ಗಂಡ-ಹೆಂಡ್ತಿ ಜಗಳವಾಡಬಾರ್ದು ಅಂದ್ರೆ ಏನ್ ಮಾಡ್ಬೇಕು ಗೊತ್ತಾ?

ಕೊರೋನಾ ಕಾಣಿಸಿಕೊಂಡ ಬಳಿಕ ಗಂಡ-ಹೆಂಡ್ತಿ ನಡುವೆ ಭಿನ್ನಾಭಿಪ್ರಾಯ ಹೆಚ್ಚಿದೆ. ಇದು ಜಗಳದ ರೂಪ ತಾಳಿ ಇಬ್ಬರ ನೆಮ್ಮದಿಯನ್ನೂ ಕೆಡಿಸುತ್ತಿದೆ. ಇಂಥ ಸಮಯದಲ್ಲಿ ಕೆಲವು ಮಾತುಗಳು ಸಂಗಾತಿಯ ಕೋಪವನ್ನು ಸರ್ರನೆ ಇಳಿಸಿ ಜಗಳ ತಪ್ಪಿಸಬಲ್ಲವು.

How to diffuse arguments by words

ಜಗತ್ತಿಗೆ ಕೊರೋನಾ ಎಂಟ್ರಿ ಕೊಟ್ಟ ಬಳಿಕ ವೇಗದ ದಿನಚರಿಗೊಂದಿಷ್ಟು ಬ್ರೇಕ್ ಸಿಕ್ಕಿದೆ. ಮನೆಯೊಳಗೇ ಕುಟುಂಬ ಸದಸ್ಯರ ಜೊತೆ ಸಮಯ ಕಳೆಯಲು ಅವಕಾಶ ಸಿಕ್ಕಿದೆ. ಅದ್ರಲ್ಲೂ ಪತಿ-ಪತ್ನಿ ಇಬ್ಬರೂ ಉದ್ಯೋಗಸ್ಥರಾಗಿದ್ರೆ ಹಿಂದೆ ಒಟ್ಟಿಗೆ ಸಮಯ ಕಳೆಯೋದೆ ಅಪರೂಪವಾಗಿತ್ತು. ಆದ್ರೆ ಈಗ ಹಾಗಿಲ್ಲ,ಕೆಲವರು ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ರೆ,ಇನ್ನೂ ಕೆಲವರು ಆಫೀಸ್‍ಗೆ ಹೋದ್ರೂ ಹಿಂದಿನಂತೆ ಹೊರಗೆಲ್ಲೂ ಹೆಚ್ಚಿನ ಸಮಯ ವ್ಯರ್ಥ ಮಾಡದೆ ನೇರವಾಗಿ ಮನೆಗೆ ಬರುತ್ತಿದ್ದಾರೆ. ಹೀಗಾಗಿ ಪತಿ-ಪತ್ನಿ ನಡುವೆ ಸಂವಾದಕ್ಕೆ ಈಗ ಮೊದಲಿಗಿಂತ ಹೆಚ್ಚು ಸಮಯ ಸಿಗುತ್ತಿದೆ. ಹೀಗಿರುವಾಗ ಇಬ್ಬರ ನಡುವೆ ಮನಸ್ತಾಪ ಹಾಗೂ ಜಗಳ ಹೆಚ್ಚೋದು ಸಹಜ. ಅದೆಷ್ಟೇ ಆದರ್ಶ ದಂಪತಿಗಳೇನಿ
ಸಿಕೊಂಡಿದ್ರೂ ಅವರ ನಡುವೆ ಜಗಳವಂತೂ ನಡೆದೇ ನಡೆಯುತ್ತೆ. ಕೊರೋನಾ ಬಂದ ಮೇಲೆ ಇದು ಇನ್ನೂ ಹೆಚ್ಚಿರುತ್ತೆ. ಇಂಥ ಜಗಳದಲ್ಲಿ ಕೆಲವೊಮ್ಮೆ ಸಿಟ್ಟು ಕಂಟ್ರೋಲ್‍ಗೆ ಸಿಗದೆ ಹಿಂದು ಮುಂದೆ ಯೋಚಿಸದೆ ಯಾವುದೋ ಒಂದು ಪದ ಪ್ರಯೋಗಿಸಿ ಬಿಡುತ್ತೇವೆ. ಆದ್ರೆ ಈ ಪದ ಅಥವಾ ಮಾತು ಸಂಗಾತಿ ಮನಸ್ಸಿಗೆ ಘಾಸಿ ಮಾಡುತ್ತದೆ. ಆ ಬಳಿಕ ಆಡಿದ ಮಾತಿನ ಬಗ್ಗೆ ನಮ್ಗೂ ಪಶ್ಚತ್ತಾಪವಾಗುತ್ತೆ. ಆದ್ರೆ ಎಷ್ಟೋ ಬಾರಿ ಸಿಟ್ಟಿನ ಭರದಲ್ಲಿ ಮಾತನಾಡಿದ ಇಂಥ ಮಾತು ಇಬ್ಬರ ಬಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸಬಲ್ಲದು. ಹೀಗಾಗಿ ಜಗಳವಾಡುವಾಗ ನಾವು ಬಳಸುವ ಪದಗಳ ಬಗ್ಗೆ ಎಚ್ಚರ ವಹಿಸೋದು ಅಗತ್ಯ. ಹಾಗಾದ್ರೆ ಸಂಗಾತಿ ಜೊತೆ ಜಗಳವಾಡುವಾಗ ಅವರ ಕೋಪ ತಗ್ಗಿಸುವ ಮಾತುಗಳು ಯಾವುವು?

ಮಾನವೀಯತೆ ಮರೆತ ಮಾನವರೆ, ನನ್ನ ಶಾಪ ನಿಮ್ಮನ್ನು ತಟ್ಟದೆ ಬಿಡದು!

ನಿಮ್ಮ ಪರಿಸ್ಥಿತಿಯನ್ನು ನಾನು ಅರ್ಥೈಸಿಕೊಳ್ಳಬಲ್ಲೆ
ಬಹುತೇಕ ಸಂದರ್ಭಗಳಲ್ಲಿ ಸಂಗಾತಿ ನಮ್ಮ ಒತ್ತಡ ಹಾಗೂ ಆತಂಕಗಳನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬುದೇ ಸಿಟ್ಟು ತರಿಸುತ್ತೆ. ಕೊರೋನಾ ಹಾಗೂ ಲಾಕ್‍ಡೌನ್‍ನಿಂದಾಗಿ ಎಲ್ಲರ ಬದುಕಿನಲ್ಲೂ ಒಂದಲ್ಲ ಒಂದು ಸಮಸ್ಯೆ ಎದುರಾಗಿರುತ್ತೆ. ಅದು ವೃತ್ತಿ, ಹಣಕಾಸು ಅಥವಾ ಇನ್ಯಾವುದೋ ವಿಚಾರಕ್ಕೆ ಸಂಬಂಧಿಸಿರಬಹುದು. ಇಂಥ ಸಮಯದಲ್ಲಿ ಪತಿ-ಪತ್ನಿ ಇಬ್ಬರೂ ಒಬ್ಬರ ಪರಿಸ್ಥಿತಿಯನ್ನು ಮತ್ತೊಬ್ಬರು ಅರ್ಥ ಮಾಡಿಕೊಂಡಿದ್ದೇವೆ ಎಂಬುದನ್ನು ಪರಸ್ಪರ ಮನದಟ್ಟು ಮಾಡಿಸೋದು ಅಗತ್ಯ. ಇದ್ರಿಂದ ಒಬ್ಬರ ಮೇಲೆ ಇನ್ನೊಬ್ಬರು ರೇಗೋದು ಕಡಿಮೆಯಾಗುತ್ತೆ.

How to diffuse arguments by words

‘ಕ್ಷಮಿಸಿ’ ಎನ್ನಲು ಹಿಂಜರಿಕೆ ಬೇಡ
ಅರೇ, ನಂದೇನೂ ತಪ್ಪೇ ಇಲ್ಲ. ಹೀಗಿರುವಾಗ ನಾನೇಕೆ ಕ್ಷಮೆ ಕೇಳಬೇಕು ಎಂದು ನಾವು ಜಗಳ ನಡೆದ ಸಮಯದಲ್ಲಿ ಯೋಚಿಸುತ್ತೇವೆ. ಆದ್ರೆ ನಿಮ್ಮ ಯಾವುದೋ ಒಂದು ಮಾತು ಅಥವಾ ವರ್ತನೆಯೇ ಅವರಿಗೆ ಸಿಟ್ಟು ತರಿಸಿರಬಹುದು. ಅಲ್ಲದೆ, ಜಗಳ ಹೆಚ್ಚಾಗುತ್ತೆ ಎಂಬ ಸಮಯದಲ್ಲಿ ‘ಕ್ಷಮಿಸಿ’ಅನ್ನೋದ್ರಿಂದ ಕೋಪ ತಗ್ಗುತ್ತೆ. ಕೋಪದಲ್ಲಿರುವ ಸಮಯದಲ್ಲಿ ಅವರ ತಪ್ಪನ್ನು ಮನದಟ್ಟು ಮಾಡಿಸಲು ಸಾಧ್ಯವಿಲ್ಲ. ಹೀಗಾಗಿ ಆ ಸಮಯದಲ್ಲಿ ಪರಿಸ್ಥಿತಿ ಹದಗೆಡಬಾರದು ಅಂದ್ರೆ ಒಬ್ರು ಬಾಗೋದು ಅನಿವಾರ್ಯ.

ಮದುವೆ ಯಾರಿಗೆ ಬೇಕ್ರೀ ಎನ್ನೋ ಮಿಲೇನಿಯಲ್ಸ್

ನಿಮ್ಮ ಅಭಿಪ್ರಾಯವನ್ನು ಗೌರವಿಸುತ್ತೇನೆ
ಇಬ್ಬರ ನಡುವೆ ವಾಗ್ವಾದ ಪ್ರಾರಂಭವಾಗುತ್ತೆ ಎಂಬ ಸೂಚನೆ ಸಿಗುತ್ತಿದ್ದಂತೆ ನೀವು ಅವರ ಅಭಿಪ್ರಾಯಗಳನ್ನು ಗೌರವಿಸುತ್ತೀರಿ, ಒಪ್ಪಿಕೊಳ್ಳುತ್ತೀರಿ ಎಂಬುದನ್ನು ಅರ್ಥ ಮಾಡಿಸಿ. ಇದ್ರಿಂದ ಗಲಾಟೆ ತಪ್ಪುತ್ತೆ. ನಂತರ ಪರಿಸ್ಥಿತಿ ಶಾಂತವಾದ ಬಳಿಕ ಸಂಗಾತಿಯ ಮೂಡ್ ನೋಡಿಕೊಂಡು ನಿಮ್ಮ ಅಭಿಪ್ರಾಯ ತಿಳಿಸಿ.

How to diffuse arguments by words

ಜಗಳ ತಪ್ಪಿಸಲು ಮೌನ ತಾಳಿ
ಎಷ್ಟೋ ಬಾರಿ ಒಬ್ಬರು ಸುಮ್ಮನಿದ್ರೆ ಮಾತಿಗೆ ಮಾತು ಬೆಳೆಯೋದಿಲ್ಲ. ಇದ್ರಿಂದ ಜಗಳವೂ ನಿಲ್ಲುತ್ತದೆ. ಎರಡು ಕೈಗಳು ಸೇರಿದ್ರೆ ಮಾತ್ರ ಚಪ್ಪಾಳೆ ಅನ್ನುವಂತೆ ಇಬ್ಬರೂ ಮಾತಿಗೆ ಮಾತು ಸೇರಿಸಿದ್ರೆ ಜಗಳ ಹೆಚ್ಚುತ್ತೆ. ಆದಕಾರಣ ನಿಮ್ಮ ಸಂಗಾತಿಯ ಕೋಪ ತಣಿಸಲು ಅವರ ಮಾತಿಗೆ ಪ್ರತ್ಯುತ್ತರ ನೀಡಲು ಹೋಗಬೇಡಿ. ಇದ್ರಿಂದ ಅವರು ಕೂಡ ಸುಮ್ಮನಿರುತ್ತಾರೆ. 

ಗಂಡ-ಹೆಂಡ್ತಿ ಕೋಳಿ ಜಗಳದಲ್ಲಿ ಇಂಥ ಕಾಮೆಂಟ್ಸ್ ಕಾಮನ್

ಸಂಗಾತಿ ತಪ್ಪನ್ನು ಮತ್ತೆ ಮತ್ತೆ ಎತ್ತಿ ಆಡಬೇಡಿ
ಎಂದೋ ಸಂಗಾತಿ ಮಾಡಿದ ತಪ್ಪು ಅಥವಾ ಆಡಿದ ಮಾತನ್ನು ಪದೇಪದೆ ಹೇಳಿ ಅವರನ್ನು ಹಂಗಿಸುವ ಅಭ್ಯಾಸ ಕೆಲವರಿಗಿರುತ್ತೆ. ಇಂಥ ಅಭ್ಯಾಸದಿಂದ ದಾಂಪತ್ಯದಲ್ಲಿ ಜಗಳ ಹೆಚ್ಚುವ ಜೊತೆ ಇಬ್ಬರ ನಡುವೆ ವೈಮನಸ್ಸು ಹೆಚ್ಚಾಗಬಹುದು. ಆದಕಾರಣ ಆಗಿಹೋದ ಜಗಳ, ಘಟನೆ, ಮಾತುಗಳನ್ನು ನೆನಪು ಮಾಡಬೇಡಿ. ಅದ್ರಲ್ಲೂ ಜಗಳವಾಡುತ್ತಿರುವ ಸಮಯದಲ್ಲಿ ಇಂಥ ಕೆಲಸವನ್ನು ತಪ್ಪಿಯೂ ಮಾಡಬೇಡಿ.

Latest Videos
Follow Us:
Download App:
  • android
  • ios