ಸಾಮಾನ್ಯವಾಗಿ ಹದಿ ವಯಸ್ಸಿನ ಹೆಂಗಳೆಯರಿಗೆ ಬಾಯ್‌ಫ್ರೆಂಡ್ ಇರೋದು ಕಾಮನ್. ಆದರೆ, ತನ್ನವನ ಮನದ ಇಂಗಿತವನ್ನು ಹೇಗೆ ಪೂರೈಸಬೇಕೆಂಬುದನ್ನು ಹೆಣ್ಣು ಅರ್ಥಮಾಡಿಕೊಳ್ಳಲು ಹೋಗುವುದಿಲ್ಲ. ಜೀವನ ಸಂಗಾತಿಗೂ ಅಪ್ಲೈ ಆಗೋ ಟಿಪ್ಸ್ ಇಲ್ಲಿವೆ. ಓದಿ....
ಪ್ರೇಮಿಗಳಿಗೆ ತಮ್ಮ ಪ್ರಪಂಚದ ಪ್ರೀತಿ, ಪ್ರೀತಿಸಿದವರೇ ತುಂಬಿರುತ್ತಾರೆ. ಈ ಸಮಯದಲ್ಲಿ ಹುಡುಗಿಯರು ತಮ್ಮ ಮನಸಿನಲ್ಲಿ ಇರೋದನ್ನು ಬಾಯಿ ಬೀಟ್ಟು ಹೇಳಿಕೊಳ್ಳುತ್ತಾರೆ. ತಮ್ಮ ಗೆಳೆಯನೂ ತನ್ನ ಬಳಿ ಎಲ್ಲವನ್ನೂ ಹೇಳಿಕೊಳ್ಳುತ್ತಾನೆಂದು ತಪ್ಪು ತಿಳಿದಿರುತ್ತಾರೆ. ಆದರೆ ಕೆಲವೊಂದು ವಿಷಯಗಳನ್ನು ಪುರುಷರು ತಮ್ಮ ಗೆಳತಿಗೆ ಹೇಳ ಬಯಸಿದರೂ, ಅದನ್ನು ತಮ್ಮಲ್ಲೇ ಬಚ್ಚಿಟ್ಟುಕೊಳ್ಳುತ್ತಾರೆ. ಅಂತ ವಿಷಯಗಳು ಯಾವುವು?
ಗಂಡಿಗೂ ಇಷ್ಟ ರೊಮ್ಯಾನ್ಸ್: ಹೆಣ್ಣಿಗೆ ರೊಮ್ಯಾನ್ಸ್ ಹೇಗೆ ಇಷ್ಟವೋ, ಪುರುಷರೂ ಇದನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಾರೆ.
ತಿಂಡಿ ಪೋತರು ಇವರು: ಮಹಿಳೆಯರಿಗೆ ಸರ್ಪ್ರೈಸ್ ಹೇಗೆ ಖುಷಿ ನೀಡುತ್ತದೋ, ಅಂಥವನ್ನು ಗಂಡೆಂಬ ಜೀವವೂ ಅಷ್ಟೇ ಖುಷಿ ಪಡುತ್ತದೆ. ಅದರಲ್ಲೂ ಅವರಿಗೆ ಇಷ್ಟವಾದ ತಿಂಡಿ ಮಾಡೋದು, ಸ್ಪೆಷಲ್ ಡಿನ್ನರ್ ಅರೆಂಜ್ ಮಾಡಿದರೆ ಥ್ರಿಲ್ ಆಗುತ್ತಾರೆ.
'ಪ್ರೀತಿ ಕುರುಡು....'ವಿಜ್ಞಾನವೂ ಸತ್ಯ ಎನ್ನುತ್ತೆ!
ಕನಸುಗಳ ಲೋಕದ ಅನಾವರಣ: ಹೆಚ್ಚಾಗಿ ಮಹಿಳೆಯರು ಮಾತ್ರ ತಮ್ಮ ಹುಚ್ಚು ಕನಸುಗಳನ್ನು ತಮ್ಮ ಬಾಯ್‌ಫ್ರೆಂಡ್ ಬಳಿ ಹೇಳಿಕೊಳ್ಳುತ್ತಾರೆ. ಆದರೆ ಅವರಿಗೂ ಅಂಥದ್ದೇ ಹುಚ್ಚು ಕನಸುಗಳಿರುತ್ತವೆ. ಹಾಗಂಥ ಆ ಬಗ್ಗೆ ಅವರು ಹೇಳಿ ಕೊಳ್ಳುವುದಿಲ್ಲ. ಕೇಳುವ ಕಿವಿ ನಿಮ್ಮದಾದರೆ, ಅವರೂ ಮನ ಬಿಚ್ಚಿ ತಮ್ಮ ಮನದಾಳದ ಇಂಗಿತವನ್ನು ಶೇರ್ ಮಾಡಿಕೊಳ್ಳುತ್ತಾರೆ.
ಏಕಾಂಗಿಯಾಗಿ ಸಮಯ ಕಳೆಯಿರಿ: ಫ್ರೆಂಡ್ಸ್ ಜೊತೆ ನೀವು ಹೆಚ್ಚಿನ ಸಮಯ ಕಳೆಯುತ್ತೀರಿ. ಅವರು ನಿಮ್ಮ ಜೀವನದಲ್ಲಿ ತುಂಬಾ ಇಂಪಾರ್ಟೆನ್ಟ್ ಹೌದು. ಆದರೆ ನಿಮ್ಮ ಸಂಗಾತಿಗೂ ನಿಮ್ಮನ್ನು ಏಕಾಂಗಿಯಾಗಿ ಭೇಟಿಯಾಗುವ ಅಸೆ ಇರುತ್ತದೆ. ಆ ಸಮಯದಲ್ಲಿ ಅವರಿಗೂ ಸಮಯ ಮೀಸಲಿಡಿ. ಫ್ರೆಂಡ್ಸ್ ಜೊತೆ ಇರಬೇಡ ಎಂದು ಯಾವತ್ತೂ ಆತ ಹೇಳೋದೇ ಇಲ್ಲ.
ಫೋನ್ ದೂರವಿಡಿ: ಆತನ ಜೊತೆಗೆ ಇರುವಾಗ ನೀವು ಸಂಪೂರ್ಣವಾಗಿ ನಿಮ್ಮ ಸಮಯವನ್ನು ಅವರಿಗಾಗಿ ಮೀಸಲಿಡಿ. ಅವರ ಜೊತೆ ಇರುವಾಗ ನೀವು ಮೊಬೈಲ್ ಬಳಸಿದರೆ ಅವರಿಗೆ ಇಷ್ಟವಾಗುವುದಿಲ್ಲ.
ಅವರಿಷ್ಟವನ್ನು ಗೌರವಿಸಿ: ನಿಮ್ಮ ಸ್ವಂತಿಕೆಯನ್ನು ಬಲಿ ಕೊಡದೇ ನಿಮ್ಮವನ ಇಚ್ಛೆಯನ್ನೂ ಪೂರೈಸಲು ಗಮನ ಕೊಡಿ. ಅವರಿಗೂ ಇಷ್ಟವಾಗುವಂಥ ತಿಂಡಿ-ತಿನಿಸು, ಚಿತ್ರಗಳನ್ನು ನೋಡಿ. ಹೆಚ್ಚೆಚ್ಚು ಅಡ್ವೆಂಚರಸ್ ಆಗಿದ್ದರೆ ಗಂಡಿಗಿಷ್ಟ.
ನೀವು ಪ್ಲಾನ್ ಮಾಡಿ: ಯಾವಾಗಲೂ ಅವರೇ ಪ್ಲಾನ್ ಮಾಡಬೇಕು ಎಂದುಕೊಳ್ಳಬೇಡಿ. ಅವರಿಗೂ ಅಸೆ ಇರುತ್ತದೆ. ತನ್ನ ಪ್ರೇಮಿ ನನಗಾಗಿ ಡೇಟಿಂಗ್, ಮೂವಿ ಪ್ಲಾನ್ ಮಾಡಬೇಕೆಂದು ಇಚ್ಛಿಸುತ್ತಾರೆಂಬುವುದು ನೆನಪಿರಲಿ.
Love at second sight ಅಂತಿರುತ್ತಾ?
ನೀವು ನಿಮ್ಮ ಫ್ರೆಂಡ್ಸ್ ಜೊತೆ ಎಂಜಾಯ್ ಮಾಡಬಹುದು ಎಂದಾದರೆ, ಪುರುಷರಿಗೂ ಆ ಆಸೆ ಇರುತ್ತದೆ. ನೀವಿಬ್ಬರೂ ಲವ್ ಮಾಡುತ್ತಿದ್ದೀರಿ ಎಂದರೆ ನಿಮ್ಮ ಜೊತೆಯೇ ಸಮಯ ಕಳೆಯಬೇಕು ಎಂದೇನೂ ಇಲ್ಲ. ಅವರಿಗೂ ಅವರ ಸ್ನೇಹಿತರ ಜೊತೆ ಸಮಯ ಕಳೆಯಲು ಅವಕಾಶ ಕೊಡಿ. ಅವರ ಸ್ವಂತಿಕೆಗೆ ಇರಲಿ ಬೆಲೆ.