚರಣೆ ಚಾಲ್ತಿಯಲ್ಲಿತ್ತು ಎಂದು ತಿಳಿದುಬಂದಿದೆ. ವಿವಾಹ ಕಾರ್ಯಕ್ರಮದಲ್ಲಿ ಸ್ಯಾನ್‌ಪೆಡ್ರೊ ಹ್ವಾಮೆಲುಲಾ ನಗರದ ಮೇಯರ್ ವಿಕ್ಟರ್ ಹ್ಯೂಗೊ ಸೊಸಾ ಪುಟ್ಟ ಮೊಸಳೆಯ ಮೂತಿಗೆ ಮುತ್ತಿಡುವ ಮೂಲಕ ಸಾಂಕೇತಿಕವಾಗಿ ವಿವಾಹವಾದರು.

ಮೊಸಳೆ ಕಚ್ಚದಂತೆ ಅದರ ಬಾಯಿಯನ್ನು ಗಟ್ಟಿಯಾಗಿ ಕಟ್ಟಲಾಗಿತ್ತು. ಪುಟ್ಟ ರಾಜಕುಮಾರಿ ಎಂದು ಕರೆಯಲ್ಪಡುವ ಮೊಸಳೆ ಭೂಮಿತಾಯಿಯನ್ನು ಪ್ರತಿನಿಧಿಸುವ ದೇವತೆ ಎಂದು ನಂಬಲಾಗಿದ್ದು ಸ್ಥಳೀಯ ನಾಯಕನೊಂದಿಗೆ ಆಕೆಯ ವಿವಾಹವು ಮಾನವ-ದೈವಿಕ ಬಾಂಧವ್ಯದ ಸಂಕೇತ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.

ಮೇಯರ್ ಮತ್ತು ಮೊಸಳೆಯ ಮದುವೆ ಅದ್ಧೂರಿಯಾಗಿ ನೆರವೇರಿದೆ. ವಾದ್ಯ ಓಲಗಗಳೊಂದಿಗೆ ಜನರು ವಧುವಾದ ಮೊಸಳೆಯನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಬಂದರು. ಬಳಿಕ ಸಂಪ್ರದಾಯಬದ್ಧವಾಗಿ ಮೆಕ್ಸಿಕೋ ಮೇಯರ್ ಜೊತೆ ಮದುವೆ ಮಾಡಲಾಯಿತು. ಬಳಿಕ ಜನರು ಮೆರವಣಿಗೆ ನಡೆಸಿ ಸಂಭ್ರಮಿಸಿದರು. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಮೂಲದ ಬಗ್ಗೆ ನಮಗೆ ಹೆಮ್ಮೆಯಿದೆ ಮತ್ತು ಈ ಆಚರಣೆಯಿಂದ ತುಂಬಾ ಸಂತೋಷವಾಗಿದೆ ಎಂದು ವಿವಾಹವನ್ನು ಆಯೋಜಿಸಿದ್ದ , ದೇವಮಾತೆ ಎಂದು ಕರೆಸಿಕೊಳ್ಳುವ ಎಲಿಯಾ ಎಡಿತ್ ಆಗ್ವಿಲರ್ ಹೇಳಿದ್ದಾರೆ.

Sologamy Marriage: ತನ್ನನ್ನು ತಾನು ಮದುವೆಯಾಗ್ತಿರೋ ಹುಡುಗಿ ಹನಿಮೂನ್ ಎಲ್ಲಿ?

ಬ್ರೆಜಿಲ್‌ನಲ್ಲಿ ಬೊಂಬೆಯನ್ನೇ ಮದ್ವೆಯಾದ ಮಹಿಳೆ
ಬ್ರೆಜಿಲ್‌ನಲ್ಲೊಬ್ಬ ಮಹಿಳೆ ಡಾಲ್‌ ಅನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಮಾತ್ರವಲ್ಲ, ತಾನು ಡಾಲ್‌ನ್ನು ಮದ್ವೆಯಾಗಿ ಮಗುವನ್ನೂ ಪಡೆದುಕೊಂಡಿರುವುದಾಗಿ ಹೇಳಿದ್ದಾಳೆ. ಮೆರಿವೊನ್ ರೋಚಾ ಮೊರೇಸ್ ಅವರು  ಡಾಲ್‌ ಮಾರ್ಸೆಲೊ ಅವರನ್ನು ಭೇಟಿಯಾದಾಗ ಮೊದಲ ನೋಟದಲ್ಲೇ ಪ್ರೀತಿ ಉಂಟಾಗಿತ್ತಂತೆ. ಮೆರಿವೊನ್ ಒಂಟಿಯಾಗಿದ್ದು ಬೇಸರ ಪಟ್ಟುಕೊಳ್ಳುತ್ತಿದ್ದ ಕಾರಣ ಆಕೆಯ ತಾಯಿ ಅವರಿಗೆ ಈ ಡಾಲ್ ಗಿಫ್ಟ್ ಕೊಟ್ಟಿದ್ರಂತೆ. ಆದ್ರೆ ಕ್ರಮೇಣ ಮೆರಿವೊನ್‌ಗೆ ಡಾಲ್‌ ಮೇಲೆ ಪ್ರೀತಿ ಉಂಟಾಗಿ ಅದನ್ನೇ ಮದ್ವೆಯಾಗಲು ನಿರ್ಧರಿಸಿದ್ರಂತೆ. ಮೆರಿವೊನ್ ಮತ್ತು ಮಾರ್ಸೆಲೊ ಅವರು ಭೇಟಿಯಾದ ದಿನದಿಂದಲೂ ಪ್ರಣಯ ಸಂಬಂಧವನ್ನು ಹೊಂದಿದ್ದಾರಂತೆ.

250 ಅತಿಥಿಗಳು ಭಾಗವಹಿಸಿದ್ದ ಸುಂದರ ಸಮಾರಂಭದಲ್ಲಿ ದಂಪತಿಗಳು ವಿವಾಹವಾದರು. ಇದು ನನಗೆ ಅದ್ಭುತವಾದ ದಿನ, ಬಹಳ ಮುಖ್ಯ, ತುಂಬಾ ಭಾವನಾತ್ಮಕವಾಗಿದೆ. ಅವನು ನನ್ನ ಜೀವನದಲ್ಲಿ ನಾನು ಯಾವಾಗಲೂ ಬಯಸಿದ ವ್ಯಕ್ತಿ. ಅವನೊಂದಿಗೆ ವೈವಾಹಿಕ ಜೀವನ ಅದ್ಭುತವಾಗಿದೆ. ಅವನು ನನ್ನೊಂದಿಗೆ ಜಗಳವಾಡುವುದಿಲ್ಲ, ವಾದ ಮಾಡುವುದಿಲ್ಲ ಮತ್ತು ನನ್ನ ಎಲ್ಲಾ ಭಾವನೆಯನ್ನು ಅರ್ಥಮಾಡಿಕೊಳ್ಳುತ್ತಾನೆ ಎಂದು ಮೆರಿವೊನ್ ಹೇಳುತ್ತಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Chanakya Niti: ಇಂಥಾ ಮಹಿಳೆಯರ ಕೈ ಹಿಡಿದ್ರೆ ಜೀವನ ಪರ್ಯಂತ ಅಳೋದು ಗ್ಯಾರಂಟಿ: ಮದುವೆ ಬಗ್ಗೆ ಪುರುಷರಿಗೆ ಕಿವಿಮಾತು
ಮೋಸ ಮಾಡುವ ಗಂಡನನ್ನು ಕಂಡು ಹಿಡಿಯೋದು ಹೇಗೆ?