ಮನೆಯೊಳಗೇ ಕಪಲ್ ಲೈಫ್ ಎಂಜಾಯ್ ಮಾಡೋದೇಗೆ ? ಧಮ್ ನೀಡೋ ಐಡಿಯಾಗಳಿವು

By Suvarna News  |  First Published May 20, 2021, 1:18 PM IST

ವಾರಪೂರ್ತಿ ದುಡಿದು ವಾರಾಂತ್ಯದಲ್ಲಿ ಮೋಜು-ಮಸ್ತಿ ಮಾಡಿ ಒತ್ತಡಗಳನ್ನು ದೂರ ಮಾಡಿಕೊಳ್ಳುತ್ತಿದ್ದ ಯುವಜೋಡಿಗಳಿಗೆ ಕಳೆದೊಂದು ವರ್ಷದಿಂದ ಕೊರೋನಾ ಕಾರಣಕ್ಕೆ ಮನೆವಾಸ ವನವಾಸವಾಗಿದೆ. ಆದ್ರೆ ಕ್ರಿಯಾತ್ಮಕವಾಗಿ ಯೋಚಿಸಿದ್ರೆ ಮನೆಯಲ್ಲೂ ಒಂದಿಷ್ಟು ಮೋಜು-ಮಸ್ತಿ ಮಾಡ್ಬಹುದು.


ವಾರದ ಐದು ದಿನ ಕಷ್ಟಪಟ್ಟುದುಡಿದು,ಉಳಿದೆರಡು ದಿನ ಮೋಜು, ಮಸ್ತಿ ಮಾಡುತ್ತಿದ್ದಕಾಲ ಈಗ ನೆನಪು ಮಾತ್ರ. ಅದ್ರಲ್ಲೂ ವಾರಪೂರ್ತಿ ಬ್ಯುಸಿಯಾಗಿದ್ದ ಗಂಡ-ಹೆಂಡ್ತಿಗೆ ವಾರಾಂತ್ಯದ ಶಾಪಿಂಗ್,  ಸಿನಿಮಾ, ಸುತ್ತಾಟ, ಹೋಟೆಲ್ ಫುಡ್, ಪಾರ್ಟಿ ಎಲ್ಲವೂ ಒತ್ತಡ ತಗ್ಗಿಸಿ ಹೊಸ ವಾರವನ್ನು ಬರ ಮಾಡಿಕೊಳ್ಳಲು, ಹೊಸ ಸವಾಲುಗಳನ್ನು ಎದುರಿಸಲು ಜೋಶ್ ತುಂಬುತ್ತಿತ್ತು.ಆದ್ರೆ ಕಳೆದ ಒಂದು ವರ್ಷದಿಂದ ಕೊರೋನಾ ಕಾರಣಕ್ಕೆ ವೀಕೆಂಡ್ ಮಸ್ತಿಗೆ ಬ್ರೇಕ್ ಬಿದ್ದಿದೆ. ಈಗೇನಿದ್ರೂ ಮನೆಯೊಳಗಡೆಯೇ ಸಮಯ ಕಳೆಯಬೇಕಾದ ಅನಿವಾರ್ಯತೆ. ಇಂಥ ಸಮಯದಲ್ಲಿ ಮನಸ್ಸಿಗೆ ಉಲ್ಲಾಸ ನೀಡೋ, ಪತಿ-ಪತ್ನಿ ನಡುವಿನ ಬಾಂಧವ್ಯ ಗಟ್ಟಿ ಮಾಡೋ ಒಂದಿಷ್ಟು ಕಾರ್ಯಗಳ ಮಾಹಿತಿ ಇಲ್ಲಿದೆ.

ಮೂವೀ ನೈಟ್

Tap to resize

Latest Videos

undefined

ಥಿಯೇಟರ್, ಮಲ್ಟಿಫ್ಲೆಕ್ಸ್ಗೆ ಹೋಗಿ ದುಡ್ಡು ಕೊಟ್ಟು ಪಾಪ್ಕಾರ್ನ್ ತಿನ್ನುತ್ತ,  ಸಾಫ್ಟ್ ಡ್ರಿಂಕ್ಸ್ ಕುಡಿಯುತ್ತ ಸಿನಿಮಾ ನೋಡೋದು ಇಂದು ಕನಸೇ ಸರಿ. ಆದ್ರೆ ಮನೆಯಲ್ಲೇ ಪತಿ-ಪತ್ನಿ ಇಬ್ಬರೂ ಒಟ್ಟಿಗೆ ಕೂತು ಪಾಪ್ಕಾರ್ನ್ ತಿನ್ನುತ್ತ ಸಿನಿಮಾ ನೋಡಬಹುದಲ್ಲ! ಈಗಂತೂ ಅಮೇಜಾನ್ ಫ್ರೈಮ್, ನೆಟ್ಫ್ಲಿಕ್ಸ್ ಸೇರಿದಂತೆ ಕೆಲವು  ಸ್ಟ್ರೀಮಿಂಗ್ ಸರ್ವಿಸ್ಗಳಲ್ಲಿ ಹೊಸ, ಜನಪ್ರಿಯ ಸಿನಿಮಾಗಳು, ವೆಬ್ ಸೀರೀಸ್ಗಳು ಲಭ್ಯವಿವೆ. ಕೊರೋನಾ ಬಂದ ಬಳಿಕ ಬಹುತೇಕ ಸಿನಿಮಾಗಳು ಈ ತಾಣಗಳಲ್ಲೇ ರಿಲೀಸ್ ಆಗುತ್ತಿರೋದು ವಿಶೇಷ. ಹೀಗಾಗಿ ಈಗ ಮನೆಯಲ್ಲೇ ಕುಳಿತು ಥಿಯೇಟರ್ ರೀತಿಯ ವಾತಾವರಣ ಸೃಷ್ಟಿಸಿಕೊಂಡು ಪತಿ-ಪತ್ನಿ ತಮ್ಮಿಷ್ಟದ ಸಿನಿಮಾ ನೋಡಿ ಆನಂದಿಸಿ. ಇದ್ರಿಂದ ಒತ್ತಡ, ಭಯ, ಆತಂಕಗಳೆಲ್ಲ ಸ್ವಲ್ಪ ಸಮಯ ನಿಮ್ಮಿಂದ ದೂರವಿರುತ್ತವೆ. ಜೊತೆಗೆ ಇಬ್ಬರೂ ಖುಷಿಯಿಂದ ಒಂದಿಷ್ಟು ಸಮಯ ಜೊತೆಗೆ ಕಳೆದಂತೆ ಆಗುತ್ತದೆ.  

ಕ್ಯಾಂಡಲ್ ಲೈಟ್ ಡಿನ್ನರ್

ವೀಕೆಂಡ್ನಲ್ಲಿ ಐಷಾರಾಮಿ ಹೋಟೆಲ್, ರೆಸಾರ್ಟ್ಗಳಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್ ಸವಿದ ನೆನಪು ನಿಮ್ಮನ್ನು ಕಾಡುತ್ತಿರಬಹುದು. ಡೋಂಟ್ ವರಿ, ಮನೆಯಲ್ಲೇ ಕ್ಯಾಂಡಲ್ ಲೈಟ್ ಡಿನ್ನರ್ ಏರ್ಪಡು ಮಾಡ್ಬಹುದಲ್ಲ. ನಿಮ್ಮಿಬ್ಬರಿಗೂ ಇಷ್ಟವಾದ ಡಿಸ್ಗಳನ್ನು ಸಿದ್ಧಪಡಿಸಿ ವೀಕೆಂಡ್ ರಾತ್ರಿ ಮನೆಯ ದೀಪಗಳನ್ನು ಆರಿಸಿ ಡೈನಿಂಗ್ ಟೇಬಲ್ನಲ್ಲಿ ಕ್ಯಾಂಡಲ್ಗಳನ್ನು ಹಚ್ಚಿ ಇಬ್ಬರೂ ಎದುರು ಬದುರಾಗಿ ಕುಳಿತು ಮಾತನಾಡುತ್ತ ಊಟ ಮಾಡಿ. ಇದು ನಿಮ್ಮಿಬ್ಬರಿಗೂ ಖುಷಿ ನೀಡೋ ಜೊತೆ ಈ ಸಂದಿಗ್ಧ ಸಮಯದಲ್ಲಿ ಮನದಲ್ಲಿ ಮೂಡಿರೋ ಭಯ, ಆತಂಕವನ್ನು ದೂರ ಮಾಡಿ ರಿಲ್ಯಾಕ್ಸ್ ಆಗಲು ನೆರವು ನೀಡುತ್ತೆ.

ಮನೆಯೇ ಆಫೀಸಾದರೆ?

ವರ್ಕ್ಔಟ್

ಬೆಳಗ್ಗೆ ಎದ್ದು ಯೋಗ, ಧ್ಯಾನ, ಅಥವಾ ವ್ಯಾಯಾಮ ಹೀಗೆ ಯಾವುದೇ ವರ್ಕ್ಔಟ್ ಮಾಡೋ ಅಭ್ಯಾಸ ನಿಮ್ಮಿಬ್ಬರಿಗೂ ಇರಬಹುದು. ಇಬ್ಬರು ಬೇರೆ ಬೇರೆ ಸಮಯದಲ್ಲಿ ಎದ್ದು ವರ್ಕ್ಔಟ್ ಮಾಡೋ ಬದಲು ಒಂದೇ ಸಮಯದಲ್ಲಿ ಒಟ್ಟಿಗೆ ವರ್ಕ್ಔಟ್ ಮಾಡೋ ಅಭ್ಯಾಸ ಬೆಳೆಸಿಕೊಳ್ಳಿ. ಹೀಗೆ ಮಾಡೋದ್ರಿಂದ  ದಿನದ ಆರಂಭವನ್ನು ಜೊತೆಯಾಗಿ ಪ್ರಾರಂಭಿಸಿದಂತಾಗುತ್ತೆ. ಹೊಸ ಉಲ್ಲಾಸ, ಹುಮ್ಮಸ್ಸು ಮೂಡುತ್ತೆ.

ಹೊಸ ರೆಸಿಪಿ ಸಿದ್ಧಪಡಿಸಿ

ಅಡುಗೆಯನ್ನುಇಬ್ಬರೂ ಜೊತೆಯಾಗಿ ಮಾಡೋದು ಕೂಡ ಒಳ್ಳೆಯ ಪ್ಲ್ಯಾನ್. ಇದ್ರಿಂದ ಅಡುಗೆಮನೆ ಕೆಲಸದ ಹೊರೆ ಒಬ್ಬರ ಮೇಲೆಯೇ ಬೀಳೋದಿಲ್ಲ. ಅಲ್ಲದೆ, ಇಬ್ಬರೂ ಒಟ್ಟಿಗೆ ಇರೋದ್ರಿಂದ ಅಡುಗೆ ಕೆಲಸ ಬೋರ್ ಅನಿಸೋದಿಲ್ಲ. ಅದ್ರಲ್ಲೂ ಇಬ್ಬರೂ ಜೊತೆಯಾಗಿ ತರಲೆ, ರೊಮ್ಯಾನ್ಸ್ ಮಾಡುತ್ತ ಹೊಸ ರೆಸಿಪಿ ಸಿದ್ಧಪಡಿಸಿದ್ರೆ ಕೊರೋನಾ ಸೃಷ್ಟಿಸಿರೋ ಆತಂಕ, ಹೊರಗೆ ಹೋಗಲಾಗುತ್ತಿಲ್ಲ ಎಂಬ ಬೇಸರ ಎಲ್ಲವೂ ಮಾಯವಾಗುತ್ತೆ. 

ಮನೆ ಕ್ಲೀನಿಂಗ್

ಮನೆ ಕ್ಲೀನಿಂಗ್ ಕಷ್ಟದ ಕೆಲಸಗಳಲ್ಲೊಂದು. ಎಷ್ಟೋ ಸಮಯದಿಂದ ಶುಚಿಗೊಳಿಸದ ವಾರ್ಡ್ರೋಪ್, ಕಿಟಕಿಯ ಸರಳುಗಳು, ಸ್ಟೋರೇಜ್ ಬಾಕ್ಸ್ಗಳನ್ನು ಕ್ಲೀನ್ ಮಾಡಲು ಇದು ಸುಸಮಯ. ಇಬ್ಬರೂ ಜೊತೆಯಾಗಿ ಮನೆಯಲ್ಲಿರೋ ಅನಗತ್ಯ ವಸ್ತುಗಳನ್ನು ಹೊರಹಾಕಿ.

ಡ್ಯಾನ್ಸ್

ಖುಷಿಯನ್ನು ಸೆಲೆಬ್ರೇಟ್ ಮಾಡೋಕೆ ಮಾತ್ರ ಡ್ಯಾನ್ಸ್ ಮಾಡ್ಬೇಕು ಅಂತೇನಿಲ್ಲ, ಬೇಸರ ಕಳೆಯಲು ಕೂಡ ಡ್ಯಾನ್ಸ್ ಸಹಕಾರಿ. ಕಪಲ್ ಡ್ಯಾನ್ಸ್ ಮಾಡೋಕೆ ಪಬ್ಗೇ ಹೋಗ್ಬೇಕು, ಪಾರ್ಟಿನೇ ಆಗ್ನೇಕು ಅಂತೇನಿಲ್ಲ. ರೊಮ್ಯಾಂಟಿಕ್ ಸಾಂಗ್ಗೆ ಇಬ್ಬರು ಜೊತೆಯಾಗಿ ಹೆಜ್ಜೆ ಹಾಕಿ.

ಬೆಸ್ಟ್ ಫ್ರೆಂಡ್ ಮೇಲೆ ಪ್ರೀತಿ ಹುಟ್ತಿದೆಯಾ?

ಆನ್ಲೈನ್ ಶಾಪಿಂಗ್

ಮಾಲ್, ಶಾಪಿಂಗ್ ಮಿಸ್ ಮಾಡಿಕೊಳ್ಳೋ ದಂಪತಿಗಳು, ಆನ್ಲೈನ್ ಶಾಪಿಂಗ್ ತಾಣಗಳಲ್ಲಿ ಜೊತೆಯಾಗಿ ಶಾಪಿಂಗ್ ಮಾಡ್ಬಹುದು. ಪತಿಗೆ ಶರ್ಟ್ ಸೆಲೆಕ್ಟ್ ಮಾಡಲು ಪತ್ನಿ ನೆರವು ನೀಡಿದ್ರೆ, ಪತ್ನಿಗೊಪ್ಪು ಡ್ರೆಸ್ ಪತಿ ಸೆಲೆಕ್ಟ್ ಮಾಡ್ಬಹುದು. ಒಬ್ಬರಿಗೆ ಗೊತ್ತಿಲ್ಲದಂತೆ ಇನ್ನೊಬ್ಬರು ಆನ್ಲೈನ್ ತಾಣಗಳ ಮೂಲಕವೇ ಸರ್ಪ್ರೈಸ್ ಗಿಫ್ಟ್ಗಳನ್ನು ಕೂಡ ಆರ್ಡರ್ ಮಾಡ್ಬಹುದು. 

ಗಾರ್ಡನಿಂಗ್

ಹಸಿರು ಮನಸ್ಸಿಗೆ ಸದಾ ಮುದ ನೀಡುತ್ತೆ. ನಿಮ್ಮನೆ ಬಾಲ್ಕನಿ, ಟೆರೇಸ್ ಅಥವಾ ಮನೆ ಸುತ್ತಮುತ್ತಲಿನ ಜಾಗದಲ್ಲಿ ಇಬ್ಬರೂ ಜೊತೆಯಾಗಿ ಗಾರ್ಡನಿಂಗ್ ಮಾಡಿ. ಬೀಜ ಮೊಳಕೆಯೊಡೆದು, ಗಿಡವಾಗೋದು, ನೆಟ್ಟ ಗಿಡದಲ್ಲಿ ಹೂ ಅರಳೋದು ಮನಸ್ಸಿಗೆ ಖುಷಿ ನೀಡುತ್ತೆ. ಅದ್ರಲ್ಲೂ ತರಕಾರಿ ಗಿಡಗಳನ್ನುನೆಟ್ಟು ಬೆಳೆಸಿದ್ರೆ ಅವುಗಳು ಹೂ, ಕಾಯಿ ಬಿಟ್ಟಾಗ ಮನಸ್ಸಿಗಾಗೋ ಖುಷಿನೇ ಬೇರೆ.  

click me!