ದಿನದ 24 ಗಂಟೆ ಕೆಲಸ ಮಾಡೋರಲ್ಲಿ ಮಹಿಳೆಯರು ಸೇರಿದ್ದಾರೆ. ಮನೆ ಕೆಲಸಕ್ಕೆ ಪತಿ ಹಣ ನೀಡ್ಬೇಕು, ರಜೆ ನೀಡ್ಬೇಕು ಎನ್ನುವ ಮಹಿಳೆಯರ ಕನಸು ನನಸಾಗೋದೇ ಇಲ್ಲ. ಆದ್ರೆ ಇಲ್ಲೊಬ್ಬ ಪತಿ ಮಾಡ್ತಿರುವ ಕೆಲಸ ನಿಮ್ಮನ್ನು ದಂಗಾಗಿಸುತ್ತೆ.
ಪ್ರತಿಯೊಬ್ಬ ಹುಡುಗಿ ಪರ್ಫೆಕ್ಟ್ ಗಂಡನನ್ನು ಬಯಸ್ತಾಳೆ. ತನ್ನೆಲ್ಲ ಆಸೆ ಈಡೇರಿಸುವಷ್ಟು ಹಣ ಪತಿ ಬಳಿ ಇರಬೇಕು, ತನ್ನನ್ನು ಅಪಾರವಾಗಿ ಪ್ರೀತಿ ಮಾಡ್ಬೇಕು, ಮನೆ ಕೆಲಸ ಮಾಡಿಸದೆ ಮಹಾರಾಣಿಯಂತೆ ನೋಡಿಕೊಳ್ಳಬೇಕು, ಹೇಳಿದ್ದೆಲ್ಲ ತಂದುಕೊಡಬೇಕು, ಹೇಳಿದಂತೆ ಮಾಡಬೇಕು, ಕೈಗೊಂದಿಷ್ಟು ಹಣ ನೀಡಿ, ನಿನ್ನಿಚ್ಛೆಯಂತೆ ಖರ್ಚು ಮಾಡು ಎನ್ನಬೇಕು. ಇಷ್ಟೇ ಅಲ್ಲ, ಏನೇ ಮಾಡಿದ್ರೂ ಅದನ್ನು ಪ್ರಶ್ನಿಸಬಾರದು, ಮನೆಯ ಎಲ್ಲ ಜವಾಬ್ದಾರಿಯನ್ನು ಆತನೇ ಹೊತ್ತುಕೊಳ್ಳಬೇಕು, ಪತಿ ಫಿಟ್ ಆಂಡ್ ಫೈನ್ ಆಗಿರಬೇಕು, ತನ್ನ ಸೌಂದರ್ಯವನ್ನು ಹೊಗಳಬೇಕು… ಹೀಗೆ ಒಂದಲ್ಲ ಎರಡಲ್ಲ ಅನೇಕ ಆಸೆಗಳನ್ನು ಹುಡುಗಿ ಹೊಂದಿರುತ್ತಾಳೆ. ಆದ್ರೆ ಮದುವೆ ಆಗಿ ಗಂಡನ ಜೊತೆ ಸಂಸಾರ ಮಾಡಲು ಶುರು ಮಾಡಿದಾಗ ಎಲ್ಲ ನಾನಂದುಕೊಂಡಂತೆ ಇರಲು ಸಾಧ್ಯವಿಲ್ಲ ಎನ್ನುವ ಕಟು ಸತ್ಯ ಗೊತ್ತಾಗುತ್ತದೆ. ಹುಡುಗಿಯ ಇಚ್ಛೆಯಂತೆ ಪತಿ ಇರಲು ಸಾಧ್ಯವೇ ಇಲ್ಲ ಎಂದು ಎಲ್ಲರೂ ನಂಬುತ್ತಾರೆ. ಆದ್ರೆ ಇದು ನೂರಕ್ಕೆ ನೂರು ಸತ್ಯವಲ್ಲ. ಕೆಲ ಅದೃಷ್ಟವಂತ ಹುಡುಗಿಯರ ಬಾಳಿನಲ್ಲಿ ಅವರಂದುಕೊಂಡಂತೆ ಫರ್ಫೆಕ್ಟ್ ಗಂಡ ಸಿಕ್ಕಿರುತ್ತಾನೆ. ಈ ಮಹಿಳೆ ಇದಕ್ಕೆ ಉತ್ತಮ ಉದಾಹರಣೆ.
ಪತಿಯನ್ನು ರಾಣಿಯಂತೆ ನೋಡಿಕೊಳ್ತಾನೆ ಈತ : ಅಮೇರಿಕನ್ ನಿವಾಸಿ ಅರ್ಟುರೊ ಪೆಸ್ತಾನಾ. ವಯಸ್ಸು 24 ವರ್ಷ. ಅರ್ಟುರೊ ಪೆಸ್ತಾನಾ ಪತ್ನಿ ಹೆಸರು ಅಮೀರಾ ಇಬ್ರಾಹಿಂ. ಪ್ರಪಂಚದ ಅತ್ಯುತ್ತಮ ಪತಿ ಎನ್ನಿಸಿಕೊಳ್ಳುವಷ್ಟು ಪ್ರೀತಿ, ಕಾಳಜಿಯಿಂದ ಅರ್ಟುರೊ ಪೆಸ್ತಾನಾ ತನ್ನ ಪತ್ನಿಯನ್ನು ನೋಡಿಕೊಳ್ಳುತ್ತಾನೆ.
ರಾಧಿಕಾ ಮರ್ಚೆಂಟ್ ಹಣೆಗೆ ಮುತ್ತಿಟ್ಟ ಅನಂತ್ ಅಂಬಾನಿ, ಮಗನ ಖುಷಿ ಕಂಡು ಮುಖೇಶ್ ಅಂಬಾನಿ ಕಣ್ಣೀರು!
ದಂಪತಿ ಸದ್ಯ ಹೂಸ್ಟನ್ (Houston) ನ ಭವನದಲ್ಲಿ ವಾಸವಾಗಿದ್ದಾರೆ. ಅರ್ಟುರೊ ಪೆಸ್ತಾನಾ ಬ್ಯುಸಿನೆಸ್ ಮೆನ್. ಕೋಟ್ಯಾಧಿಪತಿ ಅರ್ಟುರೊ ಪೆಸ್ತಾನಾ, ದುಬಾರಿ ಬೆಲೆಯ ಮನೆಯಲ್ಲಿ ವಾಸವಾಗಿದ್ದಾನೆ. ಅರ್ಟುರೊ ಪೆಸ್ತಾನಾ ಮತ್ತು ಅಮೀರಾ ಬಾಲ್ಯ ಸ್ನೇಹಿತರು. 12ನೇ ವರ್ಷದಲ್ಲಿರುವಾಗ ಮೊದಲ ಬಾರಿ ಭೇಟಿ ಆಗಿದ್ದರು. ಆದ್ರೆ ಅಮೀರಾ, ಅರ್ಟುರಾ ಪ್ರೀತಿ (Love) ಯನ್ನು ಆಗ ಒಪ್ಪಿರಲಿಲ್ಲ. ಅರ್ಟುರಾ ಜೊತೆ ಡೇಟ್ ಗೆ ಹೋಗಲು ನಿರಾಕರಿಸಿದ್ದಳು. ಆಕೆಯ ಒಪ್ಪಿಗೆಗೆ ಅರ್ಟುರಾ ಆರು ವರ್ಷಗಳ ಕಾಲ ಕಾದಿದ್ದ. 18ನೇ ವಯಸ್ಸಿನಲ್ಲಿ ಅಮೀರಾ ಒಪ್ಪಿಗೆ ನೀಡಿದ್ದಳು. ಆಗ್ಲೇ ಅಮೀರಾಳನ್ನು ತನ್ನ ರಾಜಕುಮಾರಿ ಎಂದು ಘೋಷಣೆ ಮಾಡಿದ್ದ ಅರ್ಟುರಾ, ಆಕೆಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಪಣತೊಟ್ಟಿದ್ದ. ಇವರಿಬ್ಬರು 2023ರಲ್ಲಿ ಮದುವೆ ಆದ್ರು. ದಂಪತಿಗೆ ಒಂದು ಮುದ್ದಾದ ಮಗು ಇದೆ. ಅಮೀರಾ ಮದುವೆಗೆ ಮುನ್ನ ಬ್ಯುಸಿನೆಸ್ ಮಾಡ್ತಿದ್ದಳು. ಸೆಕೆಂಡ್ ಹ್ಯಾಂಡ್ ಫ್ಯಾಷನ್ ವಸ್ತುಗಳ ಮಾರಾಟ ಮಾಡುತ್ತಿದ್ದಳು. ಮದುವೆಗೆ ಕೆಲ ತಿಂಗಳಿರುವಾಗ ಕೆಲಸ ಬಿಟ್ಟಿದ್ದಾಳೆ.
ಅಮೀರಾ ಸುಖವಾಗಿರೋದು ಬಹಳ ಮುಖ್ಯ. ಆಕೆಗೆ ಮನೆ ಹಾಗೂ ಕಚೇರಿ ಯಾವುದೇ ಕೆಲಸ ನೀಡಬಾರದು ಎಂದು ನಾನು ನಿರ್ಧರಿಸಿದ್ದೆ. ಆಕೆ ನನ್ನ ಮಗುವಿಗೆ ತಾಯಿಯಾಗಿದ್ದಾಳೆ. ಮಗುವನ್ನು ನೋಡಿಕೊಳ್ಳೋದು ಮಾತ್ರ ಆಕೆ ಕೆಲಸ ಎಂದು ಅರ್ಟುರಾ ಹೇಳಿದ್ದಾನೆ.
Vaastu Tips: ಈ 8 ವಸ್ತುಗಳನ್ನ ಎಂದಿಗೂ ಯಾರಿಗೂ ಗಿಫ್ಟ್ ಮಾಡ್ಬೇಡಿ; ನೆಗೆಟಿವಿಟಿ ಹೆಚ್ಚುತ್ತೆ
ಅಮೀರಾಗೆ ಅರ್ಟುರಾ ನೀಡ್ತಾನೆ ಇಷ್ಟೊಂದು ಹಣ : ಅಮೀರಾ ಸಂತೋಷವೇ ನನ್ನ ಮೊದಲ ಆದ್ಯತೆ ಎನ್ನುವ ಅರ್ಟುರಾ, ಪ್ರತಿ ತಿಂಗಳು ಎಂಟು ಲಕ್ಷ ಭತ್ಯೆಯನ್ನು ಪತ್ನಿಗೆ ನೀಡ್ತಾನೆ. ಈ ಹಣದಲ್ಲಿ ಅಮೀರಾ ತನಗೆ ಬೇಕಾದ ವಸ್ತು ಖರೀದಿ ಮಾಡಬಹುದು. ಅಲ್ಲದೆ ತಿಂಗಳಲ್ಲಿ ನಾಲ್ಕು ದಿನ ಅಮೀರಾಗೆ ರಜೆ ಕೂಡ ಸಿಗುತ್ತದೆ. ತನ್ನ ರಜಾ ದಿನಗಳಲ್ಲಿ ಆಕೆ ಎಲ್ಲಿ ಬೇಕಾದ್ರೂ ಸ್ವಚ್ಛಂದವಾಗಿ ಓಡಾಡಬಹುದು. ನನ್ನ ಕುಟುಂಬಕ್ಕೆ ನನ್ನ ಅವಶ್ಯಕತೆ ಇರುವ ಕಾರಣ ನಾನು ಕೆಲಸಕ್ಕೆ ಹೋಗೋದಿಲ್ಲ. ಅರ್ಟುರಾರಂತ ಪತಿ ಪಡೆಯೋದು ನನ್ನ ಅದೃಷ್ಟ ಎನ್ನುತ್ತಾಳೆ ಅಮೀರಾ.