ಸುಂದರವಾದ ಯುವತಿಯರು ಅಂಕಲ್‌ಗಳನ್ನೇ ಮದ್ವೆಯಾಗೋದು ಯಾಕೆ?

By Suvarna News  |  First Published May 13, 2023, 6:17 PM IST

ಯುವತಿಯರನ್ನು ಓಲೈಸುವ ವಿಷಯದಲ್ಲಿ ಯುವಕರು ಅದೆಷ್ಟೇ ಟ್ರಿಕ್ಸ್ ಅನುಸರಿಸಿದರೂ ಅವರು ಅಂಕಲ್‌ಗಳತ್ತ ಹೆಚ್ಚು ಅಟ್ರ್ಯಾಕ್ಟ್ ಆಗುತ್ತಾರೆ. ಅದಕ್ಕೇನು ಕಾರಣ?


ಇತ್ತೀಚಿಗೆ ಮದುವೆಯಾಗುವ ಜೋಡಿಗಳನ್ನು ನೀವು ನೋಡಿರಬಹುದು. ವಯಸ್ಸಾದ ವ್ಯಕ್ತಿಗಳು ಯಂಗ್‌ ಹುಡುಗಿಯರನ್ನು ಮದುವೆಯಾಗುತ್ತಾರೆ. ಹುಡುಗರು ವಯಸ್ಸಿನಲ್ಲಿ ಹಿರಿಯರಾದ ಮಹಿಳೆಯರನ್ನು ಮದುವೆಯಾಗುತ್ತಾರೆ. ಅದಕ್ಕೇನು ಕಾರಣ. ಮಹಿಳೆಯರನ್ನು ಓಲೈಸುವ ವಿಷಯದಲ್ಲಿ ಯುವಕರು ಎಲ್ಲಾ ವಿಷಯಗಳನ್ನು ಸರಿಯಾಗಿ ಮಾಡುತ್ತಾರಾದರೂ ಯುವತಿಯರು ಅಂಕಲ್‌ಗಳನ್ನೇ ಇಷ್ಟಪಡುವುದು ಯಾಕೆ?

1. ವಯಸ್ಸಾದವರು ಮೈಂಡ್ ಗೇಮ್ಸ್ ಆಡುವುದಿಲ್ಲ
ಹದಿಹರೆಯದಲ್ಲಿರುವವರಿಗೆ ಫ್ಲರ್ಟ್ ಮಾಡುವುದು, ಪ್ರೀತಿ (Love)ಸಿದಂತೆ ತೋರ್ಪಡಿಸುವುದು, ಬ್ರೇಕಪ್ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಅವರು ಸಂಬಂಧದ ಬಗ್ಗೆ ಸೀರಿಯಸ್ ಆಗಿರುವುದಿಲ್ಲ. ಇಂಥಾ ರಿಲೇಶನ್‌ಶಿಪ್‌ಗಳ ಬಗ್ಗೆ ಬಹುತೇಕ ಹುಡುಗಿಯರು ಭಯ ಹೊಂದಿದ್ದಾರೆ. ಹೀಗಾಗಿ ವಯಸ್ಸಾದವರನ್ನು ಮದುವೆ (Marriage)ಯಾಗುವುದು ಹೆಚ್ಚು ಸೇಫ್‌ ಎಂದುಕೊಳ್ಳುತ್ತಾರೆ. ಅವರು ಪ್ರೀತಿಯ ಬಗ್ಗೆ ಸ್ಪಷ್ಟತೆ ಹೊಂದಿರುತ್ತಾರೆ. ಲವ್‌ಲ್ಲಿ ಯಾವುದೇ ಮೈಂಡ್‌ಗೇಮ್ಸ್ ಇರುವುದಿಲ್ಲ.

Latest Videos

undefined

1,000 ಬಾಯ್‌ಫ್ರೆಂಡ್ಸ್ ಹೊಂದಿರೋ ಯುವತಿ, ಒಂದು ಗಂಟೆ ಡೇಟ್ ಮಾಡೋಕೆ ಭರ್ತಿ 5,000!

2. ಹೆಚ್ಚು ಬುದ್ಧಿವಂತರಾಗಿರುತ್ತಾರೆ
ಹುಡುಗರು ಸಾಮಾನ್ಯವಾಗಿ ಚೆಲ್ಲು ಚೆಲ್ಲಾಗಿ ಆಡುವುದನ್ನು ಹೆಚ್ಚಿನವರು ನೋಡಿರಬಹುದು. ಎಜುಕೇಶನ್ ಮುಗಿದು ಜಾಬ್‌ ಗಿಟ್ಟಿಸಿದ್ದರೂ ಲೈಫ್‌ನಲ್ಲಿ ಸೀರಿಯೆಸ್‌ನೆಸ್ ಬಂದಿರುವುದಿಲ್ಲ. ಇಂಥವರೊಂದಿಗೆ ಮದುವೆಯಾಗಿ ಜೀವನ (Life) ನಡೆಸುವುದು ಕಷ್ಟ. ಹೀಗಾಗಿಯೇ ಹುಡುಗಿಯರು ಗಂಭೀರವಾಗಿರುವ ವಯಸ್ಸಾದ ಅಂಕಲ್‌ಗಳನ್ನೇ ಹೆಚ್ಚು ಇಷ್ಟಪಡುತ್ತಾರೆ. ಇಂಥವರು ಜೀವನದ ಬಗ್ಗೆ ಹೆಚ್ಚು ಸೀರಿಯೆಸ್ ಆಗಿರುತ್ತಾರೆ.

3. ಆಸಕ್ತಿದಾಯಕವಾಗಿ ಮಾತನಾಡಬಲ್ಲರು
ಹೆಚ್ಚು ಬುದ್ಧಿವಂತಿಕೆಯೊಂದಿಗೆ ಬರುವ ಪೂರಕ ಲಕ್ಷಣವೆಂದರೆ 30 ನಿಮಿಷಗಳಿಗಿಂತ ಹೆಚ್ಚು ಕಾಲ ಆಸಕ್ತಿದಾಯಕ ಸಂಭಾಷಣೆಯನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ. ಸಂಭಾಷಣೆಯು (Conversation) ಆಸಕ್ತಿದಾಯಕವಾಗಿರಲು ಅದರಲ್ಲಿ ಲೈಂಗಿಕತೆಯನ್ನು ಹೊಂದಿರಬೇಕಾಗಿಲ್ಲ. ಹೆಚ್ಚಿನ ವಯಸ್ಸಾದ ವ್ಯಕ್ತಿಗಳು ಉತ್ತಮ ಮಾತುಗಾರರಾಗಿರುತ್ತಾರೆ. ಹಾಸ್ಯ, ಪ್ರೀತಿ, ನಗು ಎಲ್ಲವನ್ನೂ ಸೇರಿಸಿದ ಮಾತುಕತೆಯನ್ನು ಯುವತಿಯರು ಹೆಚ್ಚು ಇಷ್ಟಪಡುತ್ತಾರೆ.

ಅವಳನ್ನು ಕಂಡಾಗ ನನ್ನೊಳಗೇನೋ ಸ್ಪಾರ್ಕ್! ಆದ್ರೆ ಅವಳಿಗೆ ಮದುವೆ ಆಗ್ಬಿಟ್ಟಿದೆ!

4. ಲೈಂಗಿಕವಾಗಿ ಅನುಭವಿಗಳಾಗಿರುತ್ತಾರೆ
ವಯಸ್ಸಾದ ಪುರುಷರಿಗೆ (Men) ಮಹಿಳೆಗೆ ಹಾಸಿಗೆಯಲ್ಲಿ ಏನು ಬೇಕು ಎಂದು ತಿಳಿದಿದೆ. ಅವರು ಹೆಚ್ಚು ಅನುಭವಿಗಳಾಗಿರುತ್ತಾರೆ. ಹೀಗಾಗಿ ಯುವತಿಯರು ಅವರ ರೋಮ್ಯಾಂಟಿಕ್ ಮಾತುಕತೆ, ಹಾವಭಾವಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಅಂಥವರನ್ನು ಮದುವೆಯಾದರೆ ನಮ್ಮ ಜೀವನ ಹೆಚ್ಚು ಖುಷಿಯಾಗಿರುತ್ತದೆ ಎಂದು ಅಂದುಕೊಳ್ಳುತ್ತಾರೆ.

5. ಮಹಿಳೆಯನ್ನು ಬದಲಾಯಿಸಲು ಪ್ರಯತ್ನಿಸುವುದಿಲ್ಲ
ಯುವಕರು ಯಾವಾಗಲೂ ಬಾಹ್ಯ ಸೌಂದರ್ಯವನ್ನು ಹೆಚ್ಚು ಇಷ್ಟಪಡುತ್ತಾರೆ. ಹುಡುಗಿ ತುಂಬಾ ಸುಂದರವಾಗಿರಬೇಕು ಎಂಬ ಡಿಮ್ಯಾಂಡ್ ಇರುತ್ತದೆ. ಪಿಂಪಲ್ಸ್, ವೈಟ್ ಹೇರ್ಸ್ ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಆದರೆ ವಯಸ್ಸಾದವರು ಆಂತರಿಕ ಸೌಂದರ್ಯಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ. ಮಹಿಳೆಯ ಅಪೂರ್ಣತೆಗಳನ್ನು ಹೆಚ್ಚು ಒಪ್ಪಿಕೊಳ್ಳುತ್ತಾರೆ. ಕಿರಿಯ ಹುಡುಗರಂತೆ, ಅವರು ಪ್ರೀತಿಸುವ ಮಹಿಳೆಯನ್ನು ಬದಲಾಯಿಸಲು ಪ್ರಯತ್ನಿಸುವುದಿಲ್ಲ.

ಬ್ರೇಕಪ್ ಮಾಡ್ಕೊಂಡ ಗರ್ಲ್‌ಫ್ರೆಂಡ್, ಆಕೆಗಾಗಿ ಖರ್ಚು ಮಾಡಿದ ಹಣ ವಾಪಾಸ್‌ ಕೇಳಿದ ಹುಡುಗ!

6. ವೃತ್ತಿಯಲ್ಲಿ ಯಶಸ್ವೀಯಾಗಿರುತ್ತಾರೆ
ಹಿರಿಯ ಪುರುಷರು ತಮ್ಮ ವೃತ್ತಿಜೀವನದಲ್ಲಿ ಉತ್ತಮವಾಗಿ ಸ್ಥಾಪಿತರಾಗಿರುತ್ತಾರೆ. ಅವರು ಆರ್ಥಿಕವಾಗಿ ಹೆಚ್ಚು ಸ್ಥಿರರಾಗಿದ್ದಾರೆ ಮತ್ತು ಶಾಂತವಾದ ಜೀವನದ ನಡೆಸಲು ಸಾಧ್ಯವಿರುವ ಎಲ್ಲವನ್ನು ಹೊಂದಿರುತ್ತಾರೆ. ಬಹುತೇಕ ಯುವತಿಯರು ವೈವಾಹಿಕ ಜೀವನ ಸುಗಮವಾಗಿ ಸಾಗಬೇಕು ಎಂದು ಅಂದುಕೊಳ್ಳುತ್ತಾರೆ. ಹೀಗಾಗಿ ಪ್ರೊಫೆಶನಲೀ ಯಶಸ್ವೀಯಾದ, ವೆಲ್‌ ಸೆಟಲ್‌ಡ್‌ ವ್ಯಕ್ತಿಗಳನ್ನೇ ಮದುವೆಯಾಗಲು ಬಯಸುತ್ತಾರೆ.

7. ಹೆಚ್ಚು ಜವಾಬ್ದಾರಿಯುಳ್ಳ ವ್ಯಕ್ತಿಯಾಗಿರುತ್ತಾರೆ
ವಯಸ್ಸಾದ ಪುರುಷರು ಸಾಮಾನ್ಯವಾಗಿ ಯುವತಿಯ ಮನಸ್ಸಿನಲ್ಲಿ ಬೇಗ ಸ್ಥಾನ ಪಡೆಯುತ್ತಾರೆ. ಯಾಕೆಂದರೆ ಅವರು ಹೆಚ್ಚು ಜವಾಬ್ದಾರಿಯುಳ್ಳ ವ್ಯಕ್ತಿಯಾಗಿರುತ್ತಾರೆ. ಯಾವ ಸ್ಥಳದಲ್ಲಿ ಊಟ ಮಾಡಬೇಕೆಂದು ನಿರ್ಧರಿಸುವುದಾಗಲಿ ಅಥವಾ ರಜೆಯ ಪ್ಯಾಕೇಜ್ ಅನ್ನು ಕಾಯ್ದಿರಿಸುವುದಾಗಲಿ, ಯಾವಾಗ ಚಾರ್ಜ್ ತೆಗೆದುಕೊಳ್ಳಬೇಕೆಂದು ಅವರಿಗೆ ತಿಳಿದಿದೆ. ಹೀಗಾಗಿ ಯುವತಿಯರು ತಮ್ಮ ಹಿರಿಯ ವ್ಯಕ್ತಿಗಳೊಂದಿಗೆ ಡೇಟಿಂಗ್ ಮಾಡಲು ಒಲವು ತೋರುತ್ತಾರೆ ಎಂಬುದು ಈಗ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ಸತ್ಯವಾಗಿದೆ. 

click me!