ಬಾಲಿವುಡ್ ನಟಿ ರಾಖಿ ಸಾವಂತ್ ಮದ್ವೆಯಾದಾಗಿನಿಂದಲೂ ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಸುದ್ದಿ ಮಾಧ್ಯಮಗಳಲ್ಲಿ ಬೇಡದ ಕಾರಣಕ್ಕೆ ಹೈಲೇಟ್ ಆಗಿರುವ ರಾಕಿ ಪತಿ ಆದಿಲ್ ಖಾನ್ ಮತ್ತೆ ಮದ್ವೆಯಾಗಿದ್ದಾರೆ ಎಂದು ಸುದ್ದಿಯಾಗಿದೆ.
ನವದೆಹಲಿ: ಬಾಲಿವುಡ್ ನಟಿ ರಾಖಿ ಸಾವಂತ್ ಮದ್ವೆಯಾದಾಗಿನಿಂದಲೂ ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಸುದ್ದಿ ಮಾಧ್ಯಮಗಳಲ್ಲಿ ಬೇಡದ ಕಾರಣಕ್ಕೆ ಹೈಲೇಟ್ ಆಗಿರುವ ರಾಕಿ ಪತಿ ಆದಿಲ್ ಖಾನ್ ಮತ್ತೆ ಮದ್ವೆಯಾಗಿದ್ದಾರೆ ಎಂದು ಸುದ್ದಿಯಾಗಿದೆ. ಈತನ ವಿರುದ್ಧ ರಾಖಿ ಸಾವಂತ್ ಹಲ್ಲೆ ಮಾಡಿದ್ದಾರೆ ಹಾಗೂ ದೌರ್ಜನ್ಯ ನಡೆಸಿದ್ದಾರೆ ಎಂದು ದೂರು ನೀಡಿದ್ದರು. ಇದೇ ಕಾರಣಕ್ಕೆ ರಾಖಿ ಮಾಜಿ ಪತಿ ಅದಿಲ್ ಖಾನ್ ದುರಾನಿ ಜೈಲಿಗೂ ಹೋಗಿ ಬಂದಿದ್ದರು. ಈಗ ಅವರು ಮತ್ತೆ ಮದ್ವೆಯಾಗಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಹಿಂದಿ ಬಿಗ್‌ಬಾಸ್ 12ರ ಸ್ಪರ್ಧಿ ಸೋಮಿ ಖಾನ್ ಜೊತೆ ಗುಟ್ಟಾಗಿ ಮದ್ವೆಯಾಗಿದ್ದಾರೆ ಎಂದು ಅಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಮಾರ್ಚ್ 2 ರಂದು ಸೋಮಿ ಖಾನ್ ಹಾಗೂ ಆದಿಲ್ ಖಾನ್ ಜೈಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ವರದಿಯಾಗಿದೆ.
ಅಂಗ್ಲ ಮಾಧ್ಯಮವೊಂದರ ವರದಿ ಪ್ರಕಾರ, ಕರ್ನಾಟಕದ ಮೈಸೂರು ಮೂಲದ ಅದಿಲ್ ಖಾನ್ ಮತ್ತೊಮ್ಮೆ ಮದ್ವೆಯಾಗಿದ್ದು, ರಾಜಸ್ಥಾನದ ಜೈಪುರದಲ್ಲಿ ನಡೆದ ರಹಸ್ಯ ಸಮಾರಂಭದಲ್ಲಿ ಸೋಮಿ ಖಾನ್ ಜೊತೆ ಹಸೆಮಣೆ ತುಳಿದಿದ್ದಾರೆ ಎಂದು ವರದಿ ಆಗಿದೆ. ಆದರೆ ಈ ಮದ್ವೆಯ ಬಗ್ಗೆ ಎಲ್ಲೂ ಸಾರ್ವಜನಿಕವಾಗಿ ಹೇಳಿಕೊಂಡಿಲ್ಲ.
ಸೋಮಿ ಖಾನ್ ಅವರು ವಿವಾದಾತ್ಮಕ ರಿಯಾಲಿಟಿ ಶೋ ಬಿಗ್‌ಬಾಸ್‌ನಲ್ಲಿ 2018ರಲ್ಲಿ ಕಾಣಿಸಿಕೊಂಡಿದ್ದರು. ಇವರ ಜೊತೆ ಇವರ ಸೋದರಿ ಸಭಾ ಖಾನ್ ಕೂಡ ಭಾಗಿಯಾಗಿದ್ದರು. ರಾಖಿ ಸಾವಂತ್ ಹಾಗೂ ಅದಿಲ್ ಖಾನ್ ದುರಾನಿ 2022ರ ಮೇನಲ್ಲಿ ಮದ್ವೆಯಾಗಿದ್ದರು. ಆದಿಲ್ ಮದ್ವೆಯ ನಂತರ ರಾಖಿ ತಮ್ಮ ಧರ್ಮವನ್ನು ಬದಲಾಯಿಸಿಕೊಂಡಿದ್ದರು. ಜೊತೆಗೆ ತಮ್ಮ ಹೆಸರನ್ನು ಫಾತಿಮಾ ಎಂದು ಬದಲಾಯಿಸಿಕೊಂಡಿದ್ದರು. ಅಲ್ಲದೇ ಪತಿ ಅದಿಲ್ ಜೊತೆ ಮೆಕ್ಕಾಗೂ ಹೋಗಿ ಬಂದಿದ್ದರು. ಆದರೆ ಮದ್ವೆಯಾದ ಸ್ವಲ್ಪ ದಿನದಲ್ಲೇ ಇವರ ಸಂಬಂಧ ಸಂಪೂರ್ಣ ಹಳಸಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಅದಿಲ್‌ನನ್ನು ಹುಡುಕಿಕೊಂಡು ರಾಖಿ ಕರ್ನಾಟಕದ ಮೈಸೂರಿಗೂ ಬಂದಿದ್ದರು.
ಇತ್ತೀಚೆಗಷ್ಟೇ, ತಮ್ಮ ಖಾಸಗಿ ಮತ್ತು ಅಶ್ಲೀಲ ವೀಡಿಯೋಗಳನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಆದಿಲ್ ಅವರು ರಾಖಿ ವಿರುದ್ಧ ದಾಖಲಿಸಿದ ಪ್ರಕರಣದಲ್ಲಿ ದಿಂಡೋಶಿ ಸೆಷನ್ಸ್ ನ್ಯಾಯಾಲಯವು ರಾಖಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತು.