ಪತಿ ಜಗಳ ಆಡ್ಬಾರದು, ಮನೆ ಕೆಲಸದಲ್ಲಿ ಸಹಾಯ ಮಾಡ್ಬೇಕು ಅಂತ ಎಲ್ಲ ಮಹಿಳೆಯರು ಬಯಸ್ತಾರೆ. ಅಂಥ ಪತಿ ಸಿಕ್ಕಾಗ ಸ್ವರ್ಗಕ್ಕೆ ಮೂರೇ ಗೇಣು ಎಂದು ಖುಷಿಯಾಗ್ತಾರೆ. ಆದ್ರೆ ಪತಿಯ ಈ ಬದಲಾವಣೆಗೆ ಮತ್ತೇನೋ ಕಾರಣ ಎಂಬುದು ಗೊತ್ತಾದ್ರ..?
ದಾಂಪತ್ಯದಲ್ಲಿ ಪ್ರೀತಿ, ನಂಬಿಕೆ, ವಿಶ್ವಾಸ ಎಲ್ಲವೂ ಸಮನಾಗಿ ಇರಬೇಕು. ಅನೇಕ ಬಾರಿ, ಪ್ರೀತಿ, ಕಾಳಜಿ ಅತಿಯಾದ್ರೂ ಅನುಮಾನ ಬರಲು ಶುರುವಾಗುತ್ತೆ. ಕೆಲವರು ಸುಳ್ಳು ಪ್ರೀತಿಯ ಮೇಲೆ ದಾಂಪತ್ಯ ಮುನ್ನಡೆಸುವ ಪ್ರಯತ್ನ ಮಾಡ್ತಾರೆ. ಅದು ಇನ್ನೊಂದು ಸಂಗಾತಿಗೆ ಮಾಡುವ ಮೋಸ. ಸಂಗಾತಿಗೆ ನೀಡುವ ಗೌರವ, ಕಾಳಜಿ ಯಾವಾಗ್ಲೂ ಮನಸ್ಸಿನಿಂದ ಬರಬೇಕೇ ವಿನಃ ಬೇರೆಯವರು ಹೇಳಿ ಬರುವಂತಹದ್ದಲ್ಲ. ಇದು ಎಂದಿಗೂ ನಾಟಕವಾಗಬಾರದು. ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು ತನ್ನ ನೋವನ್ನು ತೋಡಿಕೊಂಡಿದ್ದಾಳೆ. ಮೂರು ವರ್ಷಗಳಿಂದ ಪತಿ ಮೋಸ ಮಾಡ್ತಿದ್ದಾನೆ ಎಂದು ಮಹಿಳೆ ರೆಡ್ಡಿಟ್ ನಲ್ಲಿ ಹೇಳಿದ್ದಾಳೆ. ಪತಿ ಅತೀ ಒಳ್ಳೆಯವನಾಗಿದ್ದಾನೆ, ಆದ್ರೆ ಆತನ ಅತಿ ಒಳ್ಳೆತನಕ್ಕೆ ಕಾರಣವಾದ ವಿಷ್ಯವೇ ಆಕೆಯನ್ನು ಘಾಸಿಗೊಳಿಸಿದೆ. ಇನ್ನೊಬ್ಬ ಹುಡುಗಿ ಜೊತೆ ಸಂಬಂಧದಲ್ಲಿರುವ ಪತಿ, ಪತ್ನಿ ಮುಂದೆ ಒಳ್ಳೆಯವನಂತೆ ನಾಟಕವಾಡ್ತಿದ್ದಾನೆ. ಇದ್ರಿಂದ ನೊಂದಿರುವ ಮಹಿಳೆ ಏನು ಮಾಡ್ಬೇಕು ಎಂದು ಬಳಕೆದಾರರನ್ನು ಪ್ರಶ್ನಿಸಿದ್ದಾಳೆ.
ಸಾಮಾಜಿಕ ಜಾಲತಾಣ ರೆಡ್ಡಿಟ್ ನಲ್ಲಿ ಜನರು ತಮ್ಮ ವೈಯಕ್ತಿಕ ವಿಷ್ಯಗಳನ್ನು ಹಂಚಿಕೊಳ್ತಿರುತ್ತಾರೆ. ಈ ಮಹಿಳೆ ಕೂಡ ರೆಡ್ಡಿಟ್ ಸಹಾಯ ಪಡೆದಿದ್ದಾಳೆ. ಅಲ್ಲಿ ತನ್ನ ನೋವನ್ನು ತೋಡಿಕೊಂಡಿದ್ದಾಳೆ. ಆಕೆಗೆ ಇಬ್ಬರು ಮಕ್ಕಳು. ಮಕ್ಕಳಾದ್ಮೇಲೂ ದಾಂಪತ್ಯ (Marriage) ದಲ್ಲಿ ನೆಮ್ಮದಿ ಇರಲಿಲ್ಲ. ಇಬ್ಬರೂ ನಿರಂತರ ಗಲಾಟೆ ಮಾಡಿಕೊಳ್ತಿದ್ದರು. ಹಾಗಾಗಿ ಎರಡು ವರ್ಷಗಳ ಕಾಲ ಪತಿ (Husband) ಹಾಗೂ ಪತ್ನಿ ಇಬ್ಬರೂ ತಜ್ಞರಿಂದ ಥೆರಪಿ ಪಡೆದಿದ್ದರು. ಈ ಥೆರಪಿ (Therapy) ನಂತ್ರ ಪತಿ ಸಂಪೂರ್ಣ ಬದಲಾಗಿದ್ದ. ಇದ್ರಿಂದ ಮಹಿಳೆ ಖುಷಿಯಾಗಿದ್ದಳು.
ಗಂಡ-ಹೆಂಡತಿ ಜಗಳವಾಡುತ್ತಿದ್ದರೆ ಯೋಚಿಸೋದು ಬೇಡ, ಸಂಬಂಧಕ್ಕೆ ಇದು ಒಳ್ಳೇದಂತೆ!
ಮನೆ ಕೆಲಸ ಮಾಡ್ತಿದ್ದ ಪತಿ, ಯಾವುದೇ ವಿಷ್ಯಕ್ಕೆ ಗಲಾಟೆ ಮಾಡ್ತಿರಲಿಲ್ಲ. ಇಬ್ಬರ ಮಧ್ಯೆ ಗಲಾಟೆಯಾದ್ರೆ ತನ್ನ ತಪ್ಪನ್ನು ಒಪ್ಪಿಕೊಳ್ತಿದ್ದ. ಮೂರು ವರ್ಷಗಳಲ್ಲಿ ಎಲ್ಲವೂ ಬದಲಾಗಿತ್ತು. ಮಹಿಳೆ ಬಯಸಿದಂತೆ ಡ್ರೀಮ್ ಹಸ್ಬೆಂಡ್ ಆಗಿದ್ದ. ಪತ್ನಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದ. ಪತಿ ತುಂಬಾ ಒಳೆಯವನಾಗಿದ್ದ. ಇದೆಲ್ಲವೂ ಥೆರಪಿಯಿಂದ ಎಂದು ಆಕೆ ಭಾವಿಸಿದ್ದಳು. ಆದ್ರೆ ಒಂದು ದಿನ ಪತಿ ಮೊಬೈಲ್ ನೋಡಿ ದಂಗಾಗಿದ್ದಾಳೆ. ಪತಿ ಗರ್ಲ್ ಫ್ರೆಂಡ್ ಹೊಂದಿದ್ದಾನೆ ಎಂಬುದು ಆಗ್ಲೆ ಪತ್ನಿಗೆ ಗೊತ್ತಾಗಿದೆ. ಪತಿಯ ಈ ಸುಧಾರಣೆಗೆ ಆಕೆಯೇ ಕಾರಣ ಎಂಬ ಸತ್ಯ ಬಹಿರಂಗವಾಗಿದೆ. ಪತಿ ಪ್ರತಿ ಬಾರಿಯೂ ಮನೆಯಲ್ಲಿ ನಡೆಯುತ್ತಿದ್ದ ಗಲಾಟೆ ಬಗ್ಗೆ ಗೆಳತಿಗೆ ಹೇಳ್ತಿದ್ದ. ಆಕೆ ಆತನಿಗೆ ಇದ್ರ ಬಗ್ಗೆ ಸಲಹೆ ನೀಡ್ತಿದ್ದಳು ಎಂದು ರೆಡ್ಡಿಟ್ ನಲ್ಲಿ ಮಹಿಳೆ ಹೇಳಿದ್ದಾಳೆ.
ಪ್ರತಿ ಗಲಾಟೆ ಬಗ್ಗೆಯೂ ಪತಿ ಗೆಳತಿಗೆ ಹೇಳ್ತಿದ್ದ. ನೂರರಲ್ಲಿ ಶೇಕಡಾ 99 ಬಾರಿ ಗೆಳತಿ ಆತನ ಬದಲು ಪತ್ನಿಯನ್ನು ಬೆಂಬಲಿಸುತ್ತಿದ್ದಳು. ವಿಚ್ಛೇದನದ ವಿಷ್ಯ ಬಂದಾಗ ಕೂಡ ಪತ್ನಿಯನ್ನೇ ಆಕೆ ಬೆಂಬಲಿಸುತ್ತಿದ್ದಳು. ಸಂಬಂಧದಲ್ಲಿ ಮೋಸ ಮಾಡಬಾರದು, ವಿಚ್ಛೇದನ ಪಡೆಯುವುದು ಆಕೆಗೆ ಮಾಡುವ ಮೋಸವೆಂದು ಆಕೆ ಹೇಳುತ್ತಿದ್ದಳು. ಪತಿಯ ಸುಧಾರಣೆ ಆತನ ಗರ್ಲ್ ಫ್ರೆಂಡ್ ಕಾರಣವಾಗಿದ್ದು ಖುಷಿ ವಿಷ್ಯವೇ ಆದ್ರೂ ಇದ್ರಲ್ಲಿ ಸಾಕಷ್ಟು ನೋವಿದೆ ಎಂದು ಮಹಿಳೆ ಹೇಳಿದ್ದಾಳೆ.
ನೆಮ್ಮದಿಗಾಗಿ ದುಪ್ಪಟ್ಟು ಹಣ ಕೊಟ್ಟು ಜನರೇ ಇಲ್ಲದ ತಾಣದಲ್ಲೊಂದು ಮನೆ ಖರೀದಿಸಿದ ದಂಪತಿ!
ಪತಿಯನ್ನು ಸುಧಾರಿಸುತ್ತ ಬಂದಿದ್ದ ಗೆಳತಿ ವಿಚ್ಛೇದನ ವಿರೋಧಿಸಿದ್ದರೂ ಅವರಿಬ್ಬರ ಭೇಟಿ ಮಾತ್ರ ತಪ್ಪಿರಲಿಲ್ಲ. ಇಬ್ಬರೂ ನಿರಂತರವಾಗಿ ಭೇಟಿಯಾಗ್ತಿದ್ದರು. ನನಗೆ ಮುಂದೇನು ಮಾಡ್ಬೇಕು ಎಂಬುದು ಗೊತ್ತಾಗ್ತಿಲ್ಲ ಎಂದು ಮಹಿಳೆ ಹೇಳಿದ್ದಾಳೆ. ಇದಕ್ಕೆ ರೆಡ್ಡಿಟ್ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಮದುವೆ ಮುರಿದಿದೆ, ವಿಚ್ಛೇದನ ಪಡೆಯುವುದೇ ಒಳ್ಳೆಯದು ಎಂದು ಅನೇಕರು ಸಲಹೆ ನೀಡಿದ್ದಾರೆ. ಯಾರೂ ಆಕೆಯ ಪತಿ ಒಳ್ಳೆಯವನು ಎಂದಿಲ್ಲ.