ಉದ್ಯೋಗ ಕಳಕೊಂಡವನಿಂದ ಕಬ್ಬನ್ ಪಾರ್ಕ್‌ನಲ್ಲಿ ಬ್ಲೈಂಡ್ ಡೇಟ್, ವಿವಾದಿತ ಶೋಗೆ ಫುಲ್‌ ಸ್ಟಾಪ್ ಇಟ್ಟ ಪೊಲೀಸರು

Published : Aug 03, 2025, 07:44 PM IST
blind date

ಸಾರಾಂಶ

ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ 'ಬ್ಲೈಂಡ್ ಡೇಟ್' ಕಾರ್ಯಕ್ರಮ ಆಯೋಜಿಸಿದ್ದ ಯುವಕನ ವಿರುದ್ಧ ಪೊಲೀಸ್ ಪ್ರಕರಣ ದಾಖಲು. ಉತ್ತರ ಭಾರತ ಮೂಲದ ಯುವಕನಿಂದ ಆಯೋಜನೆ, ತೋಟಗಾರಿಕೆ ಇಲಾಖೆ ದೂರಿನ ಮೇರೆಗೆ ಕ್ರಮ.

ಬೆಂಗಳೂರು: ನಗರದ ಪ್ರಸಿದ್ಧ ಕಬ್ಬನ್ ಪಾರ್ಕ್‌ನಲ್ಲಿ 'ಬ್ಲೈಂಡ್ ಡೇಟ್' ಎಂಬ ಹೆಸರಿನಲ್ಲಿ ಯುವಕ-ಯುವತಿಗಳನ್ನು ಪರಸ್ಪರ ಸಂಪರ್ಕಗೊಳಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದ ಪ್ರಕರಣ ಇದೀಗ ವಿವಾದಕ್ಕೆ ಗ್ರಾಸವಾಗಿದೆ. ಈ ಕಾರ್ಯಕ್ರಮದ ಬಗ್ಗೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ನೀಡಿದ ದೂರಿನ ಮೇರೆಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇವೆಲ್ಲಾ ಹೇಗೆ ನಡೆದಿದೆ?

ಈ 'ಬ್ಲೈಂಡ್ ಡೇಟ್' ಕಾರ್ಯಕ್ರಮವನ್ನು ಉತ್ತರ ಭಾರತದ ವಿನಿತ್ ಕೊಟಾಡಿಯಾ ಎಂಬುವವರು ಆಯೋಜಿಸಿದ್ದರು. ಬೆಂಗಳೂರಿನ ಲಗ್ಗೆರೆಯಲ್ಲಿ ವಾಸವಿದ್ದ ಈ ಯುವಕ ಬಿಟೆಕ್ ಪೂರೈಸಿದ್ದು, ಉದ್ಯೋಗವಿಲ್ಲದೆ ಸಮಯ ಕಳೆಯುತ್ತಿದ್ದ. ಹೀಗಾಗಿ "ಏನಾದರೂ ವಿಭಿನ್ನವಾಗಿರುವ ಕೆಲಸ ಮಾಡೋಣ" ಎಂಬ ಯೋಚನೆಯಿಂದ ಈ ಕಾರ್ಯಕ್ರಮದ ತಯಾರಿಯಲ್ಲಿದ್ದ. ಕಬ್ಬನ್ ಪಾರ್ಕ್ ನಲ್ಲಿ ಡೇಟಿಂಗ್ ಅವಕಾಶ ಬಗ್ಗೆ ಪರಿಸರವಾದಿಗಳಿಂದ ಭಾರೀ ಆಕ್ರೋಶ ಕೂಡ ವ್ಯಕ್ತವಾಗಿತ್ತು.

ಕಾರ್ಯಕ್ರಮದ ವಿನ್ಯಾಸ:

ವಿನಿತ್, 'ಬುಕ್ ಮೈ ಶೋ' ವೆಬ್‌ಸೈಟ್‌ನಲ್ಲಿ ಈ ಕಾರ್ಯಕ್ರಮಕ್ಕಾಗಿ ವಿಶೇಷ ಪುಟವನ್ನು ಸೃಷ್ಟಿಸಿ, 18 ವರ್ಷ ತುಂಬಿರುವ ಯುವಕ ಯುವತಿಯರಿಗೆ ಅಹ್ವಾನ ನೀಡಿದ್ದ. ಹುಡುಗಿಯರಿಗೆ ₹199 ಮತ್ತು ಹುಡುಗರಿಗೆ ₹1,499 ರ ಪ್ರಮಾಣದಲ್ಲಿ ನೋಂದಣಿ ಶುಲ್ಕ ನಿಗದಿ ಮಾಡಿದ್ದ. ಅವನು ಯುವಕ-ಯುವತಿಯರ ಫ್ರೆಂಡ್‌ಶಿಪ್ ಬೆಳೆಸಲು ಅವಕಾಶ ಕಲ್ಪಿಸುವ ಇರಾದೆಯಿಂದ ಈ ಯೋಜನೆ ಮಾಡಿದ್ದ. ಗುರುತು ಪರಿಚಯ ಇರದ ಗೆಳೆಯ ಗೆಳತಿಯರೊಡನೆ ಪ್ರೇಮ ಸಂಭಾಷಣೆಗೆ ಅವಕಾಶ. ಸ್ನೇಹ,ಪ್ರೇಮ,ಸಂಭಾಷಣೆಗೆ ಅವಕಾಶ ಕಲ್ಪಿಸೋದಾಗಿ ಬುಕ್ ಮೈ ಶೋನಲ್ಲಿ ಮಾಹಿತಿ ನೀಡಿ ಪೋಸ್ಟರ್ ಹಾಕಿದ್ದ.

ಸ್ಥಳೀಯ ಅನುಮತಿ ಇಲ್ಲದೆ ಆಯೋಜನೆ:

ಆದರೆ ಈ ಕಾರ್ಯಕ್ರಮವನ್ನು ಕಬ್ಬನ್ ಪಾರ್ಕ್‌ನಲ್ಲಿ ನಡೆಸುವ ಯೋಜನೆ ಇರಲಿಲ್ಲ. ಮೆಟ್ರೋ ನಿಲ್ದಾಣದ ಸಮೀಪವಿರುವ ಮಾಲ್‌ ಬಳಿ ಎಲ್ಲರನ್ನು ಸೇರಿಸಿ ಕಾರ್ಯಕ್ರಮ ನಡೆಸಬೇಕೆಂಬ ಯೋಚನೆ ಇತ್ತು. ಈ ಯೋಜನೆಗೆ ನಾಲ್ಕು ಜನ ಯುವತಿಯರು ₹199 ರಂತೆ ನಿಗದಿತ ಶುಲ್ಕ ನೀಡಿ ಹೆಸರು ನೋಂದಾಯಿಸಿದ್ದರು. ಆಗಸ್ಟ್ 2 ರಿಂದ 31 ಆಗಸ್ಟ್ ವರೆಗೂ ವರೆಗೂ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿತ್ತು.

ಕಾನೂನು ಅರಿವು ಇಲ್ಲದ  ಎಂದ ವಿನಿತ್‌

ದೂರು ದಾಖಲಾದ ನಂತರ ಪೊಲೀಸರು ವಿನಿತ್‌ನನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಅವನು ಕಾನೂನು ಜ್ಞಾನವಿಲ್ಲದೆ ಈ ಕಾರ್ಯಕ್ರಮ ಆಯೋಜಿಸಿದ್ದನ್ನೂ, ಯಾವುದೇ ಅನಧಿಕೃತ ಹಾಗೂ ಅನಿವಾರ್ಯ ಲೈಸೆನ್ಸ್ ಇಲ್ಲದೆ ಈ ಚಟುವಟಿಕೆಗೆ ಮುಂದಾಗಿದ್ದನ್ನೂ ಒಪ್ಪಿಕೊಂಡಿದ್ದಾನೆ. ಹೀಗಾಗಿ ಕಾರ್ಯಕ್ರಮವನ್ನು ರದ್ದುಪಡಿಸಿದ್ದಾನೆ. ಸದ್ಯಕ್ಕೆ ಈತನ ಮೇಲೆ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಆದರೆ ಅಧಿಕಾರಿಗಳು ಆತನಿಗೆ ಕಾನೂನು ಸಂಬಂಧಿತ ಎಚ್ಚರಿಕೆಯನ್ನು ನೀಡಿದ್ದು, ಮುಂದೆ ಇಂತಹ ಅನಧಿಕೃತ ಚಟುವಟಿಕೆಗಳಿಂದ ದೂರವಿರುವಂತೆ ಸೂಚಿಸಿದ್ದಾರೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!