
90ರ ದಶಕದ ಹಿಟ್ ಸಿನಿಮಾಗಳಲ್ಲಿ “ರಾಜಾ ಹಿಂದೂಸ್ತಾನಿ’ ಮುಂಚೂಣಿಯಲ್ಲಿದೆ. ಈ ಚಿತ್ರದ ಹಾಡುಗಳು ಅತ್ಯಂತ ಮೆಲೋಡಿಯಸ್ ಆಗಿರುವುದಷ್ಟೇ ಅಲ್ಲ, ಅಂದಿನಿಂದಲೂ ಜನಪ್ರಿಯತೆ ಉಳಿಸಿಕೊಂಡಿವೆ. 1996ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಅಂದಿನ ಸೂಪರ್ ಸ್ಟಾರ್ ಕರೀನಾ ಕಪೂರ್ ಮತ್ತು ಮಿಸ್ಟರ್ ಪರ್ಫೆಕ್ಟ್ ಎನಿಸಿಕೊಂಡಿರುವ ಆಮೀರ್ ಖಾನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಆ ಚಿತ್ರದ ಎವರ್ ಗ್ರೀನ್ ಹಾಡು “ಆಯೇ ಹೋ ಮೇರಿ ಜಿಂದಗಿ ಮೇ, ತುಮ್ ಬಹಾರ್ ಬನ್ ಕೇ’. ಈ ಚಿತ್ರಕ್ಕೆ ನದೀಮ್ –ಶ್ರವಣ್ ಸಂಗೀತವಿದೆ. “ರಾಜಾ ಹಿಂದೂಸ್ತಾನಿ’ಯ ಎಲ್ಲ ಹಾಡುಗಳೂ ಭಾರೀ ಹಿಟ್ ಆಗಿದ್ದವು. “ಆಯೇ ಹೋ ಮೇರಿ ಜಿಂದಗಿ ಮೇ’ ಹಾಡನ್ನು ಉದಿತ್ ನಾರಾಯಣ್ ಮತ್ತು ಅಲ್ಕಾ ಯಾಜ್ನಿಕ್ ಇಬ್ಬರೂ ಪ್ರತ್ಯೇಕವಾಗಿ ಹಾಡಿದ್ದಾರೆ. ಎರಡು ವಿಭಿನ್ನ ಸನ್ನಿವೇಶಗಳಲ್ಲಿ ಇವುಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಈ ಗಾಯಕರ ದನಿಯಂತೂ ಮಧುರ ಮಧುರವಾಗಿದ್ದು, ಕೇಳಿದಾಗ ಹೊಸದೊಂದು ಅನುಭೂತಿಯಾಗುವುದು ನಿಶ್ಚಿತ. ಈ ಹಾಡು ಜನಪ್ರಿಯವಾದ ಸಮಯದಲ್ಲಿ ಪ್ರೀತಿಪಾತ್ರರಿಗೆ ಈ ಹಾಡಿನ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದುದೂ ಇತ್ತು. ಈಗ ಕೂಡ ಹಿರಿಯ ದಂಪತಿಗಳು ಈ ಹಾಡಿನ ಮೂಲಕ ತಮ್ಮ ಪ್ರೀತಿಯನ್ನು ಬಹಿರಂಗಪಡಿಸಿರುವು ಈಗ ವೈರಲ್ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ (Social Media) ಹಲವು ವೀಡಿಯೋಗಳು (Video) ಎಲ್ಲರ ಗಮನ ಸೆಳೆಯುತ್ತವೆ. ಅಂಥ ವೀಡಿಯೋ ಇದಾಗಿದ್ದು, ಹಿರಿಯ ದಂಪತಿ (Elder Couple) ತಮ್ಮ ನಡುವಿನ ಬಾಂಧವ್ಯವನ್ನು (Relationship) “ಆಯೇ ಹೋ ಮೇರಿ ಜಿಂದಗಿ ಮೇ’ ಹಾಡಿನ ಮೂಲಕ ವ್ಯಕ್ತಪಡಿಸಿದ್ದಾರೆ.
ಈ ಫೋಟೋಗಳಲ್ಲಿ ಯಾವುದು ರಾಧಿಕಾ ಮರ್ಚೆಂಟ್, ಯಾವುದು ಅಲ್ಲ ಎಂದು ಕಂಡುಹಿಡಿಯಬಲ್ಲಿರಾ?
ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ “ದಪ್ರಯಾಗ್ ತಿವಾರಿ’ ಎನ್ನುವವರ ಖಾತೆಯಿಂದ ಪೋಸ್ಟ್ (Post) ಆಗಿರುವ ಈ ವೀಡಿಯೋ ಬಹುಬೇಗ ವೈರಲ್ (Viral) ಆಗಿದೆ. ಟ್ರೆಂಡ್ (Trend) ಆಗುತ್ತಿದೆ. ಇದಕ್ಕೆ ಕ್ಯಾಪ್ಷನ್ ಕೂಡ ಅರ್ಥವತ್ತಾಗಿದ್ದು, ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಆಗುವ ಎಲ್ಲ ವೀಡಿಯೋಗಳೂ ಭೀತಿ ಹುಟ್ಟಿಸುವುದಿಲ್ಲ’ ಎಂದು ಕ್ಯಾಪ್ಷನ್ ನೀಡಲಾಗಿದೆ.
ಹಿರಿಯರ ರೀಲ್ಸ್
ಇಂದು ಎಲ್ಲರೂ ರೀಲ್ಸ್ (Reels) ಮಾಡಲು ಉತ್ಸುಕತೆ ತೋರುತ್ತಾರೆ. ಇದರಲ್ಲಿ ಹಿರಿಯರೂ ಹಿಂದೆ ಬಿದ್ದಿಲ್ಲ. ಹಿರಿಯರನ್ನು ಒಳಗೊಂಡ ಸಾವಿರಾರು ರೀಲ್ಸ್ ಸಾಕಷ್ಟು ಜನಪ್ರಿಯವಾಗಿವೆ. ಅವುಗಳಲ್ಲಿ ಇದೂ ಸಹ ಒಂದಾಗಿದೆ. ಈ ವೀಡಿಯೋದಲ್ಲಿ ಆ ವ್ಯಕ್ತಿ “ನನ್ನಿಂದ ನೀನು ಏನನ್ನು ಬಯಸುತ್ತೀಯಾ?’ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಮಹಿಳೆ, “ಅಗರ್ ಮೇ ಜೋ ರೂಠ್ ಜಾವೂಂ ತೋ ತುಮ್ ಮುಝೇ ಮನಾನಾ’ ಎನ್ನುವ ಸಾಲನ್ನು ಹೇಳುತ್ತ ಹತ್ತಿರ ಬರುತ್ತಾರೆ. ಇಬ್ಬರೂ ತಮಗೆ ತೋಚಿದಂತೆ ಸಣ್ಣದಾಗಿ ಡಾನ್ಸ್ (Dance) ಮಾಡುತ್ತಾರೆ.
ವಯಸ್ಸಾದರೂ (Age) ಇಬ್ಬರ ನಡುವೆ ಇರುವ ಒಲವು, ಅನುರೂಪತೆ, ಬಾಂಧವ್ಯವನ್ನು ಈ ವೀಡಿಯೋ ಪ್ರತಿಧ್ವನಿಸುತ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
Viral Video: ರಂಗಪಂಚಮಿ ಸಂಭ್ರಮದ ನಡುವೆ Ambulance ದಾರಿ ಮಾಡಿಕೊಟ್ಟ ಜನರು!
ಒಬ್ಬರು, “ಇನ್ ಸ್ಟಾಗ್ರಾಮ್ ನಲ್ಲಿ ಬರುವ ಎಲ್ಲ ವೀಡಿಯೋಗಳು ಕಿರಿಕಿರಿ ಮೂಡಿಸುವುದಿಲ್ಲ. ಕೆಲವನ್ನು ನಿಜಕ್ಕೂ ಎಂಜಾಯ್ ಮಾಡಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ. “ಇದು ನಿಜಕ್ಕೂ ಕ್ಯೂಟ್ ಆಗಿದೆ. ಸಂಗಾತಿ ಜತೆಗೆ ಇಂತಹ ಆರೋಗ್ಯಕರ ಸಂಬಂಧವನ್ನು ಹೊಂದುವ ಸಾಮರ್ಥ್ಯ (Ability) ನಮಗೂ ದೊರೆಯಲಿ ಎನ್ನುವುದು ನನ್ನ ಆಶಯವಾಗಿದೆ. ಅಲ್ಲಿಯವರೆಗೆ ನಾವೂ ಅವರ ವಯಸ್ಸನ್ನು ಸಮೀಪಿಸುತ್ತೇವೆ’ ಎಂದು ತಮಾಷೆಯಾಗಿ ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.