ಈ ರೀತಿಯ ಹುಡ್ಗೀರು ಹುಡುಗರ ಹಾಟ್ ಫೆವರಿಟ್

Published : Aug 04, 2025, 06:43 PM IST
Love

ಸಾರಾಂಶ

ಡೇಟಿಂಗ್‌ ಆ್ಯಪ್‌ಗಳಲ್ಲಿ ಸಂಗಾತಿ ಹುಡುಕುವಾಗ ಪುರುಷರು ಹೆಚ್ಚು ಸುಂದರ ಹುಡುಗಿಯರನ್ನ ಬಯಸುತ್ತಾರೆ. ಆದರೆ ಅಧ್ಯಯನಗಳು ಪುರುಷರಿಗೆ ಮಹಿಳೆಯರಿಗಿಂತ ಹೆಚ್ಚಿನ ನಿರೀಕ್ಷೆಗಳಿವೆ ಎಂದು ತೋರಿಸುತ್ತವೆ. ಮುಖ್ಯವಾಗಿ ಸಂಬಂಧದ ಯಶಸ್ಸು ಪರಿಣಾಮಕಾರಿ ಸಂವಹನ ಮತ್ತು ಹೊಂದಾಣಿಕೆಯನ್ನು ಅವಲಂಬಿಸಿರುತ್ತದೆ.

ಹಿಂದೆ ಸಂಗಾತಿಯನ್ನ ಹುಡುಕಬೇಕಾದರೆ ಅಪ್ಪ ಅಮ್ಮ ಕುಟುಂಬದ ಒಪ್ಪಿಗೆಯಲ್ಲಿ ನಡೆಯುತ್ತಿತ್ತು ಆದರೆ ಈಗ ಕಾಲ ಬದಲಾಗಿದೆ. ಮೊದಲು ತಂದೆ ತಾಯಿ ಕುಡುಕಿದಂತಹ ಹುಡುಗಿಯನ್ನ ಮದುವೆಯಾಗುತ್ತಿದ್ದರು ಆದರೆ ಇತ್ತೀಚಿಗೆ ಪುರುಷರು ತಮ್ಮ ಸಂಗಾತಿಯನ್ನ(Spouse) ತಾವೇ ಹುಡುಕಿಕೊಳ್ಳುತ್ತಾರೆ. ಹಾಗೇ ಹುಡುಗಿಯನ್ನ ಹುಡುಕುವಾಗ ಹೆಚ್ಚು ನೀರಿಕ್ಷೆಗಳನ್ನ ಮುಂದಿಡುತ್ತಾರೆ. ಪುರುಷರು ಮತ್ತು ಮಹಿಳೆಯರು ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಸಂಗಾತಿಯನ್ನು ಹುಡುಕುವಾಗ, ಪುರುಷರು ಹೆಚ್ಚು ಸುಂದರವಾಗಿರುವ ಹುಡುಗಿಯರನ್ನ ಹುಡುಕುತ್ತಾರೆ. 80% ಹುಡುಗರು ಬೇರೆ ಬೇರೆ ಯೋಚನೆಗಳನ್ನ ಮನಸ್ಸಿನಲ್ಲಿಟ್ಟುಕೊಂಡು ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಸ್ವೈಪ್(Swipe) ಮಾಡುತ್ತಾರೆ.

ಪ್ರೀತಿ ಕೇವಲ ದೈಹಿಕ ಸಂಬಂಧಕ್ಕೆ(Physical Relationship) ಸೀಮಿತವಲ್ಲ.ಅದು ಭಾವನೆಗಳು,ಪ್ರೀತಿ, ಬಾಂಧವ್ಯಗಳು ಮತ್ತು ಆಸೆ ಆಕಾಂಕ್ಷೆಗಳಿಂದ ಕೂಡಿರುವುದಾಗಿದೆ . ಅನೇಕ ಮಂದಿಯ ಪ್ರೀತಿಯ ಅನುಭವಗಳು ವೈಯಕ್ತಿಕ ಆಸೆಗಳು, ಅಗತ್ಯಗಳು ಮತ್ತು ಹಿಂದಿನ ಅನುಭವಗಳಿಂದ ಪ್ರಭಾವಿತವಾಗಿರುತ್ತದೆ. ಆದರೆ, "ಪುರುಷರಿಗಿಂತ ಮಹಿಳೆಯರಿಗೆ ಪ್ರಣಯದ ಬಗ್ಗೆ ಸಂಗಾತಿಯಿಂದ ಹೆಚ್ಚಿನ ನಿರೀಕ್ಷೆಗಳಿರುತ್ತವೆಯೇ? ಪುರುಷರಿಗಿಂತ ಮಹಿಳೆಯರಲ್ಲಿಯೇ ಹೆಚ್ಚು ಆಸೆಗಳಿರುತ್ತವೆಯೆ ಎಂಬ ಪ್ರಶ್ನೆ ಹೆಚ್ಚಾಗಿ ಚರ್ಚೆಯಾಗುತ್ತಿದೆ. ಪ್ರತಿಯೊಬ್ಬ ಪುರುಷನೂ ಸಹ ನನಗೆ ಸಂಗಾತಿಯಾಗಿ ಬರುವಂತಹ ಹುಡುಕಿ ನನ್ನಿಷ್ಟದಂತೆ ಇರಬೇಕು ಎಂದು ಬಯಸುವುದು ಸಾಮಾನ್ಯ.

ಆದರೆ ಕೆಲವು ವರದಿಗಳ ಪ್ರಕಾರ ಅನೇಕ ಪುರುಷರು ಮತ್ತು ಮಹಿಳೆಯರು ಡೇಟಿಂಗ್ ಅಪ್ಲಿಕೇಶನ್‌(Dating app)ಗಳಲ್ಲಿ ಹಾಗೇ ಒಂಟಿತನದ ಭಾವನೆಯಿಂದ ಹೆಚ್ಚು ಸಂಗಾತಿಯನ್ನ ಹುಡುಕುತ್ತಿರುತ್ತಾರೆ. ಆದರೆ ಪುರುಷರು ಮತ್ತು ಮಹಿಳೆಯರು ಸಂಗಾತಿಯಿಂದ ಏನು ಬಯಸುತ್ತಾರೆ? ಅವರ ನಿರೀಕ್ಷೆಗಳೇನು? 80% ಮಹಿಳೆಯರು ತಮಗಿಂತ ಹೆಚ್ಚು ಸುಂದರ ಮತ್ತು ಆಕರ್ಷಕವಾಗಿರುವ, ತಮಗಿಂತ ಉತ್ತಮವಾಗಿರುವ ಪುರುಷರನ್ನು ಏಕೆ ಹುಡುಕುತ್ತಾರೆ ಮತ್ತು ಮಹಿಳೆಯರಿಗೆ ಪುರುಷರಿಗಿಂತ  ನಿರೀಕ್ಷೆಗಳು (Expectations) ಹೆಚ್ಚಾಗಿರುತ್ತಾ ಎಂಬ ಸಾಕಷ್ಟು ಚರ್ಚೆಗಳು ಹೆಚ್ಚಾಗಿ ನಡೆಯುತ್ತಿವೆ.

ಆದರೆ, ಇತ್ತೀಚಿನ ಅಧ್ಯಯನವೊಂದು ಪುರುಷರಿಗೆ ಮಹಿಳೆಯರಿಗಿಂತ ಹೆಚ್ಚಿನ ನಿರೀಕ್ಷೆಗಳಿವೆ ಎಂದು ಸೂಚಿಸುತ್ತದೆ.ಒಂದು ಡೇಟಿಂಗ್ ಅಪ್ಲಿಕೇಶನ್ ತನ್ನ ಬಳಕೆದಾರರ ಮೇಲೆ ನಡೆಸಿದ ಅಧ್ಯಯನದ ಪ್ರಕಾರ, ಪ್ರೀತಿಗಾಗಿ ಹೆಜ್ಜೆ ಮುಂದಿಟ್ಟಾಗ 80% ಪುರುಷರು ಹೆಚ್ಚಿನ ಭರವಸೆ ಮತ್ತು ನಿರೀಕ್ಷೆಗಳೊಂದಿಗೆ ಕಾಯುತ್ತಾರೆ ಎಂದು ತಿಳಿದುಬಂದಿದೆ.ಪುರುಷರು ಡೇಟಿಂಗ್ ಮಾಡಲು ಮಹಿಳೆಯರನ್ನು ಆಯ್ಕೆ ಮಾಡುವಾಗ, ಆಕೆ ತಮಗಿಂತ ಹೆಚ್ಚು ಸುಂದರ, ಆಕರ್ಷಕ ಮತ್ತು ಸೆಕ್ಸಿಯಾಗಿರಬೇಕೆಂಬ ಬಯಕೆಯು ಸಾಮಾನ್ಯವಾಗಿದೆ.ಜೊತೆಗೆ ತಮಗಿಂದ ವಯಸ್ಸಿನಲ್ಲಿ ಚಿಕ್ಕವರಿರಬೇಕು ಎಂದು ಬಯಸುತ್ತಾರೆ. ಆದರೆ ಅಧ್ಯಯನಗಳ ಪ್ರಕಾರ, ಡೇಟಿಂಗ್ ಆ್ಯಪ್‌ಗಳಲ್ಲಿ ಇದು ಯಶಸ್ವಿಯಾಗುವುದಿಲ್ಲ. ಕೇವಲ 27% ರಿಂದ 38% ರಷ್ಟು ಸಂದರ್ಭಗಳಲ್ಲಿ ಮಾತ್ರ ಇಬ್ಬರ ನಡುವೆ ಸಮ್ಮತಿಯಿಂದ ಹೊಂದಾಣಿಕೆ ಸಂಭವಿಸುತ್ತದೆ.

ಆದರೆ, ಪ್ರೀತಿಯ ಮಾಡುವ ಸಮಯದಲ್ಲಿ ಯಾರ ನಿರೀಕ್ಷೆಗಳು ಹೆಚ್ಚು ಎಂದು ಖಚಿತವಾಗಿ ಹೇಳುವುದು ಕಷ್ಟ. ಇದು ಲಿಂಗ ವ್ಯತ್ಯಾಸಗಳಿಗಿಂತ ವೈಯಕ್ತಿಕ ಮನಸ್ಥಿತಿ, ಪ್ರೀತಿ, ಅನುಭವಗಳು ಮತ್ತು ಸಂಬಂಧದಲ್ಲಿ ಇರುವಂತಹ ಒಗ್ಗಟ್ಟುನ್ನ ಅವಲಂಬಿಸಿರುತ್ತದೆ. ಮುಖ್ಯವಾದ ವಿಚಾರವೆಂದರೆ ಜೋಡಿಯ ನಡುವೆ  ಪರಿಣಾಮಕಾರಿ ಮಾತುಕತೆ ಇದ್ದರೆ, ಸಂಬಂಧವು ಹೆಚ್ಚು ಸುಂದರ ಮತ್ತು ಗಟ್ಟಿಯಾಗಿರುತ್ತದೆ.ಪುರುಷರು ಮತ್ತು ಮಹಿಳೆಯರು ಲೈಂಗಿಕತೆಯ ಬಗ್ಗೆ ವಿಭಿನ್ನ ನಿರೀಕ್ಷೆಗಳನ್ನು ಹೊಂದಿದ್ದರೂ, ಇಬ್ಬರೂ ತಮ್ಮ ಸಂಗಾತಿಯೊಂದಿಗೆ  ಉತ್ತಮ ಸಂಪರ್ಕ, ಪರಸ್ಪರ ಗೌರವ ಮತ್ತು ತಮ್ಮ ಆಸೆಗಳನ್ನು ಈಡೇರಿಸುವ ಭರವಸೆಯನ್ನು ಹೊಂದಿರುತ್ತಾರೆ.ಮುಖ್ಯವಾಗಿ ಇಬ್ಬರೂ ತಮ್ಮ ಸಂಗಾತಿಯಿಂದ ನಂಬಿಕೆ, ನಿಷ್ಠೆ ಮತ್ತು ತೃಪ್ತಿಯನ್ನು ಬಯಸುತ್ತಾರೆ. ಇಬ್ಬರ ನಡುವೆ ಹೆಚ್ಚು ಹೊಂದಾಣಿಕೆ ಮತ್ತು ಪ್ರೀತಿ ಇದ್ದರೆ ಆ ಸಂಬಂಧ ಹೆಚ್ಚು ಕಾಲ ಮುಂದುವರೆಯುತ್ತದೆ. ಆ ಸಂಬಂಧದಲ್ಲಿ ಇಬ್ಬರು ಸಂತೋಷವಾಗಿ ಇರುತ್ತಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!