
ನಿಮ್ಮ ಸಂಗಾತಿ ಸ್ಟ್ರಾಂಗ್ ಆದ ಮಹಿಳೆಯೇ ಇರಬಹುದು. ಆಕೆಯ ಆತ್ಮವಿಶ್ವಾಸ ಹೆಚ್ಚೇ ಇರಬಹುದು. ಆದರೆ, ಎಂಥದೇ ಸ್ಟ್ರಾಂಗ್ ಮಹಿಳೆ ಕೂಡಾ ಪ್ರೀತಿಯ ವಿಷಯದಲ್ಲಿ ಬೇಗ ಮೆತ್ತಗಾಗುತ್ತಾಳೆ, ಪೊಸೆಸಿವ್ ಆಗುತ್ತಾಳೆ. ನೀವು ಹೇಳುವ ಕೆಲ ಮಾತುಗಳು ಆಕೆಯಲ್ಲಿ ಅಭದ್ರತೆಯನ್ನು ಹುಟ್ಟು ಹಾಕಬಹುದು. ಆದರೆ, ನಿಮ್ಮ ಮಾತಿನ ಉದ್ದೇಶ ಅದಿಲ್ಲದಿರಬಹುದು. ಹೀಗೆ ಮಹಿಳೆ ಅಭದ್ರತೆಗೆ ಸಿಲುಕಿದರೆ ಸಂಬಂಧವನ್ನು ಆಕೆ ಎತ್ತ ಕೊಂಡೊಯ್ಯುತ್ತಾಳೆ ಎಂದು ಹೇಳಲಾಗದು. ಹಾಗಾಗಿ, ಮಾತನಾಡುವ ಮುನ್ನ ಪುರುಷರು ಎಚ್ಚರ ವಹಿಸುವುದು ಅಗತ್ಯ. ಆಕೆಯನ್ನು ಅಭದ್ರತೆಗೆ ತಳ್ಳುವ ಈ ಮಾತುಗಳನ್ನು ಆಡದಿರಿ. ಒಂದು ವೇಳೆ ಆಡಬೇಕೆಂದರೂ ಹೇಳುವ ದಾಟಿ ಬದಲಾಯಿಸಿಕೊಳ್ಳಬೇಕು.
ಗಂಡ್ ಕೊಡೋ ಆ ಏಟು ಯಾವತ್ತೂ ಒಂದು ಏಟಲ್ಲ
ವಾವ್, ಆ ಹುಡುಗಿ ಸಖತ್ ಹಾಟ್ ಇದಾಳೆ!
ನಿಮ್ಮ ಹುಡುಗಿ ಎದುರೇ ಬೇರೊಂದು ಹುಡುಗಿಯನ್ನು ಹೊಗಳಿದರೆ ಆರಂಭದಲ್ಲಿ ಆಕೆ ಅದನ್ನು ಕ್ಯಾಶುಯಲ್ ಆಗಿ ತೆಗೆದುಕೊಳ್ಳಬಹುದು. ತಾನು ಇಂಥದ್ದೆಲ್ಲ ಫ್ರೀಯಾಗಿ ತೆಗೆದುಕೊಳ್ಳುತ್ತೇನೆ ಎಂದು ತೋರಿಸಲು ಪ್ರಯತ್ನಿಸಬಹುದು. ಹಾಗಂಥ ನಿಮ್ಮ ಈ ಚಾಳಿ ಮುಂದುವರಿದರೆ ಆಕೆ ಒಳಗೊಳಗೇ ಅಭದ್ರತೆ ಅನುಭವಿಸುತ್ತಾಳೆ. ಪುರುಷರು ತಾವು ಈ ಬಗ್ಗೆ ಹೇಳುವುದನ್ನು ನಿಯಂತ್ರಿಸಿಕೊಳ್ಳಬೇಕಷ್ಟೇ ಅಲ್ಲ, ಅವರ ಕಣ್ಣುಗಳ ನೋಟವನ್ನೂ ನಿಯಂತ್ರಿಸಿಕೊಳ್ಳಬೇಕು. ಇದು ಆಕೆ ನಿಮ್ಮ ಜೊತೆಯಲ್ಲಿಲ್ಲದಾಗ ಕೂಡಾ. ಏಕೆಂದರೆ ಹುಡುಗಿಯರು ನೀವು ಆಡಿದ್ದಕ್ಕಿಂತ ಆಡದಿದ್ದುದರ ಬಗ್ಗೆ ಹೆಚ್ಚು ಗಮನ ವಹಿಸುತ್ತಿರುತ್ತಾರೆ.
ಅದೊಂದು ಬಕ್ವಾಸ್ ಐಡಿಯಾ
ತನ್ನ ಬಾಯ್‌ಫ್ರೆಂಡ್ ತನ್ನ ಬಗ್ಗೆ ಏನೆಂದು ಯೋಚಿಸುತ್ತಾನೆಂಬುದು ಹುಡುಗಿಗೆ ಯಾವಾಗಲೂ ಪ್ರಮುಖ ವಿಷಯವೇ ಆಗಿರುತ್ತದೆ. ಆಕೆ ಏನಾದರೂ ತನ್ನ ಐಡಿಯಾವನ್ನು ಹಂಚಿಕೊಂಡಾಗ ಅದು ಬಕ್ವಾಸ್ ಎಂದೋ, ಆಕೆ ದಡ್ಡಿ ಎಂಬಂತೆಯೋ ವರ್ತಿಸಿದಿರಾದರೆ ಅದರಿಂದ ಆಕೆಯ ಆತ್ಮವಿಶ್ವಾಸಕ್ಕೆ ಪೆಟ್ಟು ಬೀಳುತ್ತದೆ. ಬೇರೆಯವರು ಹಾಗೆ ಮಾಡಿದರೆ ಬಹುಷಃ ಅದನ್ನಾಕೆ ಕಡೆಗಣಿಸಬಹುದು. ಆದರೆ, ತನ್ನ ಜೀವನದ ಬಹುಮುಖ್ಯ ವ್ಯಕ್ತಿ ಹಾಗೆ ಮಾತಾಡಿದಾಗ ಆಕೆಗೆ ಅಭದ್ರತೆ ಕಾಡುತ್ತದೆ. ಬದಲಿಗೆ ಆಕೆಯ ಶಕ್ತಿ, ಆಸಕ್ತಿ, ಪ್ರತಿಭೆ ಏನಿದೆಯೋ ಅವನ್ನು ಪ್ರೋತ್ಸಾಹಿಸುವ ಮಾತನಾಡಿ.
ನೀನು ಡುಮ್ಮಿಯಾಗಿದ್ದಿ
ದೇಹದ ಆಕಾರದ ಬಗ್ಗೆ, ಬಣ್ಣ, ರೂಪಗಳ ಬಗ್ಗೆ ಸಂಗಾತಿಯು ನೆಗೆಟಿವ್ ಕಾಮೆಂಟ್ ಮಾಡಿದಾಗ, ತಾನು ಆತನ ನಿರೀಕ್ಷೆಗೆ ತಕ್ಕವಳಾಗಿಲ್ಲ ಎಂಬ ಕೀಳರಿಮೆಯೊಂದು ಆಕೆಯಲ್ಲಿ ಬೆಳೆಯಲಾರಂಭಿಸುತ್ತದೆ. ತೂಕ ಹೆಚ್ಚಾಗಿದ್ದಿ, ಆಕಾರ ಕಳೆದುಕೊಂಡಿದ್ದಿ ಮುಂತಾದ ಕಾಮೆಂಟ್‌ಗಳನ್ನು ನೀವು ಸಹಜವಾಗಿ ಆಡಿದ್ದರೂ, ಆಕೆಗೆ ನೀವು ಅವಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದೀರಿ ಎಂಬ ಭಾವನೆ ಹುಟ್ಟಿಸುತ್ತವೆ. ಹಾಗಾಗಿ, ಯುವಕರು ಆಕೆ ಹೇಗೇ ಇದ್ದರೂ ನಿಮಗಿಷ್ಟ, ನಿಮ್ಮ ಕಣ್ಣಿಗೆ ಆಕೆ ಸುಂದರಿಯಾಗಿಯೇ ಕಾಣುತ್ತಾಳೆ ಎಂಬಂತೆ ಮಾತನಾಡಬೇಕು. ನಂತರದಲ್ಲಿ ಆರೋಗ್ಯದ ದೃಷ್ಟಿಯಿಂದ ಸ್ವಲ್ಪ ತೂಕ ಇಳಿಸು ಎಂದರೂ ಆದೀತು.
ನಿನಗೆ ವಯಸ್ಸಾಗುತ್ತಿದೆ
ವಯಸ್ಸು ಒಬ್ಬರಿಗೆ ಆಗುವುದು ಸಾಧ್ಯವಿಲ್ಲ. ಆದರೂ, ಆಕೆಗೆ ವಯಸ್ಸಾದರೆ ಮಗುವಾಗುವುದು ಕಷ್ಟವಾಗಬಹುದು ಎಂಬ ಕಾರಣಕ್ಕೆ ಇಂಥ ಕಾಮೆಂಟ್ ಮಾಡುತ್ತಾರೆ ಕೆಲ ಪುರುಷರು. ಇಂದು ಕರಿಯರ್ ಹಾಗೂ ಕುಟುಂಬ ಎರಡಕ್ಕೂ ಪ್ರಾಶಸ್ತ್ಯ ನೀಡುವ ಮಹಿಳೆಯರಿಗೆ ಇಂಥ ಕಾಮೆಂಟ್‌ಗಳು ಶಾಕ್ ಹುಟ್ಟಿಸುತ್ತವೆ. ಬದಲಿಗೆ, ಮಗು ಹೊಂದುವ ಬಗ್ಗೆ ಆರೋಗ್ಯಯುತವಾದ ಚರ್ಚೆ ನಡೆಸುವುದು ಸೂಕ್ತ.
ನೀನು ಸೆಕ್ಸಿಯಾಗಿ ಡ್ರೆಸ್ ಮಾಡಿಕೊಳ್ಳಲ್ಲ
ಪರಿಚಯವಾದ ಆರಂಭದಲ್ಲಿ ಚೆನ್ನಾಗಿ ಡ್ರೆಸ್ ಮಾಡಿಕೊಳ್ಳುತ್ತಿದ್ದಾಕೆ, ಜೊತೆಯಲ್ಲಿರತೊಡಗಿದ ಮೇಲೆ ಕಂಫರ್ಟ್ ಎಂದು ಟ್ರ್ಯಾಕ್ ಪ್ಯಾಂಟ್, ಟಿಶರ್ಟ್ ಹಾಕಿಕೊಂಡಿರಲು ತೊಡಗಿರಬಹುದು. ಇದರಿಂದ ಆತ ಆಕೆಗೆ ನೀನು ಚೆನ್ನಾಗಿ ಡ್ರೆಸ್ ಮಾಡಿಕೊಳ್ಳಲ್ಲ ಎಂದು ಕಾಮೆಂಟ್ ಮಾಡಿರಬಹುದು. ಆದರೆ, ಇಂಥ ಕಾಮೆಂಟ್‌ಗಳು ನೀವು ಆಕೆಯ ಸ್ಟೈಲನ್ನು ತಿರಸ್ಕರಿಸುತ್ತಿದ್ದೀರಿ, ಜೊತೆಗೆ ಸದಾ ನಿಮಗೆ ಆಕರ್ಷಕವಾಗಿ ಕಾಣುವಂತೆ ರೆಡಿಯಾಗಿರುವಂತೆ ನಿರೀಕ್ಷಿಸುತ್ತಿದ್ದೀರಿ ಎಂಬ ಸಂದೇಶವನ್ನು ಆಕೆಗೆ ಕೊಡುತ್ತವೆ. ಬದಲಿಗೆ ಆಕೆಯ ಸೌಂದರ್ಯವನ್ನು ಹೊಗಳುತ್ತಲೇ, ಇಂಥದು ಬಟ್ಟೆ ಹಾಕಿದರೆ ಇನ್ನೂ ಚೆನ್ನಾಗಿ ಕಾಣುತ್ತೀಯಾ ಎಂಬಂತೆ ಹೇಳುವುದು ಉತ್ತಮ.
ಹಳೆಯ ಅಭದ್ರತೆಗಳನ್ನು ಎತ್ತಿ ಆಡುವುದು
ಉದಾಹರಣೆಗೆ, ಆಕೆ ಹದಿಹರೆಯದಲ್ಲಿದ್ದಾಗ ಮುಖದ ತುಂಬಾ ಮೊಡವೆಗಳಿದ್ದು, ಯಾರೋ ಒಬ್ಬ ಆಕೆಗೆ ಪಿಜ್ಜಾ ಫೇಸ್ ಎಂದು ಕಾಮೆಂಟ್ ಮಾಡಿರುತ್ತಾನೆ. ಆಕೆ ಅದನ್ನು ಒಮ್ಮೆ ನಿಮ್ಮ ಬಳಿ ಹೇಳಿಕೊಂಡಿರುತ್ತಾಳೆ. ನೀವು ತಮಾಷೆಗೆಂದೋ, ವಾದದ ಸಮಯದಲ್ಲಿ ಅಸ್ತ್ರವಾಗಿಯೋ ಇವನ್ನು ಬಳಸುತ್ತಿದ್ದರೆ ಇದು ಆಕೆಯಲ್ಲಿ ಮತ್ತೆ ಅಭದ್ರತೆಗಳನ್ನು ತರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.