ಡೇಟಿಂಗ್‌ ಟಿಪ್ಸ್: ಮೊದಲ ಭೇಟಿ ಮಧುರವಾಗಿಸಲು ಹಿಂಗ್‌ ಮಾಡಿ…

By Suvarna News  |  First Published May 22, 2021, 11:48 AM IST

ಸಂಗಾತಿಯ ಮೊದಲ ಭೇಟಿ ಬದುಕಿನ ಅತ್ಯಂತ ಮಧುರ ಕ್ಷಣಗಳಲ್ಲೊಂದು.ಆದ್ರೆ ಈ ಮೊದಲ ಡೇಟಿಂಗ್‌ ಮನಸ್ಸಲ್ಲಿ ಒಂದಿಷ್ಟು ಗೊಂದಲ, ಭಯ, ಆತಂಕಕ್ಕೂ ಕಾರಣವಾಗುತ್ತೆ.ಆದ್ರೆ ಕೆಲವು ಟಿಪ್ಸ್‌ ಪಾಲಿಸಿದ್ರೆ ಇವೆಲ್ಲವನ್ನೂ ದೂರವಾಗಿಸಿಕೊಂಡು ಮೊದಲ ಭೇಟಿಯನ್ನು ಎಂಜಾಯ್‌ ಮಾಡ್ಬಹುದು.


ಡೇಟಿಂಗ್‌ ಅಂದ್ರೇನೆ ಹಾಗೇ, ಭಯ ಹಾಗೂ ಉತ್ಸಾಹದ ಸಮ್ಮಿಶ್ರಣ.ಯಾವ ಬಣ್ಣದ ಡ್ರೆಸ್‌ ಹಾಕೋದು,ಹೇಗೆ ಡ್ರೆಸ್‌ ಮಾಡಿಕೊಂಡ್ರೆ ಚೆನ್ನಾಗಿ ಕಾಣಿಸ್ಬಹುದು,ಏನ್‌ ಗಿಫ್ಟ್‌ ನೀಡಿದ್ರೆ ಇಷ್ಟವಾಗ್ಬಹುದು....ಹೀಗೆ ಹತ್ತಾರು ಪ್ರಶ್ನೆಗಳು ತಲೆ ಹೊಕ್ಕು ಗೊಂದಲ, ಆತಂಕ ಎಲ್ಲವೂ ಸೃಷ್ಟಿಯಾಗೋದು ಸಹಜ. ಅದ್ರಲ್ಲೂ ಮೊದಲ ಬಾರಿಗೆ ಡೇಟಿಂಗ್‌ಗೆ ಹೋಗ್ತಿದ್ದೀರಿ ಅಂದ್ರೆ ಭಯ,ಆತಂಕ,ಉದ್ವೇಗ ಎಲ್ಲವೂ ತುಸು ಹೆಚ್ಚೇ ಇರುತ್ತೆ.ಡೋಂಟ್‌ ವರಿ,ಮೊದಲ ಭೇಟಿಯಲ್ಲೇ ನಿಮ್ಮ ಬಗ್ಗೆ ಬೆಸ್ಟ್‌ ಅಭಿಪ್ರಾಯ ಮೂಡುವಂತೆ ಮಾಡಲು ಈ ಟಿಪ್ಸ್‌ ಅನುಸರಿಸಿ.

ಮಕ್ಕಳಿಗೆ ಅಡುಗೆ ಕಲಿಸಬೇಕು ನಿಜ, ಆದರೆ, ಜೋಪಾನ

Tap to resize

Latest Videos

undefined

ಲೇಟ್‌ ಲತೀಫ್‌ ಆಗ್ಬೇಡಿ
ನಾವು ಸಮಯಕ್ಕೆ ಎಷ್ಟು ಮಹತ್ವ ನೀಡುತ್ತೇವೆ ಎನ್ನೋದು ಕೂಡ ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ ನಿಗದಿತ ಸಮಯಕ್ಕೆ ಸರಿಯಾಗಿ ಭೇಟಿಯ ಸ್ಥಳ ತಲುಪುವಂತೆ ಯೋಜನೆ ರೂಪಿಸಿಕೊಳ್ಳಿ. ನಿಗದಿತ ಸಮಯಕ್ಕಿಂತ ೧೦-೧೫ ನಿಮಿಷ ಮುಂಚಿತವಾಗಿ ಆ ಸ್ಥಳ ತಲುಪೋದು ಉತ್ತಮ. ಇದ್ರಿಂದ ನಿಮ್ಮ ಮನಸ್ಸು ಒತ್ತಡಮುಕ್ತವಾಗಿರುತ್ತೆ. ಮನಸ್ಸು ಶಾಂತವಾಗಿರೋವಾಗ ಎದುರಿಗಿರೋ ವ್ಯಕ್ತಿಯೊಂದಿಗೆ ಸಂಭಾಷಣೆಯೂ ಉತ್ತಮವಾಗಿಯೇ ನಡೆಯುತ್ತೆ. ಯಾರೂ ಕೂಡ ಇನ್ನೊಬ್ಬರಿಗಾಗಿ ಕಾಯುತ್ತ ತಮ್ಮ ಸಮಯ ವ್ಯರ್ಥ ಮಾಡಲು ಬಯಸೋದಿಲ್ಲ. ಇನ್ನೊಬ್ಬರ ಸಮಯಕ್ಕೆ ನಾವು ಬೆಲೆ ನೀಡಿದಾಗ ಆ ವ್ಯಕ್ತಿಗೆ ಖಂಡಿತವಾಗಿಯೂ ನಮ್ಮ ಬಗ್ಗೆ ಗೌರವ ಮೂಡುತ್ತೆ. ಒಂದು ವೇಳೆ ನೀವು ತಲುಪೋದು ತಡವಾಗುತ್ತೆ ಎಂದಾದ್ರೆ ನಿಮ್ಮ ಸಂಗಾತಿಗೆ ಒಂದು ಕರೆ ಅಥವಾ ಮೆಸೇಜ್‌ ಮೂಲಕ ಈ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಿ. 

ಸ್ಥಳ ನಿಗದಿಪಡಿಸಿ
ಕೊನೆಯ ಕ್ಷಣದಲ್ಲಿ ಅಥವಾ ಭೇಟಿಯಾದ ಮೇಲೆ ಎಲ್ಲಿ ಕುಳಿತು ಮಾತನಾಡೋದು ಎಂದು ಯೋಚಿಸೋ ಬದಲು ಮೊದಲೇ ಈ ಕುರಿತು ನಿರ್ಧಾರ ಕೈಗೊಳ್ಳೋದು ಉತ್ತಮ. ನೀವಿಬ್ಬರು ಮೊದಲ ಬಾರಿಗೆ ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳಲು ಇಬ್ಬರಿಗೂ ಕಂಫರ್ಟ್‌ ನೀಡೋವಂತಹ ಸ್ಥಳ ಆಯ್ದುಕೊಳ್ಳೋದು ಮುಖ್ಯ. ಹಾಗಂತ ಇದಕ್ಕಾಗಿ ತುಂಬಾ ದುಬಾರಿ ಬೆಲೆಯ ರೆಸ್ಟೋರೆಂಟ್‌ ಅಥವಾ ಕೆಫಿಟೇರಿಯಾವನ್ನೇ ಆಯ್ದುಕೊಳ್ಳಬೇಕು ಎಂದೇನಿಲ್ಲ.

ರೆಗ್ಯುಲರ್‌ ಸೆಕ್ಸ್ ಮಾಡಿದ್ರೆ ಇಮ್ಯೂನಿಟಿ ಹೆಚ್ಚಾಗುತ್ತಾ?

ಸಂದರ್ಭಕ್ಕೆ ತಕ್ಕ ಉಡುಗೆ ತೊಡಿ
ಡೇಟಿಂಗ್ ಹೋಗೋವಾಗ ಸುಂದರವಾಗಿ ಕಾಣಿಸಬೇಕು ಎಂಬ ಬಯಕೆ ಇರೋದು ಸಹಜ. ಹಾಗಂತ ಸ್ಥಳ ಹಾಗೂ ಸಂದರ್ಭವನ್ನು ಪರಿಗಣಿಸದೆ ನಿಮ್ಮಿಷ್ಟದಂತೆ ಡ್ರೆಸ್‌ ಮಾಡಿಕೊಂಡು ಹೋದ್ರೆ ಮುಜುಗರ ಅನುಭವಿಸಬೇಕಾಗುತ್ತೆ. ಉದಾಹರಣೆಗೆ ಪಿಕ್‌ನಿಕ್‌ಗೆ ಹೋಗುತ್ತಿದ್ರೆ ಕೋಟ್‌, ಟೈ ಅಥವಾ ಸೀರೆ, ಹೈ ಹೀಲ್ಸ್‌ ಧರಿಸಿ ಹೋದ್ರೆ ಹೇಗೆ? 

ಎಕ್ಸ್‌ ಬಗ್ಗೆ ಚರ್ಚೆ ಬೇಡ
ನಿಮ್ಮ ಎಕ್ಸ್‌ ಗರ್ಲ್‌ಫ್ರೆಂಡ್‌ ಅಥವಾ ಬಾಯ್‌ಫ್ರೆಂಡ್‌ ಬಗ್ಗೆ ಮೊದಲ ಭೇಟಿಯಲ್ಲೇ ಚರ್ಚಿಸೋದು ಸರಿಯಲ್ಲ. ಇದು ತೀರಾ ಖಾಸಗಿ ವಿಚಾರವಾಗಿದ್ದು, ಮೊದಲ ಡೇಟ್‌ನಲ್ಲೇ ಅಷ್ಟೊಂದು ಆಳಕ್ಕಿಳಿದು ನಿಮ್ಮ ಎಕ್ಸ್‌ ಬಗ್ಗೆ ಅಥವಾ ನಿಮ್ಮ ಸಂಗಾತಿಯ ಎಕ್ಸ್‌ ಬಗ್ಗೆ ಪ್ರಶ್ನಿಸೋದು ಸೂಕ್ತವಲ್ಲ. ಅಲ್ಲದೆ,ನೀವು ನಿಮ್ಮ ಎಕ್ಸ್‌ ಬಗ್ಗೆ ಮಾತನಾಡೋದ್ರಿಂದ ನೀವಿನ್ನೂ ಹಳೆಯ ಸಂಬಂಧದಿಂದ ಹೊರಬಂದಿಲ್ಲ ಎಂಬುದು ಸಾಬೀತಾಗುತ್ತೆ.

ಮನೆಯೊಳಗೇ ಕಪಲ್ ಲೈಫ್ ಎಂಜಾಯ್ ಮಾಡೋದೇಗೆ ?

ಬಿಲ್‌ ಹಂಚಿಕೊಳ್ಳೋದು ಉತ್ತಮ
ರೆಸ್ಟೋರೆಂಟ್‌ನಲ್ಲಿ ನೀವೇ ಮುಂದೆ ಹೋಗಿ ಬಿಲ್‌ ಪಾವತಿಸುತ್ತೀರಾದ್ರೆ ನಿಜಕ್ಕೂ ಒಳ್ಳೆಯದು. ಆದ್ರೆ ನಿಮ್ಮ ಬಳಿ ಅಷ್ಟೊಂದು ಹಣವಿಲ್ಲವೆಂದೋ ಅಥವಾ ಬೇರೆ ಯಾವುದೋ ಕಾರಣಕ್ಕೆ ನೀವು ಸಂಗಾತಿಯೇ ಬಿಲ್‌ ಪಾವತಿಸಲಿ ಎಂದು ಬಯಸೋದು ತಪ್ಪು. ಇದ್ರಿಂದ ನಿಮ್ಮ ವ್ಯಕ್ತಿತ್ವದ ಬಗ್ಗೆ ತಪ್ಪು ಭಾವನೆ ಮೂಡಬಹುದು. ಹೀಗಾಗಿ ಇಂಥ ಸಮಯದಲ್ಲಿ ಬಿಲ್‌ ಇಬ್ಬರೂ ಸಮನಾಗಿ ಹಂಚಿಕೊಳ್ಳೋ ಪ್ರಸ್ತಾಪ ಮುಂದಿಡಿ. ಇದ್ರಿಂದ ನೀವೊಬ್ಬ ಸ್ನೇಹಪರ ಹಾಗೂ ಸ್ವಾಭಿಮಾನಿ ವ್ಯಕ್ತಿಯೆಂಬುದು ಸ್ಪಷ್ಟವಾಗುತ್ತೆ.

ನಿಮ್ಮ ಬಗ್ಗೆ ಜಾಸ್ತಿ ಮಾತು ಬೇಡ
ನಿಮ್ಮ ಭೇಟಿ ಉದ್ದೇಶ ಒಬ್ಬರನ್ನೊಬ್ಬರು ಅರಿತುಕೊಳ್ಳೋದು. ಹಾಗಾಗಿ ನಿಮ್ಮಿಬ್ಬರ ನಡುವೆ ಉತ್ತಮ ಸಂಭಾಷಣೆಯ ಅಗತ್ಯವಿದೆ. ನಿಮ್ಮ ಬಗ್ಗೆಯೇ ಹೇಳುತ್ತ ಕುಳಿತ್ರೆ ನಿಮ್ಮ ಸಂಗಾತಿಗೆ ಮಾತನಾಡಲು ಅವಕಾಶ ಸಿಗದೆ ಹೋಗಬಹುದು. ಆದಕಾರಣ ಅವರ ಆಸಕ್ತಿ, ಉದ್ಯೋಗ, ಹವ್ಯಾಸಗಳ ಬಗ್ಗೆಯೂ ಪ್ರಶ್ನಿಸಿ. ಇದ್ರಿಂದ ಅವರಿಗೂ ನಿಮ್ಮೊಂದಿಗೆ ಮುಕ್ತವಾಗಿ ಮಾತನಾಡಲು ಸಾಧ್ಯವಾಗುತ್ತೆ. ಮೊದಲ ಭೇಟಿ ಮಧುರವಾಗಲು ಈ ಟಿಪ್ಸ್‌ ತಪ್ಪದೇ ಫಾಲೋ ಮಾಡಿ.

click me!