ಸೋಷಿಯಲ್ ಮೀಡಿಯಾದ ಸಮುದ್ರದಲ್ಲಿ ಕೆಲವು ವೀಡಿಯೋಗಳು ಹೆಚ್ಚು ಜನರ ಗಮನ ಸೆಳೆಯುತ್ತವೆ. ಅವು ತಮ್ಮ ವಿಶಿಷ್ಟತೆಯಿಂದಾಗಿ ಎಲ್ಲರ ಮನಸೂರೆಗೊಳ್ಳುತ್ತವೆ. ಅಂಥದ್ದೇ ವೀಡಿಯೋವೊಂದು ಈಗ ವ್ಯಕ್ತಿಯೊಬ್ಬರಲ್ಲಿನ ಕೌಶಲವನ್ನು ಬಹಿರಂಗಪಡಿಸಿದ್ದು, ನಾಯಿಯಂತೆಯೇ ಕೂಗುವ ಮೂಲಕ ಅವರು ಬೀದಿಬದಿಯ ನಾಲ್ಕಾರು ನಾಯಿಗಳನ್ನು ಒಂದೆಡೆ ಸೇರಿಸುವ ಚೋದ್ಯ ಕಂಡುಬರುತ್ತದೆ.
ಮಿಮಿಕ್ ಮಾಡುವುದರಲ್ಲಿ ಕೆಲವರು ನಿಸ್ಸೀಮರಾಗಿರುತ್ತಾರೆ. ಎಷ್ಟು ಚೆನ್ನಾಗಿ ಪ್ರಾಣಿ, ಪಕ್ಷಿಗಳು ಮತ್ತು ಮನುಷ್ಯರನ್ನು ಮಿಮಿಕ್ ಮಾಡುತ್ತಾರೆ ಎಂದರೆ ನೈಜತೆಗೆ ಸರಿಸಾಟಿಯಾಗಿರುತ್ತದೆ. ಅಂತಹ ಕಲಾವಿದರು ಅಲ್ಲಲ್ಲಿ ಕಾಣಸಿಗುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಕೆಲ ದಿನಗಳ ಹಿಂದೆ ಕಾಗೆಯ ಕೂಗನ್ನು ಮಿಮಿಕ್ ಮಾಡಿ ಕಾಗೆಗಳ ಹಿಂಡನ್ನು ಕೆಲವೇ ಸೆಕೆಂಡ್ ಗಳಲ್ಲಿ ಕರೆಯುವ ವ್ಯಕ್ತಿಯೊಬ್ಬರ ವೀಡಿಯೋವೊಂದು ವೈರಲ್ ಆಗಿತ್ತು. ಈಗ ನಾಯಿಗಳ ಸರದಿ. ನಾಯಿಯನ್ನು ಮಿಮಿಕ್ ಮಾಡುವವರು ಹಲವರಿದ್ದಾರೆ. ಆದರೆ, ಸ್ವಲ್ಪ ಏರುಪೇರಾದರೂ ನಾಯಿಗಳು ಹತ್ತಿರ ಸುಳಿಯುವುದಿಲ್ಲ. ವೈರಲ್ ಆಗಿರುವ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ. ಏಕೆಂದರೆ, ಇಲ್ಲಿರುವ ವ್ಯಕ್ತಿ ಪಕ್ಕಾ ನಾಯಿಯಂತೆಯೇ ದನಿ ಹೊರಡಿಸಿ ನಾಲ್ಕಾರು ಬೀದಿ ನಾಯಿಗಳನ್ನು ಕೆಲವೇ ಸೆಕೆಂಡುಗಳಲ್ಲಿ ಸೇರಿಸಿಬಿಡುತ್ತಾರೆ. ಮನುಷ್ಯನ ಕೌಶಲ್ಯಕ್ಕೆ ಸಾಟಿಯಿಲ್ಲ ಎನ್ನುವುದಕ್ಕೆ ಇದೊಂದು ಸಾಕ್ಷಿ.
ಇನ್ ಸ್ಟಾಗ್ರಾಮ್ ನಲ್ಲಿ ಹಿಮಾಂಶುರಾಜೋರಿಯಾ ಎನ್ನುವ ಖಾತೆಯಿಂದ (Account) ಶೇರ್ (Share) ಮಾಡಲಾಗಿರುವ ವೀಡಿಯೋವೊಂದು (Video) ಸಿಕ್ಕಾಪಟ್ಟೆ ವೈರಲ್ (Viral) ಆಗಿದೆ. ನಾಯಿಯಂತೆ ಮಿಮಿಕ್ (Mimic) ಮಾಡುವ ಕಲೆಯನ್ನು ಸಿದ್ಧಿಸಿಕೊಂಡಿರುವ ವ್ಯಕ್ತಿಯೊಬ್ಬರು ಈ ಮೂಲಕ ಸುದ್ದಿಯಾಗಿದ್ದಾರೆ.
ವಧುವಿಗೆ ಕುಟುಂಬ ನೀಡಿತು ಸರ್ಪ್ರೈಸ್; ಅದೃಷ್ಟವಂತೆ ಅಂದ್ರು ನೆಟಿಜನ್ಸ್
ವೀಡಿಯೋದ ಮೊದಲ ದೃಶ್ಯದಲ್ಲಿ ಯಾವುದೇ ನಾಯಿಗಳು (Dogs) ಕಂಡುಬರುವುದಿಲ್ಲ. ಆದರೆ, ವ್ಯಕ್ತಿಯೊಬ್ಬರು (Man) ನಾಯಿ ದನಿಯನ್ನು ಹೊರಡಿಸಿದ ಕೆಲವೇ ಸೆಕೆಂಡುಗಳಲ್ಲಿ ಮ್ಯಾಜಿಕ್ ಸಂಭವಿಸುತ್ತದೆ. ಮೊದಲು ಅವರು ನಾಯಿ ಕಿರುಚಿಕೊಂಡಂತೆ ಸದ್ದು ಮಾಡುತ್ತಾರೆ, ಆಗ ದೂರದಲ್ಲಿದ್ದ ನಾಯಿಗಳೂ ಅವರ ಸಮೀಪ ಬರುವುದು ಕಾಣಿಸುತ್ತದೆ. ಬಳಿಕ, ಮತ್ತೊಂದು ರೀತಿಯ ದನಿ ಹೊರಡಿಸಿದಾಗ, ಆ ವ್ಯಕ್ತಿಯ ವಿಶಿಷ್ಟ ದನಿಯ ಜಾಡನ್ನು ಹಿಡಿದು ಅನೇಕ ನಾಯಿಗಳು ಅಲ್ಲಿ ಮೇಳೈಸಿ ಬಿಡುತ್ತವೆ. ನೀವು ಕನಿಷ್ಟ 8 ನಾಯಿಗಳನ್ನು ಲೆಕ್ಕ ಹಾಕಬಹುದು!
ಈ ವೀಡಿಯೋವನ್ನು ಪೋಸ್ಟ್ (Post) ಮಾಡಿದ ಕೆಲವೇ ಸಮಯದಲ್ಲಿ ವೈರಲ್ ಆಗಿದೆ. ಇನ್ ಸ್ಟಾಗ್ರಾಮ್ ನಲ್ಲಿ ಲಕ್ಷಾಂತರ ಜನ ವೀಕ್ಷಣೆ ಮಾಡಿದ್ದಾರೆ. ಸಿಕ್ಕಾಪಟ್ಟೆ ಜನ ಕಾಮೆಂಟ್ (Comment) ಕೂಡ ಮಾಡಿದ್ದಾರೆ. ವೀಡಿಯೋದಲ್ಲಿರುವ ವ್ಯಕ್ತಿಯ ಪ್ರತಿಭೆಯ (Talent) ಕುರಿತು ಅಚ್ಚರಿ ವ್ಯಕ್ತಪಡಿಸಿದ್ದಾರೆ.
Special Indian Food: ಜೈಪುರದಲ್ಲಿ ಹಣ್ಣಿನ ಗೋಲ್ ಗಪ್ಪಾ! ಅಯ್ಯಪ್ಪಾ! ಹೊಟ್ಟೆ ಹಾಳಾಯ್ತು ಅಂದ ನೆಟ್ಟಿಗರು
ಡಾಗ್ ಮ್ಯಾನ್
ಒಬ್ಬರು, “ಇಂಟೆರೆಸ್ಟಿಂಗ್’ ಎಂದು ಹೇಳಿದರೆ, ಮತ್ತೊಬ್ಬರು ಇದಕ್ಕೆ ಆಳವಾದ ಅರ್ಥ ನೀಡಿದ್ದಾರೆ. “ಇದನ್ನು ಏಕತೆ (Unity) ಎಂದು ಹೇಳುತ್ತಾರೆ, ನಾವು ಮನುಷ್ಯರು ಅವುಗಳಿಂದ ಕಲಿಯಬೇಕಿದೆ. ಯಾವುದೋ ಒಂದು ನಾಯಿ ಅಪಾಯದಲ್ಲಿದೆ ಎಂದು ಭಾವಿಸಿ ಎಲ್ಲ ನಾಯಿಗಳೂ ಆ ಸ್ಥಳಕ್ಕೆ ಧಾವಿಸುವುದು ಕಂಡುಬರುತ್ತದೆ. ಇದು ವಿಶಿಷ್ಟ ಗುಣ. ಅವು ಅಪಾಯದಲ್ಲಿರುವ ನಾಯಿಗೆ ಸಹಾಯ ನೀಡಲು ಬಂದಿವೆ. ಈ ವ್ಯಕ್ತಿಯ ಮಿಮಿಕ್ ಚೆನ್ನಾಗಿದೆ’ ಎಂದು ವಿಶ್ಲೇಷಿಸಿದ್ದಾರೆ. ಹಾಗೆಯೇ, ಕ್ರಿಯಾಶೀಲ ಮನಸ್ಸೊಂದು, “ಮಾರ್ವೆಲ್ ಅವರಗೆ ಹೊಸ ಕ್ಯಾರೆಕ್ಟರ್ ದೊರೆತಿದೆ, ಡಾಗ್ ಮ್ಯಾನ್ (Dogman)’ ಎಂದು ತಮಾಷೆ ಮಾಡಿದ್ದಾರೆ.