Latest Videos

70ರ ವರ, 28ರ ವಧು! ನಡೀತು ಅದ್ಧೂರಿ ಮದುವೆ, ಹುಡುಗಿ ಬುದ್ಧಿವಂತೆ ಎಂದಿದ್ಯಾಕೆ ನೆಟ್ಟಿಗರು?

By Roopa HegdeFirst Published Jun 14, 2024, 12:47 PM IST
Highlights

ಈಗಿನ ಸಂಬಂಧಗಳೇ ಭಿನ್ನ. ಮದುವೆಯ ಹೊಸ ಟ್ರೆಂಡ್ ಶುರುವಾಗಿದೆ. ತಮ್ಮ ಅಜ್ಜಿ, ಅಜ್ಜನ ವಯಸ್ಸಿನವರನ್ನು ಅವರು ಮದುವೆ ಆಗ್ತಿದ್ದಾರೆ. ಇದಕ್ಕೆ ಈಗ ಇನ್ನೊಂದು ಉದಾಹರಣೆ ಸಿಕ್ಕಿದೆ. 

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿದೆ  (Marriages are made in Heaven) ಎಂದು ನಂಬಲಾಗಿದೆ. ಹಾಗಂತ ವಧು – ವರರಿಗೆ ಹುಡುಕಾಟ ನಡೆಸದೆ ಕೈಕಟ್ಟಿ ಕುಳಿತ್ರೆ ಮದುವೆ ಆಗೋದಿಲ್ಲ. ವರ ಅಥವಾ ವಧುವಿಗೆ ಹುಡುಕಾಟ ನಡೆಸಿ, ಜಾತಕ ಹೊಂದಿಸಿ (Horoscope Match) ಮದುವೆ ಮಾಡಿಕೊಳ್ಳುವವರಿದ್ದಾರೆ. ಈಗಿನ ದಿನಗಳಲ್ಲಿ ಜಾತಕ, ಮುಹೂರ್ತಕ್ಕೆ ಬೆಲೆ ಇಲ್ಲ. ಪ್ರೀತಿಸಿ ಮದುವೆ ಆಗುವ ಜನರು, ಜಾತಕ, ಮುಹೂರ್ತ ನೋಡೋದಿಲ್ಲ. ತಮ್ಮಿಷ್ಟದ ಸಂಗಾತಿಯನ್ನು ಮದುವೆಯಾಗ್ತಾರೆ. ಒಂದೇ ವಯಸ್ಸಿನ ಅಥವಾ ಒಂದೆರಡು ವರ್ಷ ವಯಸ್ಸಿನ ಅಂತರವಿರುವವರು ಮದುವೆ ಆಗೋದು ಒಂದು ಟ್ರೆಂಡ್.  ಆದ್ರೆ ಇತ್ತೀಚಿನ ದಿನಗಳಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಅತೀ ಹೆಚ್ಚು ವಯಸ್ಸಿನ ಅಂತರದವರನ್ನು ಮದುವೆ ಆಗೋದು ಕಾಮನ್ ಆಗ್ತಿದೆ. ಅಜ್ಜನ ವಯಸ್ಸಿನ ಪತಿ ಅಥವಾ ಅಜ್ಜಿ ವಯಸ್ಸಿನ ಪತ್ನಿಯನ್ನು ಈಗಿನ ಯುವಜನತೆ ಬಯಸುತ್ತಿದ್ದಾರೆ. ನಮ್ಮ ದೇಶದಲ್ಲಿ ಇದು ಬಹಳ ಅಪರೂಪ ಎನ್ನಿಸಿದ್ರೂ ವಿದೇಶದಲ್ಲಿ ಇದು ಈಗ ಕಾಮನ್ ಆಗ್ತಿದೆ. 

ವಯಸ್ಸಾದವರಿಗಾಗಿಯೇ ಡೇಟಿಂಗ್ (Dating) ಅಪ್ಲಿಕೇಷನ್ ಗಳಿವೆ. ಅಲ್ಲಿ ತಮಗಿಂತ ಅತೀ ಚಿಕ್ಕ ವಯಸ್ಸಿನ ಹುಡುಗ ಅಥವಾ ಹುಡುಗಿ ಜೊತೆ ಡೇಟ್ ಮಾಡುತ್ತಾರೆ ಹಿರಿಯ ವ್ಯಕ್ತಿಗಳು. ಇದನ್ನು ಶುಗರ್ ಮಮ್ಮಿ (Sugar Mommy), ಶುಗರ್ ಡ್ಯಾಡಿ ಎಂದೂ ಕರೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಬರೀ ಡೇಟ್ ಅಲ್ಲ ಮದುವೆ ಆಗುವವರಿದ್ದಾರೆ. ಸಾಮಾಜಿಕ ಜಾಲತಾಣ (Social Media ) ದಲ್ಲಿ 80ರ ಮಹಿಳೆ ಜೊತೆ 20ರ ಹುಡುಗ ಮದುವೆಯಾದ ಉದಾಹರಣೆ ಇದೆ. ಈಗ 70ರ ಅಜ್ಜನೊಬ್ಬ 28ರ ಹುಡುಗಿಯನ್ನು ಮದುವೆ ಆಗಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಇದ್ರ ವಿಡಿಯೋ ವೈರಲ್ ಆಗಿದೆ. 

ವಿಜಯಲಕ್ಷ್ಮೀನೇ ತಪ್ಪು ಮಾಡ್ಬಿಟ್ಟು, ಆವತ್ತೇ ಜಾಸ್ತಿ ಜೈಲೂಟ ಮಾಡ್ಸಿದಿದ್ರೆ ಇವತ್ತು ಹೀಗಾಗ್ತಿರ್ಲಿಲ್ಲ!

ಆಂಕೋರ್ಖುಷ್ಬೂನಂದವಾನಿ (anchorkhushboonandwani) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಮದುವೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಮೊಟ್ಟಮೊದಲ ಬಾರಿಗೆ, ನಾನು ಇಟಾಲಿಯನ್ ಜೋಡಿಯ ಈ ವಿಸ್ಮಯಕಾರಿಯಾಗಿ ಸುಂದರವಾದ ಮದುವೆಯನ್ನು ಆಯೋಜಿಸಿದೆ ಎಂದು ವಿಡಿಯೋಕ್ಕೆ ಶೀರ್ಷಿಕೆ ಹಾಕಲಾಗಿದೆ. ಇದಲ್ಲದೆ ಈ ಮದುವೆಯನ್ನು ಆಯೋಜಿಸಲು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ @rajanamplifiers ಅವರಿಗೆ ಧನ್ಯವಾದಗಳು ಎಂದು ಬರೆದಿದ್ದಾರೆ. ಈ ಮದುವೆಯನ್ನು ಭಾರತೀಯ ಸಂಪ್ರದಾಯದಂತೆ ಮಾಡಲಾಗಿದೆ ಎಂದು ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬರೆಯಲಾಗಿದೆ. 

ವಿಡಿಯೋದಲ್ಲಿ 70ರ ವಧು ಹಾಗೂ 28ರ ವಧುವನ್ನು ನೀವು ಕಾಣಬಹುದು. ಈ ವಿಡಿಯೋವನ್ನು ಒಂದೇ ದಿನದಲ್ಲಿ 6 ಲಕ್ಷಕ್ಕೂ ಹೆಚ್ಚು ಅಧಿಕ ಮಂದಿ ವೀಕ್ಷಿಸಿದ್ದಾರೆ. 10 ಸಾವಿರ ಮಂದಿ ಲೈಕ್ ಮಾಡಿದ್ದಾರೆ. ಕೆಂಪು ಬಣ್ಣದ ಸನ್ಡ್ರೆಸ್ ಧರಿಸಿರೋದನ್ನು ನೀವು ನೋಡ್ಬಹುದು. ವಧು ಕೆನೆ ಬಣ್ಣದ ಶೇರ್ವಾನಿ ಮತ್ತು ಕೆಂಪು ಬಣ್ಣದ ದುಪಟ್ಟಾದಲ್ಲಿ ಮಿಂಚುತ್ತಿದ್ದಾನೆ. 

ವಿಡಿಯೋ ಆರಂಭದಲ್ಲಿ ಇಬ್ಬರು ಮಾಲೆ ಬದಲಿಸೋದನ್ನು ನೀವು ನೋಡ್ಬಹುದು. ನಂತ್ರ ವೇದಿಕೆ ಮೇಲೆ ಡಾನ್ಸ್ ಮಾಡ್ತಾರೆ. ವಧು, ವರನಿಗೆ ಸ್ಟೆಪ್ಸ್ ಹೇಳಿಕೊಡ್ತಾಳೆ. ವಧು ಆಕರ್ಷಕವಾಗಿ ಡಾನ್ಸ್ ಮಾಡಿದ್ದು, ಎಲ್ಲರ ಗಮನ ಸೆಳೆದಿದೆ. ಭಾರತೀಯ ಹಾಡಿಗೆ ಈ ಜೋಡಿ ಡಾನ್ಸ್ ಮಾಡಿದ್ದಾರೆ. ವಿಡಿಯೋ ನೋಡಿದ್ರೆ ಇದೊಂದು ಅದ್ಧೂರಿ ಮದುವೆ ಎನ್ನುವುದು ಸ್ಪಷ್ಟವಾಗುತ್ತದೆ.  

ಸೀತಾರಾಮ ಸೀತಾ ವೈಷ್ಣವಿಯ ಅಮ್ಮ ವಕೀಲೆಯಾಗಿ ಒಂದು ವರ್ಷ! ಕುತೂಹಲದ ಮಾಹಿತಿ ಇಲ್ಲಿದೆ...

ಇನ್ಸ್ಟಾಗ್ರಾಮ್ ನಲ್ಲಿ ಈ ಮದುವೆ ವಿಡಿಯೋ ನೋಡಿದ ಅನೇಕರು ಕಮೆಂಟ್ ಮಾಡಿದ್ದಾರೆ. ಹುಡುಗಿ ಬುದ್ಧಿವಂತೆ. ಹಾಗಾಗಿ ಶ್ರೀಮಂತ ಪತಿಯನ್ನು ಆಯ್ಕೆ ಮಾಡಿಕೊಂಡಿದ್ದಾಳೆಂದು ಕಮೆಂಟ್ ಮಾಡಿದ್ದಾರೆ. ಹಿರಿಯ ವಯಸ್ಸಿನ ವ್ಯಕ್ತಿಯನ್ನು ಮದುವೆಯಾದ ಪ್ರತಿಯೊಬ್ಬ ಹುಡುಗಿಯರೂ ಈ ಕಮೆಂಟ್ ಎದುರಿಸಬೇಕು. ಈ ಸಂಬಂಧದಲ್ಲಿ ಹಣಕ್ಕಿಂತ ಪ್ರೀತಿ ಮುಖ್ಯ ಎಂದು ಸಂಬಂಧದಲ್ಲಿರುವ ಹುಡುಗಿಯರು ಹೇಳಿದ್ರೆ, ಟ್ರೋಲರ್ ಮಾತ್ರ ಇಲ್ಲಿ ಪ್ರೀತಿಗಿಂತ ಹಣ ಮುಖ್ಯ ಎನ್ನುತ್ತಿದ್ದಾರೆ.  

click me!