ಸದ್ಗುರು ಇನ್ನೂ ಬದುಕಿರುವುದೇಕೆ? ಇಲ್ಲದೆ ಸಾವಿನ ಸುತ್ತೊಂದು ಜಗ್ಗಿ ವಾಸುದೇವ್ ಸುತ್ತು

By Suvarna NewsFirst Published Apr 1, 2024, 3:03 PM IST
Highlights

ಸದ್ಗುರು ಮುಂದೆ ಜನರು, ನಾನಾ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯುವ ಪ್ರಯತ್ನ ನಡೆಸುತ್ತಾರೆ. ಭಕ್ತರ ಎಲ್ಲ ಅನುಮಾನಕ್ಕೆ ಸದ್ಗುರು ನಗ್ತಾ ಉತ್ತರ ನೀಡ್ತಾರೆ. ಸಾವಿನ ಬಗ್ಗೆಯೂ ಸದ್ಗುರು ಶಾಂತವಾಗಿ ಉತ್ತರ ನೀಡಿದ್ದಾರೆ. 
 

ಸದ್ಗುರು ಜಗ್ಗಿ ವಾಸುದೇವ್ ಅಭಿಮಾನಿಗಳಿಗೆ ಕೆಲ ದಿನಗಳ ಹಿಂದೆ ಆಘಾತವಾಗಿತ್ತು. ಸದ್ಗುರು ಆಸ್ಪತ್ರೆ ಸೇರಿದ್ದು ಇದಕ್ಕೆ ಕಾರಣ. ಮೆದುಳಿನ ಒಂದು ಭಾಗದಲ್ಲಿ ರಕ್ತಸ್ರಾವವಾದ ಕಾರಣ ಅವರು ಆಸ್ಪತ್ರೆಗೆ ದಾಖಲಾಗಬೇಕಾಯ್ತು. ಅಲ್ಲಿ ಸದ್ಗುರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮೆದುಳಿನ ಬ್ಲೀಡಿಂಗ್ ಅಪಾಯಕಾರಿ. ಅನೇಕ ರೋಗಗಳಿಗೆ ಇದು ಕಾರಣವಾಗುವುದಲ್ಲದೆ ಸಾವು ತರುವ ಸಾಧ್ಯತೆ ಇರುತ್ತದೆ. ಸದ್ಗುರು ಸದ್ಯ ಸಾವನ್ನು ಗೆದ್ದು ಬಂದಿದ್ದಾರೆ. ನಗ್ತಾ, ತಮಾಷೆ ಮಾತುಗಳನ್ನಾಡುತ್ತಲೇ ತನ್ನ ಭಕ್ತರಿಗೆ ಜೀವನದ ಪಾಠವನ್ನು ಹೇಳುವ ಸದ್ಗುರು, ತಮ್ಮ ಸ್ಥಿತಿಯ ಬಗ್ಗೆ ಹಾಸ್ಯಮಯವಾಗಿ ಮಾತನಾಡಿದ್ದರು. ಈ ವಿಡಿಯೋ ಈಗಾಗಲೇ ವೈರಲ್ ಆಗಿದೆ. ತಮ್ಮ ಜೀವನದ ಕೊನೆ ಕ್ಷಣದಲ್ಲೂ ಸದ್ಗುರು ಭಯಪಡುವುದಿಲ್ಲ ಎಂಬುದನ್ನು ಈ ವಿಡಿಯೋ ನೋಡಿ ಹೇಳ್ಬಹುದು. ನೋವಿನಲ್ಲೂ ತುಂಬಾ ಖುಷಿಯಾಗಿದ್ದ ಸದ್ಗುರು, ಸಾವಿನ ಬಗ್ಗೆ ಅನೇಕ ಬಾರಿ ಮಾತನಾಡಿದ್ದಾರೆ. ತಾವ್ಯಾಕೆ ಸಾವಿಗೆ ಹೆದರುವುದಿಲ್ಲ ಎಂಬುದನ್ನು ಭಕ್ತರ ಮುಂದಿಟ್ಟಿದ್ದಷ್ಟೆ ಅಲ್ಲ ಸಾವನ್ನು ಯಾಕೆ ತಾವಿನ್ನೂ ಸ್ವೀಕರಿಸಿಲ್ಲ ಎಂಬುದನ್ನು ಕೂಡ ಹೇಳಿದ್ದಾರೆ. 

ಮನುಷ್ಯನಿಗೆ ಸಾವು ನಿಶ್ಚಿತ. ಈ ಸಂಗತಿ ಗೊತ್ತಿದ್ರೂ ಜನರು ಸಾವಿಗೆ ಭಯಪಡುತ್ತಾರೆ. ಮರಣ ಯಾವಾಗ ಬರುತ್ತೆ ಎಂಬುದು ಗೊತ್ತಿಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣ. ಆದ್ರೆ ಸದ್ಗುರು ಎಂದೂ ತಮ್ಮ ಸಾವಿಗೆ ಹೆದರಿಲ್ಲ. ಸಾವಿನ ಬಗ್ಗೆ ಸದ್ಗುರು ಯಾವಾಗ್ಲೂ ಶಾಂತವಾಗಿ ಮತ್ತು ಹಾಸ್ಯಮಯವಾಗಿ ಮಾತನಾಡ್ತಾರೆ. ಸಂದರ್ಶನವೊಂದರಲ್ಲಿ ಸಾವಿನ ಬಗ್ಗೆ ಅವರಿಗೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಅವರು ನೀಡಿದ ಉತ್ತರ ಇಲ್ಲಿದೆ.

ಸಾಯುವ ಮೊದಲು ಅದೆಂಥಾ ಲೈಪ್ ಲೆಸನ್ ಟಿಪ್ಸ್ ಕೊಟ್ಟು ಹೋಗಿದ್ದಾರೆ ನೋಡಿ ಸುಶಾಂತ್ ಸಿಂಗ್ ರಜಪೂತ್!

ಸಾವಿ (Death) ನ ಬಗ್ಗೆ ಸದ್ಗುರು (Sadhguru) ಹೇಳಿದ ಉತ್ತರ : ನೀವು ನಿಮ್ಮ ಜೀವನದ ಕೊನೆ ಕ್ಷಣದ ಬಗ್ಗೆ ಆಲೋಚನೆ ಮಾಡಿದ್ದೀರಾ ಎಂದು ಅವರಿಗೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ ಸದ್ಗುರು, ನನ್ನ ಜೀವನ (life)ದ ಕೊನೆಯ ಕ್ಷಣದ ಬಗ್ಗೆ ನಾನು ಸಂಪೂರ್ಣವಾಗಿ ನಿರಾಳವಾಗಿದ್ದೇನೆ. ಈ ವಿಷಯ ನನಗೆ ಸ್ವಲ್ಪವೂ ತೊಂದರೆ ಕೊಡುವುದಿಲ್ಲ ಎಂದಿದ್ದರು. ನೀವು ಎಂದಾದ್ರೂ ಈ ಬಗ್ಗೆ ಆಲೋಚನೆ ಮಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸದ್ಗುರು, ನನ್ನ ಜೀವನ ಯಾವಾಗ ಕೊನೆಗೊಳ್ಳಬೇಕು ಎಂಬುದನ್ನು ನಾನೇ ನಿರ್ಧರಿಸುತ್ತೇನೆ ಎಂದಿದ್ದಾರೆ. ಇದಕ್ಕೆ ಮತ್ತೆ ಪ್ರಶ್ನೆ ಕೇಳಿದ ಸಂದರ್ಶಕರು, ನೀವು ಇನ್ನೂ ಯಾವುದಕ್ಕೆ ಕಾಯುತ್ತಿದ್ದೀರಿ, ಯಾಕೆ ಇನ್ನೂ ನಿರ್ಧರಿಸಿಲ್ಲ ಎಂದು ಕೇಳಿದ್ದಾರೆ. ಅದಕ್ಕೆ ಮೊದಲು ತಮಾಷೆಯಾಗಿ ಉತ್ತರಿಸಿದ ಸದ್ಗುರು, ಇನ್ನೂ ಯಾಕೆ ನಾನು ಸಾವನ್ನಪ್ಪಿಲ್ಲ ಎಂದು ಕೇಳ್ತಿದ್ದೀರಾ ಎಂದು ಮರು ಪ್ರಶ್ನೆ ಮಾಡಿದ್ದಾರೆ. ಮತ್ತೆ ಇದೇ ಪ್ರಶ್ನೆಯನ್ನು ಕೇಳಿದ ಸದ್ಗುರುವಿಗೆ, ನೀರಿನ ಹರಿವು ಇನ್ನೂ ಇದೆ. ನನ್ನ ಸುತ್ತಮುತ್ತಲಿನ ಜನರಿಗೆ ಇನ್ನೂ ಜ್ಞಾನದ ದಾಹವಿದೆ. ಅವರು ಕಲಿಯಲು ಮತ್ತು ಮುಂದೆ ಸಾಗಲು ಬಯಸುತ್ತಾರೆ. ಅವರು ನನ್ನ ಮುಂದೆ ಬೇಸರವನ್ನು ತೋಡಿಕೊಂಡಾಗ ನಾನು ಸಾಯುತ್ತೇನೆ. ಇದು ಅವರಿಗೂ ಚೆನ್ನಾಗಿ ತಿಳಿದಿರಬೇಕು ಎಂದು ಸದ್ಗುರು ಹೇಳಿದ್ದಾರೆ. 

ಜೀವನ ಇರೋದು ಭಯಪಡುವುದಕ್ಕಲ್ಲ ಎಂಬುದು ಗೊತ್ತಿರಬೇಕು. ಸಾವಿಗೆ ಎಷ್ಟೇ ಭಯಪಟ್ಟರೂ ಅದನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ. ಹಾಗಾಗಿ ಭಯದಿಂದ ಜೀವನ ನಡೆಸಬಾರದು.  ಮುಕ್ತವಾಗಿ ಬದುಕಬೇಕು. 

ಫಾರ್ಮ್‌ನಲ್ಲಿ ಮಕ್ಕಳಿಗೆ ಈಸ್ಟರ್ ಹಂಟ್ ಆಟ ಆಡಿಸಿದ ಯಶ್- ರಾಧಿಕಾ ದಂಪತಿ; ಆಯ್ರಾ, ಯಥರ್ವ್ ಮುದ್ದು ಮೊಲಗಳು ಎಂದ ಫ್ಯಾನ್ಸ್

ಮನಸ್ಸು ಯಾವಾಗಲೂ ಪ್ರಾಯೋಗಿಕವಾಗಿ ಯೋಚಿಸುತ್ತದೆ. ಹೃದಯ ಮುಕ್ತವಾಗಿ ಬದುಕಲು ಕಲಿಸುತ್ತದೆ. ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ. ಸದ್ಗುರುವಿನಂತೆ ಒಂದು ಗುರಿಯೊಂದಿಗೆ ಜೀವನ ನಡೆಸಿದ್ರೆ ಜೀವನ ಹೆಚ್ಚು ಸುಂದರವಾಗಿರುತ್ತದೆ. ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದು, ಸಕಾರಾತ್ಮಕ ಆಲೋಚನೆ ಮಾಡುವುದು ಮುಖ್ಯ. ಇದ್ರಿಂದ ಸಾವಿನ ಭಯದ ಬದಲು ಜೀವನದಲ್ಲಿ ಸಂತೋಷ ಪ್ರಾಪ್ತಿಯಾಗುತ್ತದೆ. 
 

click me!