
ಇಂದಿನ ಯುವ ಪೀಳಿಗೆ ಪುರುಷತ್ವ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹುಡುಕುತ್ತಿರುತ್ತದೆ. ಪುರುಷತ್ವ ಕುರಿತು ಕೆಲ ಜಾಹೀರಾತುಗಳ ಅಂತರ್ಜಾಲದಲ್ಲಿ ಬರುತ್ತಿರುತ್ತವೆ. ಯಾವುದೇ ಮಾತ್ರೆ, ಔಷಧ ತೆಗೆದುಕೊಂಡರೆ ಅದರ ಜೊತೆಯಲ್ಲಿ ಸೈಡ್ ಎಫೆಕ್ಟ್ ಇದ್ದೆ ಇರುತ್ತದೆ. ಹಾಗಾಗಿ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುವ ವೈದ್ಯರ ಸಲಹೆ ತೆಗೆದುಕೊಳ್ಳಬೇಕು ಎಂದು ಆರೋಗ್ಯ ತಜ್ಞರು ಸಲಹೆ ಪಡೆಯುತ್ತಾರೆ. ಪ್ರತಿನಿತ್ಯ ಅಡುಗೆಗೆ ಬಳಸುವ ಕೆಲವು ಪದಾರ್ಥಗಳು ಪುರುಷತ್ವವನ್ನು ಹೆಚ್ಚಿಸುತ್ತವೆ. ಶೇ.99ರಷ್ಟು ಜನರಿಗೆ ಈ ವಿಷಯ ಗೊತ್ತಿಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ನುಗ್ಗೆಕಾಯಿ, ನುಗ್ಗೆಸೊಪ್ಪು ಪುರುಷತ್ವ ಹೆಚ್ಚಿಸುವ ತರಕಾರಿ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಈ ತರಕಾರಿಯನ್ನು ದಿನನಿತ್ಯ ಬಳಸಲು ಆಗಲ್ಲ. ಆದ್ರೆ ಈ ಒಂದು ತರಕಾರಿ ಪ್ರತಿನಿತ್ಯ ಎಲ್ಲರ ಅಡುಗೆಯಲ್ಲಿರುತ್ತದೆ. ಈ ತರಕಾರಿಯನ್ನು ಕೆಜಿಗಟ್ಟಲೇ ಸಂಗ್ರಹಿಟ್ಟಿರುತ್ತಾರೆ. ಬೇಕಾದಾಗ ಒಂದೊಂದು ತೆಗೆದುಕೊಂಡು ಬಳಕೆ ಮಾಡುತ್ತಾರೆ.
ಲೈಂಗಿಕ ಬಯಕೆ ಹೆಚ್ಚಿಸುವ ಆಹಾರವೇ ಈರುಳ್ಳಿ
ಇಂದು ನಾವು ಹೇಳುತ್ತಿರುವ ತರಕಾರಿ ಈರುಳ್ಳಿ. ಚಿತ್ರಾನ್ನ, ಸಾಂಬಾರ್, ಪಲ್ಯ, ಚಟ್ನಿ ಹೀಗೆ ವೆಜ್ ಅಥವಾ ನಾನ್‌ವೆಜ್ ಇರಲಿ ಈರುಳ್ಳಿ ಬೇಕೇ ಬೇಕು. ಕೆಜಿಗೆ 100 ರೂಪಾಯಿ ಆದ್ರೂ ಈರುಳ್ಳಿಯನ್ನು ಖರೀದಿಸುತ್ತಾರೆ. ಪ್ರತಿನಿತ್ಯ ನಿಯಮಿತವಾಗಿ ಈರುಳ್ಳಿಯನ್ನು ನೇರವಾಗಿ ಅಥವಾ ಅಡುಗೆಯಲ್ಲಿ ಬಳಸುವ ಮೂಲಕ ಸೇವಿಸೋದರಿಂದ ಪುರುಷತ್ವ ಹೆಚ್ಚಳವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಈರುಳ್ಳಿಯನ್ನು ಲೈಂಗಿಕ ಬಯಕೆ ಅಥವಾ ಆಸೆಯನ್ನು ಹೆಚ್ಚಿಸುವ ಆಹಾರ ಸಹ ಎಂದು ಕರೆಯಲಾಗುತ್ತದೆ.
ಸಂಗಾತಿ ಗರ್ಭಿಣಿಯಾಗಿದ್ದಾಗ ಸೆಕ್ಸ್ ಮಾಡೋದು ಎಷ್ಟು ಸೇಫ್?
ಕೆಲವು ಅಧ್ಯಯನಗಳ ಪ್ರಕಾರ, ಈರುಳ್ಳಿ ಸೇವನೆ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ಪುರುಷರ ಲೈಂಗಿಕ ಸಾಮಾರ್ಥ್ಯ ಸುಧಾರಿಸುತ್ತದೆ. ಟೆಸ್ಟೋಸ್ಟೆರಾನ್ ಸಂತಾನೋತ್ಪತ್ತಿ ಹಾರ್ಮೋನ್ ಆಗಿದ್ದು ಅದು ಲೈಂಗಿಕ ಬಯಕೆ, ಸಾಮರ್ಥ್ಯ ಮತ್ತು ಪುರುಷರಲ್ಲಿ ಶಕ್ತಿಯ ಮಟ್ಟವನ್ನು ಸಹ ಪರಿಣಾಮ ಬೀರುತ್ತದೆ. ಗಂಡು ಇಲಿಗಳ ಮೇಲೆ ಈ ಪ್ರಯೋಗ ಯಶಸ್ವಿಯಾಗಿದೆ ಎಂದು ಸಂಶೋಧಕರು ಹೇಳಿಕೊಳ್ಳುತ್ತಾರೆ.
ಈರುಳ್ಳಿ ಸೇವನೆ ಇತರೆ ಆರೋಗ್ಯಕರ ಲಾಭಗಳು
ಈರುಳ್ಳಿ ನೀರಿನಂಶ ಹೊಂದಿರುವ ಆಹಾರವಾಗಿದ್ದು, ದೇಹ ನಿರ್ಜಲೀಕರಣ ಹೊಂದಿದ್ರೆ ಇದನ್ನು ಸೇವಿಸಬೇಕು. ಈರುಳ್ಳಿಯಲ್ಲಿರುವ ಸೋಡಿಯಂ ಮತ್ತು ಪೊಟ್ಯಾಸಿಯಮ್ ದೇಹವನ್ನು ತಂಪಾಗಿಸುವ ಮೂಲಕ ಉಷ್ಣತೆಯನ್ನು ಸಮತೋಲನದಲ್ಲಿರಿಸುವ ಕೆಲಸ ಮಾಡುತ್ತದೆ. ಈರುಳ್ಳಿಯಲ್ಲಿರುವ ಕ್ರೋಮಿಯಂ ಎಂದ ಅಂಶ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈರುಳ್ಳಿಯಲ್ಲಿರುವ ಕ್ವೆರ್ಸೆಟಿನ್ ಮತ್ತು ಸಲ್ಫರ್ ಎಂಬ ಅಂಶ ಅಲರ್ಜಿ, ದದ್ದು, ತುರಿಕೆ ಸೇರಿದಂತೆ ಚರ್ಮಕ್ಕೆ ಸಂಬಂಧಿಸಿ ಸಮಸ್ಯೆಗಳನ್ನು ನಿವಾರಿಸುತ್ತದೆ.
ಗಂಡನಿಗಾಗಿ 9 ತಿಂಗಳು ಗರ್ಭಿಣಿ ಮಾಡಿದೆಂಥಾ ಕೆಲಸ ಗೊತ್ತಾ? ನೆಟ್ಟಿಗರು ಫುಲ್ ಶಾಕ್!
ಈರುಳ್ಳಿಯಲ್ಲಿ ಫ್ಲೇವನಾಯ್ಡ್, ಪಾಲಿಫಿನಾಲ್ ಮತ್ತು ಸಲ್ಫರ್ ಸಂಯುಕ್ತಗಳಂತಹ ಫೈಟೊಕೆಮಿಕಲ್‌ಗಳು ಕಂಡುಬರುತ್ತವೆ. ಈ ಅಂಶಗಳು ಉತ್ಕರ್ಷಣ ನಿರೋಧಕ, ಉರಿಯೂತದ, ಆಂಟಿಮೈಕ್ರೊಬಿಯಲ್ ಮತ್ತು ಕ್ಯಾನ್ಸರ್ ನಂತಹ ಸಮಸ್ಯೆಗಳನ್ನು ತಡೆಯುವ ಕೆಲಸ ಮಾಡುತ್ತದೆ. ಕೂದಲು ಉದುರುವಿಕೆ ಸಮಸ್ಯೆಗೂ ಈರುಳ್ಳಿ ಬಳಕೆ ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಶಾಂಪೂಗಳಲ್ಲಿ ಈರುಳ್ಳಿ ರಸ ಬಳಕೆ ಮಾಡಲಾಗಿರುತ್ತದೆ. (ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರೋ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸಲ್ಲ)
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.