ಪ್ರೀತಿಸುವಾಗ್ಲೇ ಜಯಾ – ಅಮಿತಾಬ್ ಮಧ್ಯೆ ನಡಿತಿತ್ತು ಜಗಳ! ಲಾಂಗ್ ಡ್ರೈವ್ ಕಥೆ ಬಿಚ್ಚಿಟ್ಟ ನಟಿ

By Roopa Hegde  |  First Published Jun 13, 2024, 3:37 PM IST

ಬಾಲಿವುಡ್ ಮಾದರಿ ಜೋಡಿಯಲ್ಲಿ ನಟ ಅಮಿತಾಬ್ ಬಚ್ಚನ್ ಹಾಗೂ ಜಯಾ ಬಚ್ಚನ್ ಸೇರಿದ್ದಾರೆ. 51ನೇ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ಈ ಜೋಡಿ ಹೊಂದಿ ಬದುಕೋದು ಹೇಗೆ ಎಂಬುದನ್ನು ಯುವಕರಿಗೆ ತಿಳಿಸಿದ್ದಾರೆ. ಈ ಮಧ್ಯೆ ಅವರ ಹಳೇ ದಿನಗಳು ಈಗ ಸುದ್ದಿಯಲ್ಲಿದೆ. ಅವರ ಕ್ಯೂಟ್ ಲವ್ ಸ್ಟೋರಿಯನ್ನು ನಟಿ ಫರೀದಾ ಜಲಾಲ್ ಬಿಚ್ಚಿಟ್ಟಿದ್ದಾರೆ. 
 


ಕುಚ್ ಕುಚ್ ಹೋತಾ ಹೈ ಚಿತ್ರದಲ್ಲಿ ಶಾರುಕ್ ಅಮ್ಮನ ಪಾತ್ರ ಮಾಡಿದ್ದ ಫರೀದಾ ಜಲಾಲ್ ಯಾರಿಗೆ ಗೊತ್ತಿಲ್ಲ ಹೇಳಿ. ತಮ್ಮ ಕ್ಯೂಟ್ನೆಸ್‌ನಿಂದಲೇ ಲಕ್ಷಾಂತರ ಅಭಿಮಾನಿಗಳ ಮನಗೆದ್ದ ನಟಿ ಅವರು. ಫರೀದಾ ಜಲಾಲ್, ಅನೇಕ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಜಯಾ ಬಚ್ಚನ್ ಜೊತೆ ಸ್ಕ್ರೀನ್ ಹಂಚಿಕೊಂಡ ನಟಿ ಫರೀದಾ ಜಲಾಲ್, ಇತ್ತೀಚಿಗೆ ಸಿರೀಸ್ ನಲ್ಲಿ ನಟಿಸಿದ್ದರು. ಫರೀದಾ ಜಲಾಲ್ ಸಂದರ್ಶನವೊಂದರಲ್ಲಿ ಅಮಿತಾಬ್ ಬಚ್ಚನ್ ಹಾಗೂ ಜಯಾ ಬಚ್ಚನ್ ಪ್ರೇಮ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಅದ್ರಲ್ಲಿ ತಮ್ಮ ಪಾತ್ರವೇನು ಎಂಬುದನ್ನು ಹೇಳಿದ್ದಾರೆ. 

ಅಮಿತಾಬ್ (Amitabh) – ಜಯಾ ಕಾಫಿ ಡೇಟಲ್ಲಿ ಫರೀದಾ: ಇದು 1973ರಕ್ಕಿಂತ ಮೊದಲ ಕಥೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಜಯಾ (Jaya) ಹತ್ತಿರವಾಗಿದ್ರು. ಇಬ್ಬರು ಕಾಫಿ ಡೇಟಿಗೆ ಹೋಗ್ತಿದ್ದ ಕಾಲವದು. ಆ ಸಮಯದಲ್ಲಿ ಇಬ್ಬರ ಜೊತೆ ಮೂರನೇ ವ್ಯಕ್ತಿಯೊಬ್ಬರು ಇರ್ತಾ ಇದ್ರು. ಅದೇ ಫರೀದಾ ಜಲಾಲ್. ಸಂದರ್ಶನದಲ್ಲಿ ಈ ವಿಷ್ಯವನ್ನು ಫರೀದಾ ಜಲಾಲ್ ಹೇಳಿದ್ದಾರೆ. ಜಯಾ ಬಚ್ಚನ್ ಸ್ನೇಹಿತೆಯಾಗಿದ್ದ ಫರೀದಾ ಜಲಾಲ್, ಅಮಿತಾಬ್ ಜೊತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದ ಕಾರಣ ಆಪ್ತತೆ ಹೊಂದಿದ್ದರು. ಜಯಾ ಮತ್ತೆ ಅಮಿತಾಬ್ ಕಾಫಿ ಡೇಟ್ (Coffee Date) ಗೆ ಹೊರಟಾಗೆಲ್ಲ ಫರೀದಾ ಜಲಾಲ್ ಜೊತೆಗಿರ್ತಾ ಇದ್ರು. ಅಮಿತಾಬ್ ಮತ್ತು ಜಯಾ ಬಚ್ಚನ್, ಕಾಫಿ ಡೇಟ್, ಲಾಂಗ್ ಡ್ರೈವ್ ಎಂಜಾಯ್ ಮಾಡ್ತಿದ್ರು. 

Tap to resize

Latest Videos

ಪುಷ್ಪಾ-2 ಹಾಡಿಗೆ ಸೀತಾ-ರಾಮ ಭರ್ಜರಿ ರೀಲ್ಸ್: ಜೋಡಿಯ ನೋಡಿ ಪುನಃ ಮದ್ವೆ ವಿಷಯ ಕೆದಕಿದ ಫ್ಯಾನ್ಸ್​!

ಅಮಿತಾಬ್ – ಜಯಾ ಕ್ಯೂಟ್ ಜಗಳ ಎಂಜಾಯ್ ಮಾಡ್ತಿದ್ದ ಫರೀದಾ: ಮಾತು ಮುಂದುವರೆಸಿದ ಫರೀದಾ ಜಲಾಲ್, ಲಾಂಗ್ ಡ್ರೈವ್ ಅನುಭವಗಳನ್ನು ಹಂಚಿಕೊಂಡಿದ್ದಾರೆ. ತಡರಾತ್ರಿ ಡ್ರೈವಿಂಗ್ ಸೀಟ್ ನಲ್ಲಿ ಅಮಿತಾಬ್ ಇದ್ರೆ. ಪಕ್ಕದಲ್ಲಿ ಜಯಾ ಬಚ್ಚನ್ ಇರ್ತಾ ಇದ್ರು. ಹಿಂದಿನ ಸೀಟ್ ನಲ್ಲಿ ನಾನು ಕುಳಿತಿರುತ್ತಿದ್ದೆ. ಕಬಾಬ್ ಮೇ ಹಡ್ಡಿ ಎನ್ನುವಂತೆ ನಿಮ್ಮಿಬ್ಬರ ಮಧ್ಯೆ ನಾನು ಯಾಕೆ ಎಂದು ಅನೇಕ ಬಾರಿ ಫರೀದಾ ಪ್ರಶ್ನೆ ಮಾಡಿದ್ದರಂತೆ. ಬೇಗ ಮಲಗುತ್ತಿದ್ದ ಫರೀದಾ ಜಲಾಲ್ ಗೆ ತಡರಾತ್ರಿ ಲಾಂಗ್ ಡ್ರೈ ಚಾಲೆಂಜ್. ಆದ್ರೆ ಪ್ರಣಯ ಹಕ್ಕಿಯಂತೆ ಹಾರುತ್ತಿದ್ದ ಅಮಿತಾಬ್ – ಜಯಾ ನೋಡೋದು ಅದೇನೋ ಖುಷಿಯಾಗಿತ್ತು ಎನ್ನುತ್ತಾರೆ ಫರೀದಾ. ಇಬ್ಬರು ಎಲ್ಲ ಪ್ರೇಮಿಗಳಂತೆ ಜಗಳ ಆಡ್ತಿದ್ದರು. ಅವರಿಬ್ಬರು ಜಗಳ ಮಾಡೋದನ್ನು ನಾನು ನೋಡ್ತಿದೆ. ಜಗಳ ಮುಗಿದ್ಮೇಲೆ ಜಯಾ ಅಳ್ತಿದ್ರೆ ಅಮಿತಾಬ್ ಅವರನ್ನು ಸಮಾಧಾನ ಮಾಡ್ತಿದ್ದರು. ಅದನ್ನು ನೋಡೋಕೆ ನನಗೇನೋ ಖುಷಿಯಾಗ್ತಿತ್ತು ಎಂದು ಫರೀದಾ ಜಲಾಲ್ ಹೇಳಿದ್ದಾರೆ. 

ನನ್ನನ್ನು ಮನೆಗೆ ಬಿಟ್ಟು ಅವರು ಮನೆಗೆ ಹೋಗ್ತಿದ್ರು. ಅವರಿಬ್ಬರು ಬಹಳ ಒಳ್ಳೆ ವ್ಯಕ್ತಿಗಳು ಎನ್ನುವ ಫರೀದಾ, ತಮ್ಮ ಮದುವೆಗೆ ನನ್ನನ್ನು ಮತ್ತು ಗುಲ್ಜಾರ್ ಸಾಹಬ್ ಅವರನ್ನು ಮಾತ್ರ ಆಹ್ವಾನಿಸಿದ್ದರು ಎನ್ನುತ್ತಾರೆ ಫರೀದಾ. 

ಮದುವೆಯಾಗಿ, ಮಕ್ಕಳಾದ್ಮೇಲೆ ಹೆಂಡತಿಯಾಗಿ ಬದಲಾದ ಗಂಡ! ಅಯ್ಯೋ ಹೆಂಡ್ತಿ ಕಥೆ!

ಯಾವ ವಿಷ್ಯಕ್ಕೆ ಜಗಳವಾಡ್ತಿದ್ದ ಜಯಾ – ಅಮಿತಾಬ್ ?: ಇದನ್ನೂ ಫರೀದಾ ಜಲಾಲ್ ಹೇಳಿದ್ದಾರೆ. ಅಮಿತಾಬ್ ಮತ್ತು ಜಯಾ ಜೊತೆ ಯಾವುದೇ ಗಂಭೀರ ವಿಷ್ಯಕ್ಕೆ ಗಲಾಟೆ ಆಗ್ತಿರಲಿಲ್ಲ. ಕ್ಷುಲ್ಲಕ ಕಾರಣಕ್ಕೆ ಕಿತ್ತಾಡುತ್ತಿದ್ದ ಅವರು ಮಕ್ಕಳಂತೆ ಆಡ್ತಿದ್ದರು. ಕೆಟ್ಟ ಶಬ್ಧಗಳ ಬಳಕೆ ಆಗ್ತಿರಲಿಲ್ಲ. ಪ್ರೀತಿ ತುಂಬಿದ ಜಗಳ ತುಂಬಾ ಸಮಯ ಇರ್ತಿರಲಿಲ್ಲ. ಬೇಗ ಕೋಪಗೊಳ್ತಿದ್ರು ಜಯಾ ಎಂದು ಫರೀದಾ ಜಲಾಲ್ ಹೇಳಿದ್ದಾರೆ. ಸಂದರ್ಶನದಲ್ಲಿ ಕರಣ್ ಜೋಹರ್, ಕಭಿ ಖುಷಿ ಕಭಿ ಗಮ್ ಚಿತ್ರದ ಬಗ್ಗೆಯೂ ಹೇಳಿದ್ದಾರೆ ಫರೀದಾ. 

click me!